Home » ಬೆಂಗಳೂರು ಸಿಟಿ ಕೋಆಪರೇಟಿವ್ ಬ್ಯಾಂಕ್‌ ನೇಮಕಾತಿ: ಕಿರಿಯ ಸಹಾಯಕ ಮತ್ತು ಅಟೆಂಡರ್ ಹುದ್ದೆಗೆ ಅರ್ಜಿ

ಬೆಂಗಳೂರು ಸಿಟಿ ಕೋಆಪರೇಟಿವ್ ಬ್ಯಾಂಕ್‌ ನೇಮಕಾತಿ: ಕಿರಿಯ ಸಹಾಯಕ ಮತ್ತು ಅಟೆಂಡರ್ ಹುದ್ದೆಗೆ ಅರ್ಜಿ

by manager manager

Bangalore city co operative bank recruitment 2017

Bangalore city cooperative bank recruitment 2017.

ನಗರ ಪ್ರದೇಶದ ಪ್ರಮುಖ ಬ್ಯಾಂಕ್‌ ಆದ ಬೆಂಗಳೂರು ಸಿಟಿ ಕೋ-ಆಪರೇಟಿವ್ ಬ್ಯಾಂಕ್‌ ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಕಟಣೆ ಹೊರಡಿಸಲಾಗಿದೆ.

ಬೆಂಗಳೂರು ಸಿಟಿ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿನ ಕಿರಿಯ ಸಹಾಯಕ ಮತ್ತು ಅಟೆಂಡರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಸಂಖ್ಯೆ ಎಷ್ಟು? ಶೈಕ್ಷಣಿಕ ಅರ್ಹತೆ ಮತ್ತು ಇತರೆ ಮಾಹಿತಿ ಈ ಕೆಳಗಿನಂತಿದೆ.

ಹುದ್ದೆಯ ಹೆಸರು :ಕಿರಿಯ ಸಹಾಯಕ

ಒಟ್ಟು ಹುದ್ದೆಗಳ ಸಂಖ್ಯೆ : 63

ಶೈಕ್ಷಣಿಕ ಅರ್ಹತೆ : ಯಾವುದೇ ಪದವಿ ಉತ್ತೀರ್ಣ

ಇತರೆ : ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಕಂಪ್ಯೂಟರ್ ಜ್ಞಾನ, ಡಿಪ್ಲೋದಲ್ಲಿ ಸೆಕ್ರೆಟ್ರಿಯಲ್ ತರಬೇತಿ, ಡಿಪ್ಲೋಮೊ ಇನ್ ಬ್ಯಾಂಕ್ ಕ್ಷೇತ್ರ ಅಥವಾ ಕೋ-ಆಪರೇಟಿವ್ ಬ್ಯಾಂಕಿಂಗ್‌ ಪರೀಕ್ಷೆಯಲ್ಲಿ ಪಾಸ್ ಆಗಿರಬೇಕು. ಅಥವಾ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ ಕೆಲಸದ ಅನುಭವ ಹೊಂದಿರಬೇಕು.

ಹುದ್ದೆಯ ಹೆಸರು : ಅಟೆಂಡರ್

ಹುದ್ದೆಗಳ ಸಂಖ್ಯೆ : 11

ಶೈಕ್ಷಣಿಕ ಅರ್ಹತೆ : SSLC

ಇತರೆ : ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ ಕೆಲಸದ ಅನುಭವ ಇರುವವರಿಗೆ ಮೊದಲ ಆಧ್ಯತೆ.

– ಅರ್ಹಿ ಸಲ್ಲಿಸುವವರು ಕರ್ನಾಟಕದ ಪ್ರಜೆ ಆಗಿರಬೇಕು.

– ಕನ್ನಡದಲ್ಲಿ ಓದುವ ಮತ್ತು ಬರೆಯಲು ತಿಳಿದಿರಬೇಕು.

ಆಯ್ಕೆ ವಿಧಾನ : ಸ್ಪರ್ಧಾತ್ಮಕ ಪರೀಕ್ಷೆ ಮೂಲಕ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 26-04-2017

ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ : 27-04-2017

ಅರ್ಜಿ ಶುಲ್ಕ ಎಷ್ಟು?

ಸಾಮಾನ್ಯ ವರ್ಗಗಳ ಅಭ್ಯರ್ಥಿಗಳಿಗೆ : ರೂ 400

ಪ್ರವರ್ಗ 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ : ರೂ.400

ಮಾಜಿ ಸೈನಿಕ ಅಭ್ಯರ್ಥಿಗಳಿಗೆ : ರೂ.300

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ1/ : ರೂ.300

ವಯೋಮಿತಿ

ಅರ್ಜಿಸುವ ಕೊನೆಯ ದಿನಾಂಕದೊಳಗೆ ಕನಿಷ್ಟ 18 ವರ್ಷ ಗರಿಷ್ಠ 35 ವರ್ಷ ಒಳಪಟ್ಟಿರಬೇಕು.

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿಗಳನ್ನು ಆನ್‌ಲೈನ್ ಮೂಲಕವೇ ಭರ್ತಿ ಮಾಡಿಬೇಕು. ಅರ್ಜಿ ಸಲ್ಲಿಸಲು ಈ ಕೆಳಗಿನ ದಾಖಲೆಗಳು ಅಗತ್ಯ

– ಭಾವಚಿತ್ರ ಮತ್ತು ಸಹಿ

– ವಯೋಮಿತಿಗೆ ಆಧಾರವಾಗಿ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ

– ವಿದ್ಯಾರ್ಹತೆ ದಾಖಲೆ

ಅರ್ಜಿ ಸಲ್ಲಿಸಲು ಬೆಂಗಳೂರು ಕೋ-ಆಪರೇಟಿವ್ ಬ್ಯಾಂಕ್‌ ನ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ. ಕ್ಲಿಕ್ ಮಾಡಿ ( https://bccbl.co.in/ )

Bangalore city Co-operative Bank has invited application for the post of Junior Assistant and Attender Posts.

You may also like