ಸೇನೆ ಸೇರಬೇಕು ಎಂಬುದು ಹಲವರ ಕನಸು. ಕೆಲವರಿಗೆ ಆ ಕನಸು ನನಸು ಮಾಡಿಕೊಳ್ಳಲು ಆರ್ಥಿಕವಾಗಿ, ದೇಹದಾರ್ಡ್ಯ ಅರ್ಹತೆ ಇಲ್ಲದಿರುವ ಕಾರಣ ಮತ್ತು ಇತರೆ ಹಲವು ಕಾರಣಗಳಿಂದ ಸೇನೆ ಸೇರಲು ಆಗದೆ ವಂಚಿತರಾಗುತ್ತಾರೆ. ಆದರೆ ಈಗ ದೇಹದಾರ್ಡ್ಯ ಅರ್ಹತೆ ಹೊಂದಿದ್ದು, ಇತರೆ ಯಾವುದೇ ಸಮಸ್ಯೆಗಳಿದ್ದರೆ ಅವುಗಳನ್ನು ಸ್ವತಃ ಸರ್ಕಾರಗಳೇ ಬಗೆಹರಿಸಿ ಪ್ರಜೆಗಳ ಸೇನೆ ಸೇರ ಬಯಸುವ ಕನಸನ್ನು ನನಸು ಮಾಡಲು ಹಲವು ಚಟುವಟಿಕೆಗಳನ್ನು ಕೈಗೊಳ್ಳುತ್ತಿವೆ.
ಭಾರತೀಯ ಸೈನೆಗೆ ಸೈನಿಕನಾಗಿ ಸೇರಲು ಬಯಸುವವರಿಗೆ ಇದೋ ಸುವರ್ಣಾವಕಾಶವೊಂದು ಮನೆಬಾಗಿಲಿಗೆ ಬಂದಿದೆ. ಶೀಘ್ರದಲ್ಲೇ ಕೊಪ್ಪಳ ಮತ್ತು ಕೊಡಗು ಜಿಲ್ಲೆಗಳಲ್ಲಿ ಸೈನಿಕ ಹುದ್ದೆಗಳ ಭರ್ತಿಗೆ ರ್ಯಾಲಿ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಸೇನೆಗೆ ಸೇರ ಬಯಸುವ ಯುವಕರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಚಿತ ಊಟ-ವಸತಿ ಯೊಂದಿಗೆ ತರಬೇತಿ ನೀಡಲು ಮುಂದಾಗಿದೆ. ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹಿಂದುಳಿದ ವರ್ಗಗಳ ಅವಿವಾಹಿತ ಅರ್ಹ ಪುರುಷ ಅಭ್ಯರ್ಥಿಗಳಿಗೆ ಈ ತರಬೇತಿಯಲ್ಲಿ ಆಯ್ಕೆ ಬಗ್ಗೆ ಪೂರ್ವ ಸಿದ್ಧತೆ, ವೃತ್ತಿ ಮಾರ್ಗದರ್ಶನವನ್ನು ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08/08/2019 ಸಮಯ 5pm
ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ : 080-8050770004
ಉಚಿತ ತರಬೇತಿಗಾಗಿ ಅರ್ಜಿ ಸಲ್ಲಿಸಲು – ಕ್ಲಿಕ್ ಮಾಡಿ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕೃತ ಪ್ರಕಟಣೆ ನೋಡಲು – ಕ್ಲಿಕ್ ಮಾಡಿ