ಕೋಲಾರ ಗೋಲ್ಡ್ ಫೀಲ್ಡ್ ಬಿಇಎಂಎಲ್ ತರಬೇತಿ ಕೇಂದ್ರ ಟೆಕ್ನಿಕಲ್ ಕೋರ್ಸ್ಗಳಲ್ಲಿ 3 ವರ್ಷ ಡಿಪ್ಲೊಮೊ ಮತ್ತು 4 ವರ್ಷ ಇಂಜಿನಿಯರಿಂಗ್ ಪದವಿ ಮುಗಿಸಿರುವ ಅರ್ಹ ಅಭ್ಯರ್ಥಿಗಳಿಂದ ಒಂದು ವರ್ಷದ ಅವಧಿಯ ಅಪ್ರೆಂಟಿಶಿಪ್ ತರಬೇತಿಗಾಗಿ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಈ ಕೆಳಗಿನ ಬ್ರ್ಯಾಂಚ್ಗಳಲ್ಲಿ ಡಿಪ್ಲೊಮೊ ಮತ್ತು ಇಂಜಿನಿಯರಿಂಗ್ ಮುಗಿಸಿರಬೇಕು.
– ಮೆಕಾನಿಕಲ್ ಇಂಜಿನಿಯರಿಂಗ್
– ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್
– ಎಲೆಕ್ಟ್ರಾನಿಕ್ಸ್ ಕಂಮ್ಯುನಿಕೇಷನ್ ಇಂಜಿನಿಯರಿಂಗ್
– ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್
– ಆಟೋಮೊಬೈಲ್ ಇಂಜಿನಿಯರಿಂಗ್
ಸಿವಿಲ್ ಇಂಜಿನಿಯರಿಂಗ್
-ಈಗಾಗಲೇ ಅರ್ಜಿ ಸಲ್ಲಿಸಿರುವವರು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ.
-ಬಿಇಎಂಲ್ ಅಪ್ರೆಂಟಿಶಿಪ್ ತರಬೇತಿಗಾಗಿ ಅಭ್ಯರ್ಥಿಗಳನ್ನು ಸಂಪೂರ್ಣವಾಗಿ ಅವರ ಮೆರಿಟ್ ಆಧಾರದ ಮೇಲೆ ಮತ್ತು ಸರ್ಕಾರದ ಮೀಸಲಾತಿ ಅನುಸರವಾಗಿ ಆಯ್ಕೆ ಮಾಡಲಾಗುತ್ತದೆ.
– ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20-12-2018
– ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಲ್ಲಾ ಸೆಮಿಸ್ಟರ್ನ ಅಂಕಪಟ್ಟಿಗಳ ಜೆರಾಕ್ಸ್ ಪ್ರತಿ, ಪದವಿ ಸರ್ಟಿಫಿಕೇಟ್ ಜೆರಾಜ್ಸ್ ಪ್ರತಿಗಳೊಂದಿಗೆ “THE MANAGER TRAINING, BEML LTD, KGF COMPLEX” ವಿಳಾಸಕ್ಕೆ ಅರ್ಜಿಯನ್ನು ತಲುಪಿಸಬೇಕು.
-ಅಭ್ಯರ್ಥಿಗಳು ತಮ್ಮ ಹೆಸರನ್ನು NATS(National Apprentiship Training Scheme) ಅಧಿಕೃತ ವೆಬ್ಸೈಟ್ www.mhrdnats.gov.in/ ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
– ಈಗಾಗಲೇ ರಿಜಿಸ್ಟರ್ ಮಾಡಿಸಿರುವವರು ರಿಜಿಸ್ಟ್ರೇಷನ್ ನಂಬರ್ (ಯೂಸರ್ ಐಡಿ) ಮತ್ತು ಅರ್ಜಿಯನ್ನು ತೆಗೆದುಕೊಳ್ಳಲು ತಿಳಿಸಲಾಗಿದೆ.
BEML training center Kolar Gold Fields has invited application for apprenticeship training for one year. Read more here..