ದಿ ಯುನಿಕ್ಯೂ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ(UIDAI) ಆಧಾರ್(Aadhaar) ನ ಅತ್ಯುನ್ನತ ಸುರಕ್ಷತೆಗಾಗಿ ಹೊಸ ಫೀಚರ್ ಅನ್ನು ಪರಿಚಯಿಸಿದೆ. ಈ ಹೊಸ ಫೀಚರ್ ಹೆಸರು ‘Masked Aadhaar’. ಈ ಫೀಚರ್ ಆಧಾರ್ ಗೆ ಅತ್ಯುನ್ನತ ಮಟ್ಟದಲ್ಲಿ ಸುರಕ್ಷತೆ ನೀಡಲಿದ್ದು, ವ್ಯಕ್ತಿಯು 12 ಡಿಜಿಟ್ ನಂಬರ್ ಇರುವ ಇ-ಆಧಾರ್ ಅನ್ನು ಡೌನ್ಲೋಡ್ ಮಾಡಬಹುದಾಗಿದ್ದು, ಕೊನೆಯ 4 ಡಿಜಿಟ್ ನಂಬರ್ ಮರೆಮಾಚಲಿದೆ.
‘Masked Aadhaar’ ಫೀಚರ್ನಿಂದಾಗಿ ಬಳಕೆದಾರರು ಇ-ಆಧಾರ್ ಅನ್ನು ಯಾವುದೇ ಬಯವಿಲ್ಲದೇ ಹಂಚಿಕೊಳ್ಳಬಹುದಾಗಿದೆ. ಇದರಲ್ಲಿ ಮೊದಲ 8 ಡಿಜಿಟ್ ನಂಬರ್ ಗಳು ಗೋಚರವಾಗುವುದಿಲ್ಲ. ಇ-ಆಧಾರ್ ಡಿಜಿಟಲ್ ಸಹಿ ಹೊಂದಿದ್ದು, ರೆಗ್ಯುಲರ್ ಇ-ಆಧಾರ್ ನಂತೆ ಬಳಕೆ ಮಾಡಬಹುದು. ಅಲ್ಲದೇ ಮೊದಲ ಎಲ್ಲಾ ನಂಬರ್ಗಳನ್ನು ಶೇರ್ ಮಾಡುವುದು ಕಡ್ಡಾಯವಲ್ಲ ಎಂದು UIDAI ಟ್ವಿಟ್ಟರ್ ನಲ್ಲಿ ಹೇಳಿದೆ.
‘Masked Aadhaar’ ಅನ್ನು ಡೌನ್ಲೋಡ್ ಮಾಡುವುದು ಹೇಗೆ?
– ಆಸಕ್ತ ವ್ಯಕ್ತಿಗಳು ತಮ್ಮ ‘Masked Aadhaar’ ಅನ್ನು UIDAI ಅಧಿಕೃತ ವೆಬ್ಸೈಟ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು.
– ಇ-ಆಧಾರ್ ಅನ್ನು ಡೌನ್ಲೋಡ್ ಮಾಡಿಕೊಳ್ಳಲು ‘Regular’ ಮತ್ತು ‘Masked’ ಎಂಬ ಎರಡು ಆಯ್ಕೆಗಳು ವೆಬ್ಸೈಟ್ನಲ್ಲಿ ಕಾಣುತ್ತವೆ.
– ಆಧಾರ್ ಅನ್ನು https://uidai.gov.in/ ಅಥವಾ https://eaadhaar.uidai.gov.in. ವೆಬ್ಸೈಟ್ಗಳಲ್ಲಿ ಡೌನ್ಲೋಡ್ ಮಾಡಬಹುದು.
UIDAI new feature will allow users to share their e-Aadhaar without any hiccups as the first eight digits of the Aadhaar number will not be disclosed.