ರಿಲಾಯನ್ಸ್ ಜಿಯೋ ತನ್ನ ಮೈಜಿಯೋ ಆಪ್ನಲ್ಲಿ ಜಿಯೋ ಸಾರ್ಥಿ (Jio Saarthi) ಎಂಬ ಹೊಸ ಡಿಜಿಟಲ್ ಅಸಿಸ್ಟಂಟ್ ಅನ್ನು ಲಾಂಚ್ ಮಾಡಿದೆ. ಈ ಡಿಜಿಟಲ್ ಅಸಿಸ್ಟಂಟ್ ಬಳಕೆದಾರರು ಆನ್ಲೈನ್ ಮೂಲಕ ರೀಚಾರ್ಜ್ ಸೇವೆಯನ್ನು ಸುಲಭವಾಗಿ ಪಡೆಯಲು ಸಹಕಾರಿ ಆಗಿಲಿದೆ.
ಜಿಯೋ ಸಾರ್ಥಿ (Jio Saarthi) ಡಿಜಿಟಲ್ ಅಸಿಸ್ಟಂಟ್ ಕುರಿತ ಪ್ರಮುಖ ಅಂಶಗಳು
– ಜಿಯೋ ಸಾರ್ಥಿ ಮೈಜಿಯೋ ಆಪ್ನಲ್ಲಿ ಇರುತ್ತದೆ.
– ಜಿಯೋ ಸಾರ್ಥಿ ಧ್ವನಿ ಆಧಾರಿತ ಸಹಾಯಕ ಫೀಚರ್ ಆಗಿದ್ದು, ಗ್ರಾಹಕರು ತಮ್ಮ ಮೊಬೈಲ್ ನಂಬರ್ಗೆ ರೀಚಾರ್ಜ್ ಪಡೆಯಲು ಸಹಾಯವಾಗುವಂತೆ ಅಭಿವೃದ್ಧಿ ಪಡಿಸಲಾಗಿದೆ.
– ಜಿಯೋ ಸಾರ್ಥಿ ಆಂಡ್ರಾಯ್ಡ್ ಮತ್ತು ಐಓಎಸ್ ಎರಡು ಆಪರೇಟಿಂಗ್ ಪ್ಲಾಟ್ಫಾರ್ಮ್ಗಳಲ್ಲಿ ಲಭ್ಯವಾಗಲಿದೆ.
– ಮೈಜಿಯೋ ಆಪ್ನಲ್ಲಿ ಗ್ರಾಹಕರು ತಮ್ಮ ಮೊಬೈಲ್ ನಂಬರ್ ರೀಚಾರ್ಜ್ ಪಡೆಯಲು ಸಂಕಷ್ಟ ಎದುರಿಸುತ್ತಿದ್ದ ಕಾರಣ ಈ ಧ್ವನಿ ಆಧಾರಿತ ಅಸಿಸ್ಟಂಟ್ ಅನ್ನು ಅಭಿವೃದ್ಧಿಪಡಿಸಲಾಗಿದೆಯಂತೆ ಎಂದು ಜಿಯೋ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
– ಈ ಫೀಚರ್ ಮೇಲೆ ಕ್ಲಿಕ್ ಮಾಡಿದರೆ ಸಾಕು ಗ್ರಾಹಕರು ಹೇಗೆ ರೀಚಾರ್ಜ್ ಪಡೆಯಬೇಕು ಎಂಬುದರ ಸಂಪೂರ್ಣ ಹಂತಗಳನ್ನು ಸ್ವತಃ ಜಿಯೋ ಸಾರ್ಥಿ ಮಾರ್ಗದರ್ಶನ ನೀಡುತ್ತದೆ.
– ಡೆಬಿಟ್ ಕಾರ್ಟ್, ಕ್ರೆಡಿಟ್ ಕಾರ್ಡ್ ನಂಬರ್ ಅನ್ನು ಎಲ್ಲಿ ನೀಡಬೇಕು ಎಂಬುದನ್ನು ಜಿಯೋ ಸಾರ್ಥಿ ಸಲಹೆ ಮಾರ್ಗದರ್ಶನ ನೀಡುತ್ತದೆ.
ಬಳಸುವುದು ಹೇಗೆ?
ಮೈ ಜಿಯೋ ಆಪ್ ಹೊಂದಿರುವವರು ಆಪ್ ಅಪ್ಡೇಟ್ ಮಾಡಿರಿ. ನಂತರ ನಿಮಗೆ ರೀಚಾರ್ಜ್ ಅಗತ್ಯವಾದಾಗ ಮೈ ಜಿಯೋ ಆಪ್ ಓಪನ್ ಮಾಡಿ ಜಿಯೋ ಸಾರ್ಥಿ ಮೇಲೆ ಕ್ಲಿಕ್ ಮಾಡಿ ಧ್ವನಿ ಆಧಾರಿತ ಸಂದೇಶಗಳನ್ನು ನೀಡಬಹುದು.
– ಜಿಯೋ ಸಾರ್ಥಿಯಲ್ಲಿ ಪ್ರಸ್ತುತ ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳಲ್ಲಿ ಸಂದೇಶ ನೀಡಬಹುದು.