ಬಣ್ಣ- ಬಣ್ಣ ಚಿತ್ತಾರದ ದಾರದ ಎಳೆಗಳನ್ನೆಲ್ಲ
ಸುತ್ತಲೂ ಹರವಿಕೊಂಡು ಕೂತಿದ್ದಾಳೆ
ಅವಳು,
ಅಂಗೈ ಬೆರಳುಗಳನ್ನೆಲ್ಲ ಬಾಗಿಸುತ್ತಾ,
ಬಳಕಿಸುತ್ತಾ, ಕುಣಿಸುತ್ತಾ
ಹೆಣೆಯುತ್ತಾಳೆ,
ಕ್ರೋಷೆಯ ಕಡ್ಡಿಗೆ
ಸಣ್ಣ ಜೀವ ಬಂದಂತೆ
ನೂಲಿನ ದಾರಗಳೆಲ್ಲ
ಒಂದರಗೊಳಗೊಂದು ಕರಗಿ
ಗಂಟುಗಳಾಗಿ ಜೋತು ಬಿದ್ದಂತೆಲ್ಲಾ
ನೂಲಿನ ಹರವೊಂದು
ಅಸ್ಪಷ್ಟ ರೂಪ ತಾಳುತ್ತದೆ..
ಗೋಡೆ ಗಡಿಯಾರ ತಿರು-ತಿರುಗಿದಂತೆಲ್ಲಾ
ಏನು ಮರೆತವಳಂತೆ? ಬೆಚ್ಚುತ್ತಾಳೆ..
ಅಯ್ಯೋ..!! ಎಷ್ಟೊತ್ತಿನವರೆಗೂ ಹೀಗೆ
ಕೂತು ಬಿಟ್ಟನೆಲ್ಲೆಂದು ಹಲಬುತ್ತಾಳೆ..
ಮಗನ ಸ್ಕೂಲ್ ಬಿಡುವ ಸಮಯವಾಯಿತ್ತಲ್ಲವೆ..?
ಅವರ ಆಫೀಸ್ ಬಿಟ್ಟಿತೆ..?
ಹೀಗೆ ಏನೇನೊ ತುಮುಲಗಳು
ಕಳೆದು ಹೋಗಿದ್ದ ಅವಳ ಕಾರ್ಯವನ್ನು
ಜ್ಞಾಪಿಸುತ್ತವೆ
ಹೀಗೆ ತನಗೆಂದೆ ಸಿಕ್ಕ ಸಣ್ಣ ಬಿಡುವಲ್ಲಿಯೆ
ಎಲ್ಲವನ್ನು ಸರಿದೂಗಿಸುತ್ತಾಳವಳು..
ತನ್ನನ್ನೂ, ಬದುಕನ್ನು..
– ರಾಜೇಶ್ವರಿ ಲಕ್ಕಣ್ಣವರ
Rajeshwari Lakkannavara, a student of Mass Communication and Journalism at Manasagangotri, Mysore. Written about a art work and named as Kroshe.
1 comment
ಸರಿ ಇಲ್ಲಾ
Comments are closed.