4G ಸಿಮ್ ನಲ್ಲಿ VoLTE ಮತ್ತು LTE ಎಂದು ಎರಡು ಬಗೆಯೇ?.. ಆನ್ಲೈನ್ ನಲ್ಲಿ ಇತ್ತೀಚೆಗೆ ಹೆಚ್ಚು ಹರಿದಾಡುತ್ತಿರುವ ವೈರಲ್ ಪ್ರಶ್ನೆ ಇದು. ಇಂತಹದೇ ಹಲವು ಪ್ರಶ್ನೆಗಳು ಟೆಕ್ನಾಲಜಿ ಮತ್ತು ಗ್ಯಾಜೆಟ್ ಲೋಕಕ್ಕೆ ಸಂಬಂಧಿಸಿದಂತೆ ಆಗಾಗ ಹರಿದಾಡಿ ಸುದ್ದಿ ಮಾಡುತ್ತವೆ. ಇಂತಹ ಈ ಪ್ರಶ್ನೆಗೆ ನಿಮ್ಮ ಕನ್ನಡ ಅಡ್ವೈಸರ್ ಇಂದಿನ ಲೇಖನದಲ್ಲಿ ಉತ್ತರ ನೀಡಿದೆ.
ಯಾವುದೇ ಸಿಮ್ ಕಾರ್ಡ್ ತನ್ನಲ್ಲಿ ಎರಡು ಬಗೆಯ ಸಾಫ್ಟ್ವೇರ್ ಅನ್ನು ಹೊಂದಿರುತ್ತದೆ. ಅವುಗಳೆಂದರೆ
1. USIM (ಯುನಿವರ್ಸಲ್ ಸಬ್ಸ್ಕ್ರೈಬರ್ ಇಂಡೆಂಟಿಟಿ ಮೊಡ್ಯುಲ್ )
2. ISIM (ಐಪಿ ಮಲ್ಟಿಮೀಡಿಯಾ ಸಬ್ಸ್ಕ್ರೈಬರ್ ಇಂಡೆಂಟಿಟಿ ಮೊಡ್ಯುಲ್ )
ಸಿಮ್ ಹಲವರಿಗೆ ತಿಳಿದಿರುವಂತೆ UICC (ಯುನಿವರ್ಸಲ್ ಇಂಟಿಗ್ರೇಟೆಡ್ ಸರ್ಕ್ಯೂಟ್ ಕಾರ್ಡ್) ಎಂಬ ಟೆಕ್ನಿಕಲ್ ಹೆಸರು ಹೊಂದಿದೆ.
LTE ಗೆ ಸಂಬಂಧ ಪಟ್ಟಂತೆ ಹೇಳುವುದಾದರೆ
– USIM ಸಾಫ್ಟ್ವೇರ್ ಹೊಂದಿರುವ ಸಿಮ್ ಕಾರ್ಡ್ ಡಾಟಾ ಆಕ್ಸೆಸ್ ಮಾಡಲು LTE ಸಹಾಯ ಪಡೆಯುತ್ತವೆ, ಮತ್ತು ವಾಯ್ಸ್ ಓವರ್ ಸರ್ಕ್ಯೂಟ್ 2G/3G ನೆಟ್ವರ್ಕ್ ಪಡೆಯುತ್ತವೆ.
– ISIM ಸಾಫ್ಟ್ವೇರ್ ಸಿಮ್ ಕಾರ್ಡ್ಗಳು ಡಾಟಾ ಆಕ್ಸೆಸ್ ಮತ್ತು ವಾಯ್ಸ್ ಓವರ್ LTE(VoLTE) ಸಪೋರ್ಟ್ ಮಾಡುತ್ತವೆ.
– USIM ಸಾಫ್ಟ್ವೇರ್ ಹೊಂದಿರುವ ಸಿಮ್ ಕಾರ್ಡ್ ಕೇವಲ USIM ಅಪ್ಲಿಕೇಶನ್ಗಳನ್ನು ಹೊಂದಿದ್ದು, ಅದನ್ನು ಮಾತ್ರ ನಿರ್ವಹಿಸುತ್ತವೆ.
– ಆದರೆ ಎರಡನೇ ಟೈಪ್ ಸಾಫ್ಟ್ವೇರ್ ಹೊಂದಿರುವ ಸಿಮ್ ಕಾರ್ಡ್ಗಳು USIM ಮತ್ತು ISIM ಅಪ್ಲಿಕೇಶನ್ಗಳನ್ನು ಹೊಂದಿರುತ್ತವೆ.
ISIM ಅಪ್ಲಿಕೇಶನ್ ಅನ್ನು ಆಪರೇಟರ್ಗಳು ಸಾಫ್ಟ್ವೇರ್ಗಳ ಮೂಲಕ ಹಾಕುವ ಸಾಧ್ಯತೆ ಮಾತ್ರ ಇರುತ್ತದೆ.
In this article readers can know 4G VoLTE AND LTE sim diffrence. And you will clear the doubts yourself after read this story if two types of sim like VoLTE and LTE in 4G sim.