ಫೇಸ್ಆಪ್ (FaceApp) ಇತ್ತೀಚೆಗೆ ಸಖತ್ ವೈರಲ್ ಆಗುತ್ತಿದೆ. ಮೂಲತಃ ರಷ್ಯಾ ಮೂಲದ ವೈರ್ಲೆಸ್ ಕಂಪನಿ ಆಪ್ ಅಭಿವೃದ್ಧಿ ಪಡಿಸಿದೆ. ಇದೊಂದು ಫೋಟೋ ಎಡಿಟಿಂಗ್ ಮೊಬೈಲ್ ಅಪ್ಲಿಕೇಶನ್ ಆಗಿದ್ದು, ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಮೂಲಕ ವ್ಯಕ್ತಿಯೊಬ್ಬರ ಫೋಟೋ ಬಳಕೆ ಮಾಡಿಕೊಂಡು ಅವರು ವಯಸ್ಸಾದ ನಂತರ ಹೇಗೆ ಕಾಣುತ್ತಾರೆ ಎಂಬುದನ್ನು ತೋರಿಸುತ್ತದೆ. ಅಲ್ಲದೇ ಯಾವ ಹೇರ್ ಸ್ಟೈಲ್, ಯಾವ ರೀತಿ ಗಡ್ಡ ಇದ್ದರೆ ಚೆನ್ನಾಗಿ ಕಾಣುತ್ತೇನೆ ಎಂದು ತಮ್ಮ ಒಂದು ಫೋಟೋ ಅಥವಾ ಸೆಲ್ಪಿ ತೆಗೆದುಕೊಂಡು ನೋಡಿಕೊಳ್ಳಬಹುದು.
FaceApp ಅಪ್ಲಿಕೇಶನ್ನ ನಿಯಮಗಳು ಮತ್ತು ಷರತ್ತುಗಳನ್ನು ಮೇಲಿನ ಇಮೇಜ್ನಲ್ಲಿರುವಂತೆ ಸರಿಯಾಗಿ ಓದಿಕೊಂಡು ಅರ್ಥ ಮಾಡಿಕೊಮಡ ಯಾರು ಸಹ ಬಳಕೆ ಮಾಡುವುದಿಲ್ಲ. ಈ ಅಪ್ಲಿಕೇಶನ್ ವಿಮರ್ಶೆಗೆ ಗುರಿಯಾಗಿದ್ದು, ಆಪ್ ಅಭಿವೃದ್ಧಿ ಮಾಡಿರುವವರು ಜನರ ಇತರೆ ಮಾಹಿತಿಗಳನ್ನು ಹೇಗೆ ಬಳಕೆ ಮಾಡಿಕೊಳ್ಳುತ್ತಾರೆ ವಾರ್ನಿಂಗ್ ಪಡೆದಿದ್ದಾರೆ. ಅಮೆರಿಕದ ರಾಜಕಾರಣಿ ಒಬ್ಬರು ಸಂಯುಕ್ತ ಸಂಸ್ಥಾನದ ತನಿಖಾ ದಳ ವಿಚಾರಣೆ ಮಾಡಬೇಕು ಎಂದು ಬಯಸಿದ್ದಾರೆ.
FaceApp ಬಳಕೆ ಮಾಡಬೇಕೋ ಬೇಡವೋ ಎಂಬುದು ಅವರವರ ಸ್ವಂತಕ್ಕೆ ಬಿಟ್ಟಿದ್ದು. ಆದರೆ ಅದರಿಂದಾಗುವ ಕೆಲವು ದುರಪಯೋಗಗಳೆಂದರೆ..
– ಫೇಸ್ಆಪ್ ಬಳಕೆದಾರರ ಡಾಟಾ ಬಳಕೆ ಮಾಡಿಕೊಳ್ಳುತ್ತದೆ.
– ರಷ್ಯಾ ಮೂಲದ ವೈರ್ಲೆಸ್ ಕಂಪನಿ ಈ ಆಪ್ ಬಳಕೆದಾರರ ವಯಕ್ತಿಕ ಮಾಹಿತಿ ಬಳಸಿಕೊಂಡು ಜಾಹಿರಾತು ನೀಡುತ್ತದೆ. ಇದರಿಂದ ಅವರಿಗೆ ಲಾಭ. ಅಲ್ಲದೇ ಇತರೆ ಕಂಪನಿಗಳಿಗೂ ಬಳಕೆದಾರರ ಡಾಟಾ ಶೇರ್ ಮಾಡುವ ಸಾಧ್ಯತೆ ಇಲ್ಲ ಎಂದು ಹೇಳಲು ಆಗುವುದಿಲ್ಲ.
– ಬಹುಮುಖ್ಯವಾಗಿ ಆಪ್ ಬಳಕೆದಾರರ ಸ್ಮಾರ್ಟ್ಪೋನ್ನ ಗ್ಯಾಲರಿಯಲ್ಲಿ ಇರುವ ಎಲ್ಲಾ ಫೋಟೋಗಳು, ವಿಡಿಯೋಗಳು, ಇತರೆ ಸಾಫ್ಟ್ವೇರ್ಗಳು ಸಹ ಫೇಸ್ಆಪ್ನಲ್ಲಿ ಪ್ರದರ್ಶನವಾಗುತ್ತವೆ. ಈ ಮಾಹಿತಿಗಳು ಇತರೆ ಬಳಕೆದಾರರಿಗೂ ಪ್ರದರ್ಶನವಾಗುವ ಸಾಧ್ಯತೆಗಳು ಇವೆ ಎಂಬುದು ಈಗ ಚರ್ಚೆಗೊಳಗಾಗಿದೆ.
– ಬಳಕೆದಾರರ ಯೂಸರ್ ನೇಮ್ ಸೇರಿದಂತೆ ಅವರು ಅಪ್ಲೋಡ್ ಮಾಡಿದ ಯಾವುದೇ ಫೋಟೋವನ್ನು ಪ್ರಪಂಚದಾದ್ಯಂತ ಯಾರು ಬೇಕಾದರೂ ನೋಡಬಹುದಾಗಿದೆ.
– ಫೇಸ್ಆಪ್ನಲ್ಲಿ ಯಾರ ಫೋಟೋವನ್ನು ಯಾರು ಬೇಕಾದರೂ ಅಪ್ಲೋಡ್ ಮಾಡಿ ಬದಲಾವಣೆಗಳನ್ನು ನೋಡಬಹುದು.
– ಎಂತಹವರಿಗೂ ಅವರ ಸೌಂದರ್ಯ ಕಾಳಜಿ ಹೆಚ್ಚಾಗಿ ಇದ್ದಿದ್ದೇ. ಫೇಸ್ಆಪ್ ಡೌನ್ಲೋಡ್ ಮಾಡಿಕೊಂಡು ನಾನು ವಯಸ್ಸಾಗುತ್ತಾ ಹೋದಂತೆ ಹೇಗೆ ಕಾಣಬಹುದು ಎಂದು ನೋಡಿಕೊಳ್ಳಲು ಹೋದಾಗ ಸ್ವಲ್ಪ ವಿಕಾರವಾಗಿ ಕಂಡರು ನಿಮಗೆ ನೀವೆ ಬೇಜಾರು ಪಟ್ಟಿಕೊಂಡು ಕೊರಗಬಹುದು.
– ಎಲ್ಲರೂ ಸಹ ತಮ್ಮ ತಮ್ಮ ಬ್ಯೂಟಿ ಬಗ್ಗೆ ಹೆಚ್ಚು ಪ್ರೀತಿ ಇಟ್ಟುಕೊಂಡಿರುವುದರಿಂದ, ಆಪ್ನಲ್ಲಿ ಬದಲಾದ ನಿಮ್ಮ ವಯಸ್ಸಾದ ಬ್ಯೂಟಿ ನಿಮ್ಮ ದುಃಖಕ್ಕೆ ಕಾರಣವಾಗಬಹುದು.
– ಫೇಸ್ಆಪ್ ನೀಡುವ ನಿಮ್ಮ ವಯಸ್ಸಿನಾಧಾರಿತ ಬದಲಾವಣೆಯ ಸೌಂದರ್ಯ ಎಷ್ಟು ನಿಖರತೆ ಎಂಬುದರ ಬಗ್ಗೆ ಯಾವುದೇ ಸಾಕ್ಷಿಗಳು ಇಲ್ಲ. ಹಾಗೆ ನಂಬಲು ಸಾಧ್ಯವಿಲ್ಲ.
ಕೆಲವು ಆನ್ಲೈನ್ ಮಾಧ್ಯಮಗಳು ಸಹ ಹಲವು ಸೆಲೆಬ್ರಿಟಿಗಳ ಫೋಟೋಗಳನ್ನು ಅಪ್ಲೋಡ್ ಮಾಡಿ ಅಪ್ಲಿಕೇಶನ್ ನೀಡುವ ವಿವಿಧ ವಯಸ್ಸಿನ ಫೋಟೋ ರಿಸಲ್ಟ್ ಅನ್ನು ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ಆದರೆ ಅದು ನೀಡುವ ರಿಸಲ್ಟ್ ನಿಖರತೆ ಬಗ್ಗೆ 2/10, 6/10, 4/10 ಹೀಗೆ ರೇಟಿಂಗ್ ನೀಡಲಾಗಿದೆ.
FaceApp ಹೊಸದೇನಲ್ಲ
ಅಂದಹಾಗೆ ಫೇಸ್ಆಪ್ ಇತ್ತೀಚೆಗೆ ಬಂದ ಹೊಸ ಅಪ್ಲಿಕೇಶನ್ ಅಲ್ಲ. ಇದು ಎರಡು ವರ್ಷಗಳ ಹಿಂದೆಯೇ 2017 ರಲ್ಲಿ ಅಭಿವೃದ್ಧಿಯಾಗಿತ್ತು. ಒಂದು ಜನಾಂಗೀಯ ನೋಟವನ್ನು ಮತ್ತೊಂದು ಜನಾಂಗೀಯತೆಗೆ ಬದಲಿಸಿ ತೋರಿಸುವ ಆಪ್ ಆಗಿತ್ತು. ಈ ಫೀಚರ್ನ ಕಾರಣದಿಂದಲೇ ಬಹುಬೇಗ ಕೈಬಿಡಲಾಗಿತ್ತು.
FaceApp ನೀಡುವ ಸೇವೆಯನ್ನು ಹಲವು ಆಪ್ಗಳು ನೀಡುತ್ತವೆ. 20 ಕ್ಕೂ ಹೆಚ್ಚು ಮೊಬೈಲ್ ಅಪ್ಲಿಕೇಶನ್ಗಳು ಫೇಸ್ಆಪ್ ನಲ್ಲಿರುವ ಹಲವು ಫೀಚರ್ಗಳನ್ನು ಹೊಂದಿವೆ. ಉದಾಹರಣೆಗೆ ModiFace, Beard Photo Editor, OldBooth, LOL Movie, Face Swap, Oldify ಇತ್ಯಾದಿ.
ಫೋಟೋ, ನಿಮ್ಮ ಬರಹಗಳು, ವಿಡಿಯೋ, ಯಾವುದನ್ನೇ ಶೇರ್ ಮಾಡಿದರು ಅದು ಇತರೆ ಸಾರ್ವಜನಿಕರು ನೋಡಬಹುದು. ಇದಕ್ಕೆ ನಿಮಗೆ ಯಾವುದೇ ಪರಿಹಾರ ಸಿಗುವುದಿಲ್ಲ. ಕಾರಣ ಆಪ್ ಡೌನ್ಲೋಡ್ ಮಾಡುವ ಸಂದರ್ಭದಲ್ಲೇ ಆಪ್ನ ಎಲ್ಲಾ ಸೇವೆಗಳಿಗೆ ನಿಯಮಗಳು ಮತ್ತು ಷರತ್ತುಗಳಿಗೆ ‘Agree’ ಎಂಬುದನ್ನು ಕ್ಲಿಕ್ ಮಾಡಿ ಒಪ್ಪಿಗೆಯನ್ನು ನೀಡಿರುತ್ತೀರಿ.
ಕ್ಷಣ ಮಾತ್ರದ ಬಳಕೆಗೆ ರಷ್ಯಾ ಕಂಪನಿಗೇಕೆ ನಮ್ಮ ಮಾಹಿತಿ ಶೇರ್ ಮಾಡಬೇಕು? ಈ ಪ್ರಶ್ನೆಗೆ ನಿಮ್ಮ ಉತ್ತರವನ್ನು ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ..