ಶಿವಮೊಗ್ಗ: ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಶಿವಮೊಗ್ಗ ವಿಶ್ವವಿದ್ಯಾಲಯದ ವೆಬ್ಸೈಟ್ ಹ್ಯಾಕ್ ಮಾಡಲಾಗಿದೆ. ಸೋಮವಾರ ಬೆಳಗ್ಗೆ ವೆಬ್ಸೈಟ್ ಹ್ಯಾಕ್ ಆಗಿದ್ದು ಅದರಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಬರೆಯಲಾಗಿದೆ.
ವೆಬ್ಸೈಟ್ ಹ್ಯಾಕ್ ಮಾಡಿದ್ದರಿಂದ ವಿವಿಯ ಐಟಿ ಸಿಬ್ಬಂದಿ ಎಷ್ಟೇ ಪ್ರಯತ್ನಿಸಿದರು ವೆಬ್ ಪೇಜ್ ಓಪನ್ ಆಗುತ್ತಿರಲಿಲ್ಲ. ಹ್ಯಾಕ್ ಆಗಿದ್ದ ವೇಳೆ ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಜೊತೆಗೆ ಸೆಕ್ಯುರಿಟಿ ಈಸ್ ಜಸ್ಟ್ ಫ್ಯಾಂಟಸಿ ಎಂಬ ವಾಕ್ಯಗಳು ಕಾಣಿಸಿಕೊಂಡಿವೆ.
www.kuvempu.ac.in ಹೆಸರಿನ ವೆಬ್ಸೈಟ್ನ್ನು ಹ್ಯಾಕ್ ಮಾಡಿರುವುದು ನಮ್ಮ ತಂಡವೇ ಎಂದು ಹಂಟರ್ ಬುಜ್ವಾ (Hunter Bajwa) ಎಂಬ ಹ್ಯಾಕರ್ ತಂಡ ಹೇಳಿಕೊಂಡಿದೆ.
ಘಟನೆಯ ಹಿನ್ನಲೆ ವಿವಿಯ ಕುಲಪತಿ ಜೋಗರ್ ಶಂಕರ್ ಶಿವಮೊಗ್ಗ ಸೈಬರ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಆದರೆ ತನಿಖೆಯ ನಂತರವಷ್ಟೇ ಈ ಹ್ಯಾಕ್ ಮಾಡಿರುವುದು ನಿಜವಾಗಿಯೂ ಪಾಕಿಸ್ತಾನಿ ಹ್ಯಾಕರ್ ಗಳೇ ಅಥವಾ ಸ್ಥಳೀಯರೇ ಎಂಬುದು ತಿಳಿಯಲಿದೆ. ಸದ್ಯ ವಿವಿಯ ಐಟಿ ತಂಡ ವೆಬ್ಸೈಟ್ ಸರಿಪಡಿಸಿದೆ.
one of the state’s prestigious universities Shimoga University website has been hacked. Around the 10 am that the website of the University Had been Hacked. Hacked By Hunter Bajwa team