ಕರ್ನಾಟಕಕ್ಕೆ ವೆಸ್ಟ್ ನೈಲ್ ಫೀವರ್ ಭಯವೂ ಇಲ್ಲ ಹಾಗೂ ವರದಿಯೂ ಆಗಿಲ್ಲ. ಆದರೆ ಕೇರಳ ರಾಜ್ಯದ ಗಡಿ ಭಾಗದಲ್ಲಿರುವ 4 ಜಿಲ್ಲೆಗಳಲ್ಲಿ ಆತಂಕ ವೆಸ್ಟ್ ನೈಲ್ ಫೀವರ್ ಬಗ್ಗೆ ಆತಂಕ ವ್ಯಕ್ತವಾಗಿದ್ದು ಕಟ್ಟೆಚ್ಚರ ವಹಿಸಲಾಗಿದೆ.
ಏನಿದು ವೆಸ್ಟ್ ನೈಲ್ ಫೀವರ್? ಹೇಗೆ ಹರಡುತ್ತದೆ?
– ದೇವರನಾಡು ಕೇರಳದಲ್ಲಿ ಕಾಣಿಸಿಕೊಂಡಿರುವ ವೆಸ್ಟ್ ನೈಲ್ ಫೀವರ್, ಪಕ್ಷಿ ಮತ್ತು ಸೊಳ್ಳೆಯಿಂದ ಹರಡುತ್ತದೆ.
– 1937 ರಲ್ಲಿ ಉಗಾಂಡದ ವೆಸ್ಟ್ ನೈಲ್ ಜಿಲ್ಲೆಯಲ್ಲಿ ಕಾಣಿಸಿಕೊಂಡ ಕಾರಣಕ್ಕೆ ಈ ಜ್ವರಕ್ಕೆ ವೆಸ್ಟ್ ನೈಲ್ ಫೀವರ್ ಎಂದೇ ಕರೆಯಲಾಗುತ್ತದೆ.
ವೆಸ್ಟ್ ನೈಲ್ ಫೀವರ್ ಲಕ್ಷಣಗಳು
– ವೆಸ್ಟ್ ನೈಲ್ ಫೀವರ್ ಸೋಂಕಿಗೆ ತುತ್ತಾದವರಿಗೆ ತಲೆನೋವು, ತೀವ್ರ ಜ್ವರ, ಗಂಟಲು ಬೇನೆ, ದಿಗ್ಬ್ರಮೆ ಗೊಳ್ಳುವುದು, ಕೋಮಾ ಸ್ಥಿತಿಗೆ ಹೋಗುವುದು, ನಡುಕ ಉಂಟಾಗುವ ಲಕ್ಷಣಗಳು ಕಂಡುಬರುತ್ತವೆ.
– ವೆಸ್ಟ್ ನೈಲ್ ಫೀವರ್ಗೆ ತುತ್ತಾದವರು ಹಲವು ದಿನಗಳ ನಂತರ ಚೇತರಿಸಿಕೊಳ್ಳಬಹುದು ಅಥವಾ ಸಾವನ್ನಪ್ಪುವ ಅವಕಾಶವು ಇರುತ್ತದೆ.
ವೆಸ್ಟ್ ನೈಲ್ ಫೀವರ್ ಆತಂಕ ಎಲ್ಲೆಲ್ಲಿ
– ವೆಸ್ಟ್ ನೈಲ್ ಫೀವರ್ ಬಗ್ಗೆ ಎಚ್ಚರ ವಹಿಸಲು ಕೇರಳ ಗಡಿ ಜಿಲ್ಲೆಗಳಾದ ಕೊಡಗು, ದಕ್ಷಿಣ ಕನ್ನಡ, ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಯಲ್ಲಿ ತೀರ್ವ ನಿಗಾ ವಹಿಸಲು ತಿಳಿಸಲಾಗಿದೆ. ಹಾಗೂ ಕೇರಳಕ್ಕೆ ಹೋಗಿ ಬರುವವರ ಆರೋಗ್ಯ ತಪಾಸಣೆ ಮಾಡಲು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.
ವೆಸ್ಟ್ ನೈಲ್ ಫೀವರ್ ಗೆ ಚಿಕಿತ್ಸೆ ಏನು?
– ವೆಸ್ಟ್ ನೈಲ್ ಫೀವರ್ಗೆ ನಿರ್ಧಿಷ್ಟವಾದ ಯಾವುದೇ ಆಂಟಿವೈರಸ್ ಮತ್ತು ಲಸಿಕೆ ಲಭ್ಯವಿಲ್ಲ
– ನೋವು ನಿವಾರಕಗಳು ಮಾತ್ರ ವೆಸ್ಟ್ ನೈಲ್ ಫೀವರ್ ಲಕ್ಷಣಗಳಲ್ಲಿ ಒಂದಾದ ನೋವನ್ನು ಮಾತ್ರ ಕಡಿಮೆ ಮಾಡಬಹುದು.
– ಕೆಲವೊಮ್ಮೆ ವೆಸ್ಟ್ ನೈಲ್ ಫೀವರ್ ಅನಾರೋಗ್ಯಕ್ಕೆ ತುತ್ತಾದ ರೋಗಿಯನ್ನು ಆಸ್ಪತ್ರೆಗೆ ದಾಖಲು ಮಾಡಿ ಇಂಟ್ರಾವೆನಸ್ ದ್ರವಗಳು, ನೋವು ನಿವಾರಕ ಔಷಧಗಳು ಮತ್ತು ಶುಶ್ರೂಷ ಆರೈಕೆ ಕೊಡಿಸಬೇಕಾಗುತ್ತದೆ.
– ವೆಸ್ಟ್ ನೈಲ್ ಫೀವರ್ ಗೆ ತುತ್ತಾದವರ ವ್ಯಕ್ತಿಯ ಕುಟುಂಬದವರು ಡಾಕ್ಟರ್ ಸಲಹೆಯನ್ನು ಬಹುಬೇಗ ಪಡೆದುಕೊಳ್ಳಬೇಕು.
ವೆಸ್ಟ್ ನೈಲ್ ವೈರಸ್ ನಿಂದ ದೂರ ಉಳಿಯಲು ತೆಗೆದುಕೊಳ್ಳಬಹುದಾದ ಮುಂಜಾಗ್ರತ ಕ್ರಮಗಳು
– ವೆಸ್ಟ್ ನೈಲ್ ಫೀವರ್ ಹರಡಿರುವ ಮತ್ತು ಹರಡುವ ಮುನ್ಸೂಚನೆ ತಿಳಿದ ಪ್ರದೇಶದಲ್ಲಿರುವವರು ನೈಸರ್ಗಿಕ ಕೀಟ ನಿರೋಧಕಗಳನ್ನು ಬಳಸಿ.
– ತುಂಬುದೋಳು ಶರ್ಟ್ ಮತ್ತು ಲಾಂಗ್ ಪ್ಯಾಂಟ್ಗಳನ್ನು ಧರಿಸಿ.
– ಹೊರಾಂಗಣ ಮತ್ತು ಒಳಾಂಗಣ ಎರಡು ಕಡೆ ಸೊಳ್ಳೆ ನಿಯಂತ್ರಕಗಳನ್ನು ಬಳಸಿ ಮತ್ತು ಸೊಳ್ಳೆಗಳನ್ನು ದೂರವಿರಿಸಲು ಕ್ರಮ ಕೈಗೊಳ್ಳಿ.
– ಪ್ರವಾಸ ಹೋದಾಗ ಸಹ ನೀವು ತಂಗುವ ಸ್ಥಳದಲ್ಲಿ ಸೊಳ್ಳೆ ಇಲ್ಲದಿರುವಿಕೆಯನ್ನು ಖಾತರಿ ಪಡಿಸಿಕೊಳ್ಳಿ.
– ಕಾರಣ ವೆಸ್ಟ್ ನೈಲ್ ಫೀವರ್ ಹರಡುವುದು ಸೊಳ್ಳೆಯಿಂದ ಎಂಬುದನ್ನು ಮರೆಯದಿರಿ.