ಮೊಬೈಲ್ ಆಗಲಿ, ಲ್ಯಾಪ್ಟಾಪ್ ಆಗಲಿ, ಅದು ಡೆಸ್ಕ್ಟಾಪ್ ಆಗಲಿ ನಾವು ವರ್ಕ್ ಮಾಡುವಾಗ ನೆಟ್ವರ್ಕ್ ಸಮಸ್ಯೆ ಇಂದಾಗಿ ನಾವು ಮಾಡುವ ಕೆಲಸ ವಿಳಂಬವಾದಲ್ಲಿ ನಮ್ಮ ಕೋಪಕ್ಕೆ ಎಲ್ಲೇಯೇ ಇರುವುದಿಲ್ಲ. ವರ್ಕ್ ಬೇಗ ಮುಗಿಸಬೇಕಾದ ಸಂದರ್ಭದಲ್ಲಿ ಏನಾದ್ರು ಈ ಸಮಸ್ಯೆ ಆದ್ರಂತು ಆ ಸಮಯದಲ್ಲಿ ಸ್ವಲ್ಪ ತಾಳ್ಮೆ ಕಳೆದುಕೊಂಡರು ನಮ್ಮ ಈ ಗ್ಯಾಜೆಟ್ಗಳಿಗೆ ಯಾವ ಸ್ಥಿತಿ ಆಗುತ್ತೇ ಎಂಬುದು ನಮಗೆ ತಿಳಿಯುವುದಿಲ್ಲ. (how to speed up network connection in laptop desktop or computer)
ಇನ್ನೂ ಹಲವರು ತಮ್ಮ ಲ್ಯಾಪ್ಟಾಪ್, ಡೆಸ್ಕ್ಟಾಪ್ಗಳಲ್ಲಿ ಇಂಟರ್ನೆಟ್ ಸಂಪರ್ಕ ಪಡೆಯಲು ಮೊಬೈಲ್ ನ ಡೇಟಾವನ್ನು ಹಾಟ್ಸ್ಪಾಟ್ಗಳ ಮೂಲಕ ಬಳಸುತ್ತಾರೆ. ಅಂತಹವರು ಸಹ ಇಂಟರ್ನೆಟ್ ಸ್ಪೀಡ್ ಸಮಸ್ಯೆಯಿಂದ ದೂರ ಉಳಿದಿಲ್ಲ.
ಹಾಗಿದ್ರೆ ಈ ನೆಟ್ವರ್ಕ್ ಸಮಸ್ಯೆಯಿಂದ ತಪ್ಪಿಸಿಕೊಳ್ಳೋದು ಹೇಗೆ? ಅದಕ್ಕೆ ಹಲವು ಪರಿಹಾರಗಳನ್ನು ಇಂದಿನ ಲೇಖನದಲ್ಲಿ ನಾವು ತಿಳಿಸುತ್ತೇವೆ.
1 ಅಪ್ಡೇಟ್ ಪ್ರಕ್ರಿಯೆ ಸ್ಥಗಿತಗೊಳಿಸಿ
ವಿಂಡೋಸ್ 10 ಅಪ್ಡೇಟ್ ಆದ ನಂತರ ಬರುವ ಇತರೆ ಸಿಸ್ಟಮ್ ಅಪ್ಡೇಟ್ ಅನ್ನು ಸ್ಥಗಿತಗೊಳಿಸಿ. ಕಾರಣ ನೀವು ಸಂಪರ್ಕ ಹೊಂದಿರುವ ಇಂಟರ್ನೆಟ್ ಸರ್ವರ್ ಗೆ ಕನೆಕ್ಟ್ ಆಗಿರುವ ಇತರೆ ಪಿಸಿಗಳಿಂದ ಅಪ್ಡೇಟ್ ನೋಟಿಫಿಕೇಶನ್ ಬರುತ್ತವೆ. ಇದರಿಂದ ನಿಮ್ಮ ಇಂಟರ್ನೆಟ್ ಬ್ಯಾಂಡ್ವಿಡ್ತ್ ಲಿಮಿಟ್ ಕಡಿಮೆಗೊಳ್ಳುತ್ತದೆ. ಅದನ್ನು ಈ ಕೆಳಗಿನಂತೆ ಫಾಲೋ ಮಾಡುವುದರ ಮೂಲಕ ಮಾಡಬಹುದು.
– Start menu>>Settings
– Update and Security
– Advanced Options
– Choose How Updates are Delivered
– Turn Off the On button
2 ಬ್ಯಾಗ್ರೌಂಡ್ ಆಪ್ಗಳನ್ನು ಟರ್ನ್ ಆಫ್ ಮಾಡಿ
ನಿಮ್ಮ ಲ್ಯಾಪ್ಟಾಪ್ ಅಥವಾ ಡೆಸ್ಕ್ಟಾಪ್ಗಳಲ್ಲಿ ಇನ್ಸ್ಟಾಲ್ ಆಗಿರುವ ಯಾವುದೇ ಆಪ್ಗಳು ಬ್ಯಾಗ್ರೌಂಡ್ನಲ್ಲಿ ರನ್ ಆಗುತ್ತಿದ್ದಲ್ಲಿ, ಅವುಗಳನ್ನು ಆಪ್ ಮಾಡಿ. ಆನ್ ಆಗಿದ್ದಲ್ಲಿ ನಿಮ್ಮ ಇಂಟರ್ನೆಟ್ ವೇಗವನ್ನು ಅತೀ ಕಡಿಮೆಗೊಳಿಸುವಲ್ಲಿ ಸಂಶಯವೇ ಇಲ್ಲ. ಅಲ್ಲದೇ ಡೇಟಾ ಹೆಚ್ಚು ಲೀಕೇಜ್ ಆಗುತ್ತದೆ.
– Settings
– Privacy
– Background Apps
– Turn Off Background Apps
3 ಡಿಸೇಬಲ್ ವಿಂಡೋಸ್ ಅಪ್ಡೇಟ್
ಸಹಜವಾಗಿ ವಿಂಡೋಸ್ ಅಪ್ಡೇಟ್ ಇಂಟರ್ನೆಟ್ ಕನೆಕ್ಟ್ ಆಗಿದ್ದಲ್ಲಿ ಆಗಾಗ ನೋಟಿಫಿಕೇಶನ್ ಬರುತ್ತಲೇ ಇರುತ್ತದೆ. ಆದರೆ ನೀವು ಬೇಕದಾಗ ಮಾತ್ರ ವಿಂಡೋಸ್ ಅಪ್ಡೇಟ್ ಅನ್ನು ಮ್ಯಾನ್ಯುಅಲಿ ಮಾಡಿಕೊಳ್ಳಬಹುದು.
ವಿಂಡೋಸ್ ಅಪ್ಡೇಟ್ ಅನ್ನು ಡಿಸೇಬಲ್ ಮಾಡಿ ನೋಟಿಫಿಕೇಶನ್ ಬರುವುದನ್ನು ನಿಲ್ಲಿಸುವುದರಿಂದ ನಿಮ್ಮ ನೆಟ್ವರ್ಕ್ ಸ್ಪೀಡ್ ಅನ್ನು ಹೆಚ್ಚಿಸಿಕೊಳ್ಳಬಹುದು. ಈ ಪ್ರಕ್ರಿಯೆಗಾಗಿ ಕೆಳಗಿನ ಹಂತಗಳನ್ನು ಫಾಲೋ ಮಾಡಿ.
– Service (windows 10 taskbar)
– click services
– Windows Update
– Stop
– Startup Option to Disabled
– Then Restart your PC
4 ಸಿಸ್ಟಮ್ ಕ್ಲೀನ್ಗಾಗಿ ಮೂರನೇ ವ್ಯಕ್ತಿಯ ಆಪ್ಗಳನ್ನು ಇನ್ಸ್ಟಾಲ್ ಮಾಡದಿರಿ
ಕೆಲವು ಮೂರನೇ ವ್ಯಕ್ತಿಯ ಆಪ್ಗಳು ನಿಮ್ಮ ಸಿಸ್ಟಮ್ನ ಇಂಟರ್ನೆಟ್ ವೇಗವನ್ನು ಹೆಚ್ಚಿಸಬಹುದು ಮತ್ತು ವೈರಸ್, ಮಾಲ್ವೇರ್ಗಳನ್ನು ಬ್ಲಾಕ್ ಮಾಡಬಹುದು. ಅಥವಾ ಇದೇ ಆಪ್ಗಳು ಇದಕ್ಕೆ ವಿರುದ್ಧವಾಗಿ ಸಹ ಕಾರ್ಯನಿರ್ವಹಿಸಬಹುದು.
ಆದ್ದರಿಂದ ಪಿಸಿ ಸುರಕ್ಷತೆಗಾಗಿ ಕೇವಲ ಅಧಿಕೃತ ಆಂಟಿವೈರಸ್ ಗಳು ಮಾತ್ರ ಉತ್ತಮವಾದವುಗಳು.
5 OneNote ಅನ್ಇನ್ಸ್ಟಾಲ್ ಮಾಡಿ
ನಿಮ್ಮ ವಿಂಡೋಸ್ 10 ಸ್ಲೋ ಆಗಲು ಮತ್ತು ಹ್ಯಾಂಗಿಂಗ್ ಸಮಸ್ಯೆ ಉಂಟಾಗಲು OneNote ಆಪ್ ಪ್ರಮುಖ ಪಾತ್ರ ಬೀರುತ್ತದೆ. ಆದ್ದರಿಂದ OneNote ಅಪ್ಲಿಕೇಶನ್ ಅನ್ನು ಅನ್ಇನ್ಸ್ಟಾಲ್ ಮಾಡುವುದು ಉತ್ತಮ.
– ಸರ್ಚ್ ಬಾರ್ನಲ್ಲಿ OneNote ಎಂದು ಟೈಪ್ ಮಾಡಿ. ನಂತರ OneNote ಆಪ್ ಸೆಲೆಕ್ಟ್ ಮಾಡಿ ಬಲಭಾಗದ ಬಟನ್ ಕ್ಲಿಕ್ ಮಾಡಿ ನಂತರ Uninstall ಮೇಲೆ ಕ್ಲಿಕ್ ಮಾಡಿ.
6 ವಿಂಡೋಸ್ Auto-Tuning ಫೀಚರ್ ಡಿಸೇಬಲ್ ಮಾಡಿ
– Windows key+X >> Command Prompt
– type netsh Interface tcp show global in Window
– Auto Tuning ಲೆವೆಲ್Normal ಇದ್ದಲ್ಲಿ ಅದನ್ನು ಡಿಸೇಬಲ್ ಮಾಡಿ.
– ನಂತರ netsh Int tcp set global autotuninglevel=disabled ಎಂದು ಟೈಪಿಸಿ. ಅದು ಡಿಸೇಬಲ್ ಆಗುತ್ತದೆ.
7 Firewall ಡಿಸೇಬಲ್ ಮಾಡಿ
ನಿಮ್ಮ ಇಂಟರ್ನೆಟ್ ವೇಗವಾಗಿ ಇರಲಿ ಅಥವಾ ಸ್ಲೋ ಆಗಿಯೇ ಇರಲಿ, AVG Firewall ಅನ್ನು ಡಿಸೇಬಲ್ ಮಾಡುವುದನ್ನು ಮರೆಯದಿರಿ.
– Start ಆಯ್ಕೆ ನಂತರ Firewall ಎಂದು ಟೈಪಿಸಿ. ಅಲ್ಲಿ ಇತರೆ ಯಾವುದಾದರೂ Firewall ಪ್ರೋಗ್ರಾಮ್ ನಿಮ್ಮ ಕಂಪ್ಯೂಟರ್ ನಲ್ಲಿ ಆನ್ ಆಗಿದೆಯೇ ಎಂದು ಪರೀಕ್ಷಿಸಿಕೊಳ್ಳಿ.
– ನಂತರ ಈ Firewall ಪ್ರೋಗ್ರಾಮ್ ಅನ್ನು ಡಿಸೇಬಲ್ ಮತ್ತು ಎನೇಬಲ್ ಮಾಡುವುದರ ಮೂಲಕ ಇಂಟರ್ನೆಟ್ ವೇಗ ಪರೀಕ್ಷೆ ಮಾಡಿಕೊಳ್ಳಿ.
8 ನೆಟ್ವರ್ಕ್ ಡ್ರೈವರ್ಗಳನ್ನು ಅಪ್ಡೇಟ್ ಮಾಡಿ
9 ಇಂಟರ್ನೆಟ್ ಬ್ಯಾಂಡ್ವಿಡ್ತ್ ಅನ್ನು 100 ಕ್ಕೆ ಹೊಂದಿಸಿ.
ಅದಕ್ಕಾಗಿ ಈ ಕೆಳಗಿನ ಹಂತಗಳನ್ನು ಫಾಲೋ ಮಾಡಿ
– Run>>Windows key+R
– type gpedlt.msc >> OK
– Group Policy >> Computer Congiguration
– Administrative Templates >> Network >> Qos Packet Scheduler >> Limit reservable bandwidth
– Enabled >> Bandwidth limit (%) 100 to 0
– Apply >> OK
If your question is ‘How to speed up network connection in windows 10’? hereis 10 easy ways to fix slow internet on windows 10.