ಸರ್ಕಾರಿ ಒಡೆತನದ ಬಿಎಸ್ಎನ್ಎಲ್ ತನ್ನ ಪ್ರೀಪೇಯ್ಡ್ ಸಬ್ಸ್ಕ್ರೈಬರ್ಗಳಿಗೆ ಪ್ರಸ್ತುತ ರೂ.599 ಪ್ಲಾನ್ ಒಂದನ್ನು ಆಫರ್ ಮಾಡಿದೆ. ಈ ಪ್ಲಾನ್ ಇತರೆ ಟೆಲಿಕಾಂ ಕಂಪನಿಗಳಾದ ಭಾರತಿ ಏರ್ಟೆಲ್, ರಿಲಾಯನ್ಸ್ ಜಿಯೋ, ವೊಡಾಫೋನ್, ಐಡಿಯಾ ಗಳ ರೀತಿಯ ಸಮನಾದ 84 ದಿನಗಳ ಪ್ಲಾನ್ ಅಗಿದೆ. ಅದಕ್ಕೂ ಮೀರಿದ ಬಿಎಸ್ಎನ್ಎಲ್ ನೀಡುತ್ತಿರುವ ಬೆಸ್ಟ್ ಪ್ಲಾನ್ ಎಂದರೆ ಅದು ಪ್ರತಿದಿನ 5GB ಇಂಟರ್ನೆಟ್ ಡಾಟಾ ಆಫರ್ ಮಾಡುತ್ತಿರುವುದಾಗಿದೆ.
ಇನ್ನೂ 4G ನೆಟ್ವರ್ಕ್ ಲಾಂಚ್ ಮಾಡಬೇಕಿರುವ ಟೆಲಿಕಾಂ ರೂ.599 ರ ಪ್ಲಾನ್ಗೆ ಈ 5GB ಡಾಟಾ ನೀಡುತ್ತಿರುವುದು.
ರೂ.599 ರ ರೀಚಾರ್ಚ್ ನಿಂದ ಸಿಗುವ ಪ್ರತಿದಿನದ 5GB ಡಾಟಾವನ್ನು ಸಬ್ಸ್ಕ್ರೈಬರ್ಗಳು 2G/ 3G ನೆಟ್ವರ್ಕ್ನಲ್ಲೂ ಸಹ ಬಳಸಬಹುದು. ಹಾಗೆಯೇ ಬಳಕೆದಾರರು 4G ನೆಟ್ವರ್ಕ್ ಪ್ರದೇಶಗಳಿಗೆ ಹೋದಲ್ಲಿ, ಅಲ್ಲೂ ಕೂಡ ಈ ಡಾಟಾ ಪ್ರಯೋಜನ ಪಡೆಯಬಹುದು.
ಬಿಎಸ್ಎನ್ಎಲ್ ಈಗಾಗಲೇ ಕೆಲವು ಆಯ್ಕೆಯ ಪ್ರದೇಶಗಳಾದ ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್, ಕರ್ನಾಟಕ ಮತ್ತು ಮಧ್ಯಪ್ರದೇಶ ವೃತ್ತರಗಳಲ್ಲಿ 4G ನೆಟ್ವರ್ಕ್ ಲಾಂಚ್ ಮಾಡಿದೆ. ಆದರೆ ಅಲ್ಲೂ ಸಹ ಕೆಲವು ನಿಗದಿತ ಪ್ರದೇಶಗಳಿಗೆ ಮಾತ್ರ 4G ನೆಟ್ವರ್ಕ್ ಸೀಮಿತವಾಗಿದೆ.
ಬಿಎಸ್ಎನ್ಎಲ್ನ ರೂ.599 ರ ಪ್ಲಾನ್ ಈಗಲೂ ಬೆಸ್ಟ್ ಎನ್ನಲು ಹಲವು ಕಾರಣಗಳಿವೆ. ಅವುಗಳನ್ನು ಈ ಕೆಳಗಿನಂತೆ ವಿವರಿಸಲಾಗಿದೆ.
– ಸರ್ಕಾರಿ ಸ್ವಾಮ್ಯದ ರೂ.599 ಪ್ಲಾನ್ ಅನ್ಲಿಮಿಟೆಡ್ ಕಾಂಬೋ ಪ್ಲಾನ್ ಆಗಿದ್ದು, ವಾಯ್ಸ್ ಕಾಲಿಂಗ್, ಎಸ್ಎಂಎಸ್ ಮತ್ತು ಡಾಟಾ ಬೆನಿಫಿಟ್ಗಳನ್ನು ಒಳಗೊಂಡಿದೆ.
– ಒಟ್ಟು 84 ದಿನ ಈ ಪ್ಲಾನ್ ಇರಲಿದ್ದು, 420 ಜಿಬಿ ಡಾಟಾ ಉಪಯೋಗ ಪಡೆಯಬಹುದು.
– ಯಾವುದೇ ನೆಟ್ವರ್ಕ್ನಲ್ಲಿ ಅನ್ಲಿಮಿಟೆಡ್ ವಾಯ್ಸ್ ಕರೆ ಸೌಲಭ್ಯ ಇರುತ್ತದೆ. ಆದರೆ ಬಿಎಸ್ಎನ್ಎಲ್ ಅಫೀಶಿಯಲ್ ವೆಬ್ಸೈಟ್ನಲ್ಲಿ ಫೇರ್ ಯುಟಿಲಿಟಿ ಪಾಲಿಸಿ ಪ್ರಕಾರ ಪ್ರತಿದಿನ 250 ನಿಮಿಷ ವಾಯ್ಸ್ ಕರೆ ನಿಯಮ ಜಾರಿಗೆ ಬರಲಿದೆ ಎಂದು ಸುಳಿವು ನೀಡಿದೆ. ಆದರೆ ಈ ಕುರಿತು ಜನವರಿ 10 ರಂದು ಬಿಎಸ್ಎನ್ಎಲ್ ಎಫ್ಯುಪಿ ಲಿಮಿಟ್ ಅನ್ನು ವಾಯ್ಸ್ ಕರೆ ಮೇಲೆ ವಿಧಿಸುವುದರಿಂದ ಹಿಂದೆ ಸರಿಯುವ ಬಗ್ಗೆ ಹೇಳಲಾಗಿತ್ತು.
– ರೂ.599 ಪ್ಲಾನ್ನಲ್ಲಿ ಪ್ರತಿದಿನ 100 ಎಸ್ಎಂಎಸ್ ಸೌಲಭ್ಯ ಇರಲಿದೆ. ಅಲ್ಲದೇ ಫೆಬ್ರವರಿ 28, 2021 ರವರೆಗೆ ZING ಅಪ್ಲಿಕೇಶನ್ಗೆ ಉಚಿತ ಸಬ್ಸ್ಕ್ರಿಪ್ಶನ್ ಸೌಲಭ್ಯ ನೀಡಲಿದೆ.
ದೇಶದಾದ್ಯಂತ 4G ನೆಟ್ವರ್ಕ್ ಹೊಂದಿರುವ ಟೆಲಿಕಾಂಗಳು ಸಹ ಒಂದಲ್ಲಾ ಒಂದು ರೀತಿ ಬಳಕೆದಾರನಿಗೆ ಆಗಾಗ ನೆಟ್ವರ್ಕ್ ವಿಷಯದಲ್ಲಿ ಸಮಸ್ಯೆಯನ್ನು ಒಡ್ಡುತ್ತಿಲ್ಲ ಎಂದೇನಿಲ್ಲ. ಡೀಸೆಂಟ್ 3G ನೆಟ್ವರ್ಕ್ ಹೊಂದಿದ್ದರು ರೂ.599 ರ ಬಿಎಸ್ಎನ್ಎಲ್ ಪ್ಲಾನ್ ಇತರೆ ಟೆಲಿಕಾಂಗಳಿಗೆ ಸೆಡ್ಡುಹೊಡೆಯುವ ಪ್ಲಾನ್ ಎಂದೇ ಹೇಳಬಹುದು.
ವಾಟ್ಸಾಪ್ ನಿಮ್ಮೆಲ್ಲ ಯಾವ ಮಾಹಿತಿ ತಿಳಿಯುತ್ತದೆ? ಹೊಸ ಪ್ರೈವೆಸಿ ಪಾಲಿಸಿ ಬಗ್ಗೆ ನಿಮಗೆಷ್ಟು ಗೊತ್ತು?