Guest Lecturers Recruitment 2018-19 apply online
ಕರ್ನಾಟಕ ಸರ್ಕಾರ ಕಾಲೇಜು ಶಿಕ್ಷಣ ಇಲಾಖೆ ರಾಜ್ಯದ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕರ ಹುದ್ದೆಗಳ ನೇಮಕಾತಿಗೆ ಪ್ರಕಟಣೆ ಹೊರಡಿಸಿದೆ. 2018-2019 ನೇ ಸಾಲಿಗೆ ಈ ಅತಿಥಿ ಉಪನ್ಯಾಸಕರ ನೇಮಕಾತಿ ಆಗಿದ್ದು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಸೂಚನೆ: 2017-18 ನೇ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರರಾಗಿ ಕಾರ್ಯ ನಿರ್ವಹಿಸಿದವರಿಗೆ 2018-19 ನೇ ಸಾಲಿನ ಆಯ್ಕೆಯಲ್ಲಿ ಮೊದಲ ಆಧ್ಯತೆ ನೀಡಲಾಗುತ್ತದೆ. ಹೊಸ ಅಭ್ಯರ್ಥಿಗಳಿಗೆ ಹುದ್ದೆಗಳ ಖಾಲಿ ಇದ್ದಲ್ಲಿ ಮಾತ್ರ ಅವಕಾಶ ನೀಡಲಾಗುತ್ತದೆ.
– 2017-18 ನೇ ಸಾಲಿನಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ Update Application link ಎಂಬದರ ಮೇಲೆ ಕ್ಲಿಕ್ ಮಾಡಿ ಲೇಟೆಸ್ಟ್ ಮಾಹಿತಿ ಅಪ್ಡೇಟ್ ಮಾಡಬಹುದು.
– ಹಾಗೂ 2017-18 ನೇ ಸಾಲಿನಲ್ಲಿ ಕಾರ್ಯ ನಿರ್ವಹಿಸುತ್ತಾ ವರ್ಕ್ ಲೋಡ್ ಕಡಿಮೆ ಇದ್ದ ಕಾರಣ ರಿಲೀವ್ ಆದವರೂ ಸಹ ಮೇಲೆ ತಿಳಿಸಿದ ಲಿಂಕ್ ಬಳಸಿ ಅಪ್ಡೇಟ್ ಮಾಡಬಹುದು.
– 2018-19 ನೇ ಸಾಲಿಗೆ ಅರ್ಜಿ ಸಲ್ಲಿಸಿದವರು ತದನಂತರ ಯಾವುದಾದರೂ ಮಾಹಿತಿ ಅಪ್ಡೇಟ್ ಮಾಡಬೇಕು ಅಥವಾ ತಿದ್ದುಪಡಿ ಮಾಡಬೇಕಾದಲ್ಲಿ ಅದಕ್ಕೆ ಅವಕಾಶ ಇರುತ್ತದೆ.
– ಎರಡ ಭಾರಿ ರಿಜಿಸ್ಟರ್ ಮಾಡಿಸಿರುವ ಅಪ್ಲಿಕೇಶನ್ಗಳನ್ನು ತಿರಸ್ಕರಿಸಲಾಗುತ್ತದೆ.
ಶೈಕ್ಷಣಿಕ ಅರ್ಹತೆ
– ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಪ್ರಕಾರ ಅತಿಥಿ ಉಪನ್ಯಾಸಕರ ಹುದ್ದೆಗೆ ಯುಜಿಸಿ ಎನ್ಇಟಿ ಪರೀಕ್ಷೆ ಪಾಸ್ ಆದವರಿಗೆ ಮೊದಲ ಆಧ್ಯತೆ ನೀಡಬೇಕು
ಇತರೆ ಸಾಮಾನ್ಯ ಸೂಚನೆಗಳು
– ಆಯ್ಕೆ ವಿಧಾನ ಸಂಪೂರ್ಣ ತಾತ್ಕಾಲಿಕವಾಗಿರುತ್ತದೆ
– ಆಯ್ಕೆ ಆದ ಕಾಲೇಜಿನಲ್ಲಿ ರಿಪೋರ್ಟ್ ಮಾಡಿಕೊಳ್ಳುವ ಸಮಯದಲ್ಲಿ ಕಡ್ಡಾಯವಾಗಿ ಅಭ್ಯರ್ಥಿಗಳು ಎಲ್ಲಾ ಮೂಲ ದಾಖಲೆಗಳನ್ನು ಸಲ್ಲಿಸಬೇಕು
– ಅತಿಥಿ ಉಪನ್ಯಾಸಕರು ನಿಗದಿತ ವೇಳೆಯ ಪ್ರವಚನದ ಎಲ್ಲಾ ಕಾರ್ಯಗಳನ್ನು ಸಮಯಕ್ಕೆ ಸರಿಯಾಗಿ ಮುಗಿಸಬೇಕು
– ಅತಿಥಿ ಉಪನ್ಯಾಸಕರು ಆಯ್ಕೆಯಾದ ಒಂದೇ ಒಂದು ಕಾಲೇಜಿನಲ್ಲಿ ಮಾತ್ರ ಕಾರ್ಯ ನಿರ್ವಹಿಸಬೇಕು.
– ಕೇವಲ ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-07-2018
Department of Collegiate Education invites application for the Guest Lectures in Governament First Grade Colleges in Karnataka(GFGC) for Academic year 2018-19.