Home » ವಾಡಿಕೆಗಿಂತ ಶೇ 150 ರಷ್ಟು ಹೆಚ್ಚು ಮಳೆ; ಬೆಳೆ ಹಾನಿಗೆ ಜಂಟಿ ಸಮೀಕ್ಷೆ

ವಾಡಿಕೆಗಿಂತ ಶೇ 150 ರಷ್ಟು ಹೆಚ್ಚು ಮಳೆ; ಬೆಳೆ ಹಾನಿಗೆ ಜಂಟಿ ಸಮೀಕ್ಷೆ

by manager manager


ಬೆಂಗಳೂರು : ನಗರದಲ್ಲಿ ಸೆಪ್ಟೆಂಬರ್ 1 ರಿಂದ 5 ರವರೆಗೆ ಕೆಲವು ಪ್ರದೇಶಗಳಲ್ಲಿ ಶೇ 150 ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಮಹದೇವಪುರ, ಬೊಮ್ಮನಹಳ್ಳಿ, ಕೆ.ಆರ್.ಪುರಂ ಭಾಗದಲ್ಲಿ ಶೇ. 307 ರಷ್ಟು ಹೆಚ್ವು ಮಳೆಯಾಗಿದೆ. ಕಳೆದ 42 ವರ್ಷಗಳಲ್ಲಿಯೇ ಆಗಿರುವ ಅತಿ ಹೆಚ್ಚಿನ ಮಳೆ ಇದು. ಬೆಂಗಳೂರಿನ 164 ಕೆರೆಗಳೆಲ್ಲವೂ ತುಂಬಿ ಹರಿಯುತ್ತಿವೆ. ಆದರೆ ಜೊತೆಗೆ ಮಳೆಯಾಗಿ ದೊಡ್ಡ ಪ್ರಮಾಣದ ಪ್ರವಾಹ ದಕ್ಷಿಣ ವಲಯದಲ್ಲಿ ಆಗಿದೆ. ಹಲವಾರು ಪ್ರದೇಶಗಳಿಗೆ ಭೇಟಿಯನ್ನೂ ನೀಡಲಾಗಿದೆ ಎಂದರು.

ದೊಡ್ಡ ಕೆರೆಗಳಿಗೆ ಸ್ಲೂಯೀಸ್ ಗೇಟ್ ಗಳನ್ನು ಅಳವಡಿಸಲು ತೀರ್ಮಾನ
ಕೆರೆಗಳಿಗೆ ಸ್ಲೂಯೀಸ್ ಗೇಟ್ ಗಳಿಲ್ಲ. ನೀರು ಹೊರಬಿಡಲು , ಹಿಡಿದಿಟ್ಟುಕೊಳ್ಳುವುದು ಹಾಗೂ ಕೆರೆ ನಿರ್ವಹಣೆಗೆ ಸ್ಲೂಯೀಸ್ ಗೇಟ್ ಅವಶ್ಯಕ. ಬೆಂಗಳೂರಿನಾದ್ಯಂತ ದೊಡ್ಡ ಕೆರೆಗಳಿಗೆ ಸ್ಲೂಯೀಸ್ ಗೇಟ್ ಗಳನ್ನು ಅಳವಡಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಒತ್ತುವರಿ ತೆರವಿಗೆ ಸೂಚನೆ
ಕೆಲವು ಪ್ರದೇಶಗಳಲ್ಲಿ ಅತಿಕ್ರಮಣ ಮಾಡಿ ಕಾಂಪೌಂಡ್, ಕಟ್ಟಡಗಳನ್ನು ಕಟ್ಟಿಕೊಂಡಿದ್ದಾರೆ. ರಸ್ತೆಯ ಮೇಲೆ ನೀರು ನಿಲ್ಲುವ ಪರಿಸ್ಥಿತಿ ಬಂದಿದೆ. ಅವುಗಳನ್ನು ತೆರವು ಮಾಡಲು ಆದೇಶ ನೀಡಿದ್ದೇನೆ. ಇನ್ನೂ ನಾಲ್ಕು ದಿನ ಮಳೆಯಿರುವುದರಿಂದ ಕಾರ್ಯಾಚರಣೆ ತೀವ್ರವಾಗಿ ಆಗಬೇಕು ಎಂದು ಸೂಚಿಸಲಾಗಿದೆ.

ರಾಜ್ಯದ 17 ಜಿಲ್ಲೆಗಳ ಮಾಹಿತಿ ಪಡೆದಿದ್ದು, ಕಳೆದ 5 ದಿನಗಳಲ್ಲಿ 5092 ಜನ ಕಾಳಜಿ ಕೇಂದ್ರಗಳಲ್ಲಿ ಇದ್ದಾರೆ. 14717 ಹೆಕ್ಟೇರ್ ಪ್ರದೇಶ ಕೃಷಿ ಬೆಳೆ ಹಾಗೂ 1374 ಹೆಕ್ಟೇರ್ ಪ್ರದೇಶದ ತೋಟಗಾರಿಕಾ ಬೆಳೆ ಹಾನಿಯಾಗಿದೆ.

5 ದಿನಗಳ ಮಳೆಗೆ 430 ಮನೆಗಳು ತೀವ್ರವಾಗಿ ಹಾನಿಯಾಗಿವೆ ಹಾಗೂ 2188 ಮನೆಗಳು ಭಾಗಶ: ಹಾನಿಯಾಗಿವೆ. 255 ಕಿಮೀ ರಸ್ತೆಗಳು, ಸೇತುವೆಗಳು ಹಾಗೂ ಕಲ್ವರ್ಟ್ , ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ ಎಂದರು.

ಪಿ.ಡಿ.ಖಾತೆಯಲ್ಲಿ 664 ಕೋಟಿ ರೂ.ಗಳು ಲಭ್ಯ
ಮನೆಗಳ ಹಾನಿಯಾಗಿರುವುದನ್ನು ಕೂಡಲೇ ಸಮೀಕ್ಷೆ ಮಾಡಿ, ಮನೆಗಳಿಗೆ ನೀರು ನುಗ್ಗಿದ್ದರೆ 10 ಸಾವಿರ ರೂ.ತೀವ್ರವಾಗಿ ಹಾನಿಯಾಗಿದೆ ಕೂಡಲೇ 95 ಸಾವಿರ ರೂ. ಹಾಗೂ ಕಡಿಮೆ ಹಾನಿಯಾಗಿದ್ದಾರೆ 50 ಸಾವಿರ ರೂ.ಗಳನ್ನು ನೀಡಲು ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ. ಜಿಲ್ಲಾಧಿಕಾರಿಗಳ
ಪಿ.ಡಿ.ಖಾತೆಯಲ್ಲಿ 664 ಕೋಟಿ ರೂ.ಗಳು ಲಭ್ಯವಿದೆ ಎಂದರು.

ಬೆಳೆ ಹಾನಿಗೆ ಜಂಟಿ ಸಮೀಕ್ಷೆ
ಕೃಷಿ ಬೆಳೆ ಹಾನಿಯಾಗಿರುವುದಕ್ಕೆ ಮಳೆ ನಿಂತ ಕೂಡಲೇ ಜಂಟಿ ಸಮೀಕ್ಷೆ ಕೂಡಲೇ ಪ್ರಾರಂಭಿಸಲು ಪರಿಹಾರ ಆಪ್ ನಲ್ಲಿ ಅಪ್ ಲೋಡ್ ಮಾಡುವಂತೆ ತಿಳಿಸಿದೆ. ಈಗಾಗಲೆ ಘೋಷಿಸಿದಂತೆ ಪೂರ್ತಿ ಬಿದ್ದುಹೋದ ಮನೆಗಳಿಗೆ 5 ಲಕ್ಷ, ತೀವ್ರವಾಗಿ ಹಾನಿಯಾದರೆ 3 ಲಕ್ಷ ಹಾಗೂ ಅಲ್ಪ ಹಾನಿಯಾಗಿದ್ದರೆ 50 ಸಾವಿರ ರೂ. ನೀಡಲು ಸೂಚಿಸಿದೆ. ಎನ್.ಡಿ.ಆರ್.ಎಫ್ ನಿಯಮಗಳಿಗಿಂತ ಹೆಚ್ಚಿನ ಮೊತ್ತವಿದೆ. ಕೃಷಿ ಬೆಳೆ ಪರಿಹಾರವನ್ನು ಕೂಡ ಎನ್.ಡಿ.ಆರ್.ಎಫ್ ನಿಯಮಗಳಿಗಿಂತ ಹೆಚ್ಚಿದೆ. ಒಣಬೇಸಾಯಕ್ಕೆ 13600 ಸಾವಿರ, ನೀರಾವರಿ ಜಮೀನುಗಳಿಗೆ 25 ಸಾವಿರ ರೂ., ಹಾಗೂ ತೋಟಗಾರಿಕೆ ಗೆ 28 ಸಾವಿರ ರೂ.ಗಳು ನೀಡಲು ಸೂಚಿಸಿದೆ. ಅದರ ಪ್ರಕಾರ ಪರಿಹಾರ ಒದಗಿಸಲಾಗುವುದು ಎಂದರು.

ದುರಸ್ತಿಗೆ 500 ಕೋಟಿ ರೂ.
ಮೂಲಸೌಕರ್ಯ ಹಾನಿಯನ್ನು ದುರಸ್ತಿ ಮಾಡಲು ಹಣ ಬಿಡುಗಡೆ ಮಾಡಿದ್ದೇವೆ. ಶಾಶ್ವತವಾಗಿ ದುರಸ್ತಿ ಮಾಡಲು ಅಂದಾಜು ಪಟ್ಟಿ ಸಿದ್ಧ ಪಡಿಸಲು ಸೂಚಿಸಲಾಗಿದೆ. ಲೋಕೋಪಯೋಗಿ ಹಾಗೂ ಆರ್.ಡಿ.ಪಿ.ಆರ್ ಇಲಾಖೆಗೆ 500 ಕೋಟಿ ರೂ.ಗಳನ್ನು ರಸ್ತೆಗಳಿಗೆ ಬಿಡುಗಡೆ ಮಾಡಿದ್ದು, ಅಂದಾಜು ಪಟ್ಟಿ ಬಂದ ಕೂಡಲೇ ಇನ್ನೂ ಹೆಚ್ಚಿನ ಹಣ ಬಿಡುಗಡೆ ಮಾಡಲಾಗುವುದು ಎಂದರು.

ಪಡಿತರ ವಿತರಣೆ
ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿರುವ ಸಂತ್ರಸ್ತರಿಗೆ ಪಡಿತರ ವಿತರಿಸಲು ಸೂಚಿಸಿದೆ ಎಂದು ತಿಳಿಸಿದರು.

ಹಾನಿಯಾದ ಅಂಗಡಿ ಮುಗ್ಗಟ್ಟುಗಳಿಗೆ ಪರಿಹಾರ
ಅಂಗಡಿಗಳಿಗೆ, ವಾಣಿಜ್ಯ ಕೇಂದ್ರಗಳಿಗೆ ಹಾನಿಯಾಗಿದ್ದರೆ ಎನ್.ಡಿ.ಆರ್.ಎಫ್ ನಡಿ ಪರಿಹಾರ ನೀಡಲು ಅವಕಾಶ ಇಲ್ಲ. ಆದರೆ ಕಾರವಾರ, ರಾಮನಗರಕ್ಕೆ ಹೋದಾಗ ಅಂಗಡಿಗಳಿಗೆ ಪರಿಹಾರ ನೀಡಬೇಕೆನ್ನುವ ತೀರ್ಮಾನ ಮಾಡಿದ್ದು, ರಾಜ್ಯ ಸರ್ಕಾರ ವೇ ಹಣ ಭರಿಸಲಿದೆ. ಹಾನಿಯ ಆಧಾರದ ಮೇಲೆ ಪರಿಹಾರ ನೀಡಲಾಗುವುದು. ಪ್ರಥಮ ಬಾರಿಗೆ ಪ್ರವಾಹಕ್ಕೆ ರಾಜ್ಯದ ವಾಣಿಜ್ಯ ಕೇಂದ್ರಗಳಿಗೆ ಪರಿಹಾರ ನೀಡಲಾಗುತ್ತಿದೆ ಎಂದರು.

You may also like