ಇನ್ಫೋಸಿಸ್ ವಿಜ್ಞಾನ ಪ್ರತಿಷ್ಠಾನದ 2018 ರ ಸಾಲಿನ ವಿಜ್ಞಾನ ಪ್ರಶಸ್ತಿ ಪ್ರಕಟಗೊಂಡಿದೆ. ಇನ್ಫೋಸಿಸ್ ವಿಜ್ಞಾನ ಪ್ರಶಸ್ತಿಗಳನ್ನು ಸಂಶೋಧನಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಭಾರತ ಮತ್ತು ವಿದೇಶಿಯ ಸಂಶೋಧಕರಿಗೂ ನೀಡಲಾಗುತ್ತದೆ.
ಇನ್ಫೋಸಿಸ್ ವಿಜ್ಞಾನ ಪ್ರಶಸ್ತಿಗಳನ್ನು ಆರು ವಿಭಾಗಗಳಲ್ಲಿ ನೀಡಲಾಗುತ್ತಿದೆ. ಈ ಪ್ರಶಸ್ತಿಯು 72 ಲಕ್ಷ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. 2019 ರ ಜನವರಿ 5 ರಂದು ಈ ಪ್ರಶಸ್ತಿಗಳನ್ನು ಪ್ರಧಾನ ಮಾಡಲಾಗುತ್ತದೆ.
ಇನ್ಫೋಸಿಸ್ ವಿಜ್ಞಾನ ಪ್ರಶಸ್ತಿ ಭಾಜನರ ಪಟ್ಟಿ ಈ ಕೆಳಗಿನಂತಿದೆ.
1 ನವಕಾಂತ್ ಭಟ್
-ಎಂಜಿನಿಯರಿಂಗ್ ಮತ್ತುಕಂಪ್ಯೂಟರ್ ವಿಜ್ಞಾನ, ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು
2 S.K.ಸತೀಶ್
– ಭೌತ ವಿಜ್ಞಾನ ವಿಭಾಗ, ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು
3 ಕವಿತಾ ಸಿಂಗ್
ಮಾನವಿಕ ವಿಭಾಗ, ಕಲೆ ಮತ್ತು ಸೌಂದರ್ಯಶಾಸ್ತ್ರ ವಿಭಾಗ, ಜವಹರಲಾಲ್ ನೆಹರು ವಿಶ್ವವಿದ್ಯಾಲಯ
4 ರೂಪ್ ಮಲ್ಲಿಕ್
– ಜೀವ ವಿಜ್ಞಾನಗಳ ವಿಭಾಗ, ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ, ಮುಂಬೈ
5 ನಳಿನಿ ಅನಂತರಾಮನ್
– ಗಣಿತ ವಿಭಾಗ, ಗಣಿತ ಅಧ್ಯಯನ ಸಂಸ್ಥೆ, ಯುನಿವರ್ಸಿಟಿ ಆಫ್ ಸ್ಟ್ರಾಸ್ಬರ್ಗ್ (France)
6 ಸೆಂಧಿಲ್ ಮುಲೈನಾಥನ್
– ಸಮಾಜ ವಿಜ್ಞಾನ ವಿಭಾಗ, ಶಿಕಗೊ ವಿಶ್ವ ವಿದ್ಯಾಲಯ, ಅಮೆರಿಕ
Infosys Science Foundation’s 2018 Science Awards are announced. Six awardies each will get 72 lakh rupees. Check full list here.