ಪತ್ರಿಕೋದ್ಯಮ ವಿಷಯದಲ್ಲಿ ಎನ್ಇಟಿ ಪಾಸ್ ಮಾಡಿ ಸಹಾಯಕ ಪ್ರಾಧ್ಯಾಪಕ ಮತ್ತು ಜೂನಿಯರ್ ರಿಸರ್ಚ್ ಫೆಲೋ ಶೀಪ್ ಅರ್ಹತೆ ಪಡೆಯಲು ಇಂಗ್ಲಿಷ್ ಅಥವಾ ಹಿಂದಿ ಎರಡೇ ಭಾಷೆಗಳಲ್ಲಿ ಪರೀಕ್ಷೆ ಬರೆಯಬೇಕು. ಇಂಗ್ಲೀಷ್ನಲ್ಲಿ ಯಾವ ಪುಸ್ತಕಗಳನ್ನು ಓದಬೇಕು, ಹೆಚ್ಚು ಯಾವ ಲೇಖಕರ ಪುಸ್ತಕಗಳನ್ನು ರೆಫರ್ ಮಾಡಬೇಕು ಎಂದು ಪ್ರಶ್ನೆ ಉಳ್ಳವರು ಈ ಕೆಳಗೆ ನೀಡಿರುವ ಪುಸ್ತಕಗಳ ಪಟ್ಟಿಯನ್ನು ಒಮ್ಮೆ ಓದಿಕೊಳ್ಳಿ.
ಈಗಾಗಲೇ ಪತ್ರಿಕೋದ್ಯಮ ವಿಷಯದಲ್ಲಿ NET ಪರೀಕ್ಷೆ ಬರೆದು ತೇರ್ಗಡೆ ಹೊಂದಿದವರು, ಕನಿಷ್ಠ 4 ಪುಸ್ತಕಗಳನ್ನು ಓದಬೇಕು. ಆದರೆ ಅವುಗಳು ಸಾಕಾಗುವುದಿಲ್ಲ ಎನ್ನುತ್ತಾರೆ. ವರ್ಷದಿಂದ ವರ್ಷಕ್ಕೆ ಎನ್ಇಟಿ ಪರೀಕ್ಷೆ ಬರೆಯುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಆದ್ದರಿಂದ ಒಮ್ಮೆ ಪರೀಕ್ಷೆ ಬರೆದು ತೇರ್ಗಡೆ ಆಗದೇ ಇರುವವರಿಗೆ ಅದರ ಅನುಭವ, ಸ್ಪರ್ಧೆ ಎಂತಹದ್ದು ಎಂಬುದು ತಿಳಿಯುತ್ತದೆ.