ಕರ್ನಾಟಕದ ಕಲಬುರಗಿಯಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಹುದ್ದೆಗಳ ವಿವರಗಳು ಈ ಕೆಳಗಿನಂತಿವೆ.
ಒಟ್ಟು ಹುದ್ದೆಗಳ ಸಂಖ್ಯೆ: 145
ಅರ್ಜಿ ಸಲ್ಲಿಕೆ ಆರಂಭಿಕ ದಿನಾಂಕ: 11-05-2019
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 12-06-2019
ಅರ್ಜಿಯ ಮುದ್ರಿತ ಪ್ರತಿಯನ್ನು ಕಳುಹಿಸಲು ಕೊನೆ ದಿನ: 24-06-2019
ಹುದ್ದೆಗಳ ವಿವರಗಳು ಮೀಸಲಾತಿಗೆ ಅನುಗುಣವಾಗಿ ಈ ಕೆಳಗಿನ ಪಟ್ಟಿಯಲ್ಲಿವೆ. ಗಮನಿಸಿ.
ಶೈಕ್ಷಣಿಕ ಅರ್ಹತೆ
ಪ್ರೊಫೆಸರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಪಟ್ಟ ವಿಷಯಗಳಲ್ಲಿ ಪಿಎಚ್.ಡಿ ಪಡೆದಿರಬೇಕು. ಯಾವುದೇ ವಿಶ್ವವಿದ್ಯಾಲಯ ಅಥವಾ ಕಾಲೇಜುಗಳಲ್ಲಿ ಅಸಿಸ್ಟಂಟ್ ಪ್ರೊಫೆಸರ್ ಅಥವಾ ಅಸೋಸಿಯೇಟ್ ಪ್ರೊಫೆಸರ್ ಆಗಿ ಕನಿಷ್ಟ 10 ವರ್ಷ ಕೆಲಸ ಮಾಡಿದ ಅನುಭವ ಇರಬೇಕು. ಅಥವಾ ಸಂಶೋಧನಾ ಅನುಭವ ಹೊಂದಿರಬೇಕು.
– ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗೆ ಸಂಬಂಧಪಟ್ಟ ವಿಷಯಗಳಲ್ಲಿ ಪಿಎಚ್.ಡಿ ಮತ್ತು ಕನಿಷ್ಠ 8 ವರ್ಷಗಳ ಬೋಧನಾನುಭವ ಹೊಂದಿರಬೇಕು.
– ಅಭ್ಯರ್ಥಿಗಳು ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇಕಡಾ 55 ಅಂಕಗಳು ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಪಾಸಾಗಿರಬೇಕು.
– ಅಸಿಸ್ಟಂಟ್ ಪ್ರೊಫೆಸರ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಶೇಕಡಾ 55 ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಮತ್ತು NET ಅರ್ಹತೆ ಪಡೆದಿರಬೇಕು.
– ಇತರೆ ಅರ್ಹತಾ ಮಾನದಂಡಗಳನ್ನು ಅಧಿಸೂಚನೆಯಲ್ಲಿ ಓದಿಕೊಳ್ಳಬಹುದು.
ಸೂಚನೆಗಳು
– ಬ್ಯಾಕ್‌ಲಾಗ್ ಮತ್ತು ಪ್ರಸ್ತುತ ಹುದ್ದೆಗಳಿಗೆ ಅರ್ಜಿಯನ್ನು ಪ್ರತ್ಯೇಕವಾಗಿ ಸಲ್ಲಿಸಬೇಕು.
– ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವವರು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಬೇಕು.
– ಲಿಖಿತ ಪರೀಕ್ಷೆ ಮತ್ತು ಸಂದರ್ಶನ ದಿನಾಂಕವನ್ನು ಮತ್ತು ಇತರೆ ವಿವರಗಳನ್ನು ವಿವಿಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ.
– ಒಂದು ವರ್ಷ ಪ್ರೊಬೆಷನರಿ ಅವಧಿ ಇರುತ್ತದೆ.
– K-SET ಅರ್ಹತೆಯನ್ನು ಮಾನದಂಡವಾಗಿ ಪರಿಗಣಿಸಲಾಗುವುದು.
ಅರ್ಜಿ ಶುಲ್ಕ ಎಷ್ಟು?
– SC/ST ಮತ್ತು ವಿಕಲಚೇತನ ಅಭ್ಯರ್ತಿಗಳಿಗೆ ಅರ್ಜಿ ಶುಲ್ಕ ವಿನಾಯ್ತಿ ನೀಡಲಾಗಿದೆ.
– ಇತರೆ ಉಳಿದ ಅಭ್ಯರ್ಥಿಗಳಿಗೆ ರೂ.1500 ಅರ್ಜಿ ಶುಲ್ಕ ಪಾವತಿಸಬೇಕಾಗಿದೆ.
ಅರ್ಜಿಯ ಮುದ್ರಿತ ಪ್ರತಿ ಕಳುಹಿಸಬೇಕಾದ ವಿಳಾಸ
– The Registrar, Central University of Karnatka, Kadaganchi, Aland Road, Kalaburagi District – 585 367
ವೇತನ ಶ್ರೇಣಿ ಮತ್ತು ಇತರೆ ಹೆಚ್ಚಿನ ಮಾಹಿತಿಗಾಗಿ – ಕ್ಲಿಕ್ ಮಾಡಿ
Central University of Karnataka Teaching recruitment 2019 Notification and Details – Click Here