Requirements for Indian websites or blog to have an adsense account
ಯಾವುದೇ ಬ್ಲಾಗ್ ಅಥವಾ ವೆಬ್ಸೈಟ್ಗೆ ಗೂಗಲ್ ಜಾಹೀರಾತು ಖಾತೆ(Google adsense account) ಹೊಂದಲು ಕೆಲವು ಪ್ರಮುಖ ನೀತಿ ನಿಯಮಗಳು ಇವೆ. ಅವುಗಳನ್ನು ಗೂಗಲ್ ಜಾಹೀರಾತು ಖಾತೆ ಹೊಂದಲು ಅಪ್ಲೇ ಮಾಡಿದಾಗ ಗೂಗಲ್ ಸಹ ಪರಿಗಣಿಸುತ್ತದೆ.
ಯಾವ ಬ್ಲಾಗ್ ಅಥವಾ ವೆಬ್ಸೈಟ್ ಗೆ ಗೂಗಲ್ ಜಾಹೀರಾತು ಖಾತೆ ಹೊಂದಲು ಪ್ರಯತ್ನಿಸುತ್ತೆವೆಯೋ, ಆ ವೆಬ್ಗಳು ಗೂಗಲ್ ಪರಿಗಣಿಸುವ ಅಂಶಗಳನ್ನು ಹೊಂದಿಲ್ಲದಿದ್ದಲ್ಲಿ ಖಾತೆಯನ್ನು ನೀಡುವುದಿಲ್ಲ. ಅಲ್ಲದೇ ಒಮ್ಮೆ ಜಾಹೀರಾತು ಖಾತೆ ರಿಜೆಕ್ಟ್ ಆದಲ್ಲಿ ಮತ್ತೆ ಪಡೆಯಲು ಹರಸಾಹಸವನ್ನೇ ಪಡಬೇಕಾಗುತ್ತದೆ.
ಆದ್ದರಿಂದ ಇಂದಿನ ಲೇಖನದಲ್ಲಿ ಬ್ಲಾಗ್ ಅಥವಾ ವೆಬ್ಸೈಟ್ ಒಂದು ಗೂಗಲ್ ಜಾಹೀರಾತು ಖಾತೆ ಹೊಂದಲು ಅಪ್ಲೇ ಮಾಡುವ ಮುನ್ನ ಯಾವ ನಿಯಮಗಳಿಗೆ ಬದ್ಧವಾಗಿರಬೇಕು ಎಂಬುದನ್ನು ಕನ್ನಡ ಅಡ್ವೈಜರ್ ತಿಳಿಸುತ್ತಿದೆ.
– ಬ್ಲಾಗ್ ಅಥವಾ ವೆಬ್ಸೈಟ್ ಒಂದು ಕನಿಷ್ಟ ಪಕ್ಷ 3 ತಿಂಗಳಾದರು ಹಳೆಯದಾಗಿರಬೇಕು.
– ವೆಬ್ಸೈಟ್ ಅಥವಾ ಬ್ಲಾಗ್ ಯಾವುದೇ ರೀತಿಯ adult content ಅನ್ನು ಹೊಂದಿರಬಾರದು.
– ನಿಮ್ಮ ವೆಬ್ಸೈಟ್ ಯಾವುದೇ ಕೃತಿ ಚೌರ್ಯ(Copyrighted) ಫೋಟೋಗಳು, ಲೇಖನಗಳು, ವಿಡಿಯೋಗಳು ಮತ್ತು ಲಿಂಕ್ಗಳನ್ನು ಹೊಂದಿರಬಾರದು.
– ಬಹುಮುಖ್ಯವಾಗಿ ಯಾವುದೇ ಲೇಖನಗಳನ್ನು ಬರಹಗಳನ್ನು ಮತ್ತೊಂದು ಸೈಟ್ನಿಂದ ಕಾಪಿ ಮಾಡಿ ಪೇಸ್ಟ್ ಮಾಡಿರಬಾರದು. ಯಾವಾಗಲು ಒರಿಜಿನಲ್ ಬರಹಗಳನ್ನು ಪೋಸ್ಟ್ ಮಾಡಬೇಕು.
– ನಿಮ್ಮ ವೆಬ್ಸೈಟ್ SEO ಮೂಲಕ ಉತ್ತಮವಾದ ಆರ್ಗ್ಯಾನಿಕ್ ಟ್ರ್ಯಾಫಿಕ್ ಮತ್ತು ನಾವಿಗೇಷನ್ ಹೊಂದಿರಬೇಕು.
-ಸಾಮಾಜಿಕ ಜಾಲತಾಣಗಳ ಮೂಲಕ ಬರುವ ಟ್ರಾಫಿಕ್ ಅನ್ನು ಗೂಗಲ್ ಗಂಭೀರವಾಗಿ ಪರಿಗಣಿಸುವುದಿಲ್ಲ.
– ನಿಮ್ಮ ವೆಬ್ಸೈಟ್ ಬರಹಗಳು ಉತ್ತಮ ಮಾಹಿತಿಗಳನ್ನು ಹೊಂದಿರಬೇಕು.
– ಕಂಟೆಂಟ್ ಗುಣಮಟ್ಟವು ಆಗಿರಬೇಕು ಹಾಗೂ ಹೆಚ್ಚು ಇರಬೇಕು.
– ಸ್ವಂತ ವೆಬ್ಸೈಟ್ ಅಥವಾ ಬ್ಲಾಗ್ ಆಗಿರಬೇಕು.
– ಗೂಗಲ್ ಜಾಹೀರಾತು ಖಾತೆಗಾಗಿ ಅಪ್ಲೇ ಮಾಡುವ ಮುನ್ನ ಕನಿಷ್ಟ ಪಕ್ಷ 20 ರಿಂದ 30 ಪೋಸ್ಟ್ಗಳು ಇರಬೇಕು.
– ಗೂಗಲ್ ಜಾಹೀರಾತು ಖಾತೆಗೆ ಅಪ್ಲೇ ಮಾಡುವವರು 18 ವರ್ಷ ಮೇಲ್ಪಟ್ಟವರಾಗಿರಬೇಕು.
– ಒಟ್ಟಾರೆ ಗೂಗಲ್ ನ ಎಲ್ಲಾ ನಿಯಮಗಳು ಮತ್ತು ಷರತ್ತುಗಳಿಗೆ ಬದ್ಧವಾಗಿರಬೇಕು.
Main Requirements for Indian website or blogs to have a google adsense account are here. And these are the main parameters to get an adsense account from the google to Indian Websites or Blogs.