ಆಧಾರ್ ಕಾರ್ಡ್ ಸಮಸ್ಯೆ ಇಂದಲ್ಲ, ಅದು ಚಾಲ್ತಿ ಆದಾಗಿನಿಂದಲೂ ಇದೆ. ಇಂದಿಗೂ ಸಹ ಕೋರ್ಟ್ನಲ್ಲಿಯೂ ಅದರ ಬಳಕೆ, ಎಲ್ಲೆಲ್ಲಿ ಅದರ ಅಗತ್ಯ ಕಡ್ಡಾಯ, ಎಲ್ಲಿ ಕಡ್ಡಾಯ ಬೇಡ ಎಂಬುದರ ಬಗ್ಗೆ ಚರ್ಚೆಗೆ ಅಂತ್ಯವಾಡಿಲ್ಲ. ಆದರೆ ಕೆಲವೊಂದು ಕಡೆ ಈ ಭಾರತದಾದ್ಯಂತದ ಅನನ್ಯ ಗುರುತಿನ ಸಂಖ್ಯೆ ಅತ್ಯಗತ್ಯ ಎಂಬುದನ್ನು ಮರೆಯುವಂತಿಲ್ಲ.
ಆಧಾರ್ ಕಾರ್ಡ್ ಹೊಸದಾಗಿ ಮಾಡಿಸುವಾಗ ರೇಷನ್ ಕಾರ್ಡ್, ಎಸ್ಎಸ್ಎಲ್ಸಿ ಅಂಕಪಟ್ಟಿ, ಮತದಾರ ಗುರುತಿನ ಚೀಟಿ ಹೀಗೆ ಯಾವುದಾದರೊಂದು ದಾಖಲೆ ನೀಡಲಾಗಿರುತ್ತದೆ. ಆಧಾರ್ ಕಾರ್ಡ್ ಮಾಡಿಕೊಡುವವರು ಆನ್ಲೈನ್ನಲ್ಲಿ ಮಾಹಿತಿ ನೀಡುವಾಗ ತಪ್ಪು ನೀಡುವುದು ಬೆರಳೆಣಿಕೆ. ಆದರೆ ಆಧಾರ್ ಕಾರ್ಡ್ ಅಗತ್ಯ ಇರುವವರೇ ನೀಡುವ ದಾಖಲೆಗಳಲ್ಲಿ ಒಂದೊಂದು ದಾಖಲೆಯಲ್ಲಿ ಬೇರೆ ಬೇರೆ ರೀತಿಯಲ್ಲಿ ಜನ್ಮ ದಿನಾಂಕ, ಇನಿಷಿಯಲ್, ಹೆಸರು, ತಂದೆಯ ಹೆಸರು, ತಂದೆಯ ಇನಿಷಿಯಲ್ ಇರುವ ಕಾರಣ ಮತ್ತೇ ಅದರ ತಿದ್ದುಪಡಿಗಾಗಿ ಓಡಾಟ ನಡೆಸಬೇಕಾಗುತ್ತದೆ.
ಮೇಲಿನ ಇಂತಹ ಸಮಸ್ಯೆಗಳನ್ನು ನಿವಾರಿಸಲು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ ದಿನದಿಂದ ದಿನಕ್ಕೆ ಆಧಾರ್ ತಿದ್ದುಪಡಿಯನ್ನು ಸರಳಗೊಳಿಸುತ್ತಿದೆ. ಆಧಾರ್ ತಿದ್ದುಪಡಿಗಾಗಿ ಇಂದು ಸಹ ಬಹುಸಂಖ್ಯಾತ ಜನರು ಹೋಬಳಿ, ತಾಲ್ಲೂಕು ಕೇಂದ್ರಗಳ ಸರ್ಕಾರಿ ಕಛೇರಿಗಳು, ಬ್ಯಾಂಕುಗಳ ಮುಂದೆ ಸಾಲು ಸಾಲು ನಿಲ್ಲುವುದು ತಪ್ಪಿಲ್ಲ. ಅಂತಹವರು ತಮ್ಮ ಆಧಾರ್ ತಿದ್ದುಪಡಿಯನ್ನು ಮೊಬೈಲ್ ನಂಬರ್ ಲಿಂಕ್ ಆಗದೆಯೂ ಸರಿಪಡಿಸಿಕೊಳ್ಳಬಹುದು.
ಆಧಾರ್ ಕಾರ್ಡ್ಗೆ ನಿಮ್ಮ ಮೊಬೈಲ್ ನಂಬರ್ ಇನ್ನೂ ಸಹ ಲಿಂಕ್ ಆಗಿಲ್ಲದಿದ್ದಲ್ಲಿ(ರಿಜಿಸ್ಟರ್) ಸುಲಭವಾಗಿ ಆಫ್ಲೈನ್ನಲ್ಲಿ ಆಧಾರ್ ತಿದ್ದುಪಡಿ ಮಾಡಿಕೊಳ್ಳಲು ಈ ಕೆಳಗಿನ ಸರಳ ಹಂತಗಳನ್ನು ಫಾಲೋ ಮಾಡಿರಿ..
ಮೊಬೈಲ್ ನಂಬರ್ ಆಧಾರ್ಗೆ ಲಿಂಕ್ ಆಗದಿದ್ದಲ್ಲಿ ತಿದ್ದುಪಡಿಗಾಗಿ ಈ ಸರಳ ಹಂತಗಳು
– ನಿಮ್ಮ ಹತ್ತಿರದ ಆಧಾರ್ ಕೇಂದ್ರಕ್ಕೆ ಹೋಗಿ, ಆಧಾರ್ ಕಾರ್ಡ್ ತಿದ್ದುಪಡಿ ಅರ್ಜಿಯನ್ನು ಪಡೆಯಿರಿ
– ಆ ಅರ್ಜಿಯನ್ನು ಫಿಲ್ ಮಾಡಿ ಅಗತ್ಯ ದಾಖಲೆಗಳಾದ ಎಸ್ಎಸ್ಎಲ್ಸಿ ಅಂಕಪಟ್ಟಿ, ಪಾನ್ ಕಾರ್ಡ್, ಇತರೆ ದಾಖಲೆಗಳ ಜೆರಾಕ್ಸ್ ಪ್ರತಿಯೊಂದಿಗೆ ನೀಡಿ.
– ಬಯೋ ಮೆಟ್ರಿಕ್ ಮಾಹಿತಿಗಳಾದ ಹೆಬ್ಬೆಟ್ಟು ಗುರುತು, ಕಣ್ಣಿನ ಸ್ಕ್ಯಾನ್ ನೀಡಿ.
– ನಂತರದ ಮುಂದಿನ 2 ರಿಂದ 5 ದಿನಗಳ ಒಳಗಾಗಿ ನಿಮ್ಮ ಮೊಬೈಲ್ ನಂಬರ್ ಆಧಾರ್ ಕಾರ್ಡ್ ನಂಬರ್ದೊಂದಿಗೆ ರಿಜಿಸ್ಟರ್ ಆಗುತ್ತದೆ ಮತ್ತು ಅವರು ನಿಮಗೆ ತಿದ್ದುಪಡಿ ಸ್ವೀಕೃತಿ ಪತ್ರ ನೀಡುತ್ತಾರೆ.
ಮೊಬೈಲ್ ನಂಬರ್ ಇಲ್ಲದೇ ಆಫ್ಲೈನ್ ನಲ್ಲಿ ಆಧಾರ್ ತಿದ್ದುಪಡಿ ಹೇಗೆ?
ಮೊಬೈಲ್ ನಂಬರ್ ನೀಡದೆ ನಿಮ್ಮ ಆಧಾರ್ ಕಾರ್ಡ್ ತಿದ್ದುಪಡಿಗಾಗಿ ಆನ್ಲೈನ್ನಲ್ಲಿ ಈ ಕೆಳಗಿನ ಮಾಹಿತಿಗಳನ್ನು ಅಪ್ಡೇಟ್ ಮಾಡಬಹುದು.
– ಹೆಸರು
– ವಿಳಾಸ
– ಜನ್ನ ದಿನಾಂಕ
– ಲಿಂಗ
– ಮೊಬೈಲ್ ನಂಬರ್
– ಇ-ಮೇಲ್ ವಿಳಾಸ
https://uidai.gov.in/ ಈ ಒಂದು ಲಿಂಕ್ ಕ್ಲಿಕ್ ಮಾಡಿ ಆಧಾರ್ ಗೆ ಸಂಬಂಧಿಸಿದ ಎಲ್ಲಾ ತರಹದ ತಿದ್ದುಪಡಿ, ಆಧಾರ್ ಸ್ಟೇಟಸ್, ಮೊಬೈಲ್ ನಂಬರ್ ಲಿಂಕ್ ಮಾಡುವುದು, ಇ ಆಧಾರ್ ಡೌನ್ಲೋಡ್ ಮತ್ತು ಮಾಹಿತಿಗಳನ್ನು ಆನ್ಲೈನ್ ನಲ್ಲಿ ಪಡೆಯಬಹುದು.
ನಿಮ್ಮ ಆಧಾರ್ ಮಾಹಿತಿಯನ್ನು ಯಾರು? ಎಲ್ಲಿ? ಬಳಕೆ ಮಾಡಿದ್ದಾರೆ ಚೆಕ್ ಮಾಡುವುದು ಹೇಗೆ?
Here readers can get an answer to questions like How can i correct my name in Aadhar card?, How can I correct my age in Aadhar card?, How can I update my mobile number in aadhar card online?, How can I change my aadhar card details?