ನವದೆಹಲಿ: ಭಾರಯತದಲ್ಲಿ ಹಲವಾರು ಆ್ಯಪ್ಗಳ ಬಿಡುಗಡೆಯ ನಂತರ ಗೂಗಲ್ ಮತ್ತೊಂದು ಆ್ಯಪ್ ಬಿಡುಗಡೆ ಮಾಡಿದೆ. ಇದರ ಹೆಸರು ನೇಬರ್ಲಿ (Neighborly). ಇದು ಈ ಪ್ರಶ್ನೋತ್ತರ ನೀಡುವ ಆ್ಯಪ್ ಆಗಿದೆ.
ಮೊಬೈಲ್ ಪೇಮೆಂಟ್ ಆ್ಯಪ್, ಫುಡ್ ಡೆಲಿವರಿ ಸರ್ವಿಸ್ ಹಾಗೂ ನ್ಯಾಷನಲ್ ವೈ ಫೈ ನೆಟ್ವರ್ಕ್ ಎನಿಶಿಯಲ್ ಆ್ಯಪ್ಗಳ ಬಿಡುಗಡೆ ನಂತರ ಗೂಗಲ್ ನ ‘ನೆಕ್ಸಟ್ ಬಿಲಿಯನ್’ ಟೀಂ ಈ Q & A ಆ್ಯಪ್ ಬಿಡುಗಡೆ ಮಾಡಿದೆ. ನಿಮ್ಮ ಸುತ್ತಲಿರುವ ನಿವಾಸಿಗಳನ್ನು ಪ್ರಶ್ನೆ ಕೇಳುವ ಮೂಲಕ ನಿಮ್ಮ ನೆರೆಹೊರೆಯ ಬಗ್ಗೆ ತಿಳಿದುಕೊಳ್ಳಲು ಈ ಮೊಬೈಲ್ ಅಪ್ಲಿಕೇಶನ್ ವಿನ್ಯಾಸಗೊಳಿಲಾಗಿದೆ. ನಿಮ್ಮ ಸುತ್ತಲಿರುವ ನಿವಾಸಿಗಳಿಗೆ ಪ್ರಶ್ನೆ ಕೇಳುವ ಮೂಲಕ ಸ್ಥಳೀಯ ಸೇವೆಗಳು ಮತ್ತು ಸೌಲಭ್ಯಗಳ ಬಗ್ಗೆ ತಿಳಿಯಲು ಈ ಆ್ಯಪ್ ಸಹಕರಿಸುತ್ತದೆ.
ಹೇಗೆ ಕಾರ್ಯ ನಿರ್ವಹಿಸಲಿದೆ..?
ಈ ಆ್ಯಪ್ಪ್ಗೆ ಸೈನ್ ಅಪ್ ಆಗಲು ನೀವು ನಿಮ್ಮ ಹೆಸರನ್ನಷ್ಟೇ ನಮೂದಿಸಿದರೆ ಸಾಕು. ನೀವು ಸೈನ್ ಅಪ್ ಮಾಡುತ್ತಿದ್ದಂತೆಯೇ ಜಿಪಿಎಸ್ ಬಳಸಿ ನಿಮ್ಮ ಸುತ್ತ ಮುತ್ತಲಿನ ಕುರಿತಾದ ಮಾಹಿತಿ ನೀಡುತ್ತದೆ.
ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಿದೆ
ಬಳಕೆದಾರರ ಸುರಕ್ಷತೆಯ ದೃಷ್ಟಿಯಿಂದ ಸಂಪೂರ್ಣ ಕಾಳಜಿ ವಹಿಸಿಯೇ ಇಂತಹದೊಂದು ಆ್ಯಪ್ ತಯಾರು ಮಾಡಲಾಗಿದೆ. ಯಾವುದೇ ವ್ಯಕ್ತಿ ಮತ್ತೊಬ್ಬರ ಫೋಟೋ ಸೇವ್ ಮಾಡಿಕೊಳ್ಳಲು ಹಾಗೂ ಸ್ಕ್ರೀನ್ ಶಾಟ್ ತೆಗೆದುಕೊಳ್ಲಲೂ ಸಾಧ್ಯವಿಲ್ಲ. ಬಳಕೆದಾರರಿಗೆ ಯಾವುದೇ ಒಂದು ವಿಷಯ ಸರಿ ಅನಿಸುತ್ತಿಲ್ಲವಾದರೆ ಅದನ್ನು ರಿಪೋರ್ಟ್ ಮಾಡಬಹುದಾಗಿದೆ.
ಗೂಗಲ್ನ ಈ ಆ್ಯಪ್ನ್ನು ಈಗಾಗಲೇ 1000ಕ್ಕೂ ಅಧಿಕ ಮಂದಿ ಬಳಸಿದ್ದು, ಅವರೆಲ್ಲರೂ ಸುಮಾರು 30-35 ಶೇಕಡಾ ಪ್ರಶ್ನೆಗಳಿಗೆ ಕೇವಲ 54 ನಿಮಿಷದೊಳಗೆ ಉತ್ತರ ಕಂಡುಕೊಂಡಿದ್ದಾರೆ. ಆರಂಭದಲ್ಲಿ ಈ ಆ್ಯಪ್ನ ಬೀಟಾ ವರ್ಷನ್ ಮುಂಬೈನಲ್ಲಿ ಬಳಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬೇರೆ ನಗರಗಳಿಗೆ ವಿಸ್ತರಣೆಯಾಗಲಿದೆ.
Google launches a mobile app designed to help you learn about your neighborhood by asking other residents. It’s a way to find out about local services and facilities in your area from people who live around you. The beta is presently only available Mumbai