ಡಿಟಿಎಚ್ ಸೇವೆ ಒದಗಿಸುವವರು(DTH) ಮತ್ತು ಕೇಬಲ್ ಆಪರೇಟರ್(Cable Operators) ಗಳ ಮೇಲೆ ಭಾರತದ ಟೆಲಿಕಾಂ ನಿಯಂತ್ರಣ ಪ್ರಾಧಿಕಾರವು(TRAI) ಅನುಷ್ಠಾನಗೊಳಿಸಿರುವ ಹೊಸ ನಿಯಮಗಳ ಪ್ರಕಾರ ಪ್ರತಿ ತಿಂಗಳ ಕೇಬಲ್ ಬಿಲ್ ಅನ್ನು ಸಾಕಷ್ಟು ಕಡಿಮೆಗೊಳಿಸಬಹುದಾಗಿದೆ. ಅದರಲ್ಲೂ ಕನ್ನಡ ಟಿವಿ ವಾಹಿನಿಗಳ ವಾಚಕರಂತು ಅರ್ಧಕ್ಕೆ ಅರ್ಧ ಕೇಬಲ್ ಮತ್ತು ಡಿಟಿಎಚ್ ಬಿಲ್ ಅನ್ನು ಕಡಿಮೆಗೊಳಿಸಿಕೊಳ್ಳಬಹುದಾಗಿದೆ. ಕಾರಣ ಹಲವು ನಗರ ಪ್ರದೇಶಗಳಲ್ಲಿ ಕನ್ನಡಿಗರು ಕೇವಲ ಕನ್ನಡ ಟಿವಿ ವಾಹಿನಿಗಳನ್ನು, ಕೇವಲ ಬೆರಳೆಣಿಕೆಯಷ್ಟು ಚಾನೆಲ್ಗಳನ್ನು ನೋಡುತ್ತಿದ್ದರೂ ಸಹ -200-300 ರೂವರೆಗೂ ಕೇಬಲ್ ಆಪರೇಟರ್ಗಳಿಗೆ ಕೊಡಬೇಕಾದ ಸಂದರ್ಭ ಇತ್ತು. ಆದರೆ ಈ ಮೊತ್ತದ ಬಿಲ್ಗಳಿಗೆ ಫೆಬ್ರವರಿ 1 ರಿಂದ ಮಹತ್ತರ ಬದಲಾವಣೆ ಆಗಲಿದೆ.
ಡಿಟಿಎಚ್, ಕೇಬಲ್ ಟಿವಿ ಬಳಕೆದಾರರು ಜನವರಿ ಅಂತ್ಯದವರೆಗೆ ತಮ್ಮ ನೆಚ್ಚಿನ ಚಾನೆಲ್ಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಇನ್ನು ಡಿಟಿಎಚ್ ಸೇವೆ ಒದಗಿಸುವ ಏರ್ಟೆಲ್ ಡಿಟಿಎಚ್ ಟಿವಿ, ಟಾಟಾ ಸ್ಕೈ ಅಥವಾ ಡಿಶ್ ಟಿವಿ ಗಳು ಗರಿಷ್ಠ ಕೇವಲ ರೂ.130 ಅನ್ನು ಚಾರ್ಜ್ ಮಾಡಬಹುದು. ರೂ.130 ಜಿಎಸ್ಟಿ ಹೊರತುಪಡಿಸಿ. ಈ ರೂ.130 ಕ್ಕೆ 100 Non-HD ಚಾನೆಲ್ಗಳು ಲಭ್ಯವಾಗಲಿವೆ.
ಉಚಿತ 100 ಚಾನೆಲ್ಗಳ ಜೊತೆ ಇತರೆ ಚಾನೆಲ್ಗಳು ಬೇಕಾದಲ್ಲಿ ನಿರ್ದಿಷ್ಟ ಚಾನೆಲ್ ನಿಗದಿಪಡಿಸಿರುವ ಬೆಲೆಯನ್ನು ಪಾವತಿಸಿ ಆ ಚಾನೆಲ್ ಸೇವೆಯನ್ನು ಪಡೆಯಬಹುದು.
ಭಾರತದ ಟೆಲಿಕಾಂ ನಿಯಂತ್ರಣ ಪ್ರಾಧಿಕಾರವು ಹೊಸ ನಿಯಮವನ್ನು ಅನುಷ್ಠಾನಗೊಳಿಸಿದ ನಂತರ ಹಲವು ಬ್ರಾಡ್ಕಾರಸ್ಟರ್ಗಳಾದ ಸೋನಿ, ಜೀ, ಸ್ಟಾರ್, ಡಿಸ್ಕವರಿ, ಸನ್, ಟರ್ನರ್ ಮತ್ತು ವಿಯಾಕಾಂ ಗಳು ತಮ್ಮ ಯಾವ ಚಾನೆಲ್ಗಳು ಉಚಿತ ಮತ್ತು ಯಾವುದಕ್ಕೆ ಹಣ ಪಾವತಿಸಬೇಕು ಎಂದು ಮಾಹಿತಿ ಪ್ರಕಟಿಸಿವೆ.
ಟಿವಿ ನೋಡುಗರು ಏರ್ಟೆಲ್ ಡಿಟಿಎಚ್, ಡಿಶ್ ಟಿವಿ ಮತ್ತು ಕೇಬಲ್ ಆಪರೇಟರ್ಗಳ ಸೇವೆ ಪಡೆಯುವಲ್ಲಿ ಹೊಸ ಪ್ಲಾನ್(Plan) ಆಯ್ಕೆ ಮಾಡುಕೊಳ್ಳುವಲ್ಲಿ ತಿಳಿಯಲೇ ಬೇಕಾದ ಪ್ರಮುಖ ಅಂಶಗಳು ಈ ಕೆಳಗಿನಂತಿವೆ.
– ಗ್ರಾಹಕರು ಯಾವುದೇ ಡಿಟಿಎಚ್ ಸೇವೆ ಪಡೆಯುತ್ತಿದ್ದರು ಗರಿಷ್ಠ 130 ರೂ ಬೆಲೆಗೆ ಅಥವಾ ಅವುಗಳು ನೀಡುವ ಬೇಸಿಕ್ ಪ್ಯಾಕ್ಗಳಲ್ಲಿ ತಮ್ಮ ನೆಚ್ಚಿನ ಚಾನೆಲ್ಗಳನ್ನು ಆಯ್ಕೆ ಮಾಡಿಕೊಂಡು ಸೇವೆ ಪಡೆಯಬಹುದು.
– ಏರ್ಟೆಲ್ ಡಿಟಿಎಚ್ ಟಿವಿ ರೂ.99 ರ ಬೇಸಿಕ್ ಪ್ಯಾಕ್ ನೀಡಿದ್ದು, ಇದರಲ್ಲಿ ಸ್ಟ್ಯಾಂಡರ್ಡ್ ಡೆಫಿನೇಷನ್ ಚಾನೆಲ್ಗಳ ಸೇವೆ ಸಿಗಲಿದೆ.
– ಟಾಟಾ ಸ್ಕೈ ಅಥವಾ ಡಿಶ್ ಟಿವಿ ಸಹ ಅತೀ ಕಡಿಮೆ ಬೆಲೆ ರೂ.99 ರ ಬೇಸಿಕ್ ಪ್ಯಾಕ್ ಅನ್ನು ನೀಡಿದೆ. ಈ ಪ್ಯಾಕ್ನಲ್ಲೇ ಗ್ರಾಹಕರು ತಮಗೆ ಬೇಕಾದ ಚಾನೆಲ್ಗಳನ್ನು ಮಾತ್ರ ಆಯ್ಕೆ ಮಾಡಿಕೊಂಡು ಪಡೆಯಬಹುದಾಗಿದೆ.
– ಗ್ರಾಹಕರು ಈ ಪ್ಯಾಕ್ಗಳಲ್ಲಿ ಯಾವ ಚಾನೆಲ್ ಬೇಕು ಎಂಬುದನ್ನು ಯಾವಾಗ ಬೇಕಾದರೂ ಬದಲಿಸುವ, ಆಯ್ಕೆ ಮಾಡಿಕೊಳ್ಳುವ ಅವಕಾಶ ಇರುತ್ತದೆ.
– ಟ್ರಾಯ್ ನ ಹೊಸ ನಿಯಮಗಳ ಪ್ರಕಾರ ಗ್ರಾಹಕರು 100 ಚಾನೆಲ್ಗಳಿಗಿಂತ ಹೆಚ್ಚುವರಿ ಚಾನೆಲ್ಗಳನ್ನು ಬಯಸಿದಲ್ಲಿ 25 ಚಾನೆಲ್ಗಳಿರುವಂತೆ ಒಂದು ಸ್ಲ್ಯಾಬ್ ಗೆ ಗರಿಷ್ಠ 20 ರೂ ಪಾವತಿಸಿ ಪಡೆಯಬಹುದು.
– ಟ್ರಾಯ್ ನ ಪ್ರಕಾರ 100 ಚಾನೆಲ್ಗಳಿಗಿಂತ ಹೆಚ್ಚು ಚಾನೆಲ್ಗಳನ್ನು ಪಡೆಯುವವರು ಶೇಕಡ 10-15 ರಷ್ಟು ಮಾತ್ರ. ಇನ್ನೂ ಶೇಕಡ 80 ರಷ್ಟು ಟಿವಿ ನೋಡುಗರು ಕೇವಲ 40 ಚಾನೆಲ್ಗಳನ್ನು ಸಹ ಚೇಂಜ್ ಮಾಡುವುದಿಲ್ಲ ಎಂಬುದನ್ನು ಬಾರ್ಕ್ ನ ವರದಿ ಪ್ರಕಾರ ಹೇಳಿದೆ.
– ಒಂದು ಕುಟುಂಬದ ಜನರು ನೋಡುವ ಒಟ್ಟು ಚಾನೆಲ್ಗಳನ್ನು ಪಟ್ಟಿ ಮಾಡಿದರೂ ಸಹ ಟ್ರಾಯ್ ಈಗ ನಿಗದಿಪಡಿಸಿರುವ ಗರಿಷ್ಠ ಮೊತ್ತ ರೂ.130 ಕ್ಕಿಂತ ದಾಟುವುದಿಲ್
– ಅಲ್ಲಿಗೆ ಟಿವಿ ನೋಡುಗರು (ಕೇಬಲ್ ಟಿವಿ ಸೇವೆ ಪಡೆಯುವವರು ಒಳಗೊಂಡಂತೆ)ಅರ್ಥ ಮಾಡಿಕೊಳ್ಳಬೇಕಾದ ಅಂಶ ಎಂದರೆ ರೂ.130 ಕ್ಕೆ ದಾಟದಂತೆ ತಮ್ಮ ನೆಚ್ಚಿನ ಚಾನೆಲ್ಗಳನ್ನು ಸಹ ಆಯ್ಕೆ ಮಾಡಿಕೊಳ್ಳಬಹುದು ಎಂಬುದು.
– ಹಲವು ಬ್ರಾಡ್ಕಾಸ್ಟರ್ಸ್ಗಳು 330 ರೂಗಳ ಪ್ಯಾಕ್ಗಳನ್ನು ಪ್ರಕಟಿಸಿದ್ದು, ಇವುಗಳಲ್ಲಿ HD ಮತ್ತು SD ಚಾನೆಲ್ಗಳು ಇವೆ. ಈ ಲಿಸ್ಟ್ ಉಚಿತ ಚಾನೆಲ್ಗಳನ್ನು ಒಳಗೊಳ್ಳಲಿದ್ದು ರೂ.535 ಆಗಲಿದೆ.
– ಗ್ರಾಹಕರು ಮಾರುಕಟ್ಟೆಯಿಂದಲೇ ಸೆಟ್ ಟಾಪ್ಬಾಕ್ಸ್ ಅನ್ನು ಖರೀದಿಸಬಹುದಾಗಿದ್ದು, ಕೇವಲ್ ಸೇವೆ ನೀಡುವವರಲ್ಲಿ ಖರೀದಿಸುವ ಕಡ್ಡಾಯ ನಿಯಮವೇನು ಇಲ್ಲ.
– ಯಾವ ಯಾವ ಚಾನೆಲ್ಗಳ ಬೆಲೆ ಎಷ್ಟು ಎಂದು ತಿಳಿಯಲು – ಕ್ಲಿಕ್ ಮಾಡಿ
ತಿಂಗಳಿಗೆ ರೂ.153 ಕ್ಕೆ ನಿಮ್ಮ ನೆಚ್ಚಿನ ಚಾನೆಲ್ಗಳ ಜೊತೆ ಉಚಿತ ಚಾನೆಲ್ಗಳು ಬರುವಂತೆ ಪ್ಲಾನ್ ಮಾಡಿಕೊಳ್ಳಿ..
– ಹೌದು. ಜಿಎಸ್ಟಿ ಸೇರಿ ಗರಿಷ್ಠ ಕೇಬಲ್ ಬಿಲ್ 153 ರೂ ಆಗಲಿದೆ. ಈ ಬೆಲೆಗೆ ಕನ್ನಡದ ಕೆಲವು ಹಣ ಪಾವತಿಸಬೇಕಾದ ಚಾನೆಲ್ಗಳು ಸಹ ಬರುವಂತೆ ನಾವು ಪ್ಲಾನ್ ಮಾಡಿಕೊಳ್ಳಬಹುದು. ಕನ್ನಡದ ಬಹುಸಂಖ್ಯಾತ ನ್ಯೂಸ್ ಚಾನೆಲ್ಗಳು ಉಚಿತವಾಗಿವೆ. ಇನ್ನು ನಮಗೆ ಬೇಕಾಗಿರುವುದು ಮನರಂಜನೆಯ ಕೆಲವು ಕನ್ನಡ ವಾಹಿನಿಗಳು. ಅವುಗಳಲ್ಲಿ ಕೆಲವು ರೂ.19 ಇದ್ದರೆ, ಇನ್ನೂ ಕೆಲವು ರೂ.3 ರಿಂದ 5 ರೂ ವರೆಗೆ ಪ್ರತಿ ತಿಂಗಳಿಗೆ ಚಾರ್ಜ್ ಮಾಡಲಿವೆ. ಅವುಗಳ ಬೆಲೆಯನ್ನು ರಿಮೋಟ್ ನಲ್ಲಿ ಚಾನೆಲ್ ಚೇಂಜ್ ಮಾಡಿದಾಗ ಪ್ರದರ್ಶನವಾಗುವ ಬಾಕ್ಸ್ನಲ್ಲಿ ನೋಡಬಹುದು.
ಆದ್ದರಿಂದ ಹಣ ಪಾವತಿಸಬೇಕಾದ ಕನ್ನಡದ ಕೆಲವು ಮನರಂಜನಾ ವಾಹಿನಿಗಳನ್ನು ಪಟ್ಟಿ ಮಾಡಿ, ಅವುಗಳ ಬೆಲೆಯನ್ನು ಪಟ್ಟಿ ಮಾಡಿಕೊಂಡು ಒಟ್ಟು ಮೊತ್ತ ರೂ 130 ಕ್ಕೆ ಸರಿಹೊಂದುವಂತೆ ಲೆಕ್ಕಹಾಕಿಕೊಳ್ಳಿ. ನಂತರ ಈ ಚಾನೆಲ್ಗಳ ಜೊತೆಗೆ ಗರಿಷ್ಠ ಮೊತ್ತ 130 ಕ್ಕೆ ಸಿಗಬಹುದಾದ ಉಚಿತ ಚಾನೆಲ್ಗಳು ಸೇರಿ ಒಟ್ಟು 100 ಚಾನೆಲ್ಗಳನ್ನು ಅದೇ 130+ ಜಿಎಸ್ಟಿ ಸೇರಿಸಿ 153 ಕ್ಕೆ ನಿಮ್ಮ ನೆಚ್ಚಿನ ಚಾನೆಲ್ಗಳ ಜೊತೆ ಉಚಿತ ಚಾನೆಲ್ಗಳನ್ನು ನೋಡಬಹುದು.
New rules for DTH and Cable operators by Telecom Regulatory Authority of India(TRAI) come into effect on February 1, with January 31 being the new deadline for customers to choose the channels for which they wish to pay.