ಬೆಂಗಳೂರು ನಗರಕ್ಕೆ ಉದ್ಯೋಗದ ಸಂದರ್ಶನಕ್ಕಾಗಿ ಮತ್ತು ಪ್ರವೇಶ ಪರೀಕ್ಷೆಗಳಿಗಾಗಿ ಬರುವಂತಹ ಯುವತಿಯರಿಗೆ ಸುರಕ್ಷಿತ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ ಕರ್ನಾಟಕ ಸರ್ಕಾರ ಟ್ರಾನ್ಸಿಟ್ ಹಾಸ್ಟೆಲ್ಗಳನ್ನು ಪ್ರಾರಂಭಿಸಿದ್ದು, ಇದರ ಸದುಪಯೋಗ ಪಡೆದುಕೊಳ್ಳಲು ಪ್ರಕಟಣೆ ಹೊರಡಿಸಲಾಗಿದೆ.
ಉಲ್ಲೇಖಿತ ಅರೇ ಸರ್ಕಾರಿ ಪತ್ರದಡಿಯಲ್ಲಿ 2018-19 ನೇ ಸಾಲಿನ ಆಯವ್ಯಯ ಭಾಷಣದ ಘೋಟಣೆಯಂತೆ ಈ ಟ್ರಾನ್ಸಿಟ್ ಹಾಸ್ಟೆಲ್ಗಳನ್ನು ಆರಂಭಿಸಲಾಗಿದೆ.
ಪ್ರಕಟಣೆಯಲ್ಲಿ ತಿಳಿಸಿರುವಂತೆ ಬೆಂಗಳೂರಿಗೆ ಉದ್ಯೋಗದ ಸಂದರ್ಶನಕ್ಕಾಗಿ ಮತ್ತು ಪ್ರವೇಶ ಪರೀಕ್ಷೆಗಳಿಗಾಗಿ, ಇತ್ಯಾದಿಗಳಿಗೆ ಹಾಜರಾಗಲು ಒಂಟಿಯಾಗಿ ಬರುವ ಎಲ್ಲಾ ವರ್ಗದ ಮಹಿಳೆಯರು ಯಾವುದೇ ರೀತಿಯಲ್ಲಿ ಹಣ ಪಾವತಿಸದೆ 3 ದಿನಗಳ ಕಾಲ ಉಚಿತ ಊಟೋಪಹಾರ ಮತ್ತು ಸುರಕ್ಷಿತ ವಸತಿ ಸೌಲಭ್ಯವನ್ನು ಟ್ರಾನ್ಸಿಟ್ ಹಾಸ್ಟೆಲ್ಗಳಲ್ಲಿ ಪಡೆಯಬಹುದಾಗಿದೆ. ಈ ಸೌಲಭ್ಯಗಳನ್ನು ನೀಡಲು ಬೆಂಗಳೂರಿನಾದ್ಯಂತ 13 ಟ್ರಾನ್ಸಿಟ್ ವಸತಿ ನಿಲಯಗಳನ್ನು ಆರಂಭಿಸಲಾಗಿದೆ. ಅವುಗಳ ಪಟ್ಟಿಯನ್ನು ಈ ಕೆಳಗಿನಂತೆ ನೀಡಲಾಗಿದೆ.
List of Working womens hostels functioning in the state with address and Telephone Number (13 Transit Hostels list of Bengalore)