ದಿನವು ಸಹ ಬೆಳ್ಳುಳ್ಳಿಯ ಒಂದು ಸಣ್ಣ ಎಸಳನ್ನು ತಿನ್ನುವುದರಿಂದ ಪಚನಕ್ರಿಯೆ ಮತ್ತು ಹಸಿವು ಹೆಚ್ಚುತ್ತದೆ. ಬೆಳ್ಳುಳ್ಳಿ ಎಲ್ಲರ ಅಡುಗೆ ಮನೆಯಲ್ಲೂ ಇರುತ್ತದೆ. ಆಹಾರಕ್ಕೆ ಪರಿಮಳ ನೀಡಲು, ವಿಶಿಷ್ಟ ರುಚಿ ನೀಡಲು ಉಪಯೋಗಿಸಲಾಗುತ್ತದೆ. ಜತೆಗೆ ಆರೋಗ್ಯದ ಅನೇಕ ತೊಂದರೆಗಳಿಗೆ ಚಿಕಿತ್ಸೆ ನೀಡಲು ಬೆಳ್ಳುಳ್ಳ ಬಳಸಲಾಗುತ್ತದೆ.
ಬೆಳ್ಳುಳ್ಳಿಯನ್ನು ದಿನನಿತ್ಯ ಆಹಾರದಲ್ಲಿ ಬಳಸುವುದರಿಂದ ಈ ಎಲ್ಲಾ ಅನುಕೂಲಗಳು ಇವೆ..
– ಪ್ರತಿ ದಿನ ಬೆಳ್ಳುಳ್ಳಿಯ ಒಂದು ಸಣ್ಣ ಎಸಳನ್ನು ಜಗಿಯುವುದರಿಂದ ಪಚನಕ್ರಿಯೆ ಮತ್ತು ಹಸಿವು ಹೆಚ್ಚುತ್ತದೆ.
– ಹೃದಯದ ಆರೋಗ್ಯಕ್ಕೆ ಅನುಕೂಲಕಾರಿ
-ಕೂದಲು ಮತ್ತು ಚರ್ಮದ ಆರೋಗ್ಯಕ್ಕೂ ಬೆಳ್ಳುಳ್ಳಿ ರಾಮಬಾಣ.
-ಕ್ಯಾನ್ಸರ್ ಕಾಯಿಲೆ ದೂರವಿರಿಸುತ್ತದೆ
-ಮಾನಸಿಕ ಒತ್ತಡ ನಿಯಂತ್ರಿಸುವ ಗುಣ ಬೆಳ್ಳುಳ್ಳಿಯಲ್ಲಿದೆ. ಬೆಳ್ಳುಳ್ಳಿಯು ಬ್ಯಾಕ್ಟೀರಿಯಾ ವಿರೋಧಿ ಮತ್ತು
ಉರಿಯೂತ ಶಮನಕಾರಿ ಗುಣ, ಅದೇ ರೀತಿಯ ಆಂಟಿಆಕ್ಸಿಡೆಂಟ್ ಗುಣ ಕೂಡ ಹೊಂದಿದ
– ಬೆಳ್ಳುಳ್ಳಿಯನ್ನು ಬಾಯಲ್ಲಿ ಇಟ್ಟು ಕೊಳ್ಳುವುದರಿಂದ ಸಾಂಕ್ರಾಮಿಕ ಜ್ವರ ಮತ್ತು ಉಸಿರಾಟದ ತೊಂದರೆಯಿಂದ
ದೂರವಾಗಿರಬಹುದು. ಕಾರಣ ದೇಹದಲ್ಲಿ ರೋಗ ನಿರೋಧಕ ಶಕ್ಕಿ ಹೆಚ್ಚಿಸುವ ಶಕ್ತಿ ಇದಕ್ಕೆ ಇದೆ.
-ಬೆಳ್ಳುಳ್ಳಿಯಲ್ಲಿರುವ ಆಲೈಸಿನ್ ಪೋಷಕಾಂಶ ರಕ್ತದಲ್ಲಿ ಟ್ರೈಗ್ಲಿಸರೈಡ್ ಪ್ರಮಾಣವನ್ನು ನಿಯಂತ್ರಿಸುತ್ತದೆ.
-ಬೆಳ್ಳುಳ್ಳಿಯು ದೇಹದಲ್ಲಿನ ಕೊಲೆಸ್ಟ್ರಾಲ್ ನ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ. ಆದ್ದರಿಂದ ಪ್ರತಿದಿನ ಬೆಳ್ಳುಳ್ಳಿಯ ಒಂದು ಎಸಳನ್ನು ತಿನ್ನಿ. ಬೆಳ್ಳುಳ್ಳಿ ಜಗಿದು ತಿಂದರೆ ಅದರಿಂದ ಕೊಲೆಸ್ಟ್ರಾಲ್, ಟ್ರೈಗ್ಲಿಸರೈಡ್, ಎಂಡಿಎ, ಸಂಕೋಚನದ ಮತ್ತು ವ್ಯಾಕೋಚನದ ರಕ್ತದೊತ್ತಡವನ್ನು ಕಡಿಮೆ ಮಾಡುವುದು ಎನ್ನಲಾಗುವುದು.
-ಬೆಳ್ಳುಳ್ಳಿ ಸೇವನೆಯಿಂದ ರಕ್ತ ಶುದ್ಧಿಯಾಗುತ್ತದೆ. ಜತೆಗೆ ಜಠರಕ್ಕೆ ಯಾವುದೇ ಸೋಂಕು ಮತ್ತು ಗಾಯವಾಗದಂತೆ ನೋಡಿಕೊಳ್ಳುತ್ತದೆ.
– ಬೆಳ್ಳುಳ್ಳಿ ಬಿಳಿ ರಕ್ತಕಣ ಹೆಚ್ಚಿಸುತ್ತದೆ.
-ಬೆಳ್ಳುಳ್ಳಿ ರಕ್ತದ ಒತ್ತಡ ತಗ್ಗಿಸಿ ಎಲ್ಡಿಎಲ್ ಅಥವಾ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ ಹೃದಯದ ಆರೋಗ್ಯ
ಕಾಪಾಡುವುದು.
-ರಕ್ತಹೀನತೆ ಇದ್ದವರು ಬೆಳ್ಳೆಳ್ಳಿಯ ಎಸಳನ್ನು ಬಾಯಲ್ಲಿ ಇಟ್ಟುಕೊಳ್ಳಬೇಕು. ಇದು ಲಾಲಾರಸದ ಮೂಲಕ
ಆಹಾರದಲ್ಲಿ ಸೇರುತ್ತದೆ. ಹೀಗೆ ಮಾಡುವುದರಿಂದ ರಕ್ತಹೀನತೆ ನಿವಾರಣೆಯಾಗುತ್ತದೆ.
-ಬೆಳ್ಳುಳ್ಳಿಯನ್ನು ಹಸಿಯಾಗಿ ಸೇವಿಸಿದರೆ ಇನ್ನೂ ಒಳ್ಳೆಯದು. ಇದರಲ್ಲಿರುವ ಆಲಿಸಿನ್ ಬೇಯಿಸಿದ ಬೆಳ್ಳುಳ್ಳಿಗಿಂತಲೂ ಹೆಚ್ಚು ಪ್ರಬಲವಾಗಿರುತ್ತದೆ.
ಬೆಳ್ಳುಳ್ಳಿಯು ಕ್ಯಾನ್ಸರ್, ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ ಸೇರಿದಂತೆ ಹಲವಾರು ರೋಗಗಳಿಗೆ ಉತ್ತಮ ಮನೆ ಮದ್ದಾಗಿದೆ.