ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ಸಿರಿಗೆರೆ ಯು ತಮ್ಮ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಅನುದಾನಿತ ಪ್ರೌಢಶಾಲೆಯಲ್ಲಿ ಮತ್ತು ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಬೋಧಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಆಯ್ಕೆ ಪಟ್ಟಿ, ಸಂದರ್ಶನ ದಿನಾಂಕ ಮತ್ತು ಇತರೆ ಮಾಹಿತಿಯನ್ನು ತಿಳಿಯುವುದು ಹೇಗೆ ಎಂಬುದನ್ನು ಈ ಕೆಳಗೆ ನಿಮ್ಮ ಕನ್ನಡ ಅಡ್ವೈಜರ್ ತಿಳಿಸಿದೆ.
– ಸಂದರ್ಶನದ ದಿನಾಂಕ ಮತ್ತು ಸ್ಥಳವನ್ನು ಆನ್ಲೈನ್ನಲ್ಲಿಯೇ ಪ್ರಕಟಿಸಲಾಗುವುದು
– ಸಂದರ್ಶನಕ್ಕೆ ಆಯ್ಕೆಯಾದವರ ಹೆಸರುಗಳನ್ನು ಮಾತ್ರ ಇಲಾಖೆಯ ವೆಬ್ಸೈಟ್ನ “Status” ಪೇಜ್ನಲ್ಲಿ ಪ್ರಕಟಿಸಲಾಗುವುದು.
ನೇಮಕಾತಿ ಆಯ್ಕೆ ಪಟ್ಟಿ, ಸಂದರ್ಶನ ದಿನಾಂಕ ಚೆಕ್ ಮಾಡಲು ನಾವು ಹೇಳಿನ ಮಾರ್ಗ ಅನುಸರಿಸಿ
– ಪ್ರತಿ ದಿನ ಒಮ್ಮೆಯಾದರೂ http://www.apply.taralabalu.in/ ಈ ಲಿಂಕ್ ಕ್ಲಿಕ್ ಮಾಡಿ ನೋಡಿ. ಓಪನ್ ಆಗುವ ವೆಬ್ಪೇಜ್ನಲ್ಲಿ ಹೊಸ ಅಪ್ಡೇಟ್ ಇದೆಯೇ ಎಂದು ಚೆಕ್ ಮಾಡಿರಿ. ಅಥವಾ
– ಓಪನ್ ಆದ ಪೇಜ್ ನಲ್ಲಿ New Applicant ಅಥವಾ Regd Applicant ಎಂಬ ಎರಡು ಆಯ್ಕೆಗಳಿರುತ್ತವೆ. ಅವುಗಳಲ್ಲಿ Regd Applicant ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
– ನಂತರ ಓಪನ್ ಆದ ಪೇಜ್ ನಲ್ಲಿ ಅಥವಾ http://www.apply.taralabalu.in/login.php ಈ ಲಿಂಕ್ ಕ್ಲಿಕ್ ಮಾಡಿ. ಅಲ್ಲಿ ಕೇಳಲಾದ ಮಾಹಿತಿ ನೀಡಿ.
– ಅರ್ಜಿ ಸಲ್ಲಿಸುವ ವೇಳೆ ನೀವು ಕ್ರಿಯೇಟ್ ಮಾಡಿಕೊಂಡಿರುವ User ID ಮತ್ತು ಪಾಸ್ವರ್ಡ್ ನೀಡಿ ಸೈನ್ ಇನ್ ಮೇಲೆ ಕ್ಲಿಕ್ ಮಾಡಿ. “Status” ಪೇಜ್ ತೆರೆಯುತ್ತದೆ. ಅಲ್ಲಿ ನಿಮ್ಮ ಅರ್ಜಿ ಸ್ಟೇಟಸ್ ಮತ್ತು ಇತರೆ ಮಾಹಿತಿ ಸಿಗಬಹುದು.
– ಸಂದರ್ಶನ ಪತ್ರವನ್ನು ಅಂತರ್ಜಾಲದಲ್ಲಿ ಪಡೆದುಕೊಳ್ಳಬೇಕು. ನೀವು ಹುದ್ದೆಗೆ ಆಯ್ಕೆ ಆಗಿದ್ದಲ್ಲಿ.
– ಸಂದರ್ಶನಕ್ಕೆ ಆಯ್ಕೆಯಾದ ಅಭ್ಯರ್ಥಿಗಳು ಪ್ರಿಂಟ್ ತೆಗೆದುಕೊಂಡ ಸಂದರ್ಶನ ಪತ್ರದ ಜೊತೆಗೆ ಅಗತ್ಯ ಮೂಲದಾಖಲೆಗಳೊಂದಿಗೆ ಸಂದರ್ಶನದ ಸ್ಥಳಕ್ಕೆ, ಸೂಚಿಸಿದ ಸಮಯಕ್ಕೆ ಹಾಜರಾಗುವುದು.
– ನೇಮಕಾತಿ ವಿಧಾನ, ವೇತನ ಶ್ರೇಣಿ, ಮೀಸಲಾತಿ, ವಯೋಮಿತಿ ಕುರಿತ ಇನ್ನೂ ಹೆಚ್ಚಿನ ಮಾಹಿತಿಗಳಿಗಾಗಿ ಸಂಸ್ಥೆಯ ವೆಬ್ಸೈಟ್ಗೆ ಭೇಟಿ ನೀಡಿರಿ. ವೆಬ್ ವಿಳಾಸವನ್ನು ಮೇಲೆ ನೀಡಲಾಗಿದೆ.
– ಇದಿಷ್ಟು ಮಾಹಿತಿ ಮಾತ್ರ ನಿಮ್ಮ ಕನ್ನಡ ಅಡ್ವೈಜರ್ ಗೆ ಲಭ್ಯವಾಗಿದೆ.
– Taralabalu Recruitment 2019 notification – Download