ಅಧಿಸೂಚನೆ ದಿನಾಂಕ 12-05-2017(2015 ರ ಗೆಜೆಟೆಡ್ ಪ್ರೋಬೇಷನರ್ ಹುದ್ದೆಗಳು) ಸಂಖ್ಯೆ 428, ಅಧಿಸೂಚನೆ ದಿನಾಂಕ 01-09-2017 ಮತ್ತು 24-11-2017 ರ FDA ಮತ್ತು SDA ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಶೀರ್ಘದಲ್ಲೇ ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿ ಪ್ರಕಟಿಸುವ ಸಾಧ್ಯತೆ ಮೂಲಗಳಿಂದ ತಿಳಿದಿದೆ.
ಮೇಲೆ ತಿಳಿಸಿದ ಅಧಿಸೂಚನೆಯ ಪ್ರಧಮ ದರ್ಜೆ ಸಹಾಯಕ 810+151 ಹೈದಾರಾಬಾದ್ ಕರ್ನಾಟಕ ಹುದ್ದೆಗಳು ಮತ್ತು ದ್ವಿತೀಯ ದರ್ಜೆ ಸಹಾಯಕ 766+85 ಹೈದಾರಾಬಾದ್ ಕರ್ನಾಟಕ ಹುದ್ದೆಗಳಿಗೆ ಸಂಬಂಧಿಸಿದ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಈ ಸಂಬಂಧ ಸಿಆಸು ಇಲಾಖೆಯಿಂದ ಸದ್ಯದಲ್ಲೇ ಸ್ಪಷ್ಟೀಕರಣ ಸಿಗಲಿದೆಯಂತೆ. ಹಾಗೂ ಜನವರಿ ಅಂತ್ಯದೊಳಗಾಗಿ ಸಂದರ್ಶನಗಳನ್ನು ಮುಕ್ತಾಯಗೊಳಿಸಿ ದಿನಾಂಕ 15-02-2019 ರೊಳಗೆ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಹೊರಬೀಳುವ ಬಗ್ಗೆ ಮೂಲಗಳಿಂದ ತಿಳಿದಿದೆ.
FDA / SDA Recruitment: The temporary list is likely to be released before February 15, 2019. Read more here..