Home » ಮೇ ತಿಂಗಳಲ್ಲಿ ಭೇಟಿನೀಡಲು ಭಾರತದಲ್ಲಿರುವ ಅತ್ಯಾಕರ್ಷಣೀಯ ಸ್ಥಳಗಳು ಇವು..!

ಮೇ ತಿಂಗಳಲ್ಲಿ ಭೇಟಿನೀಡಲು ಭಾರತದಲ್ಲಿರುವ ಅತ್ಯಾಕರ್ಷಣೀಯ ಸ್ಥಳಗಳು ಇವು..!

by manager manager

ಆರಂಭಿಕ ಬೇಸಿಗೆ, ವಿಶೇಷವಾಗಿ ಮೇ ತಿಂಗಳಲ್ಲಿ ಭಾರತದಲ್ಲಿಯ ಗಿರಿಧಾಮಗಳಿಗೆ ಪ್ರಯಾಣಿಸುವುದು ಸೂಕ್ತ ಸಮಯ. ಈ ಸಂದರ್ಭದಲ್ಲಿ ಟ್ರಾವೆಲ್ ಮಾಡುವುದು ಆಹ್ಲಾದಕರ ಅನುಭವ ನೀಡುತ್ತದೆ. ಚಳಿಗಾಲದ ಶೀತ ಮತ್ತು ಬೇಸಿಗೆಯ ಉಷ್ಣತೆ ಎರಡು ಸಹ ಉತ್ತಮ ಅನುಭವ ನೀಡುತ್ತವೆ. ಒತ್ತಡದ ಜೀವನ ಶೈಲಿಯಿಂದ ತಮ್ಮ ಮನಸ್ಸನ್ನು ಪುನರ್‌ಯೌವನಗೊಳಿಸಿಕೊಳ್ಳಲು, ತಮ್ಮ ಅಲೆದಾಡುವ ಪ್ರವೃತ್ತಿಯನ್ನು ಸಂಪೂರ್ಣಗೊಳಿಸಲು, ಮೇ ತಿಂಗಳಲ್ಲಿ ಭಾರತದಲ್ಲಿ ಭೇಟಿ ನೀಡಬಹುದಾದ 13 ಅದ್ಭುತ ಮತ್ತು ಸಮ್ಮೋಹನಗೊಳಿಸುವ ಸ್ಥಳಗಳ ಬಗ್ಗೆ ಮಾಹಿತಿ ಇಲ್ಲಿದೆ.

ತವಾಂಗ್

ಅರುಣಾಚಲ ಪ್ರದೇಶದ ಈ ಆಕರ್ಷಣೀಯ ಪಟ್ಟಣವು 2,669 ಮೀಟರ್ ಎತ್ತರದಲ್ಲಿದೆ ಮತ್ತು ಹಿಮಾಲಯದ ತಪ್ಪಲಿನಲ್ಲಿದೆ. ವರ್ಷದ ಬಹುಪಾಲು ಸಮಯ ಹೊಳೆಯುವ ಹಿಮದಿಂದ ಆವೃತ್ತವಾಗಿರುತ್ತದೆ. ತವಾಂಗ್ ವಿಲಕ್ಷಣವಾದ ಸೊಬಗನ್ನು ಹೊಂದಿದ್ದು, ತನ್ನ ಪ್ರಾಚೀನ ವೈಭವದಿಂದ, ಹರಿಯುವ ಜರಿಗಳಿಂದ, ಆಳವಾದ ಕಣಿವೆಗಳು ಮತ್ತು ಪರ್ವತ ಶ್ರೇಣಿಗಳ ತಪ್ಪಲಿನಲ್ಲಿನ ಗಾಜಿನಂಥ ಸರೋವರಗಳಿಂದ ಸುತ್ತುವರೆದಿದ್ದು, ಭಾರತದಲ್ಲಿ ಮೇ ತಿಂಗಳಲ್ಲಿ ಭೇಟಿ ನೀಡಲು ಅತ್ಯುತ್ತಮ ಸ್ಥಳವಾಗಿದೆ. ಇಲ್ಲಿ ವಾಸಿಸುವ ಹೆಚ್ಚಿನವರು ಬೌದ್ಧರೇ ಆಗಿದ್ದು, ಇಲ್ಲಿನ ಬೀದಿಗಳಲ್ಲಿ ಮಠಗಳಿವೆ. ಚಾರಣದ ಸಮಯದಲ್ಲಿ ತಾಶಿ ಡೆಲೆಕ್‌ನ ಪಿಸುಮಾತು ಕಣಿವೆಯ ಉದ್ದಕ್ಕೂ ಕೇಳಬಹುದು, ಆನಂದಮಯವಾದ ಚಾರಣ ಮಾಡಬಹುದು.

ಹೋಗುವುದು ಹೇಗೆ: ಅಸ್ಸಾಂನ ತೇಜ್ಪುರ್ ತವಾಂಗ್‌ ಗೆ ಹತ್ತಿರದ ಪ್ರಮುಖ ಸಾರಿಗೆ ಕೇಂದ್ರ ಸ್ಥಳ. ಇಲ್ಲಿಗೆ ರೈಲು, ವಿಮಾನ ಮತ್ತು ರಸ್ತೆ ಮಾರ್ಗವಾಗಿಯೂ ತಲುಪಬಹುದು. ತೇಜ್ಪುರದಿಂದ, ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು ನಿಯಮಿತವಾಗಿ ಚಲಿಸುತ್ತವೆ, ಕಾರುಗಳನ್ನು ಬಾಡಿಗೆಗೆ ನೇಮಿಸಿಕೊಳ್ಳಬಹುದು.

ಪಚ್ಮರ್ಹಿ

ಪಚ್ಮರ್ಹಿ ಮಧ್ಯಪ್ರದೇಶದಲ್ಲಿನ ಏಕೈಕ ಗಿರಿಧಾಮವಾಗಿದ್ದು, ಭಾರತದಲ್ಲಿ ಮೇ ತಿಂಗಳಲ್ಲಿ ಭೇಟಿ ನೀಡಬಹುದಾದ ಉತ್ತಮ ಸ್ಥಳ. ಸಾತ್ಪುರ ಬೆಟ್ಟ ಶ್ರೇಣಿಯಲ್ಲಿನ ಕಡಿಮೆ ಎತ್ತರ ಪ್ರದೇಶದಲ್ಲಿದ್ದು, ಪಚ್ಮರ್ಹಿ ಅತ್ಯುನ್ನತ ಶಿಖರಗಳು ಮತ್ತು ಅರಣ್ಯ ಕಮರಿಗಳ ಹಸಿರು ಕಂಬಳಿಯಾಗಿದೆ. ಆಕರ್ಷಕ ಶಿಲಾ ಕೆತ್ತನೆಯ ಪೂರ್ವ-ಐತಿಹಾಸಿಕ ಗುಹೆಗಳು, ಮತ್ತು ಮೋಹಕವಾದ ಜಲಪಾತಗಳನ್ನು ಹೊಂದಿದೆ. ಪಚ್ಮರ್ಹಿ ವಿಲಕ್ಷಣವಾದ ದಟ್ಟವಾದ ಕಾಡುಗಳಿಂದ ಕೂಡಿರುವ ಸುಂದರವಾದ ಸ್ಥಳವಾಗಿದ್ದು, ಪಾದಯಾತ್ರೆ ಮತ್ತು ಚಾರಣ ಮಾರ್ಗಗಳನ್ನು ಹೊಂದಿದೆ. ಹಲವು ವನ್ಯಜೀವಿಧಾಮಗಳಾದ ಸಾತ್ಪುರ ಹುಲಿ ಸಂರಕ್ಷಿತ ವನ್ಯಜೀವಿಧಾಮ, ಬೈಸನ್ ಲಾಡ್ಜ್‌ ನಂತಹ ಹಲವು ಅಭಯಾರಣ್ಯಗಳು ವನ್ಯಜೀವಿ ಉತ್ಸಾಹಿಗಳಿಗೆ ಚಾರಣ ಮಾಡಲು ಸೂಕ್ತ ಆಯ್ಕೆಯಾಗಿವೆ.

ಹೋಗುವುದು ಹೇಗೆ: ಪಚ್ಮರ್ಹಿಗೆ ರಸ್ತೆ ಸಾರಿಗೆ ಮತ್ತು ರೈಲ್ವೆ ಮೂಲಕ ಸುಲಭವಾಗಿ ಪ್ರಯಾಣಿಸಬಹುದು. ಪಿಪರಿಯಾ ರೈಲ್ವೆ ಸ್ಟೇಷನ್ ಪಚ್ಮರ್ಹಿಗೆ ತುಂಬಾ ಹತ್ತಿರ. ಭೂಪಾಲ್ ಮತ್ತು ಜಬಲ್‌ಪುರ್ ಹತ್ತಿರದ ವಿಮಾನ ನಿಲ್ದಾಣಗಳು.

ಧರ್ಮಶಾಲಾ

ಹಿಮಾಚಲ ಪ್ರದೇಶದ ಹಿಮಾಲಯ ಪರ್ವತಗಳ ವಿಸ್ಮಯಕಾರಿ ಹಿನ್ನೆಲೆ ಹೊಂದಿರುವ ಧರ್ಮಶಾಲಾ ಪವಿತ್ರತೆಯಿಂದ ಸಿಂಗರಿಸಲ್ಪಟ್ಟಿದೆ. ‘ಮಿನಿ ಟಬೆಟ್‌’ ನಂತಿರುವ, ಧರ್ಮಶಾಲಾ ಭಾರತದ ಗಡಿ ಪ್ರದೇಶದಲ್ಲಿದ್ದು ಟಿಬೆಟಿಯನ್‌ ಸರ್ಕಾರಕ್ಕೆ ಒಳಪಟ್ಟಿದೆ. ವರ್ಣರಂಜಿತ ಟಿಬೆಟಿಯನ್‌ ಪ್ರಾರ್ಥನಾ ಬಾವುಟಗಳು ಟಿಬೆಟ್ ಗೆ ಒಳಪಟ್ಟಿರುವುದರ ನಿರ್ಣಾಯಕ ಅಂಶವಾಗಿದೆ. ಈ ಪಟ್ಟಣವು ಹೆಚ್ಚು ನಳನಳಿಸುವ ಸೌಂದರ್ಯ ಪ್ರತಿರೂಪವಾದ ಮೆಕ್‌ ಲಿಯೋಡ್ಗಂಜ್ ಗೆ ಕೊನೆಯಾಗಿದೆ. ಪಿಸುಗುಟ್ಟುವ ಪೇಟೆ, ವಸ್ತುಸಂಗ್ರಹಾಲಯ ಮತ್ತು ಮಠಗಳೊಂದಿಗೆ, ಧರ್ಮಶಾಲಾ ಏಕಾಂಗಿ ಪ್ರಯಾಣಿಕ ಮತ್ತು ಹೆಚ್ಚು ಬ್ಯಾಕ್‌ಪ್ಯಾಕ್‌ ಹೊಂದುವವರಿಗೆ ಸೂಕ್ತ ತಾಣವಾಗಿದ್ದು, ಭಾರತದಲ್ಲಿ ಮೇ ತಿಂಗಳಲ್ಲಿ ಭೇಟಿ ನೀಡಲು ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ಧರ್ಮಶಾಲಾ ವಿಶ್ರಾಂತಿ ಪಡೆಯಲು ಮತ್ತು ಮಾನಸಿಕ ಒತ್ತಡ ಹೋಗಲಾಡಿಸುವ ಸ್ಥಳ. ಯೋಗ, ಆಧ್ಯಾತ್ಮಿಕ ಏಕಾಂತ ಮತ್ತು ಧ್ಯಾನಕ್ಕೆ ಪ್ರಮುಖ ಕೇಂದ್ರ, ಮತ್ತು ಹೆಚ್ಚು ವಿದೇಶಿ ಪ್ರವಾಸಿಗರು ಭೇಟಿ ನೀಡುವ ಸ್ಥಳ.

ಹೋಗುವುದು ಹೇಗೆ: ದೆಹಲಿ, ಶಿಮ್ಲಾ ಮತ್ತು ಡೆಹ್ರಾಡೂನ್‌ ಗಳಿಂದ ನಿಯಮಿತವಾದ ಬಸ್ಸುಗಳು ಹೋಗುತ್ತವೆ.

ಊಟಿ

ವಸಹಾತುಶಾಹಿ ಸೊಬಗಿನಿಂದ ಅಲಂಕರಿಸಲ್ಪಟ್ಟ ಊಟಿ ಸುಂದರವಾದ ನೀಲಗಿರಿ ಬೆಟ್ಟಗಳ ತಪ್ಪಲಿನಲ್ಲಿ ನೆಲೆಸಿರುವ ಆನಂದದಾಯಕ ಪಟ್ಟಣವಾಗಿದೆ. ಬೆಟ್ಟ ಪ್ರದೇಶದಲ್ಲಿನ ಊಟಿಯ ಸೌಂದರ್ಯ ಅದರ ಐಷರಾಮಿ ವರವಾಗಿದೆ. ಪ್ರವಾಸಿಗರು ತಮ್ಮ ಮಾನಸಿಕ ಒತ್ತಡವನ್ನು ತೊಡೆದುಹಾಕಿ ಪುನರ್‌ಯೌವ್ವನಗೊಳ್ಳಲು ಇದೊಂದು ಸುಂದರವಾದ ತಾಣವಾಗಿದ್ದು, ಮೇ ತಿಂಗಳಲ್ಲಿ ಭಾರತದಲ್ಲಿ ಭೇಟಿ ನೀಡಲು ಸೂಕ್ತ ಸ್ಥಳ. ದೊಡ್ಡಬೆಟ್ಟದ ತುದಿ ಮತ್ತು ಹುಲಿ ಗುಡ್ಡದ ಮನಮೋಹಕ ಆಕರ್ಷಣೆಯಿಂದ, ಜಲಪಾತಗಳು ಮತ್ತು ಸರೋವರಗಳಿಂದ ಊಟಿ ಮೋಡಿಮಾಡುತ್ತದೆ. ಸುಂದರವಾದ ಗುಡಿಸಲು ಹಿಂಭಾಗದ ಕಾಲುದಾರಿಗಳು, ಬೆಟ್ಟದ ಇಳಿಜಾರುಗಳಲ್ಲಿನ ಚಹಾ ತೋಟಗಳು, ವ್ಯವಸ್ಥಿತವಾದ ಬೊಟಾನಿಕಲ್ ಗಾರ್ಡೆನ್‌ಗಳು ಮತ್ತು ಹೂವಿನ ಕೃಷಿ ಊಟಿಯ ಸೌಂದರ್ಯವನ್ನು ಹೆಚ್ಚಿಸಿವೆ.

ಹೋಗುವುದು ಹೇಗೆ: ರಸ್ತೆ ಮೂಲಕ ಸುಲಭವಾಗಿ ತಲುಪಬಹುದು. ಊಟಿಗೆ ಕೊಯಮತ್ತೂರು ವಿಮಾನ ನಿಲ್ದಾಣ ಮತ್ತು ಮೆಟ್ಟುಪಾಳ್ಯಂ ರೈಲ್ವೆ ನಿಲ್ದಾಣಗಳು ಹತ್ತಿರದಲ್ಲಿವೆ.

ಗುಲ್ಮಾರ್ಗ್‌

ಮೇ ತಿಂಗಳಲ್ಲಿ ಭಾರತದಲ್ಲಿ ಭೇಟಿ ನೀಡಬಹುದಾದ ಸೂಕ್ತ ಸ್ಥಳಗಳಲ್ಲಿ ಒಂದಾದ ಗುಲ್ಮಾರ್ಗ್‌ ಬೇಸಿಗೆಯಲ್ಲಿ ಪೂರ್ಣವಾಗಿ ಹಚ್ಚ ಹಸಿರಾಗಿರುವ ಹುಲ್ಲುಗಾವಲುಗಳಿಂದ ಅಲಂಕರಿಸಲ್ಪಡುತ್ತದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನೆಲೆಸಿರುವ ಈ ಗಿರಿಧಾಮವು ಸಮುದ್ರ ಮಟ್ಟದಿಂದ 2730 ಮೀಟರ್ ಎತ್ತರದಲ್ಲಿದ್ದು, ಎಲ್ಲಾ ಕಡೆಗಳಲ್ಲು ಉನ್ನತ ಹಿಮಾಲಯ ಪರ್ವತಗಳಿಂದ ಆವೃತವಾಗಿದೆ. ಈ ಸ್ಥಳವು ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ, ಹಾಗೂ ಮೊಘಲರ ಕಾಲದಿಂದಲೂ ಬೇಸಿಗೆಯ ಜನಪ್ರಿಯ ತಾಣವಾಗಿದ್ದು, ಬ್ರಿಟಿಷ್ ರಾಜ್‌ ಸಮಯದಲ್ಲಿ ಕೆಲವು ಹಸ್ತಕ್ಷೇಪಕ್ಕೆ ಒಳಗಾಗಿತ್ತು. ಹಸಿರಿನಿಂದ ಕೂಡಿದ ಕೋನಿಫೆರಸ್ ಕಾಡುಗಳಲ್ಲಿ ಶ್ರೀಮಂತ ಪ್ರಾಣಿಗಳು, ಅದ್ಭುತವಾದ ಸರೋವರಗಳು ಮತ್ತು ಹಚ್ಚ ಹಸಿರಿನ ಹುಲ್ಲುಗಾವಲು ಪ್ರದೇಶದ ವಿಶ್ವದ ಎರಡನೇ ಅತ್ಯುನ್ನತ ಗಾಲ್ಫ್‌ ಕೋರ್ಸ್‌ನಿಂದ ಸುತ್ತುವರೆದಿರುವ ಗುಲ್ಮಾರ್ಗ್, ಅತ್ಯಂತ ಸವಾಲಿನ ಮತ್ತು ಉತ್ತಮವಾದ ಇನ್ನು ಕಂಡುಹಿಡಿಯದ ಚಾರಣ ಮಾರ್ಗಗಳನ್ನು ಹೊಂದಿದೆ.

ಹೋಗುವುದು ಹೇಗೆ: ಗುಲ್ಮಾರ್ಗ್‌ ತಲುಪಲು ರಸ್ತೆ ಮಾರ್ಗ ಉತ್ತಮವಾದದು. ಶ್ರೀನಗರ ವಿಮಾನ ನಿಲ್ದಾಣ ಮತ್ತು ಜಮ್ಮು ರೈಲ್ವೆ ಸ್ಷೇಷನ್ ಗುಲ್ಮಾರ್ಗ್‌ಗೆ ಹತ್ತಿರದಲ್ಲಿವೆ.

ಮೌಂಟ್ ಅಬು

ರಾಜಸ್ಥಾನದಲ್ಲಿರುವ ಏಕೈಕ ಬೆಟ್ಟ ಪ್ರದೇಶ ಮೌಂಟ್ ಅಬು ಭಾರತದಲ್ಲಿ ಮೇ ತಿಂಗಳಲ್ಲಿ ಪ್ರವಾಸಕ್ಕೆ ಹೋಗಲು ಸೂಕ್ತವಾದ ಸ್ಥಳಗಳಲ್ಲಿ ಒಂದಾಗಿದೆ. ಮೌಂಟ್‌ ಅಬು ಗ್ರಾನೈಟ್‌ನಿಂದ ಮಾಡಿದ ಶಿಖರದ ಮೇಲಿದೆ. ಮೌಂಟ್ ಅಬು ವನ್ಯಜೀವಿ ಅಭಯಾರಣ್ಯ ಹಚ್ಚ ಹಸಿರಿನ ಕಾಡುಗಳಿಂದ ಸುತ್ತುವರಿದಿದ್ದು, ವಿವಿಧ ಜಾತಿಯ ಸಸ್ಯವರ್ಗ ಮತ್ತು ಪ್ರಾಣಿಗಳ ಸಂರಕ್ಷಿತ ಪ್ರದೇಶವಿದೆ. ಗುಡ್ಡ ಪ್ರದೇಶದಲ್ಲಿನ ಈ ಪಟ್ಟಣವು ಶುಷ್ಕ ವಾಯುವ್ಯ ಭಾರತದ ಬಿರು ಬೇಸಿಗೆಯ ಸೂರ್ಯನಿಂದ ಪಾರಾಗಿದ್ದು ಸಂರಕ್ಷಿತವಾಗಿದೆ, ವಿದೇಶಿ ಪ್ರಯಾಣಿಕರಿಗೆ ಹೆಚ್ಚು ಜನಪ್ರಿಯ ಸ್ಥಳ. ಡೆಲ್ವಾರದ ಖ್ಯಾತ ಜೈನ ದೇವಾಲಯಗಳ ಜೊತೆಗೆ 80ಕ್ಕೂ ಹೆಚ್ಚು ಕೆತ್ತಿದ ಪ್ರಾಚೀನ ದೇವಾಲಯಗಳನ್ನು ಒಳಗೊಂಡಿರುವ ಮೌಂಟ್ ಅಬು, ಜೈನರಿಗೆ ಮತ್ತು ಹಿಂದುಗಳಿಗೆ ಪವಿತ್ರ ಸ್ಥಳವಾಗಿದೆ. ನಕ್ಕಿ ಸರೋವರವು ಇಲ್ಲಿನ ಸೌಂದರ್ಯ ಮೋಡಿಯನ್ನು ಹೆಚ್ಚಿಸಿರುವ ಮತ್ತೊಂದು ಸ್ಥಳ.

ಹೋಗುವುದು ಹೇಗೆ: ಮೌಂಟ್‌ ಅಬುಗೆ ಅಬು ರಸ್ತೆ ಹತ್ತಿರದ ರೈಲ್ವೆ ನಿಲ್ದಾಣ. ಇಲ್ಲಿಗೆ ರಾಜಸ್ಥಾನ ರಾಜ್ಯ ರಸ್ತೆ ಸಾರಿಗೆಯ ಬಸ್ಸುಗಳ ಮೂಲಕ ಸುಲಭವಾಗಿ ತಲುಪಬಹುದು.

ಅಲ್ಮೋರ

ಉತ್ತರಖಂಡದ ಕುಮಾವೂನ್ ಪರ್ವತ ಶ್ರೇಣಿಯಲ್ಲಿರುವ ಅಲ್ಮೋರ, ಹಿಮಾಲಯದಲ್ಲಿ ನೆಲೆಸಿರುವ ವಿಶ್ರಾಂಶ ನಗರ. ಈ ಪಟ್ಟಣವು ಪ್ರತಿ ಮೂಲೆ ಮೂಲೆಯಲ್ಲಿರುವ ಹಳೆಯ ದೇವಾಲಯಗಳಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕತೆಯ ಸೆಳೆತ ಹೊಂದಿದೆ. ಸಾಂಪ್ರದಾಯಿಕ ಮಾರುಕಟ್ಟೆಗಳೊಂದಿಗೆ ಅಲ್ಮೋರದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಜೀವಂತವಾಗಿ ಉಳಿಸಿಕೊಳ್ಳಲಾಗಿದೆ. ಪೈನ್ ಮತ್ತು ಫಿರ್ ಮರಗಳಿಂದ ಸುತ್ತುವರಿದ ದಟ್ಟವಾದ ಕೋನಿಫೆರಸ್ ಅರಣ್ಯದಿಂದ ಆವೃತ್ತವಾಗಿದ್ದು, ಅಲ್ಮೋರ ಹಿಮಾಲಯದ ನಯನಮನೋಹರ ನೋಟವನ್ನು ನೀಡುತ್ತದೆ. ಪಟ್ಟಣವು ವರ್ಣರಂಜಿತವಾದ ಅಗತ್ಯ ಅಲಂಕೃತವಾದ ಇಳಿಜಾರಿನಲ್ಲಿನ ಮನೆಗಳು, ಬಣ್ಣಬಣ್ಣದ ಉಡುಪುಗಳು ಮತ್ತು ಕರಕುಶಲ ವಸ್ತುಗಳು ಇಲ್ಲಿವೆ. ಶಾಂತ ವಾತಾವರಣದೊಂದಿಗೆ ಸುಂದರವಾಗಿರುವ ಅಲ್ಮೋರ ದೈಹಿಕ ಮತ್ತು ಮಾನಸಿಕ ಎನರ್ಜಿ ಬೂಸ್ಟ್‌ಗಾಗಿ ಮೇ ತಿಂಗಳಲ್ಲಿ ಭಾರತದಲ್ಲಿ ಭೇಟಿ ನೀಡಬಹುದಾದ ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ.

ಹೋಗುವುದು ಹೇಗೆ: ರಸ್ತೆ ಮಾರ್ಗದಲ್ಲಿ, ಬಸ್ಸಗಳು ಮತ್ತು ಕಾರುಗಳು, ಹಾಗೂ ದೆಹಲಿ ಮತ್ತು ಡೆಹ್ರಾಡೂನ್ ನಿಂದ ರೈಲಿನ ಮೂಲಕವು ಸುಲಭವಾಗಿ ಪ್ರವಾಸ ಮಾಡಬಹುದು. ಕಾತ್ಗೊಡಂ ಅಲ್ಮೋರಗೆ ಹತ್ತಿರದ ರೈಲ್ವೆ ನಿಲ್ದಾಣ.

ಚಿರಾಪುಂಜಿ

ಮೇಘಾಲಯ ಪ್ರಸ್ಥಭೂಮಿಯಲ್ಲಿರುವ ಚಿರಾಪುಂಜಿ ಹಿಂದೆ ಸೊಹ್ರಾ ಎಂದೇ ಜನಪ್ರಿಯವಾಗಿತ್ತು. ಇದು ಭೂಮಿಯ ಎರಡನೇ ಅತ್ಯಂತ ಹೆಚ್ಚು ತೇವಾಂಶ ಸ್ಥಳವಾಗಿದೆ. ಹಚ್ಚ ಹಸಿರಿನ ಹೊದಿಕೆಯಿಂದ ಸುತ್ತುವರೆದಿರುವ ಈ ಪಟ್ಟಣವನ್ನು ದೂರದಲ್ಲಿರುವ ಸಮತಟ್ಟಾದ ಬಾಂಗ್ಲಾದೇಶದ ಬಯಲು ಪ್ರದೇಶದಿಂದ ನೋಡಬಹುದು. ಮಾನ್ಸೂನ್ ಮಾರುತಗಳು ಮಳೆ ಸುರಿಸುವ ಮೂಲಕ ಸೊಹ್ರಾಗೆ ಹೊಸ ಬಣ್ಣವನ್ನು ತುಂಬುವ ಮೂಲಕ ದೃಶ್ಯಾವಳಿಗಳಿಗೆ ನಾಟಕೀಯ ಅಂಶವನ್ನು ಸೇರಿಸುತ್ತದೆ. ಆದ್ದರಿಂದ ಮೇ ತಿಂಗಳಲ್ಲಿ ಚಿರಾಪುಂಜಿಗೆ ಭೇಟಿ ನೀಡುವುದು ಸೂಕ್ತ. ನೊಹ್ಕಾಲಿಕೈ ಜಲಪಾತವು ಕಾಡುವ ಸೌಂದರ್ಯ ಹೊಂದಿದೆ. ವಿಶ್ವ ಪ್ರಸಿದ್ಧ ಡೈಂಥೆನ್ ಜಲಪಾತವು ವೈಭವ ನೋಟವನ್ನು ಹೊಂದಿದ್ದು, ಮೇಘಾಲಯದ ಅತಿ ಎತ್ತರದ ಕೈನ್ರೆಮ್ ಜಲಪಾತದ ಜೊತೆಗೆ ಅದ್ಭುತವಾಗಿ ಉಳಿದಿದೆ. ಚಿರಾಪುಂಜಿಯ ಪ್ರಮುಖ ಆಕರ್ಷಣೆ ನೈಸರ್ಗಿಕ ಗುಹೆಗಳು. ಆದಾಗ್ಯೂ ಆಳವಾದ ಕಮರಿಗಳ ಉದ್ದಕ್ಕೂ ಹರಿಯುವ ಪರ್ವತ ತೊರೆಗಳಿಗೆ ಅಡ್ಡಲಾಗಿರುವ ‘ಮೂಲ ಸೇತುವೆಗಳು’ ಸಹ ಮೋಹಕ ದೃಶ್ಯವನ್ನು ನೀಡುತ್ತವೆ.

ಹೋಗುವುದು ಹೇಗೆ: ಶಿಲ್ಲಾಂಗ್‌ನಿಂದ ರಸ್ತೆ ಮಾರ್ಗದಲ್ಲಿ ಸುಲಭವಾಗಿ ತಲುಪಬಹುದು. ಹತ್ತಿರದ ವಿಮಾನ ನಿಲ್ದಾಣ ಗುವಾಹಟಿ ಮತ್ತು ರೈಲ್ವೆ ನಿಲ್ದಾಣ ಅಸ್ಸಾಂ.

ಮಹಬಲೇಶ್ವರ

ಮಹಾರಾಷ್ಟ್ರದಲ್ಲಿ ನೆಲೆಗೊಂಡಿರುವ ಮಹಬಲೇಶ್ವರ ಸುಂದರವಾದ ಗಿರಿಧಾಮ. ನೇತಾಡುವ ಮೋಡಗಳು, ಮಂಜಿನಿಂದ ಆವೃತವಾದ ಪ್ರದೇಶ, ಹಚ್ಚ ಹಸಿರಿನ ಕಾಡಿನ ಹೊದಿಕೆಯನ್ನು ಇಲ್ಲಿ ಕಾಣಬಹುದು. ವಸಾಹತುಶಾಹಿ ಯುಗದ ವಾಸ್ತುಶಿಲ್ಪದಲ್ಲಿ ಶ್ರೀಮಂತ ರಾಜಪ್ರಭುತ್ವ ಪ್ರತಿಬಿಂಬಿತವಾಗಿರುವುದನ್ನು ಈ ಪಟ್ಟಣದಲ್ಲಿ ನೋಡಬಹುದು. ಮಹಾಬಲೇಶ್ವರ ಮಾಂತ್ರಿಕ ನೋಟವನ್ನು ಹೊಂದಿದೆ. ಪಟ್ಟಣದ ರಮಣೀಯ ಸೌಂದರ್ಯ ಸೆಳೆತವು ಐದು ನದಿಗಳ ಪ್ರಭಾವದಿಂದಾಗಿದ್ದು, ಭವ್ಯವಾದ ಪಶ್ಚಿಮ ಘಟ್ಟಗಳಲ್ಲಿ ನೆಲೆಸಿದೆ. ಸೂರ್ಯೋದಯ ಮತ್ತು ಸೂರ್ಯಾಸ್ತದ ಅದ್ಭುತ ನೋಟ, ಟ್ರೆಕ್ಕಿಂಗ್ ಹಾದಿಗಳು, ಕುದುರೆ ಸವಾರಿ ಮಾರ್ಗಗಳು ಮತ್ತು ನದಿಗಳಲ್ಲಿ ದೋಣಿ ವಿಹಾರ, ಮಹಬಲೇಶ್ವರ ಧ್ಯಾನಕ್ಕೆ ಅನುವು ಮಾಡಿಕೊಡುವ ಏಕಾಂತತೆ, ಎಲ್ಲಾ ವಿಷಯಗಳಿಂದ ಮೇ ತಿಂಗಳಲ್ಲಿ ಭಾರತಕ್ಕೆ ಭೇಟಿ ನೀಡಲು ಅತ್ಯುತ್ತಮ ಸ್ಥಳಗಳಲ್ಲಿ ಇದು ಒಂದಾಗಿದೆ.

ಹೋಗುವುದು ಹೇಗೆ: ಪುಣೆ ಮೂಲಕ ಆರಾಮದಾಯಕವಾಗಿ ತಲುಪಬಹುದು. ಪುಣೆ ಹತ್ತಿರದ ವಿಮಾನ ನಿಲ್ದಾಣವಾಗಿದೆ. ವಥಾರ್ ಹತ್ತಿರದ ರೈಲ್ವೆ ನಿಲ್ದಾಣವಾಗಿದೆ.

ಔಲಿ

ಉತ್ತರಾಖಂಡದಲ್ಲಿರುವ ಔಲಿ ಭಾರತದಲ್ಲಿ ಮೇ ತಿಂಗಳಲ್ಲಿ ಭೇಟಿ ನೀಡಬಹುದಾದ ಸುಂದರ ತಾಣ ಮತ್ತು ಪರಿಸರ ಪ್ರೇಮಿಗಳಿಗೆ ಈ ಸ್ಥಳ ಹೆಚ್ಚು ಜನಪ್ರಿಯ. ವರ್ಷ ಪೂರ್ತಿ ಈ ಪ್ರದೇಶ ಮಂಜಿನಿಂದ ಆವೃತವಾಗಿರುತ್ತದೆ. ಔಲಿ ಸ್ಕೈ ರೆಸಾರ್ಟ್‌ಗಳಿಗೆ ವಿಶ್ವ ಪ್ರಸಿದ್ಧವಾಗಿದೆ. ಸಾಹಸಿಗರ ಅಡ್ಡವಾದ ಔಲಿಯೂ ಮಂಜುಗೆಡ್ಡೆ ಮೇಲಿನ ಹಲವು ಕ್ರೀಡೆಗಳಾದ ರಾಕ್‌ ಕ್ಲೈಂಬಿಂಗ್, ಜಲಪಾತ ರಾಪ್ಪೆಲಿಂಗ್, ಇತ್ಯಾದಿ ವೈಜ್ಞಾನಿಕ ವ್ಯವಸ್ಥೆ ಹೊಂದಿದೆ. ಉಸಿರು ಹೆಚ್ಚಿಸುವ ನಾಗ ಪರ್ಬತ್, ನಂದಾ ದೇವಿ ನೋಟದ ಜೊತೆಗೆ, ಛಾಯಾಗ್ರಾಹಕನಿಗೆ ಹೆಚ್ಚು ಖುಷಿ ಕೊಡುವ ತಾಣವು ಹೌದು. ಬೇಸಿಗೆಯಲ್ಲಿ ಓಕ್ ಮತ್ತು ಡಿಯೋಡರ್ ಅರಣ್ಯದ ತಗ್ಗು ಪ್ರದೇಶಗಳು ಹಚ್ಚ ಹಸಿರು ಬಣ್ಣಕ್ಕೆ ತಿರುಗುತ್ತವೆ, ಆ ಸಮಯದಲ್ಲಿ ಚಾರಣದ ದಾರಿಗಳು ಈ ಪ್ರದೇಶವನ್ನು ಮೀರಿಸುತ್ತವೆ ಮತ್ತು ಕ್ಯಾಂಪಿಂಗ್‌ಗೆ ಇದು ಸೂಕ್ತವಾದ ಸ್ಥಳವಾಗಿದೆ.

ಹೋಗುವುದು ಹೇಗೆ: ರಸ್ತೆ ಮಾರ್ಗದಲ್ಲಿ ಹೋಗಬಹುದು. ಡೆಹ್ರಾಡೂನ್ ಹತ್ತಿರದ ವಿಮಾನ ನಿಲ್ದಾಣ.

ಮನಾಲಿ

ಕುಲ್ಲು ಕಣಿವೆ ತಪ್ಪಲಿನಲ್ಲಿ ಮತ್ತು ಪರ್ವತ ರೋಹಿಗಳಿಗೆ ಎನರ್ಜಿ ನೀಡುವ ಪರ್ವತ ಸಾಲುಗಳಲ್ಲಿ ನೆಲೆಸಿರುವ ಮನಾಲಿ, ಬ್ಯಾಕ್‌ಪ್ಯಾಕರ್‌ಗಳಿಗೆ ಮತ್ತು ಬೇಸಿಗೆಯಲ್ಲಿ ಪ್ರವಾಸ ಮಾಡುವವರಿಗೆ ಸೂಕ್ತ ಆಯ್ಕೆ ಆಗಿರುವುದರಿಂದ, ಮೇ ತಿಂಗಳಲ್ಲಿ ಭಾರತದಲ್ಲಿ ಭೇಟಿ ನೀಡಬಹುದಾದ ಇತರೆ ಎಲ್ಲಾ ಪ್ರದೇಶಗಳಿಗಿಂತ ಅತಿ ಹೆಚ್ಚು ಜನಪ್ರಿಯ ಹಾಗೂ ಸೂಕ್ತ ತಾಣ ಎನ್ನುತ್ತಾರೆ. ಮನಾಲಿಯ ರಮಣೀಯ ಸೌಂದರ್ಯವು ಮೋಡಿ ಮಾಡುವ ವಿಶೇಷ ಗುಣವನ್ನು ಹೊಂದಿದ್ದು, ಪ್ರಮುಖವಾಗಿ ಮಂಜಿನಿಂದ ಆವೃತ್ತವಾದಾಗ! ಜೊತೆಗೆ ಪರ್ವತ ಶಿಖರಗಳು ಮಂಜಿನಿಂದ ಉತ್ತುಂಗಕ್ಕೇರುವುದರಿಂದ. ಮನಾಲಿಯ ಬೀದಿಗಳು ಮಠಗಳಿಂದ ಕೂಡಿವೆ; ಈ ಸಮಯದಲ್ಲಿ ನಗ್ಗರ್ ಕ್ಯಾಸಲ್, ಅರ್ಜುನ್ ಗುಹೆ ಮತ್ತು ಸೋಲಾಂಗ್ ಕಣಿವೆಯ ಅದ್ಭುತ ದೃಶ್ಯಗಳು ಪ್ರಮುಖ ಆಕರ್ಷಣೆಗಳಾಗಿವೆ. ಮನಾಲಿ ಅತ್ಯುತ್ತಮ ಚಾರಣ ಮಾರ್ಗಗಳನ್ನು ನೀಡುವುದರ ಜೊತೆಗೆ, ಸಾಹಸಮಯ ಕ್ರೀಡೆಗಳಾದ ಪರ್ವತಾರೋಹಣ, ರಾಫ್ಟಿಂಗ್, ಸ್ಕೈಯಿಂಗ್, ಹೈಕಿಂಗ್, ಪ್ಯಾರಾ ಗ್ಲೈಡಿಂಗ್ ಮತ್ತು ಇತರೆ ಕ್ರೀಡೆಗಳಿಗೆ ಅವಕಾಶ ನೀಡಿದೆ.

ಹೋಗುವುದು ಹೇಗೆ: ದೆಹಲಿ ಮತ್ತು ಶಿಮ್ಲಾದಿಂದ ಮನಾಲಿಗೆ ನಿರಂತರ ಬಸ್ಸುಗಳು ಚಲಿಸುತ್ತವೆ. ಕುಲ್ಲು ಹತ್ತಿರದ ವಿಮಾನ ನಿಲ್ದಾಣ.

ರಾವಂಗ್ಲಾ

ರಾವಂಗ್ಲಾ ಸಿಕ್ಕಿಂನಲ್ಲಿರುವ ಗುಡ್ಡ ಪ್ರದೇಶದ ಸ್ಥಳವಾಗಿದ್ದು, ಗ್ಯಾಂಗ್ಟಾಕ್‌ನಿಂದ ಪೆಲ್ಲಿಂಗ್‌ಗೆ ಹೋಗುವ ಮಾರ್ಗದಲ್ಲಿದೆ. ಭವ್ಯವಾದ ಹಿಮಾಲಯ ತಪ್ಪಲಿನಲ್ಲಿ ಹಳ್ಳಿಗಾಡಿನ ಸೊಬಗನ್ನುಹೊಂದಿದ್ದು, ಹಿಮದಿಂದ ಕೂಡಿದ ಶಿಖರಗಳ ಅದ್ಭುತ ದೃಶ್ಯವನ್ನು ನೀಡುತ್ತದೆ. ಬೆಟ್ಟದ ಇಳಿಜಾರುಗಳಲ್ಲಿ ಮೋಡಿ ಮಾಡುವ ಚಹಾ ತೋಟಗಳು ಹಚ್ಚ ಹಸಿರಿನಿಂದ ಕೂಡಿದ್ದು, ವಿವಿಧ ಜಾತಿಯ ಸಸ್ಯಗಳು ಮತ್ತು ಪ್ರಾಣಿಸಂಕುಲಗಳಿಂದ ಆವೃತ್ತವಾಗಿದೆ. ರಾವಂಗ್ಲಾ ಹಲವು ಆಸಕ್ತಿದಾಯಕ ಟ್ರೆಕ್ಕಿಂಗ್ ಮಾರ್ಗಗಳನ್ನು ಹೊಂದಿದೆ ಮತ್ತು ವಾಸ್ತವವಾಗಿ ಇದು ಮೈನಮ್ ಲಾ ವನ್ಯಜೀವಿ ಅಭಯಾರಣ್ಯದ ಚಾರಣಕ್ಕೆ ಆರಂಭಿಕ ಸ್ಥಳ. ಇಲ್ಲಿನ ಸ್ಥಳೀಯ ಮಾರುಕಟ್ಟೆಯಲ್ಲಿ ಹೊಲಗಳಿಂದ ನೇರವಾಗಿ ತಂದ ತಾಜಾ ಸಾವಯವ ಪದಾರ್ಥಗಳು ದೊರೆಯುತ್ತವೆ ಮತ್ತು ಸಣ್ಣ ಅಂಗಡಿಗಳಲ್ಲಿ ಕರಕುಶಲ ವಸ್ತುಗಳು ಮತ್ತು ಸ್ಮಾರಕಗಳನ್ನು ಮಾರಾಟ ಮಾಡಲಾಗುತ್ತದೆ. ರಾವಂಗ್ಲಾದಲ್ಲಿ ಪ್ರತಿ ವರ್ಷ ಪಾಂಗ್ ಲಾಬ್ಸೋಲ್‌ ಬುಡಕಟ್ಟು ಹಬ್ಬ ಆಚರಣೆ ಮಾಡಲಾಗುತ್ತದೆ.

ಹೋಗುವುದು ಹೇಗೆ: ಪೆಲ್ಲಿಂಗ್, ಡಾರ್ಜಿಲಿಂಗ್ ಮತ್ತು ಗ್ಯಾಂಗ್ಟಾಕ್‌ನಿಂದ ರಸ್ತೆ ಮಾರ್ಗವಾಗಿ ರಾವಂಗ್ಲಾ ತಲುಪಬಹುದು. ಇಲ್ಲಿಗೆ ಹತ್ತಿರದ ರೈಲ್ವೆ ನಿಲ್ದಾಣ ನ್ಯೂ ಜಲ್‌ಪೈಗುರಿ ಮತ್ತು ಹತ್ತಿರದ ವಿಮಾನ ನಿಲ್ದಾಣ ಬಾಗ್ಡೊಗ್ರ.

ಮಸ್ಸೂರಿ

‘ಪರ್ವತಗಳ ರಾಣಿ’ ಮಸ್ಸೂರಿ ಉತ್ತರಾಖಂಡದ ಅತ್ಯಂತ ಅಂದವಾದ ಗಿರಿಧಾಮಗಳಲ್ಲಿ ಒಂದಾಗಿದೆ. ಮಸ್ಸೂರಿ ಅಂಕುಡೊಂಕಾದ ಚಲನೆ, ವಕ್ರವಾದ ಪರ್ವತ ರಸ್ತೆಗಳು, ಹಸಿರು ಉರುಳಿನ ಕಣಿವೆಗಳು ಮತ್ತು ಆಕರ್ಷಕ ವಸಾಹತುಶಾಹಿ ಯುಗದ ವಾಸ್ತುಶಿಲ್ಪದಿಂದ ಮೋಡಿ ಮಾಡುತ್ತದೆ. ಓಕ್ ಮರಗಳು ಮತ್ತು ಡಿಯೋಡರ್ ಮರಗಳ ಕೋನಿಫೆರಸ್ ಅರಣ್ಯದಿಂದ ಸುತ್ತುವರಿದ ಮಸ್ಸೂರಿ ಕೆಲವೇ ಕೆಲವು ಶಾಂತ ರೀತಿಯ ಚಾರಣ ದಾರಿಗಳನ್ನು ಹೊಂದಿದೆ. ಲಾಲ್‌ ಟಿಬ್ಬಾ, ಉತ್ಸಾಹಭರಿತ ಕೆಂಪ್ಟಿ ಜಲಪಾತ ಮತ್ತು ಟಿಬೆಟಿಯನ್‌ ಸಂಸ್ಕೃತಿ ಸ್ಪರ್ಶ ಹೊಂದಿರುವ ಹ್ಯಾಪಿ ಕಣಿವೆ ಪ್ರವಾಸಿಗರ ಆಸಕ್ತಿ ಹೆಚ್ಚಿಸುವ ಆಕರ್ಷಣಿಯ ಆಯ್ಕೆಗಳಾಗಿವೆ. ಇವು ಒಟ್ಟಾರೆಯಾಗಿ ಮಸ್ಸೂರಿಯನ್ನು ಮೇ ತಿಂಗಳಲ್ಲಿ ಭಾರತದಲ್ಲಿ ಭೇಟಿನೀಡುವ ಸ್ಥಳಗಳಲ್ಲಿ ಒಂದಾಗಿಸಿವೆ.

ಹೋಗುವುದು ಹೇಗೆ: ನವದೆಹಲಿ ಮತ್ತು ಡೆಹ್ರಾಡೂನ್‌ನಿಂದ ರಸ್ತೆ ಮಾರ್ಗದಲ್ಲಿ ಮಸ್ಸೂರಿಗೆ ಪ್ರವಾಸ ಹೋಗಬಹುದು. ಮಸ್ಸೂರಿಗೆ ಹತ್ತಿರದ ರೈಲ್ವೆ ಮತ್ತು ವಿಮಾನ ನಿಲ್ದಾಣ ಡೆಹ್ರಾಡೂನ್‌ನಲ್ಲಿ ಇವೆ.

ಬೆಂಗಳೂರಿನಿಂದ ಪಾಂಡಿಚೇರಿಗೆ ಕಾರಿನಲ್ಲಿ ಪ್ರವಾಸ: ಪ್ರಕೃತಿ ಮಧ್ಯೆಯ ಈ ಮಾರ್ಗ ಸೂಕ್ತ

You may also like