ತಂತ್ರಜ್ಞಾನ ಅಭಿವೃದ್ಧಿಗೊಂಡಂತೆ ಇಂದು ಹೊಸ ಹೊಸ ಬಗೆಯ ಸ್ಟಾಟಪ್‌ಗಳು ಜನ್ಮತಾಳುತ್ತಿವೆ. ಅದರಲ್ಲೂ ಇತ್ತೀಚೆಗೆ ಸಾರ್ವಜನಿಕರ ಪ್ರಯಾಣವನ್ನು, ಅವರ ತುರ್ತುಪರಿಸ್ಥಿತಿಯನ್ನು ಫುಲ್‌ಫಿಲ್ ಮಾಡಲು ಮಾಡುವ ಹೆಚ್ಚು ಸ್ಟಾಟಪ್‌ಗಳು ಒಂದಾದಮೇಲೊಂದು ಹುಟ್ಟಿಕೊಳ್ಳುತ್ತಿವೆ. ಅವುಗಳಲ್ಲಿ ಬಾಡಿಗೆ ಬೈಕ್ ಸೇವೆ ನೀಡುವ ಬೌನ್ಸ್(Bounce) ಸಹ ಒಂದು.
ಕಳೆದ ಎರಡು ದಶಕಗಳ ಹಿಂದಷ್ಟೇ ಬಾಡಿಗೆ ಬೈಸಿಕಲ್‌ಗಳು ಸಿಗುತ್ತಿದ್ದವು. ಅವುಗಳಿಗೆ ಗಂಟೆಗೆ ಇಂತಿಷ್ಟು ಹಣ ನೀಡಿ ಬೈಸಿಕಲ್ ಹೊಡೆಯುವುದನ್ನು ಕಲಿಯಲು ಹುಡುಗ, ಹುಡುಗಿಯರು ಸಹ ಹಳ್ಳಿಗಳಲ್ಲಿ, ಪಟ್ಟಣಗಳಲ್ಲಿ ಬಳಸುತ್ತಿದ್ದರು. ಈಗ ಅದೇ ಒಂದು ರೀತಿಯಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಸ್ಕೂಟರ್ ಗಳು ಆ ರೀತಿ ಬಳಕೆಯಾಗುತ್ತಿವೆ. ಆದರೆ ಇದನ್ನೇ ಒಂದು ದೊಡ್ಡ ಉದ್ಯಮವಾಗಿ ಬೆಳೆಸುವುದು ಸಲಭದ ಮಾತಲ್ಲ.
ಬೌನ್ಸ್(Bounce)
ಬೌನ್ಸ್, ದೊಡ್ಡ ದೊಡ್ಡ ನಗರ ಪ್ರದೇಶಗಳಲ್ಲಿ ಎಲ್ಲಿಂದ ಎಲ್ಲಿಗೆ ಬೇಕಾದರೂ ತೆಗೆದುಕೊಂಡು ಎಲ್ಲಿ ಬೇಕಾದರೂ ಬಿಟ್ಟು ಹೋಗುವಂತಹ ಸೇವೆ ನೀಡುತ್ತಿರುವ ಬೈಕ್ ಟ್ಯಾಕ್ಸಿ ಸೇವೆ.
ಬೌನ್ಸ್ ಬೈಕ್ ಬಳಸುವುದು ಹೇಗೆ?
ಬೌನ್ಸ್ ಅಪ್ಲಿಕೇಶನ್ ಆಂಡ್ರಾಯ್ಡ್ ಮತ್ತು ಐಓಎಸ್ ಡಿವೈಸ್‌ಗಳಿಗೆ ಇನ್‌ಸ್ಟಾಲ್ ಮಾಡಲು ಲಭ್ಯವಿದ್ದು, ಬೌನ್ಸ್ ಬಳಕೆ ಮಾಡಲು ಆಸಕ್ತಿ ಇರುವವರು ಮೊದಲು ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡಿಕೊಳ್ಳಬೇಕು. ನಂತರ ಆಪ್‌ನಲ್ಲಿ ಕೇಳಲಾಗುವ ಮಾಹಿತಿಗಳನ್ನು ನೀಡಿ ರಿಜಿಸ್ಟರ್ ಮಾಡಿಕೊಳ್ಳಬೇಕು.
– ಬಳಕೆದಾರರು ಬೌನ್ಸ್ ಬಳಕೆ ಬೇಕಾದಾಗ Request ಆಯ್ಕೆ ಮೇಲೆ ಕ್ಲಿಕ್ ಮಾಡುವ ಮೂಲಕ ಬೇಡಿಕೆ ಸಲ್ಲಿಸಬೇಕು. ಬೈಕ್ ಇರುವ ಸ್ಥಳ ಆಪ್‌ನಲ್ಲಿ ಗೋಚರಿಸುತ್ತದೆ. ಅದರ ಬಳಿಗೆ ಹೋಗಿ ಮೊಬೈಲ್‌ಗೆ ಬಂದಿದ್ದ OTP ಸಂಖ್ಯೆಯನ್ನು ಸ್ಕೂಟರ್‌ನಲ್ಲಿ ಇರುವ ಕೀಪ್ಯಾಡ್ ನಲ್ಲಿ ಸಲ್ಲಿಸಬೇಕು. ಸ್ಕೂಟರ್ ಅನ್‌ಲಾಕ್ ಆಗಿ ಬಳಕೆಗೆ ಸಿದ್ಧವಾಗುತ್ತದೆ.
– ಬಳಕೆದಾರರು ಎಲ್ಲಿ ಹೋಗುತ್ತಿದ್ದಾರೆ, ಯಾವ ಕಡೆ ಬೈಕ್ ನಿಲ್ಲಿಸಿದ್ದಾರೆ, ಎಂಬೆಲ್ಲ ಮಾಹಿತಿಗಳನ್ನು ಕಂಪನಿಯ ಸಿಬಂಧಿಗಳು ಜಿಪಿಎಸ್ ತಂತ್ರಜ್ಞಾನ ಸಹಾಯದಿಂದ ಟ್ರ್ಯಾಕ್ ಮಾಡುತ್ತಿರುತ್ತಾರೆ.
– ಡ್ರೈವಿಂಗ್ ಲೈಸನ್ಸ್ ಇರುವವರು ಮಾತ್ರ ಬೌನ್ಸ್ ಬೈಕ್ ಟ್ಯಾಕ್ಸಿ ಬಳಸಬಹುದು.
– ಹೆಲ್ಮೆಟ್ ಬೈಕ್‌ನಲ್ಲಿಯೇ ಇರುತ್ತದೆ.
– ಮಹಿಳೆಯರು ಸಹ ಬಳಸಲು ಯೋಗ್ಯವಾಗುವಂತೆ ಗೇರ್‌ಲೆಸ್ ಸ್ಕೂಟರ್‌ಗಳು ಇವಾಗಿವೆ.
– ಪೆಟ್ರೋಲ್ ಸಾಕಷ್ಟು ಇರುತ್ತದೆ ಮತ್ತು ಬೈಕ್‌ನಲ್ಲಿನ ಕೀ ಪ್ಯಾಡ್‌ನಲ್ಲಿ ಪೆಟ್ರೋಲ್ ಎಷ್ಟಿದೆ ಎಂಬುದು ಗೋಚರವಾಗುತ್ತದೆ. ಬಳಕೆದಾರರಿಗೆ ಬೈಕ್‌ನಲ್ಲಿರುವ ಪೆಟ್ರೋಲ್ ಅವರು ತಲುಪುವ ಸ್ಥಳಕ್ಕೆ ಹೋಗಲು ಸಾಧ್ವವಾಗದಿದ್ದರೇ, ಅವರೇ ಫ್ಯೂಯಲ್ ತುಂಬಿಸಬಹುದು. ಆ ಹಣವನ್ನು ಬಳಕೆದಾರರು ನೀಡಬೇಕಾದ ಬಾಡಿಗೆ ದರದಲ್ಲಿ ವಜಾಮಾಡಿಕೊಳ್ಳುತ್ತಾರೆ.
– ಬೌನ್ಸ್ ಸೇವೆಯನ್ನು ದಿನದ 24 ಗಂಟೆ ಸಹ ಪಡೆಯಬಹುದಾಗಿದೆ.
– ಕೀ ಲೆಸ್ ಬೈಕ್. ಹೆಲ್ಮೆಟ್ ಧರಿಸಿದರೇ ಮಾತ್ರ ಬೈಕ್ ಸ್ಟಾಟ್ ಆಗುವಂತೆ ತಂತ್ರಜ್ಞಾನ ಅಳವಡಿಸಲಾಗಿದೆ.
ಬೌನ್ಸ್ ಬಾಡಿಗೆ ದರ ಎಷ್ಟು?
ಪ್ರತಿ ಕಿ.ಮೀಗೆ ರೂ.5
ಪ್ರತಿ ನಿಮಿಷಕ್ಕೆ ರೂ.50 ಪೈಸೆ.
ಇತರರು ಬೈಕ್ ಬಾಡಿಗೆಗೆ ನೀಡಬಹುದೇ?
– ಖಂಡಿತ ಅದಕ್ಕೆ ಅವಕಾಶ ಇಲ್ಲ. ಬೌನ್ಸ್ ಕಂಪನಿಯವರೊಂದಿಗೆ ಬಂಡವಾಳ ಹೂಡಲು ವಿದೇಶದ ದೊಡ್ಡ ದೊಡ್ಡ ಕಂಪನಿಗಳು ಮುಂದಾಗಿವೆ. ಕಂಪನಿ ಸಂಸ್ಥಾಪಕರು ತಾವು ಹೂಡಿದ್ದ ಬಂಡವಾಳವನ್ನು ಈಗಾಗಲೇ ಹಿಂಪಡೆದಿದ್ದಾರೆ.
ಎಲ್ಲೆಲ್ಲಿದೆ ಬೌನ್ಸ್ ಸೇವೆ?
ಪ್ರಸ್ತುತ ಅಧಿಕೃತವಾಗಿ ಬೌನ್ಸ್ ಸೇವೆ ಬೆಂಗಳೂರಿನಲ್ಲಿ ಚಾಲ್ತಿ ಇದೆ. ಮುಂದೆ ರಾಜ್ಯದ ಮೈಸೂರು, ಮಣಿಪಾಲ್ ಮತ್ತು ಮಹಾರಾಷ್ಟ್ರದ ನಾಗಪುರ, ಇತರೆ ಕಡೆಗಳಲ್ಲೂ ಆರಂಭಿಸಲು ಕಂಪನಿ ಉದ್ದೇಶಿಸಿದೆ.
ಬೌನ್ಸ್ ಬೈಕ್ ಸಂಸ್ಥಾಪಕರು ಯಾರು?
– ಬೆಂಗಳೂರಿನ ಅರುಣ್ ಗಿರಿ, ಸಿಒಒ. ಇವರು ಕಾಸ್ಟ್ ಅಕೌಂಟ್ ಮತ್ತು ಕಂಪನಿ ಸೆಕ್ರೆಟರಿ ಶಿಕ್ಷಣ ಪಡೆದಿದ್ದಾರೆ.
– ಹಾಸನದ ವಿವೇಕಾನಂದ ಹಳ್ಳೆಕೆರೆ, ಸಿಇಒ. ಇವರು ಚಾರ್ಟೆರ್ಡ್ ಅಕೌಂಟಂಟ್.
– ವರುಣ್ ಅಗ್ನಿ, ಸಿಟಿಒ. ಇವರು ಅಮೆರಿಕದಲ್ಲಿ ಎಂಎಸ್‌ಸಿ ಪೂರ್ಣಗೊಳಸಿದ್ದಾರೆ.
ಈ ಮೂವರು ಜತೆಯಾಗಿ ಬೌನ್ಸ್ ನವೋದ್ಯಮ ಕಟ್ಟಿ ಬೆಳೆಸಿದವರು.
ಬೌನ್ಸ್ ಸೇವೆಯನ್ನು ಸಂಸ್ಥಾಪಕರು ಬೈಸಿಕಲ್‌ಗಳಲ್ಲಿಯೂ ವಿಸ್ತರಿಸುವ ಸಾಧ್ಯತೆಗಳಿವೆ. ಕಾರಣ ಬೌನ್ಸ್ ಆಪ್‌ನಲ್ಲಿ Cycles ಎಂಬ ಆಯ್ಕೆಯೂ ಇದೆ.
ಬೌನ್ಸ್ ಸಹಾಯವಾಣಿ?
ಬೌನ್ಸ್ ಸಹಾಯವಾಣಿ ನಂಬರ್ ಅನ್ನು ನೀಡಿದೆ. ಅದರೆ ಆಪ್ ಇನ್‌ಸ್ಟಾಲ್ ಮಾಡಿಕೊಂಡಿರುವವರು ಇಮೇಲ್ ನಲ್ಲಿ ತಮ್ಮ ಅನಿಸಿಕೆ, ಇತರೆ ಮಾಹಿತಿಗಳನ್ನು ಬರೆಯಬಹುದು. ಬಹುಶಃ ಬೇಗ ರಿಪ್ಲೇ ಪಡೆಯಬಹುದು.