ದಿನ ನಿತ್ಯ ಬಹಳಷ್ಟು ಚೆನ್ನಾಗಿ, ಕೋಲ್ಗೇಟ್ ಸಾಲ್ಟ್ ಟೂತ್ಪೇಸ್ಟ್ ಅನ್ನೇ ಬಳಸಿ ಹಲ್ಲು ಉಜ್ಜುತ್ತೇನೆ, ಹಾಗೆ ಟೂತ್ ಬ್ರಶ್ನ ಟಂಗ್ ಕ್ಲೀನರ್ನಲ್ಲೇ ನಾಲಿಗೆಯನ್ನು ಸ್ವಚ್ಛ ಮಾಡುತ್ತೇನೆ. ಆದರೂ ನನ್ನ ಬಾಯಿಯ ದುರ್ಗಂಧಕ್ಕೆ ಮುಕ್ತಿ ಸಿಗುತ್ತಿಲ್ಲ. ಕಡಿಮೆಯೂ ಹಾಗುತ್ತಿಲ್ಲ.. ಎನ್ನುವವರಿಗೆ ಕೆಲವು ಸರಳ ಸಲಹೆಗಳನ್ನು ಇಲ್ಲಿ ನೀಡಲಾಗಿದೆ.
ದುರ್ಗಂಧ ಶ್ವಾಸ ಕಡಿಮೆ ಮಾಡಲು ಹಲವು ಮಾರ್ಗಗಳಿವೆ. ಬಾಯಿಯಿಂದ ಕೆಟ್ಟ ವಾಸನೆ ಬರುವುದು ಬಾಯಿ ಸ್ವಚ್ಛ ಗೊಳಿಸಿಲ್ಲದ ಕಾರಣವಲ್ಲ. ಸ್ವಚ್ಛ ಗೊಳಿಸಿದ ಕ್ರಮವು ಪ್ರಮುಖ ಪರಿಣಾಮ ಬೀರುತ್ತದೆ.
ಬಾಯಿಯ ದುರ್ಗಂಧ ವಾಸನೆಯನ್ನು ಸ್ವಚ್ಛ ಗೊಳಿಸುವ ಕ್ರಮ ಮಾತ್ರವಲ್ಲದೇ ಯೋಗಾಸನದಲ್ಲಿಯ ಕೆಲವು ಆಸನಗಳನ್ನು ಮಾಡುವುದರ ಮೂಲಕವು ಮುಕ್ತಿ ಪಡೆಯಬಹುದು. ಆ ಪರಿಹಾರಕ್ರಮಗಳು ಈ ಕೆಳಗಿನಂತಿವೆ.
– ನಿಂಬೆ ಹಣ್ಣಿನ ರಸ ಮತ್ತು ಉಪ್ಪು, ಹುಣಸೆ ಹಣ್ಣಿನ ರಸದಲ್ಲಿ ಬಾಯಿ ಸ್ವಚ್ಛಗೊಳಿಸಬಹುದು.
– ಬಾಯಿಯ ದುರ್ಗಂಧ ಮುಕ್ತಿಗೆ ಸಿಂಹಾಸನ ಅತ್ಯಂತ ಪರಿಣಾಮಕಾರಿಯಾಗಿ ಪ್ರಭಾವ ಬೀರುತ್ತದೆ.
– ಶೀರ್ಷಾಸನ
– ಉತ್ತಾನಾಸನ
– ಸರ್ವಾಂಗಾಸನ ಮತ್ತು ಮುಂದುವರಿದ ಹಂತಗಳು
– ನಾಡಿಶೋಧನ ಮತ್ತು ಉಜ್ಜಾಯಿ, ಶೀತಳೀ ಪ್ರಾಣಾಯಾಮ ಅಭ್ಯಾಸ ಮಾಡುವುದು
– ಜಠರ ಪರಿವರ್ತನಾಸನ
– ಪಶ್ಚಿಮೋತ್ತಾನಾಸನ
– ಉಡ್ಡಿಯಾನ ಮಾಡುವುದು – ಅಂದರೆ ಬಾಯಿ ದೊಡ್ಡದಾಗಿ ಓಪನ್ ಮಾಡಿ ನಾಲಿಗೆಯನ್ನು ಹೊರಚಾಚಿ, ಸುರುಳಿ ಮಾಡಿ ಮೂಗಿನ ತುದಿಯತ್ತ ಮೇಲಕ್ಕೆ ಚಾಚಿ. ನಂತರ ನಾಲಿಗೆಯ ಸುರುಳಿ ಮಧ್ಯೆ ಉಸಿರನ್ನು ಹೊರಬಿಡಿ. ಈ ಚಟುವಟಿಕೆ ಮಾಡುವುದರಿಂದ ಬಾಯಿ ದುರ್ಗಂಧ ನಿವಾರಣೆಯಾಗುತ್ತದೆ.
ಬಾಯಿಯ ದುರ್ಗಂಧ ವಾಸನೆಗೆ ಕಾರಣಗಳು
– ತಿಂದ ಆಹಾರದ ಕಣಗಳು ಬಾಯಿಯಲ್ಲೇ, ಹಲ್ಲಿನ ಸಂದಿಗಳಲ್ಲಿ ಉಳಿಯುವುದರಿಂದ ಬ್ಯಾಕ್ಟೀರಿಯಾ ಉತ್ಪತ್ತಿಯಾಗಿ ದುರ್ಗಂಧಕ್ಕೆ ಕಾರಣವಾಗುತ್ತವೆ.
– ತಂಬಾಕು ಸೇವನೆ, ಧೂಮಪಾನ ಮಾಡುವುದರಿಂದ ಬಾಯಿಯ ವಾಸನೆ ಕೆಲವರಲ್ಲಿ ಸ್ವಚ್ಛಗೊಳಿಸಿದರೂ ಹಾಗೆ ಉಲ್ಬಣವಾಗುವ ಸಾಧ್ಯತೆ ಇರುತ್ತದೆ.
– ಕಡಿಮೆ ಗುಣಮಟ್ಟದ ಟೂತ್ಪೇಸ್ಟ್ ಬಳಕೆ ಬಾಯಿಯ ಸ್ವಚ್ಛತೆಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡದಿರುವುದು
– ಬಾಯಿಯನ್ನು ಹೆಚ್ಚು ಒಣಗಲು ಬಿಡುವುದು. ಅಂದರೆ ಹೆಚ್ಚಾಗಿ ನೀರು ಸೇವನೆ ಮಾಡದೆ ಬಾಯಿ ಒಣಗುವುದರಿಂದಲೂ
– ಬಾಯಿಯಲ್ಲಿ ಸೋಂಕುಗಳು ಉಂಟಾಗುವುದರಿಂದ
– ಔಷಧಗಳನ್ನು ಅನಾರೋಗ್ಯದ ಹಿನ್ನೆಲೆ ಸೇವನೆ ಮಾಡುವದರಿಂದಲೂ ದುರ್ಗಂಧ ಉಂಟಾಗುತ್ತದೆ.
– ಬಾಯಿ, ಮೂಗು, ಗಂಟಲುಗಳ ಅನಾರೋಗ್ಯ ಕಾರಣ
– ಮತ್ತು ಇತರೆ ಹಲವು ಕಾರಣಗಳಿಂದ ಬಾಯಿ ದುರ್ಗಂಧ ಶ್ವಾಸ ಉಂಟಾಗುತ್ತದೆ.