Airavata a Taxi scheme for SC, ST unemployees of Karnataka.
ನಿರುದ್ಯೋಗಿಗಳು ಸುಮ್ಮನೆ ಕುಳಿತಿದ್ದರೂ ಸಹ ಒಂದು ಕೆಲಸದಲ್ಲಿ ಬ್ಯೂಸಿ ಆಗಿರುತ್ತಾರೆ. ಅದು ಬೇರಾವುದು ಅಲ್ಲಾ.. ಲೇಟೆಸ್ಟ್ ಸ್ಮಾರ್ಟ್ಫೋನ್ ಹಿಡಿದು ಇಂಟರ್ನೆಟ್ ಬಳಸುತ್ತಾ ಬ್ರೌಸಿಂಗ್ ನಲ್ಲಿ ತೊಡಗುವುದು. ಹಾಗೆ ಬ್ರೌಸ್ ಮಾಡುತ್ತಾ ಕನ್ನಡ ಅಡ್ವೈಜರ್(www.kannadaadvisor.com) ವೆಬ್ಸೈಟ್ ಗೆ ಭೇಟಿ ನೀಡಿ. ಯಾಕೇ? ಅನ್ನೋ ಪ್ರಶ್ನೆಗೆ ಉತ್ತರ ಕೆಳಗಿನಂತಿದೆ.
ಯಾಕಂದ್ರೆ ನಿರುದ್ಯೋಗಿಗಳು ಸ್ವಂತ ಉದ್ಯೋಗದಲ್ಲಿ ತೊಡಗಿಕೊಳ್ಳಲು, ಉದ್ಯಮಿಗಳಾಗಲು ಸರ್ಕಾರ ನೀಡುವ ಸಹಾಯಕ ಯೋಜನೆಗಳನ್ನು ನಿಮಗೆ ಅಪ್ಡೇಟ್ ಮಾಡುತ್ತಿರುತ್ತೀವೆ. ಹಾಗೂ ಆ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವುದು ಹೇಗೆ? ಎಂಬುದನ್ನು ಸರಳವಾಗಿ ತಿಳಿಸುತ್ತೇವೆ.
ಅಂದಹಾಗೆ ಕನ್ನಡ ಅಡ್ವೈಜರ್ ಇಂದಿನ ಲೇಖನದಲ್ಲಿ ಸರ್ಕಾರದ ‘ಐರಾವತ’ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ.
‘ಐರಾವತ’ – ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ-ಯುವತಿಯರಿಗಾಗಿ ಜಾರಿಗೊಳಿಸಿರುವ ಒಂದು ಟ್ಯಾಕ್ಸಿ ಯೋಜನೆ.
‘ಐರಾವತ’ ಯೋಜನೆಯನ್ನು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ, ಭೋವಿ ಅಭಿವೃದ್ಧಿ ನಿಗಮ, ಆದಿ ಜಾಂಭವ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಗಳ ಮೂಲಕ ಊಬರ್ ಸಂಸ್ಥೆಯ ಸಹಯೋಗದಲ್ಲಿ ನಿರುದ್ಯೋಗಿ ಯುವಕ-ಯುವತಿಯರಿಗಾಗಿ ಟ್ಯಾಕ್ಸಿ ಸೌಲಭ್ಯ ನೀಡಲು ಉದ್ಧೇಶಿಸಿರುವ ಯೋಜನೆ.
ಈ ಯೋಜನೆಯ ಸೌಲಭ್ಯ ಪಡೆಯಲು ಆಯ್ಕೆಯಾದ ಫಲಾನುಭವಿಗಳು ಊಬರ್ ಪ್ಲಾಟ್ಫಾರ್ಮ್ನಲ್ಲಿ ತರಬೇತಿ ಪಡೆದು ವಾಹನ ಚಾಲನ ವಹಿವಾಟನ್ನು ನಡೆಸಬೇಕು. ಪ್ರತಿ ಫಲಾನುಭವಿಗೆ ಸ್ವಂತ ಹಣಕಾಸು ವ್ಯವಸ್ಥೆ ಮಾಡಿಕೊಂಡಲ್ಲಿ ಸಹಾಯಧನವನ್ನು ವಾಹನ ಖರೀದಿಗೆ ಬಿಡುಗಡೆ ಮಾಡಲು ಅವಕಾಶ ಇರುತ್ತದೆ.
‘ಐರಾವತ’ ಯೋಜನೆಯ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸುವ ಅವಧಿ ಪ್ರಸ್ತುತ ಮುಗಿದಿದ್ದು, ಮುಂದಿನ ಅವಧಿಯಲ್ಲಿ ಅರ್ಜಿ ಆಹ್ವಾನಿಸಿದಾಗ ಕನ್ನಡ ಅಡ್ವೈಜರ್ ಮಾಹಿತಿ ನೀಡಲಾಗಿದೆ. ಆಗ ಈ ಯೋಜನೆಯ ಸದುಪಯೋಗ ಪಡೆಯಲು ಏನೆಲ್ಲಾ ಅರ್ಹತೆಗಳು ಬೇಕು, ಪಡೆಯುವುದು ಹೇಗೆ ಎಂದು ಇನ್ನೂ ಹೆಚ್ಚಿನ ಮಾಹಿತಿ ತಿಳಿಯಲು ಕ್ಲಿಕ್ ಮಾಡಿ
Karnataka Social Welfare Department launched ‘Airavata’ scheme to provide jobs for unemploye youths from the SC, ST. Read more here..