Home » ಹೊಟ್ಟೆ ಕರಗಿಸಲು ಸರಳ ಸಲಹೆ

ಹೊಟ್ಟೆ ಕರಗಿಸಲು ಸರಳ ಸಲಹೆ

by manager manager

ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಬಯಸುವವರು ಮೊದಲು ಯೋಚಿಸುವುದು ಹೊಟ್ಟೆಯ ಉಬ್ಬುವಿಕೆಯನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ..? ಎಂದು.ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ನಡುವಯಸ್ಸು ದಾಟುತ್ತಿದ್ದಂತೆಯೇ ಹೊಟ್ಟೆ ಮುಂದೆ ಬರುವುದು ಸರ್ವೇ ಸಾಮಾನ್ಯ. ಹೊಟ್ಟೆ ಮುಂದೆ ಬಂತೆಂದರೆಅತೀವ ಸಂಕಟ. ಎಲ್ಲರೆದುರಿಗೂ ಮುಜುಗರ ಎದುರಿಸಬೇಕಾಗುತ್ತದೆ. ಹೀಗಾಗಿ ಹೊಟ್ಟೆಯನ್ನು ಕರಗಿಸುವುದಕ್ಕಾಗಿ ಸಾಕಷ್ಟು ಕಸರತ್ತುಗಳನ್ನು ಮಾಡುತ್ತಾರೆ.

ಹೊಟ್ಟೆ ಕರಗಿಸಲು ಊಟ ಬಿಡುವುದು ಉತ್ತಮ ಪರಿಹಾರವಲ್ಲ. ಇದರಿಂದ ನೀವು ಇನ್ನೂ ಬೇರೆ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಹೊಟ್ಟೆಯ ತೂಕವನ್ನು ಕಡಿಮೆ ಮಾಡಿಕೊಳ್ಳಲು ಬಯಸುವವರಿಗೆ ಕನ್ನಡ ಅಡ್ವೈಜರ್ ಇಂದು ಉಪಯುಕ್ತಸಲಹೆಗಳನ್ನು ನೀಡಲಿದೆ. ಈ ಸಲಹೆಗಳ ಮೂಲಕ ನೀವು ಸುಲಭವಾಗಿ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಿಕೊಳ್ಳಬಹುದು.

ಹೊಟ್ಟೆ ಉಬ್ಬುವಿಕೆಗೆ ಕಾರಣಗಳು:

ಅಧಿಕ ಕಾರ್ಬೋಹೈಡ್ರೇಟ್ ಮತ್ತು ಅಧಿಕ ಕ್ಯಾಲೋರಿಯ ಆಹಾರವನ್ನು ತಿಂದು, ಅರಗಿಸಿಕೊಳ್ಳಲಾಗದಿರುವುದೇ ಹೊಟ್ಟೆ ಬರುವಿಕೆಗೆ ಕಾರಣ. ಬೆಳಗಿನಿಂದ ಸಂಜೆವರೆಗೆಕೂತೇ ಕೆಲಸ ಮಾಡುವುದು ಹೆಚ್ಚಿನ ಜನರ ಜೀವನಶೈಲಿಯಾಗಿದೆ. ಇದರಿಂದ ಬೇಡವಾದ ಕೊಬ್ಬು ಹೊಟ್ಟೆಯಲ್ಲಿ ಮತ್ತು ಸೊಂಟದ ಸುತ್ತ ಸಂಗ್ರಹವಾಗುತ್ತಾ ಹೋಗಿ ಹೊಟ್ಟೆ ಬರಲಾರಂಭಿಸುತ್ತದೆ.ಈ ಸಂಕಷ್ಟದಿಂದ ಪಾರಾಗಳು ನಾವು ತಿಳಿಸುವ ಈ ವಿಧಾನಗಳನ್ನು ಅನುಸರಿಸಿ ಸರಳವಾಗಿ ಹೊಟ್ಟೆ ಕರಗಿಸಬಹುದಾಗಿದೆ. ಪರಿಹಾರಗಳು ಈ ಕೆಳಗಿನಂತಿವೆ.

ನಿಂಬೆ ಹಣ್ಣಿನ ರಸ:

ಪ್ರತಿದಿನ ಬೆಳಿಗ್ಗೆ ಎದ್ದ ಬಳಿಕ ನಿಂಬೆ ಹಣ್ಣಿನ ರಸ ಸೇರಿಸಿದ ನೀರು ಕುಡಿಯಿರಿ.

ಫಾಸ್ಟ್ ಫುಡ್‌ ಬೇಡ:

ಫಾಸ್ಟ್ ಫುಡ್‌ಗಳಲ್ಲಿ ಹೆಚ್ಚು ಕೊಬ್ಬಿನಾಂಶ ಇರುತ್ತದೆ ಜೊತೆಗೆ ಕ್ಯಾಲರಿಯೂ ಹೆಚ್ಚಿರುತ್ತದೆ. ಇದರಿಂದ ದೇಹ ತೂಕ ಹೆಚ್ಚುತ್ತದೆ ಮತ್ತು ಹೊಟ್ಟೆಯ ಗಾತ್ರವೂ ಹೆಚ್ಚುತ್ತದೆ. ಹೀಗಾಗಿ ಫಾಸ್ಟ್ ಫುಡ್ ಸೇವಿಸುವುದು ಉತ್ತಮವಲ್ಲ.

ಗ್ರೀನ್ ಟೀ:

ಗ್ರೀನ್ ಟೀ ತೂಕ ಕಡಿಮೆ ಮಾಡಲು ಇರುವ ಒಂದು ಅದ್ಬುತ ಔಷದ ಎಂದು ವಿಶ್ವದಾದ್ಯಂತ ಪರಿಗಣಿಸಲಾಗಿದೆ. ಇದು antioxidants ಗಳಿಂದ ಸಮೃದ್ಧವಾಗಿದೆ, ಮತ್ತು ಇದು ತನ್ನ ಅದ್ಬುತ ಶಕ್ತಿಯಿಂದ ತೂಕ ಕಡಿಮೆ ಮಾಡಲು ನೆರವಾಗುತ್ತದೆ. ಇದನ್ನು ಸೇವಿಸುವುದರಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು. ಪ್ರತಿ ದಿನ ಎರಡು ಮೂರು ಸಲ ಸೇವಿಸಿದ್ದಲ್ಲಿ ಕೆಲವೇ ದಿನಗಳಲ್ಲಿ ಪರಿಣಾಮವನ್ನು ಕಾಣಬಹುದು. ನಿಮಗೆ ಬೇಗನೆ ಫಲಿತಾಂಶ ಬೇಕಿದ್ದರೆ ಇದಕ್ಕೆ ಸಕ್ಕರೆಯನ್ನು ಸೇರಿಸಬೇಡಿ.

ಸಕ್ಕರೆ ಸೇವನೆ ಕಡಿಮೆ ಮಾಡಿ:

ಸಕ್ಕರೆ ಹಾಕಿದ ಆಹಾರಗಳನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಸಕ್ಕರೆಯಲ್ಲಿ ಫ್ರಕ್ಟೋಸ್ ಇರುತ್ತದೆ. ಇದು ಲಿವರ್ನಿಂದ ಮಾತ್ರ ಕರಗಿಸಲು ಸಾಧ್ಯ. ಯಾವಾಗ ಗ್ಲಿಸೆರಿನ್ನ ಪ್ರಮಾಣ ಅಧಿಕವಾದಾಗ ಲಿವರ್ ಮೇಲೆ ಒತ್ತಡ ಬೀಳುತ್ತದೆ. ಆಗ ಫ್ರಕ್ಟೋಸ್ ಕೊಬ್ಬಾಗಿ ಪರಿವರ್ತನೆಯಾಗುತ್ತದೆ. ಇದು ಸೊಂಟದ ಸುತ್ತ ಶೇಖರಣೆಗೊಳ್ಳುತ್ತದೆ. ಹೀಗಾಗಿ ಸಕ್ಕರೆ ಸೇವನೆ ಪ್ರಮಾಣ ಕಡಿಮೆ ಮಾಡಿ.

ದಾಸವಾಳ ಟೀ ಮತ್ತು ಶುಂಠಿ

ದಾಸವಾಳ ನಿಮ್ಮ ದೇಹದಲ್ಲಿ ಶೇಖರಣೆಯಾಗಿರುವ ಅಧಿಕ ನೀರನ್ನು ಕರಗಿಸುವ ಮೂಲಕ ನೀವು ಸಣ್ಣಗೆ ಆಗಲು ಸಹಾಯ ಮಾಡುತ್ತದೆ. ಇದರಲ್ಲಿರುವ ಡೈಯುರೆಟಿಕ್ ಗುಣ ಹೊಟ್ಟೆ ಉಬ್ಬದಂತೆ ಅಂದರೆ ದಪ್ಪವಾಗದಂತೆ ತಡೆಯುತ್ತದೆ. ಮುಖ್ಯವಾಗಿ ಇದು ಹೊಟ್ಟೆಯಲ್ಲಿ ಶೇಖರಣೆಯಾಗಿರುವ ಕೊಬ್ಬನ್ನು ಸಣ್ಣ ತುಂಡುಗಳನ್ನಾಗಿಸಿ ದೇಹದ ಹೊರಗೆ ಹಾಕಲು ಸಹಾಯ ಮಾಡುತ್ತದೆ.

-ಶುಂಠಿ ಬೊಜ್ಜು ಕರಗಿಸುವಲ್ಲಿ ಹೆಚ್ಚು ಸಹಕಾರಿ. ಹಾಲಿನೊಂದಿಗೆ ಒಂದು ಚಮಚ ಶುಂಠಿ ಪೌಡರ್ ಬೆರೆಸಿ ಕುಡಿದರೆ ಫಿಟ್ ನೆಸ್ ಕಾಪಾಡಿಕೊಳ್ಳಬಹುದು.

ವ್ಯಾಯಾಮ ಮತ್ತು ಯೋಗ ಮಾಡಿ:

ನಿಮ್ಮ ಕೆಲಸ, ಒತ್ತಡ, ಸಮಸ್ಯೆಗಳನ್ನೆಲ್ಲ ಬದಿಗಿಟ್ಟು ವ್ಯಾಯಾಮದಲ್ಲಿ ತೊಡಗಿಕೊಳ್ಳಿ. ಜಾಗಿಂಗ್, ರನ್ನಿಂಗ್, ಸೈಕ್ಲಿಂಗ್, ಜಿಮ್ ಗೆ ಹೋಗುವ ಮಾಡೋ ಶಪಥ ಮಾಡಿ.

ಯೋಗದ ಕೆಲವು ಆಸನಗಳು ಹೊಟ್ಟೆ ಕರಗಿಸಲು ಸಹಕಾರಿಯಾಗಿದೆ. ಬೊಜ್ಜು ಹೊಟ್ಟೆಯನ್ನು ಕರಗಿಸಬೇಕೆನ್ನುವುದು ಪ್ರತಿಯೊಬ್ಬರ ಬಯಕೆ… ಡಯಟ್ ಮಾಡದೆ ಕೆಲ ಯೋಗಾಸನಗಳನ್ನು ಪ್ರತೀದಿನ ಅಭ್ಯಾಸ ಮಾಡುವುದರ ಮೂಲಕ ಹೊಟ್ಟೆ ಬೊಜ್ಜು ಕರಗಿಸಿ ಸುಂದರವಾದ ದೇಹದಾಕಾರವನ್ನು ಪಡೆಯಬಹುದು.

For this reason, losing belly fat has massive benefits for your health and can help you live longer. Belly fat is usually estimated by measuring the circumference around your waist. This can easily be done at home with a simple tape measure.

 

You may also like