ವಿಶ್ವವಿದ್ಯಾಲಯ ಧನಸಹಾಯ ಆಯೋಗ ಕನ್ಸಲ್ಟೆಂಟ್ ಹುದ್ದೆ ನೇಮಕಾತಿಗಾಗಿ ಪ್ರಕಟಣೆ ಹೊರಡಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಹುದ್ದೆಗಾಗಿ ಅರ್ಜಿ ಸಲ್ಲಿಸಬಹುದು.
ಈ ಮೇಲಿನ ಹುದ್ದೆಯನ್ನು ಒಂದು ವರ್ಷದ ಅವಧಿಗೆ ನೇಮಕಾತಿ ನಡೆಸಲಾಗುತ್ತಿದ್ದು, ಕಾರ್ಯವೈಖರಿ ಆಧಾರದ ಮೇಲೆ ಕಾರ್ಯನಿರ್ವಹಣೆ ಅವಧಿಯನ್ನು ವಿಸ್ತರಿಸುವ ಸಾಧ್ಯತೆಯು ಇದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕನ್ಸಲ್ಟೆಂಟ್ ಹುದ್ದೆಗೆ ಅರ್ಜಿಸಲ್ಲಿಸಲು ಇರಬೇಕಾದ ಅರ್ಹತೆ : ಕನಿಷ್ಠ 55 ಶೇಕಡದಿಂದ ಸ್ನಾತಕೋತ್ತರ ಪದವಿ ಪಡೆದಿರಬೇಕು ಅಥವಾ ಅಸಿಸ್ಟಂಟ್ ಪ್ರೊಫೆಸರ್ ಆಗಿ ರ್ಯಾಂಕ್ ಪಡೆದಿರಬೇಕು, ಅಥವಾ ಈ ಎರಡು ಅರ್ಹತೆಗಳಿಗೆ ಸಮನಾದ ಶೈಕ್ಷಣಿಕ ಆಡಳಿತಗಾರರಾಗಿಬೇಕು.
ಇತರೆ ಅರ್ಹತೆ: ಕಂಪ್ಯೂಟರ್ ನಲ್ಲಿ ಎಂಎಸ್ ಆಫೀಸ್/ಎಕ್ಸೆಲ್/ ಇಂಟರ್ನೆಟ್ ಬಳಸುವ ಜ್ಞಾನ ಇರಬೇಕು.
– ಎನ್ಐಆರ್ಎಫ್ ರ್ಯಾಂಕಿಂಗ್, ಇಂಟರ್ನ್ಯಾಷನಲ್ ರ್ಯಾಂಕಿಂಗ್ಸ್ ಮತ್ತು ಇತರೆ ರ್ಯಾಂಕಿಂಗ್ ಗಳ ಮೇಲೆ ಆಧ್ಯತೆ ನೀಡಲಾಗುತ್ತದೆ.
ವಯೋಮಿತಿ : ಅರ್ಜಿ ಸಲ್ಲಿಸುವ ವೇಳೆಗೆ 35 ವರ್ಷ ದಾಟಿರಬಾರದು.
ಸಂಬಳ : ಆಯ್ಕೆಯಾದ ಅಭ್ಯರ್ಥಿಗಳಿಗೆ 75000-100000 ರೂವರೆಗೆ ಅರ್ಹತೆ ಆಧಾರದ ಮೇಲೆ ನೀಡಲಾಗುವುದು.
ಆಯ್ಕೆ ವಿಧಾನ: ಅಭ್ಯರ್ಥಿಗಳನ್ನು ಅವರ ಅರ್ಹತೆ ಮತ್ತು ಅನುಭವದ ಆಧಾರದ ಆಯ್ಕೆ ಮಾಡಿ ಆಯ್ಕೆ ಸಮಿತಿಯು ಸಂದರ್ಶನವನ್ನು ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ನವೆಂಬರ್ 30, 2018
ಅರ್ಜಿ ಸಲ್ಲಿಸುವುದು ಹೇಗೆ? ತಿಳಿಯಲು, ಅರ್ಜಿ ಡೌನ್ಲೋಡ್ ಮಾಡಲು ಮತ್ತು ಇತರೆ ಮಾಹಿತಿಗೆ ಕ್ಲಿಕ್ ಮಾಡಿ
UGC released new recruitment notification for the post of Consultants for UGC – Institutions of Eminence Secretariat.