ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರು ದಿನನಿತ್ಯ ಪತ್ರಿಕೆಗಳು ಹಾಗೂ ಇತರೆ ನಿಯತಕಾಲಿಕೆಗಳನ್ನು ಓದುತ್ತೀರಿ. ಇಂದಿನ ಪ್ರಚಲಿತ ವಿದ್ಯಮಾನಗಳ ಬಗ್ಗೆ ನಾಳೆ ಪ್ರಶ್ನೆಗಳನ್ನು ನಾಲ್ಕು ಆಯ್ಕೆಗಳನ್ನು ಕೊಟ್ಟು ಕೇಳಿದರೆ ಭಾಗಶಃ ಶೇ.90 ರಷ್ಟು ಸರಿ ಉತ್ತರಗಳನ್ನು ನೀಡಬಹುದು. ಆದರೆ ಆಯ್ಕೆಗಳನ್ನು ನೀಡದೆ ಕೇವಲ ಪ್ರಶ್ನೆಗಳನ್ನು ಕೇಳಿದರೆ? ಎಷ್ಟು ಉತ್ತರ ಸರಿ ಹೇಳುತ್ತೀರಿ? ನಿಮಗೆ ನೀವೆ ಪರೀಕ್ಷಿಸಿಕೊಳ್ಳಿ..
ನಿಮ್ಮ ಕನ್ನಡ ಅಡ್ವೈಜರ್ ದಿನನಿತ್ಯ 10 ಪ್ರಶ್ನೆಗಳನ್ನು ಬಹು ಆಯ್ಕೆ ಉತ್ತರಗಳನ್ನು ನೀಡದೆ ಮೊದಲು ಕೇವಲ ಪ್ರಶ್ನೆಗಳನ್ನು ನೀಡಿ, ನಂತರ ಪುಟದ ಕೆಳಭಾಗದಲ್ಲಿ ಉತ್ತರಗಳನ್ನು ನೀಡಲಿದೆ. ಉತ್ತರಗಳನ್ನು ನೋಡುವ ಮೊದಲು ನಿಮ್ಮ ಜ್ಞಾನದ ಮಟ್ಟವನ್ನು ನೀವೆ ಮೊದಲು ಪರೀಕ್ಷಿಸಿಕೊಳ್ಳಿ. ನಂತರ ಉತ್ತರಗಳನ್ನು ನೋಡಿಕೊಳ್ಳಿರಿ..
1. ಯಾವ ರಾಜ್ಯದ ಮುಖ್ಯ ಚುನಾವಣೆ ಅಧಿಕಾರಿಯು ‘Enajori’ ಎಂಬ ಉಪಕ್ರಮವನ್ನು ಪ್ರಾರಂಭಿಸಿದ್ದಾರೆ?
2. ಯಾವ ಅಂತರಾಷ್ಟ್ರೀಯ ಸಂಘಟನೆಯು ಭಯೋತ್ಪಾದಕ ಹಣಕಾಸು ನಿಗ್ರಹವನ್ನು ಎದುರಿಸಲು ಸಂಕಲ್ಪ ಕೈಗೊಂಡಿದೆ?
3. ಭಾರತದ ಯಾವ ಕ್ರೀಡಾ ಸಂಸ್ಥೆಯು ASSOCHAM ನಿಂದ ಅತ್ಯುತ್ತಮ ಕ್ರೀಡಾ ಒಕ್ಕೂಟ ಪ್ರಶಸ್ತಿ ಪಡೆದಿದೆ?
4. ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಬೋಡ್ಲೆ ಮೆಡಲ್ 2019 ಪ್ರಶಸ್ತಿಯನ್ನು ಸ್ವೀಕರಿಸಿದ ಭಾರತೀಯ ಯಾರು?
5. ‘ಅತ್ಯಂತ ಭರವಸೆಯ ವ್ಯಕ್ತಿ’ ವಿಭಾಗದಲ್ಲಿ 2019 ಮಾರ್ಥಾ ಫಾರೆಲ್ ಪ್ರಶಸ್ತಿ ಪಡೆದ ಭಾರತೀಯ ಶಿಕ್ಷಕ ಯಾರು?
6. ಇತ್ತೀಚೆಗೆ ಪ್ರಪಂಚದ ಅತ್ಯಂತ ಉದ್ದವಾದ ಉಪ್ಪಿನ ಕುಹರವನ್ನು ಯಾವ ದೇಶದಲ್ಲಿ ಕಂಡುಹಿಡಿಯಲಾಯಿತು?
7. ಟ್ರೈ-ಸರ್ವಿಸ್ನ 2ನೇ ಜಂಟಿ ಲಾಜಿಸ್ಟಿಕ್ಸ್ ನೋಡ್ (JLN) ಈ ಕೆಳಗಿನ ಯಾವ ತಾಣಗಳಲ್ಲಿ ಕಾರ್ಯಾಚರಣೆಯಲ್ಲಿದೆ?
8. ಫಿನ್ಟೆಕ್ ಸ್ಟಾರ್ಟ್ ಅಪ್ಗಳಿಗಾಗಿ ನಿಯಂತ್ರಕ ಸ್ಯಾಂಡ್ಬಾಕ್ಸ್ ಅನ್ನು ಸ್ಥಾಪಿಸಲು ಯಾವ ಭಾರತೀಯ ಸಂಸ್ಥೆ ನಿರ್ಧರಿಸಿದೆ?
9. ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್(IGBC)ನಿಂದ ಗೋಲ್ಡ್ ರೇಟಿಂಗ್ ಪಡೆದ ಭಾರತೀಯ ರೈಲು ನಿಲ್ದಾಣ ಯಾವುದು?
10. ‘ಇಂಡಿಯನ್ ಫಿಸ್ಕಲ್ ಫೆಡೆರೇಷನ್’ ಪುಸ್ತಕದ ಲೇಖಕರು ಯಾರು?
ಈ ಮೇಲಿನ ಪ್ರಶ್ನೆಗಳಿಗೆ ಉತ್ತರಗಳು ಈ ಕೆಳಗಿನಂತಿವೆ
1. ಅಸ್ಸಾಂ
2. UNSC
3. ನ್ಯಾಷನಲ್ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ
4. ಅಮರ್ತ್ಯ ಸೇನ್
5. ಮನು ಗುಲಾಟಿ
6. ಇಸ್ರೇಲ್
7. ಮುಂಬೈ
8. RBI
9. ವಿಜಯವಾಡ
10. ವೈ ವಿ ರೆಡ್ಡಿ
Kannadaadvisor publishes relevant fact based on Current Affairs almost daily basis. This information helps you to keep a watch on current happenings and may be useful for General Awarness part of KAS, IAS, IBPS Banking, ssc-cgl, bank clerical and other similar examination. Here are the today current affairs quizzes.