ವಯಸ್ಸಾದಂತೆ ಮಂಡಿನೋವು ಬರುತ್ತದೆ. ಕೆಲವರಿಗೆ ಇನ್ನು ವಯಸ್ಸು ಇರುವಾಗಲೇ ಹೆಚ್ಚು ನಿಶಕ್ತಿ ಉಂಟಾಗುತ್ತದೆ. ಮೂಲವ್ಯಾದಿ ಸಮಸ್ಯೆ ಇರುವವರಿಗೆ ಬೇಗ ದೇಹದಲ್ಲಿನ ರಕ್ತ ಕಡಿಮೆ ಆಗಿ ಸವೆದು ಹೋಗಿರುತ್ತಾರೆ.
ಮೇಲಿನ ಈ ಸಮಸ್ಯೆ ಎಲ್ಲಾ ಇರುವವರು ಚಿಕಿತ್ಸೆಗಾಗಿ ನೋವು ತಡೆಯಲಾರದೆ, ಮತ್ತಷ್ಟು ದಿನ ಅನುಭವಿಸುವುದು ಬೇಡ ಎಂದು ಡಾಕ್ಟರ್ ಬಳಿ ಹೋದಾಗ ಅವರು ಕೊಡುವ ಚಿಕಿತ್ಸೆ ಏನು? ಇದು ಬಹುಸಂಖ್ಯಾತರಿಗೆ ತಿಳಿಯದ ವಿಷಯ.
ಯಾವುದೋ ಖಾಯಿಲೆ ಬಂದಿದ್ದರೇ ಡಾಕ್ಟರ್ ಅವುಗಳ ನಿರೋಧಕ ಇಂಜೆಕ್ಷನ್ ನೀಡಿ ಗುಣ ಮಾಡುತ್ತಾರೆ. ಆದರೆ ನಮ್ಮ ದೇಹದಲ್ಲಿ ಕಡಿಮೆಯಾದ ಯಾವುದೋ ಜೀವಸತ್ವಗಳಿಂದ ಉಂಟಾದ ಅನಾರೋಗ್ಯಕ್ಕೆ ಅವರು ನೀಡುವುದು ಆ ಜೀವಸತ್ವಗಳನ್ನು, ಪೌಷ್ಟಿಕಾಂಶಗಳನ್ನು ನೀಡುವ ಇಂಗ್ಲಿಷ್ ಮೆಡಿಷನ್ ಗಳನ್ನೇ.. ಅಂದರೆ ಮಾತ್ರೆಗಳನ್ನು. ಅತಿ ಹೆಚ್ಚು ಮಾತ್ರೆಗಳನ್ನು ಸೇವಿಸುವುದು ಒಂದು ರೀತಿಯಲ್ಲಿ ಡ್ರಗ್ ಅಡಿಕ್ಟ್ ಆದಂತೆಯೇ. ಅದರ ಬದಲು ನಮ್ಮ ದೇಹಕ್ಕೆ ನಮ್ಮ ಸಮಸ್ಯೆ ಪರಿಹಾರಕ್ಕೆ ಯಾವ ಜೀವಸತ್ವ ಬೇಕು, ಅದು ಯಾವ ದೈನಂದಿನ ಆಹಾರ, ತರಕಾರಿ, ಸೊಪ್ಪು, ಹಣ್ಣುಗಳಲ್ಲಿ ಸಿಗುತ್ತದೆ ಎಂದು ತಿಳಿದರೆ ಮಾತ್ರೆ ಬದಲು ಈ ನ್ಯಾಚುರಲ್ ಆಹಾರಗಳಿಂದಲೇ ಸಮಸ್ಯೆ ಪರಿಹಾರ ಸಾಧ್ಯ ಅಲ್ಲವೇ?..
ಆದ್ದರಿಂದ ಇಲ್ಲಿ ನಾವು ಯಾವ ತರಕಾರಿ, ಸೊಪ್ಪು, ಹಣ್ಣುಗಳಲ್ಲಿ ಯಾವ್ಯಾವ ಜೀವಸತ್ವ ಮತ್ತು ಪೌಷ್ಟಿಕಾಂಶಗಳು ಇವೆ ಎಂದು ಸರಳವಾಗಿ ತಿಳಿಸಿದ್ದೇವೆ.
ಧಾನ್ಯಗಳಲ್ಲಿ ಇರುವ ವಿಟಮಿನ್ ಮತ್ತು ಪೌಷ್ಟಿಕಾಂಶಗಳು
ಅಕ್ಕಿ, ಗೋಧಿ, ರಾಗಿ, ಜೋಳ, ಸಜ್ಜೆ, ನವಣೆ – ಶರ್ಕರ ಪಿಷ್ಟಗಳು
ಸೊಪ್ಪುಗಳಲ್ಲಿ ಇರುವ ವಿಟಮಿನ್ ಮತ್ತು ಪೌಷ್ಟಿಕಾಂಶಗಳು
ಕೊತ್ತಂಬರಿ ಸೊಪ್ಪು – ವಿಟಮಿನ್ ಎ ಮತ್ತು ಸಿ, ಕ್ಯಾಲ್ಸಿಯಂ
ಮೆಂತ್ಯ ಸೊಪ್ಪು – ವಿಟಮಿನ್ ಎ, ಬಿ, ಸಿ ಮತ್ತು ಕ್ಯಾಲ್ಸಿಯಂ, ಕಬ್ಬಿಣ
ಪಾಲಕ್ ಸೊಪ್ಪು- ವಿಟಮಿನ್ ಎ, ಬಿ, ಸಿ ಮತ್ತು ಕ್ಯಾಲ್ಸಿಯಂ, ರಂಜಕ, ಕಬ್ಬಿಣ
ಕರಿಬೇವು – ಕ್ಯಾಲ್ಸಿಯಂ, ರಂಜಕ, ಕಬ್ಬಿಣ
ತರಕಾರಿಗಳಲ್ಲಿ ಇರುವ ವಿಟಮಿನ್ ಮತ್ತು ಪೌಷ್ಟಿಕಾಂಶಗಳು
ಟೊಮೊಟೊ – ವಿಟಮಿನ್ ಎ, ಬಿ, ಸಿ
ಬದನೆಕಾಯಿ – ವಿಟಮಿನ್ ಎ ಮತ್ತು ಬಿ
ಸೌತೆಕಾಯಿ – ಎ ಮತ್ತು ಬಿ ವಿಟಮಿನ್ಗಳು
ಹಾಗಲಕಾಯಿ – ವಿಟಮಿನ್ ಎ ಮತ್ತು ಕ್ಯಾಲ್ಸಿಯಂ, ಮೆಗ್ನೀಷಿಯಂ, ಸೋಡಿಯಂ, ರಂಜಕ ಮತ್ತು ಪೊಟ್ಯಾಷಿಯಂ
ಜವಳಿ ಕಾಯಿ – ವಿಟಮಿನ್ ಎ ಮತ್ತು ಕ್ಯಾಲ್ಸಿಯಂ, ಕಬ್ಬಿಣ
ಎಲೆ ಮತ್ತು ನವಿಲು ಕೋಸು – ವಿಟಮಿನ್ ಎ, ಬಿ
ಹೂಕೋಸು – ವಿಟಮಿನ್ ಎ, ಬಿ ಮತ್ತು ರಂಜಕ, ಗಂಧಕ, ಪೊಟ್ಯಾಷಿಯಂ
ಮೂಲಂಗಿ – ವಿಟಮಿನ್ ಸಿ, ಕ್ಯಾಲ್ಸಿಯಂ, ರಂಜಕ
ಗಜ್ಜರಿ(ಕ್ಯಾರೆಟ್) – ವಿಟಮಿನ್ ಎ ಮತ್ತು ಬೀಟಾ ಕೆರೋಟಿನ್
ನುಗ್ಗೆಕಾಯಿ – ವಿಟಮಿನ್ ಎ, ಬಿ, ಸಿ
ಸಾಂಬಾರ ಬೆಳೆಗಳಲ್ಲಿ ಇರುವ ವಿಟಮಿನ್ ಮತ್ತು ಪೌಷ್ಟಿಕಾಂಶಗಳು
ಮೆಣಸಿನ ಕಾಯಿ – ವಿಟಮಿನ್ ಎ ಮತ್ತು ಸಿ
ಅರಿಸಿನ – ವಿಟಮಿನ್ ಎ, ಬಿ, ಸಿ ಮತ್ತು ಶರ್ಕರಪಿಷ್ಟಗಳು
ಜೀರಿಗೆ – ಕ್ಯಾಲ್ಸಿಯಂ, ರಂಜಕ, ಕಬ್ಬಿಣ
ಸಾಸಿವೆ – ಮೇದಸ್ಸು, ಸಸಾರಜನಕ
ಒಣಶುಂಠಿ – ವಿಟಮಿನ್ ಎ ಮತ್ತು ಸಿ
ಈರುಳ್ಳಿ – ಕ್ಯಾಲ್ಸಿಯಂ ಮತ್ತು ರಂಜಕ
ಬೆಳ್ಳುಳ್ಳಿ – ರಂಜಕ
ಹಣ್ಣುಗಳಲ್ಲಿ ಇರುವ ವಿಟಮಿನ್ ಮತ್ತು ಪೌಷ್ಟಿಕಾಂಶಗಳು
ಮಾವು – ವಿಟಮಿನ್ ಎ ಮತ್ತು ಸಿ
ಬಾಳೆಹಣ್ಣು – ವಿಟಮಿನ್ ಎ, ಸಿ ಮತ್ತು ಶರ್ಕರ ಪಿಷ್ಟ, ಮತ್ತು ಖನಿಜಾಂಶಗಳು
ನಿಂಬೆಹಣ್ಣು – ವಿಟಮಿನ್ ಸಿ, ಕ್ಯಾಲ್ಸಿಯಂ, ಸಿಟ್ರಿಕ್ ಆಮ್ಲ ಮತ್ತು ರಂಜಕ
ಸಪೋಟಾ ಹಣ್ಣು – ವಿಟಮಿನ್ ಸಿ, ಕ್ಯಾಲ್ಸಿಯಂ, ಕಬ್ಬಿಣ
ಸೀಬೆ ಹಣ್ಣು – ವಿಟಮಿನ್ ಸಿ, ಕ್ಯಾಲ್ಸಿಯಂ, ರಂಜಕ
ಪರಂಗಿ ಹಣ್ಣು – ವಿಟಮಿನ್ ಎ
ಹಲಸಿನ ಹಣ್ಣು – ಶರ್ಕರಪಿಷ್ಟ ಮತ್ತು ಬೀಜಗಳಲ್ಲಿ ಸಸಾರ
ಅನಾನಸ್ – ವಿಟಮಿನ್ ಎ, ಬಿ, ಸಿ ಗಳು