Home » ಹದಿಹರೆಯದಲ್ಲೇ ಬಿಳಿಕೂದಲ ಸಮಸ್ಯೆ ಕಾಡುತ್ತಿದೆಯೇ? ಹಾಗಿದ್ರೆ ಹೀಗೆ ಮಾಡಿ..

ಹದಿಹರೆಯದಲ್ಲೇ ಬಿಳಿಕೂದಲ ಸಮಸ್ಯೆ ಕಾಡುತ್ತಿದೆಯೇ? ಹಾಗಿದ್ರೆ ಹೀಗೆ ಮಾಡಿ..

by manager manager

ವಯಸ್ಸಾಗುತ್ತಿದ್ದಂತೆ ನೆರೆ ಕೂದಲು ಬರುವುದು ಸಾಮಾನ್ಯ. ಆದರೆ ಯೌವನದಲ್ಲೇ ನೆರೆ ಕೂದಲು ಬರುತ್ತಿರುವುದು ದೊಡ್ಡ ಸಮಸ್ಯೆಯಾಗಿದೆ.ವಯಸ್ಸಿನ ಮಿತಿಯಿಲ್ಲದೇ ಬಹುತೇಕರಲ್ಲಿ ಕಂಡು ಬರುವ ಅಕಾಲಿಕ ನೆರೆಕೂದಲು(ಬಿಳಿ ಕೂದಲು) ಸಮಸ್ಯೆ ಇಂದು ಸಾಮಾನ್ಯವಾಗುತ್ತಿದೆ.ಹೀಗಾಗಿ ಕೂದಲ ಬೆಳ್ಳಗಾದ ಮೇಲೆ ಚಿಂತಿಸುವುದಕ್ಕಿಂತ, ಕಪ್ಪು ಇರುವಾಗಲೇ ಆರೈಕೆ ಮಾಡುವುದರಿಂದ ಈ ಸಮಸ್ಯೆಯಿಂದ ದೂರವಿರಬಹುದು.

ಹೀಗಾಗಿ ಬಿಳಿ ಕೂದಲು ಬರುವುದನ್ನು ತಡೆಯಲು ಮತ್ತು ನಿಮ್ಮ ಕೂದಲಿನ ನೈಸರ್ಗಿಕ ಬಣ್ಣವನ್ನು ಮರಳಿ ಪಡೆಯಲು ಕನ್ನಡ ಅಡ್ವೈಸರ್ ಇಂದು ಉಪಯುಕ್ತ ಸಲಹೆಗಳನ್ನು ನೀಡುತ್ತಿದೆ.

ಹದಿಹರೆಯದಲ್ಲೇ ನೆರೆಕೂದಲು ಬರಲು ಪ್ರಮುಖ ಕಾರಣಗಳು:

ನೆರೆಕೂದಲಿಗೆಅನೇಕ ಕಾರಣಗಳಿವೆ. ಮುಖ್ಯವಾಗಿ ವಂಶ ಪಾರಂಪರ್ಯವಾಗಿಯೂ ನೆರೆಯುವ ಅವಕಾಶಗಳಿವೆ. ಆಹಾರ ಲೋಪ, ಒತ್ತಡ, ಕಲುಷಿತ ವಾತಾರವರಣ, ಥೈರಾಯ್ಡ್ ಸಮಸ್ಯೆ, ಮಾನಸಿಕ ಒತ್ತಡ, ಕೂದಲು ಉದುರುವಿಕೆಗೆ ಬಳಸುವ ಷಾಂಪೂ ಇವುಗಳೆಲ್ಲವೂ ಕೂದಲು ನೆರೆಯಲು ಕಾರಣಗಳಾಗಿವೆ.ಶಾಲೆ ಹಾಗೂ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಅಧಿಕ ಒತ್ತಡ ಇರುತ್ತದೆ. ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಅವರಲ್ಲಿ ಮಾನಸಿಕ ಒತ್ತಡ ಕುಸಿಯುವುದರಿಂದ ಕೂದಲು ನೆರೆಯುತ್ತದೆ.

ನೆರೆಕೂದಲುಗಳಿಂದ ದೂರುವಿರಲು ಈ ಕೆಳಗಿನ ಟಿಪ್ಸ್‌ಗಳನ್ನು ಫಾಲೋ ಮಾಡಿ

ಪೌಷ್ಠಿಕ ಆಹಾರ ಸೇವನೆಯಿಂದ ಬಿಳಿ ಕೂದಲಿನಿಂದ ತಪ್ಪಿಸಿಕೊಳ್ಳಬಹುದು. ಅದು ಮೊಳಕೆ ಕಟ್ಟಿದ ಕಾಳುಗಳು, ಹಸಿರು ತರಕಾರಿ, ಹಣ್ಣುಗಳು, ಹಾಲು, ಮೊಟ್ಟೆ, ಧಾನ್ಯಗಳು, ಸೋಯಾ, ಡ್ರೈ ಫ್ರೂಟ್ಸ್'ಗಳಿಂದ ದೊರಕುತ್ತದೆ.
ಬಿಳಿ ಕೂದಲಿಗೆ ಮೆಹಂದಿ ಪರಿಹಾರ: ಮೆಹಂದಿಯನ್ನು ಹರೆದು ಕೂದಲಿಗೆ ಹಚ್ಚುವುದರಿಂದ ಪರಿಹಾರ ಕಂಡುಕೊಳ್ಳಬಹುದು. ಅಲ್ಲದೆ ಇದಕ್ಕೆ ಬೇಕಾದರೆ ಆಲಿವ್ ಎಣ್ನೆ , ಮೊಸರನ್ನೂ ಸೇರಿಸಬಹುದು.
ಇನ್ನೂ ಸ್ನಾನದ ವೇಳೆ ತಲೆಕೂದಲಿಗೆ ಬಳಸುವ ಷ್ಯಾಪೂವನ್ನು ಪದೇ ಪದೇ ಬದಲಾಯಿಸಬಾರದು. ಯಾವಾಗಲೂ ಒಂದೇ ರೀತಿಯ ಷ್ಯಾಂಪೂ ಬಳಸುವುದು ಉತ್ತಮ.
Vitamin A, Vitamin B, ಮತ್ತು ಕಬ್ಬಿಣಾಂಶ ಹೆಚ್ಚು ಇರುವ ಆಹಾರ ಸೇವನೆಯಂದ ಬಿಳಿ ಕೂದಲು ನಿವಾರಿಸಿಬಹುದು.
ಕಾಫಿ ಪುಡಿ ಸಹ ನೆರೆ ಕೂದಲಿನ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಒಂದು ಲೊಟ ನೀರಿನಲ್ಲಿ ಕಾಫಿ ಪುಡಿ ಹಾಕಿ ಕುದಿಸಿ ತಣ್ಣಗಾದ ನಂತರ ತಲೆಗೆ ಹಚ್ಚಿಕೊಂಡು ಮಸಾಜ್ ಮಾಡುತ್ತಾ 30 ನಿಮಿಷಗಳ ನಂತರ ತಲೆಗೆ ಸ್ನಾನ ಮಾಡಿದರೆ ಪರಿಹಾರ ಕಂಡುಕೊಳ್ಳಬಹುದು.
ಕೂದಲಿನ ಆರೋಗ್ಯಕ್ಕೆ ಈರುಳ್ಳಿ ಉತ್ತಮ. ಈರುಳ್ಳಿಯನ್ನು ಪೇಸ್ಟ್ ಮಾಡಿಕೊಂಡು ಕೂದಲುಗಳಿಗೆ ಹಚ್ಚಿಕೊಂಡು ಅರ್ಧಗಂಟೆ ಬಿಟ್ಟು ತಲೆ ಸ್ನಾನ ಮಾಡಿ. ಹೀಗೇ ನಿಯಮಿತವಾಗಿ ಮಾಡುತ್ತಿದ್ದರೆ, ಕೂದಲು ಬೆಳ್ಳಗಾಗದು.

 

You may also like