ವಾತಾವರಣವು ಹೆಚ್ಚು ಬಿಸಿಯಾಗಿರುವ ವೇಳೆ ನಾವು ಎಷ್ಟೇ ನೀರು ಕುಡಿದರು ಕೆಲವೇ ಕ್ಷಣದಲ್ಲಿ ಮತ್ತೆ ದೇಹವು ಬೆವರುವುದು. ದೇಹ ಬಿಸಿಯಾಗುವುದು. ಆದರೆ ಇಂತಹ ಸಮಸ್ಯೆಯಿಂದ ದೂರವಿರಲು ಹಲವು ಬಗೆಯ ಸ್ಮೂದಿ ಪಾನೀಯಗಳು ಸಂಪೂರ್ಣವಾಗಿ ಸಹಾಯಮಾಡುತ್ತವೆ.
ಬೇಸಿಗೆಯಲ್ಲಿ ಮನೆಯಲ್ಲೇ ತಯಾರಿಸಿ ಬಿಸಿ ವಾತಾವರಣದಿಂದ ತಂಪು ಅನುಭವ ಪಡೆಯಬಹುದಾದ ತಂಪು ಪಾನೀಯ ಪೇಯಗಳಲ್ಲಿ ಸ್ಮೂದಿಯು ಒಂದು. ಆದ್ದರಿಂದ ಇಂದಿನ ಲೇಖನದಲ್ಲಿ ಹಲವು ಬಗೆಯ ಸ್ಮೂದಿಗಳನ್ನು ತಯಾರಿಸುವುದು ಹೇಗೆ ಎಂದು ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ.
ಮಾವಿನ ಹಣ್ಣಿನ ಲಸ್ಸಿ
ಬೇಕಾಗುವ ವಸ್ತುಗಳು : 1 ಕಪ್ ಮಾವಿನ ಹಣ್ಣಿನ ತಿರುಳು, 1 ದೊಡ್ಡ ಚಮಚದಲ್ಲಿ ಅಗಸೆ ಬೀಜಗಳ ಪುಡಿ, ಚಿಟಕಿ ಅರಿಶಿಣ, ಒಂದು ಚಿಟಕಿ ಕರಿಮೆಣಸು, 1 ದೊಡ್ಡ ಚಮಚ ಕಿತ್ತಳೆ ರಸ, ಒಂದು ಚಿಟಕಿ ಕರಿ ಉಪ್ಪು, ಸಕ್ಕರೆ ಅಥವಾ ಜೇನುತುಪ್ಪ ರುಚಿಗೆ ಬೇಕಾದಷ್ಟು ಮತ್ತು, ಅರ್ಧ ಕಪ್ ಮೊಸರು.
ಮಾವಿನ ಹಣ್ಣಿನ ಲಸ್ಸಿ ಮಾಡುವ ವಿಧಾನ: ಮಾವಿನ ಹಣ್ಣಿನ ತಿರುಳು, ಅಗಸೆ ಬೀಜಗಳ ಪುಡಿ, ಅರಿಸಿನ ಪುಡಿ, ಕರಿಮೆಣಸಿನ ಪುಡಿ, ಕಿತ್ತಳೆ ರಸ, ಜೇನುತುಪ್ಪ, ಕರಿ ಉಪ್ಪು ಎಲ್ಲವನ್ನು ಮಿಶ್ರಣ ಮಾಡಿ ಮಿಕ್ಸಿಗೆ ಹಾಕಿ ರುಬ್ಬಿ. ನಂತರ ಮೊಸರು ಸೇರಿಸಿ ಇನ್ನೊಮ್ಮೆ ಸುತ್ತು ಮಿಕ್ಸಿಯಲ್ಲಿ ರುಬ್ಬಿ. ನಂತರ ಶುದ್ಧವಾದ ಗಾಜಿನ ಲೋಟಗಳಿಗೆ ಹಾಕಿ, ಆಗೋಗ್ಯಕರವಾದ ಪೌಷ್ಠಿಕ ಮಾವಿನ ಹಣ್ಣಿನ ಲಸ್ಸಿ ಸವಿಯಿರಿ.
ಬಿಸ್ಕೆಟ್ ಚಾಕೋಲೆಟ್ ಮಿಲ್ಕ್ ಶೇಕ್
ಬೇಕಾಗುವ ವಸ್ತುಗಳು: ಬಿಸ್ಕೆಟ್ 7-8, ಗೋಡಂಬಿ 4-5, ಒಂದು ಚಮಚ ಕೊಕೋಪೌಡರ್, 4 ಟೇಬಲ್ ಚಮಚ ಸಕ್ಕರೆ, ಸ್ವಲ್ಪ ದಾಲ್ಚಿನ್ನಿ ಪುಡಿ, ಒಂದು ಕಪ್ ಗಟ್ಟಿ ಹಾಲು.
ತಯಾರಿಸುವ ವಿಧಾನ : ಗೋಡಂಬಿ, ಬಿಸ್ಕೆಟ್, ಕೊಕೋಪೌಡರ್, ಸಕ್ಕರೆ, ಹಾಲು, ದಾಲ್ಚಿನ್ನಿ ಪುಡಿ, ಸ್ವಲ್ಪ ನೀರು ಬೆರೆಸಿ ಮಿಕ್ಸಿಗೆ ಹಾಕಿ ರುಬ್ಬಿ. ನಂತರ ಗ್ಲಾಸಿಗೆ ಹಾಕಿ ಈ ಆರೋಗ್ಯಕರ ಸ್ಮೂದಿಯನ್ನು ಕುಡಿಯಿರಿ. ಬೇಸಿಗೆಯ ದಾಹ ಇದರಿಂದ ಕಡಿಮೆಯಾಗುತ್ತದೆ.
ಸೇಬ್ ಮತ್ತು ಕ್ಯಾರೆಟ್ ಸ್ಮೂದಿ
ಬೇಕಾಗುವ ವಸ್ತುಗಳು: ಒಂದು ಕಪ್ನಷ್ಟು ಸೇಬನ್ನು ಸಿಪ್ಪೆ ಸುಲಿದು ಸಣ್ಣಗೆ ಹೆಚ್ಚಿಕೊಳ್ಳಿ, ಹಾಗೆ ಸಣ್ಣಗ ಹೆಚ್ಚಿದ ಒಂದು ಕಪ್ ಕ್ಯಾರೆಟ್ ಚೂರುಗಳೂ, ಅರ್ಧ ಕಪ್ ಹಾಲು, ಅರ್ಧ ವೆನಿಲಾ ಐಸ್ ಕ್ರಿಮ್ ಮತ್ತು ರುಚಿಗೆ ಬೇಕಾದಷ್ಟು ಸಕ್ಕರೆ.
ತಯಾರಿಸುವ ವಿಧಾನ : ಮಿಕ್ಸಿಯಲ್ಲಿ ಸೇಬಿನ ಮತ್ತು ಕ್ಯಾರೆಟ್ ಚೂರುಗಳನ್ನು ಹಾಕಿ, ಹಾಲು, ಸಕ್ಕರೆ ಸೇರಿಸಿ ರುಬ್ಬಿ. ನಂತರ ಐಸ್ ಕ್ರೀಮ್ ಹಾಖಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಕುಡಿಯಿರಿ ನಿಮ್ಮ ದೇಹ ಮತ್ತು ಮನಸ್ಸು ಎರಡು ತಂಪಾಗುತ್ತವೆ.
ಖರ್ಜೂರ ಮತ್ತು ಬಾಳೆಹಣ್ಣಿನ ಸ್ಮೂದಿ
ಬೇಕಾಗುವ ವಸ್ತುಗಳು : ಸಣ್ಣಗೆ ತುಂಡು ಮಾಡಿದ ಅರ್ಧ ಕಪ್ ಬಾಳೆ ಹಣ್ಣು, ಸಣ್ಣಗೆ ಹೆಚ್ಚಿದ ಖರ್ಜೂರ ಅರ್ಧ ಕಪ್, ಒಂದು ಕಪ್ ಹಾಲು ಹಾಗೂ ಸ್ವಲ್ಪ ಪ್ರಮಾಣದ ಮಂಜುಗಡ್ಡೆಯ ಪುಡಿ.
ತಯಾರಿಸುವ ವಿಧಾನ : ಬಾಳೆಹಣ್ಣನ್ನು ಸುಲಿದು ಸಣ್ಣಗೆ ಪೀಸ್ ಮಾಡಿ ಬೀಜ ತೆಗೆದ ಖರ್ಜೂರದ ಚೂರು, ಹಾಲು ಹಾಗೂ ಮಂಜುಗಡ್ಡೆ ಪುಡಿ ಎಲ್ಲವನ್ನು ಮಿಶ್ರಣ ಮಾಡಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. ನಂತರ ಕುಡಿದು ಬಿಸಿಯಾದ ವಾತಾವರಣದಲ್ಲಿ ನಿಮ್ಮ ದೇಹವನ್ನು ತಂಪು ಮಾಡಿಕೊಳ್ಳಿ.
There are many types Smoodhi recipes that can cool the summer atmosphere. Here is How to prepare..