ರಾಯಚೂರು ಕೃಷಿ ವಿಶ್ವವಿದ್ಯಾಲಯವು ಖಾಲಿ ಇರುವ ಬೋಧಕ-ಬೋಧಕೇತರ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 04/04/2019
ಅರ್ಜಿ ಸಲ್ಲಿಸುವ ವಿಧಾನ : ಅಂಚೆ ಮೂಲಕ
ಹುದ್ದೆಗಳ ವಿವರ
ಬೋಧಕ ಹುದ್ದೆಗಳು: 36
ಬೋಧಕೇತರ ಹುದ್ದೆಗಳು : 27
ಬೋಧಕ ಹುದ್ದೆಗಳು ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಾಗಿವೆ. ಅವುಗಳ ಮಾಹಿತಿ ಈ ಕೆಳಗಿನಂತಿದೆ.
– ಫಾರ್ಮ್ ಮಷಿನರಿ ಆಂಡ್ ಪವರ್ ಎಂಜಿನಿಯರ್
– ಅಗ್ರಿಕಲ್ಚರಲ್ ಎಕನಾಮಿಕ್ಸ್
– ಅಗ್ರಿಕಲ್ಚರಲ್ ಎಕ್ಸ್‌ಟೆನ್ಶನ್ ಎಜುಕೇಶನ್
– ಅಗ್ರಿಕಲ್ಚರ್ ಮೈಕ್ರೊಬಯೋಲಜಿ
– ಕ್ರಾಪ್ ಫಿಸಿಯೋಲಜಿ
– ಜೆನೆಟಿಕ್ಸ್ ಅಂಡ್ ಪ್ಲ್ಯಾಂಟ್ ಬ್ರೀಡಿಂಗ್
– ಸಾಯಿಲ್ ಸೈನ್ಸ್ ಅಂಡ್ ಅಗ್ರಿಕಲ್ಚರಲ್ ಕೆಮಿಸ್ಟ್ರಿ
– ಫಿಶರೀಸ್
– ಎನಿಮಲ್ ಸೈನ್ಸ್/ ವೆಟರ್ನರಿ ಸೈನ್ಸ್/ಪೌಲ್ಟ್ರಿ ಸೈನ್ಸ್
– ಆಗ್ರೊ ಫಾರೆಸ್ಟ್ರಿ
– ಸ್ಟ್ಯಾಟಿಸ್ಟಿಕ್ಸ್
– ಹೋಂ ಸೈನ್ಸ್
– ಸಿರಿಕಲ್ಚರ್ಸ್
– ಅಗ್ರಿಕಲ್ಚರಲ್ ಎಂಜಿನಿಯರಿಂಗ್
– ಕಂಪ್ಯೂಟರ್ ಸೈನ್ಸ್
– ಫಿಸಿಕ್ಸ್
– ಅಗ್ರಿಕಲ್ಚರಲ್ ಮಾರ್ಕೆಟಿಂಗ್
– ಬಯೋ ಕೆಮಿಸ್ಟ್ರಿ
– ಫಾರ್ಮ್ ಮ್ಯಾನೇಜ್ ಮೆಂಟ್ ಮತ್ತು ಆಗ್ರೊ ಮೆಟಿರೋಲಜಿ ವಿಭಾಗದಲ್ಲಿ ಅಸಿಸ್ಟಂಟ್ ಪ್ರೊಫೆಸರ್
ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಅರ್ಹತೆ
– ಆಯಾ ವಿಷಯಕ್ಕೆ ಸಂಬಂಧಪಟ್ಟಂತೆ ಕನಿಷ್ಠ ಶೇ.55 ಅಂಕಗಳೊಂದಿಗೆ ಸ್ತಾತಕೋತ್ತರ ಪದವಿ ಮತ್ತು ಎನ್‌ಇಟಿ ಪಾಸ್ ಜೊತೆಗೆ ದಿಲ್ಲಿಯ ನ್ಯಾಷನಲ್ ಅಕಾಡೆಮಿ ಆಫ್ ಅಗ್ರಿಕಲ್ಚರಲ್ ಸೈನ್ಸ್‌ನಲ್ಲಿ ಒಂದು ಸಂಶೋಧನಾ ಬರಹ ಪ್ರಕಟವಾಗಿರಬೇಕು. ಒಂದು ವೇಳೆ 2009 ರ ಯುಜಿಸ ನಿಯಮಗಳ ಪ್ರಕಾರ Phd ಮುಗಿಸಿದ್ದರೆ, ಅಂತಹ ಅಭ್ಯರ್ಥಿಗಳಿಗೆ ಎನ್‌ಇಟಿ ಅರ್ಹತೆಯಿಂದ ವಿನಾಯಿತಿ ನೀಡಲಾಗುವುದು.
ಬೋಧಕೇತರ ಹುದ್ದೆಗಳ ವಿವರ
– ಸೂಪರಿಡೆಂಟ್ ಹುದ್ದೆಗೆ ಪದವಿ ಜೊತೆಗೆ 5 ವರ್ಷಗಳ ಸೇವಾನುಭವ ಅರ್ಹತೆ ಹೊಂದಿರಲೇಬೇಕು. ಜೊತೆಗೆ ಅಕೌಂಟ್ಸ್ ಅಂಡ್ ಜನರಲ್ ಲಾ ಪಾರ್ಟ್-1 ಮತ್ತು ಪಾರ್ಟ್-2 ರಲ್ಲಿ ಕಡ್ಡಾಯವಾಗಿ ಉತ್ತೀರ್ಣವಾಗಿರಬೇಕು.
– ಕೇರ್‌ಟೇಕರ್, ಜೂನಿಯರ್ ಟೆಕ್ನೀಷಿಯನ್ ಹುದ್ದೆಗಳಿಗೆ SSLC ಊತ್ತೀರ್ಣ
– ಕಾರ್ಪೆಂಟರ್, ಪ್ಲೆಂಬರ್, ವಾರ್ಡ್‌ಬಾಯ್, ಫಿಶರ್‌ಮನ್, ಪಂಪ್ ಅಟೆಂಡರ್ ಹುದ್ದೆಗೆ 7ನೇ ತರಗತಿ ತೇರ್ಗಡೆಯಾಗಿರಬೇಕು. ಎಲ್ಲಾ ಹುದ್ದೆಗಳಿಗೂ ನಿಗದಿತ ಸೇವಾನುಭವ ಹೊಂದಿರಬೇಕು.
ಆಯ್ಕೆ ವಿಧಾನ
ವಯೋಮಿತಿ
ಅರ್ಜಿಸಲ್ಲಿಸುವ ಕೊನೆಯ ದಿನಾಂಕದೊಳಗೆ ಕನಿಷ್ಟ 18 ವರ್ಷ. ಗರಿಷ್ಠ ವಯಸ್ಸು …
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ1/: 40 ವರ್ಷ
ಪ್ರವರ್ಗ 2ಎ/ಬಿ/3ಎ/3ಬಿ : 38 ವರ್ಷ
ಸಾಮಾನ್ಯ ಅಭ್ಯರ್ಥಿಗಳು : 35 ವರ್ಷ
ಅರ್ಜಿ ಶುಲ್ಕ ಎಷ್ಟು?
– ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ1 ಅಭ್ಯರ್ಥಿಗಳಿಗೆ ಬೋಧಕ ಹುದ್ದೆಗಳಿಗೆ ರೂ.500 ಹಾಗೂ ಬೋಧಕೇತರ ಹುದ್ದೆಗಳಿಗೆ ರೂ.300.
– ಇತರೆ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಬೋಧಕ ಹುದ್ದೆಗಳಿಗೆ ರೂ.1000 ಹಾಗೂ ಬೋಧಕೇತರ ಹುದ್ದೆಗಳಿಗೆ ರೂ.600.
ಶುಲ್ಕ ಪಾವತಿಸುವ ವಿಧಾನ
– ‘ಕಾಂಪ್ಟ್ರೋಲರ್, ಯುಎಎಸ್, ರಾಯಚೂರು’ ಹೆಸರಿನಲ್ಲಿ ಡಿಡಿ ತೆಗೆಯಬೇಕು.
ಅಂಚೆ ಮೂಲಕ ಅರ್ಜಿ ಸಲ್ಲಿಸಬೇಕಾದ ವಿಳಾಸ: ‘The Registrar, University of Agricultural Science, Lingasugur road, Raichur – 584 104′.
ರಾಯಚೂರು ಕೃಷಿ ವಿವಿ ನೇಮಕಾತಿ ಅಧಿಸೂಚನೆ ಪಿಡಿಎಫ್‌ಗಾಗಿ – ಕ್ಲಿಕ್ ಮಾಡಿ
ಎಲ್ಲಾ ಹುದ್ದೆಗಳ ಅರ್ಹತೆಗಳ ಸಂಪೂರ್ಣ ವಿವರಕ್ಕಾಗಿ – ಕ್ಲಿಕ್ ಮಾಡಿ
ಇತರೆ ಹೆಚ್ಚಿನ ಮಾಹಿತಿಗಾಗಿ ವೆಬ್ ವಿಳಾಸ :www.uasraichur.edu.in