ಕರ್ನಾಟಕ ರಾಜ್ಯ ಕೃಷಿ ಇಲಾಖೆಯು ಸಿರಿಧಾನ್ಯಗಳಿಗೆ ಮಾರುಕಟ್ಟೆ ಸಂಪರ್ಕ ಕಲ್ಪಿಸುವ ಹಿತದೃಷ್ಟಿಯಿಂದ “ಸಾವಯವ ಮತ್ತು ಸಿರಿಧಾನ್ಯಗಳು 2019 – ಅಂತರರಾಷ್ಟ್ರೀಯ ವಾಣಿಜ್ಯ ಮೇಳ”(organics millets 2019 – International Trade Fair) ಹಮ್ಮಿಕೊಂಡಿದೆ.
ರಾಜ್ಯದ ರೈತರಿಗೆ ಸಾವಯವ ಹಾಗೂ ಸಿರಿಧಾನ್ಯಗಳಿಗೆ ಮಾರುಕಟ್ಟೆ ಸಂಪರ್ಕ ಕಲ್ಪಿಸುವ ಹಾಗೂ ಗ್ರಾಹಕರಲ್ಲಿ ಅರಿವು ಮೂಡಿಸುವ ಮುಖ್ಯ ಉದ್ದೇಶದಿಂದ ಈ ವಾಣಿಜ್ಯ ಮೇಳವನ್ನು ಕರ್ನಾಟಕ ರಾಜ್ಯ ಕೃಷಿ ಇಲಾಖೆಯು ಆಯೋಜಿಸಿದೆ.
ಈ ವಾಣಿಜ್ಯ ಮೇಳವು ಗುಣಮಟ್ಟದ ವಸ್ತು ಪ್ರದರ್ಶನಗಳು, ರಾಷ್ಟ್ರೀಯ ಸಮ್ಮೇಳನ, ಉತ್ಪಾದಕರ – ಮಾರುಕಟ್ಟೆದಾರರ ಸಭೆಗಳು, ರೈತರ ಕಾರ್ಯಾಗಾರ, ಸಾವಯವ ಆಹಾರ ಮಳಿಗೆಗಳು, ಬಳಕೆದಾರರೊಂದಿಗೆ ಸಂಪರ್ಕ ಈ ಮುಂತಾದ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ.
ಸದರಿ ಮೇಳದಲ್ಲಿ ಸಾವಯವ ಮತ್ತು ಸಿರಿಧಾನ್ಯಗಳಿಂದ ತಯಾರಿಸಿದ ವಿವಿಧ ಆಹಾರ ಖಾದ್ಯಗಳ ಮಿಳಿಗೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.
ಸೂಚನೆ: ಮೇಳದಲ್ಲಿ ಭಾಗವಹಿಸುವವರಿಗೆ ಸಾವಯವ/ಸಿರಿಧಾನ್ಯಗಳ ಊಟ, ತಿಂಡಿ, ಕಾಫಿ, ಟೀ ಇತ್ಯಾದಿ( ಸಸ್ಯಹಾರ ಮಾತ್ರ) ಮಾರಾಟ ಮಾಡಲು ಇಚ್ಛಿಸುವವರು ಮಳಿಗೆಗಳನ್ನು ಕಾಯ್ದಿರಿಸಲು ಈ ಕೆಳಗೆ ನೀಡಲಾದ ಅಧಿಕಾರಿಗಳನ್ನು ಸಂಪರ್ಕಿಸಿ.
– ಶ್ರೀ ಬಿ.ಶಿವರಾಜು ಬಿ. ಅಪರ ಕೃಷಿ ನಿರ್ದೇಶಕರು ಮತ್ತು ಅಧ್ಯಕ್ಷರು, ಆಹಾರ ಸಮಿತಿ ದೂರವಾಣಿ ಸಂಖ್ಯೆ: 9448417940
– ಶ್ರೀಮತಿ ಅನಿತಾ, ICCOA ದೂರವಾಣಿ ಸಂಖ್ಯೆ: 9902745413 ಇವರನ್ನು ಸಂಪರ್ಕಿಸಲು ತಿಳಿಸಿದೆ.
“ಸಾವಯವ ಮತ್ತು ಸಿರಿಧಾನ್ಯಗಳು 2019 – ಅಂತರರಾಷ್ಟ್ರೀಯ ವಾಣಿಜ್ಯ ಮೇಳ” ನಡೆಯುವ ದಿನಾಂಕ : 18-01-2019 ರಿಂದ 20-01-2019
ಅಂತರರಾಷ್ಟ್ರೀಯ ವಾಣಿಜ್ಯ ಮೇಳ ನಡೆಯುವ ಸ್ಥಳ
ತ್ರಿಪುರವಾಸಿನಿ, ಗೇಟ್ ನಂ.2, ಅರಮನೆ ಮೈದಾನ, ಬಳ್ಳಾರಿ ರಸ್ತೆ(ಮೇಕ್ರೀ ಸರ್ಕಲ್ ಹತ್ತಿರ), ಬೆಂಗಳೂರು.
“ಸಾವಯವ ಮತ್ತು ಸಿರಿಧಾನ್ಯಗಳು 2019 – ಅಂತರರಾಷ್ಟ್ರೀಯ ವಾಣಿಜ್ಯ ಮೇಳ” ಕುರಿತ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ
Savayava and Siridhaanyagalu 2019 International Trade Fair was organised by Karnataka State Agriculture Department at Bengalore. Read more details here..