Home » ಗರ್ಭಾವಸ್ಥೆಯ ಲಕ್ಷಣಗಳೇನು? ಆರಂಭದಲ್ಲಿ ಯಾವೆಲ್ಲಾ ಸಮಸ್ಯೆ, ಬದಲಾವಣೆಗಳು ಕಂಡುಬರುತ್ತವೆ?

ಗರ್ಭಾವಸ್ಥೆಯ ಲಕ್ಷಣಗಳೇನು? ಆರಂಭದಲ್ಲಿ ಯಾವೆಲ್ಲಾ ಸಮಸ್ಯೆ, ಬದಲಾವಣೆಗಳು ಕಂಡುಬರುತ್ತವೆ?

by manager manager

ಪ್ರತಿ ಮಹಿಳೆಗೆ ಹೆಚ್ಚು ಖುಷಿಯಾದ ವಿಷಯ ಅಂದ್ರೆ ಅದು ತಾನು ಗರ್ಭವತಿ ಆಗುವುದು. ತಾನು ಸಹ ಒಂದು ತಾಯಿ ಆಗುವೆ ಎಂಬ ಸಮಯ ಆಕೆಗೆ ಎಲ್ಲಿಲ್ಲದ ಸಂತೋಷ ನೀಡುತ್ತದೆ. ಆದರೆ ಈ ಸಮಯ ಆಕೆಗೆ ಭಯದ ಸಂಗತಿಯೂ ಹೌದು. ಮಹಿಳೆ ಗರ್ಭವಸ್ಥೆಯ ಸಂದರ್ಭದಲ್ಲಿ ಒಂಬತ್ತು ತಿಂಗಳಲ್ಲಿ ಪ್ರತಿ ತಿಂಗಳೂ ಸಹ ವಿಭಿನ್ನ ಅನುಭವ, ಸಮಸ್ಯೆಗಳು, ದೈಹಿಕ ಬದಲಾವಣೆಗಳನ್ನು ಅನುಭವಿಸುತ್ತಾಳೆ. ಈ ಸಂದರ್ಭದಲ್ಲಿ ಮಹಿಳೆ ನಿತ್ಯವೂ ಬದಲಾಗುವ ಎಲ್ಲಾ ಹೊಸತನಗಳಿಗೆ ಮಾನಸಿಕವಾಗಿ ದೈಹಿಕವಾಗಿ ಸಿದ್ಧಳಾಗಿರಬೇಕು.

ಗರ್ಭಾವಸ್ಥೆಯಲ್ಲಿ ಆಕೆಯ ನರನಾಡಿಯೊಂದಿಗೆ ಬ್ರೂಣದ ಜೀವ ಬೆಸೆದುಕೊಳ್ಳುವಾಗ ಈ ರೀತಿಯ ಬದಲಾವಣೆಗಳು ಉಂಟಾಗುತ್ತವೆ. ಶಿಶು ತಾಯಿಯ ಗರ್ಭದಲ್ಲಿ ನೆಲೆಯುವಾಗ ಆಕೆಯ ದೈಹಿಕ ಮತ್ತು ಮಾನಸಿಕ ಆರೋಗ್ಯದಲ್ಲಿ ಹಲವು ಬದಲಾವಣೆಗಳನ್ನು ಕಾಣಬಹುದು. ಅವುಗಳೆಂದರೆ ವಾಂತಿ, ತಲೆನೋವು, ಊಟ-ತಿಂಡಿ ದೂರ ಇರಿಸುವುದು, ಹೊಟ್ಟೆ ನೋವು, ಬೆನ್ನು ನೋವು, ತಲೆ ನೋವು, ಆಯಾಸದ ಅನುಭವ ಹೀಗೆ ವಿವಿಧ ಬದಲಾವಣೆಗಳು ಆಗುತ್ತಲೇ ಇರುತ್ತವೆ. ಅವುಗಳನ್ನು ತಾಯಿ ಅನುಭವಿಸಬೇಕಾದ ಸಂದರ್ಭಗಳು ಇರುತ್ತವೆ. ಅಲ್ಲದೇ ಈ ಸಮಯದಲ್ಲಿ ಯಾವುದೇ ಮಾತ್ರೆ, ಮೆಡಿಷನ್‌ಗಳನ್ನು ಪಡೆಯುವಂತಿರುವುದಿಲ್ಲ. ಹಾಗೊಮ್ಮೆ ಸೇವಿಸಿದರೆ ಅದು ಮಗುವಿನ ಆರೋಗ್ಯದ ಮೇಲೆ ನಕರಾತ್ಮಕ ಪರಿಣಾಮ ಉಂಟುಮಾಡುತ್ತದೆ. ಗರ್ಭಾವಸ್ಥೆಯಲ್ಲಿ ಆಗುವ ಬದಲಾವಣೆ ಅಥವಾ ಆರೋಗ್ಯದ ಸಮಸ್ಯೆಯು ಎಲ್ಲಾ ಗರ್ಭಿಣಿಯರಿಗೂ ಒಂದೇ ರೀತಿಯಲ್ಲಿ ಇರುವುದಿಲ್ಲ. ಒಬ್ಬರಿಂದ ಮತ್ತೊಬ್ಬರಿಗೆ ವಿಭಿನ್ನವಾಗಿರುತ್ತದೆ.

ಗರ್ಭಾವಸ್ಥೆಯ ಹಲವು ಲಕ್ಷಣಗಳು ಏನು ಎಂಬುದನ್ನು ಈ ಕೆಳಗಿನಂತೆ ವಿವರಿಸಲಾಗಿದೆ.

ಋತುಚಕ್ರದ ಸಮಯದಲ್ಲಿ ಏರುಪೇರು

ಮಹಿಳೆಗೆ ಪ್ರತಿ ತಿಂಗಳ ನಿಗಧಿತ ಅವಧಿಗೆ ಮುಟ್ಟು / ಋತುಚಕ್ರ ಉಂಟಾಗುತ್ತದೆ. ಗರ್ಭಾವಸ್ಥೆಯ ಆದಾಗ ಉಂಟಾಗುವ ಮೊದಲ ಬದಲಾವಣೆ ಎಂದರೆ ಆ ಅವಧಿ ಅಥವಾ ದಿನಾಂಕಕ್ಕೆ ಮುಟ್ಟು ಆಗದೇ ದಿನಾಂಕದಲ್ಲಿ ಏರುಪೇರು ಆಗುತ್ತದೆ. ಕೆಲವರಿಗೆ ಸಣ್ಣ ಪ್ರಮಾಣದಲ್ಲಿ ರಕ್ತ ಸ್ರಾವ ಉಂಟಾಗುವ ಸಾಧ್ಯತೆಯೂ ಉಂಟು. ಇದಕ್ಕೆ ಇಂಗ್ಲಿಷ್‌ನಲ್ಲಿ ಇಂಪ್ಲಾಂಟೇಶನ್ ಎಂದು ಕರೆಯುತ್ತಾರೆ. ಈ ರಕ್ತ ಸ್ರಾವವು ಋತು ಚಕ್ರದ ರಕ್ತ ಸ್ರಾವದಂತೆ ಅನಿಸುವುದಿಲ್ಲ. ಬಿಳಿದು ಹೋಗುವುದರ ಜತೆಗೆ ಸ್ವಲ್ಪ ಪ್ರಮಾಣದಲ್ಲಿ ರಕ್ತ ಸ್ರಾವ ಆದಂತೆ, ಗುಲಾಬಿ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತದೆ.

ವಾಕರಿಕೆ ಕಾಣಿಸಿಕೊಳ್ಳುವುದು

ಗರ್ಭಾವಸ್ಥೆಯ ಸಾಮಾನ್ಯ ಲಕ್ಷಣದಲ್ಲಿ ವಾಕರಿಕೆಯು ಒಂದು. ಈ ಲಕ್ಷಣ ಗರ್ಭಧರಿಸಿದವರಿಗೆ ಬೆಳಗ್ಗೆಯ ಸಮಯ ಹೆಚ್ಚಾಗಿರುತ್ತದೆ. ಕೆಲವರಿಗೆ ಯಾವುದೇ ಆಹಾರವನ್ನು ಸೇವಿಸಿದ ತಕ್ಷಣ ವಾಂತಿಯಾಗುತ್ತದೆ. ಈ ಲಕ್ಷಣ ಗರ್ಭಧರಿಸಿದ ಎಲ್ಲಾ ಮಹಿಳೆಯರಿಗೂ ಆಗಬೇಕು ಎಂತಲೂ ಇಲ್ಲ.

ಸ್ತನದ ಗಾತ್ರದಲ್ಲಿ ಬದಲಾವಣೆ

ಮೊದಲ ಗರ್ಭಾವಸ್ಥೆಯಲ್ಲಿ ಮಹಿಳೆಗೆ ವಿಶೇಷವಾಗಿ ಸ್ತನದ ಗಾತ್ರದಲ್ಲಿ ಬದಲಾವಣೆ ಉಂಟಾಗುತ್ತದೆ. ಇದು ಆರಂಭಿಕ ಸೂಚನೆಯಲ್ಲಿ ಒಂದು ಎನ್ನಬಹುದು. ಹಾಲು ಉತ್ಪಾದನೆಗಾಗಿ ಗರ್ಭಾಧರಿಸಿದ ಮಹಿಳೆಯರಲ್ಲಿ ಸ್ತನದ ಗಾತ್ರ ಹೆಚ್ಚಾಗುತ್ತದೆ. ಅಲ್ಲದೇ ಸ್ತನಗಳ ಮೇಲೂ ರಕ್ತ ನಾಳಗಳು ಹೆಚ್ಚು ಗೋಚರವಾಗುತ್ತವೆ. ಮೊಲೆ ತೊಟ್ಟುಗಳ ಬಣ್ಣವು ಕಪ್ಪಾಗುವುದು, ತೊಟ್ಟುಗಳ ಸುತ್ತ ಸೂಕ್ಷ್ಮವಾಗಿ ನೋವು ಕಾಣಿಸಿಕೊಳ್ಳುವುದು.

ಮೂತ್ರ ವಿಸರ್ಜನೆ ಆಗಾಗ ಉಂಟಾಗುವುದು

ಮಹಿಳೆಗೆ ಗರ್ಭಾವಸ್ಥೆಯ ಪೂರ್ವದಲ್ಲಿಯೇ ಆಗಾಗ ಮೂತ್ರವಿಸರ್ಜನೆ ಪ್ರಾರಂಭವಾಗುತ್ತದೆ. ಇದು ಬೆಳೆಯುತ್ತಿರುವ ಗರ್ಭಾಶಯದಿಂದ ಉಂಟಾಗುವುದು. ಜತೆಗೆ ಹಾರ್ಮೋನ್‌ಗಳ ಬದಲಾವಣೆಯು ಸೊಂಟಕ್ಕೆ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಮೂತ್ರ ವಿಸರ್ಜನೆ ನೋವಿನಿಂದ ಕೂಡಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು. ಅದು ಸೋಂಕನ್ನು ಸೂಚಿಸುತ್ತದೆ.

ಹೆಚ್ಚು ಆಯಾಸ ಆಗುವುದು

ಗರ್ಭಧರಿಸಿದ ಮಹಿಳೆಗೆ ಆಗಾಗ ಅತಿಯಾದ ಆಯಾಸ ಸಮಸ್ಯೆ, ತಲೆ ತಿರುಗುವುದು, ಯಾವುದೇ ಕೆಲಸದ ಕಡೆ ಆಸಕ್ತಿ ಇಲ್ಲದಂತಾಗುವುದು. ಇವೆಲ್ಲ ಸಾಮಾನ್ಯ ಆರಂಭಿಕ ಚಿಹ್ನೆ ಎನ್ನಲಾಗುವುದು. ಆರಂಭಿಕ ಗರ್ಭಾವಸ್ಥೆಯಲ್ಲಿ ಧಣಿವಿನ ಭಾವನೆ ಸಾಮಾನ್ಯವಾಗಿರುತ್ತದೆ. ಆಗ ಗರ್ಭಿಣಿಯರು ನಿದ್ರೆಯ ಸಮಯವನ್ನು ಹೆಚ್ಚಿಸಿಕೊಳ್ಳಬೇಕು. ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಆಯಾಸವನ್ನು ನಿಯಂತ್ರಿಸಲು ಲಘುವಾದ ವ್ಯಾಯಾಮ ಮಾಡಬೇಕು.

ಸೆಳೆತ

ಋತುಚಕ್ರದ / ಮುಟ್ಟಿನ ಸಮಯದಲ್ಲಿ ಆಗುವಂತೆ ಸೆಳೆತವು ಉಂಟಾಗುತ್ತದೆ. ರಕ್ತಸ್ರಾವ ಇಲ್ಲದ ಸೌಮ್ಯವಾದ ಗರ್ಭಾವಸ್ಥೆಯಲ್ಲಿ ಸೆಳೆತದ ಸೂಚನೆಯನ್ನು ನೀಡುವುದು. ಮೊದಲ ತ್ರೈಮಾಸಿಕದಲ್ಲಿ ಸಾಮಾನ್ಯವಾಗಿ ಈ ಲಕ್ಷಣ ಇರುತ್ತದೆ. ಇದು ಗರ್ಭಾಶಯದ ವಿಸ್ತರಣೆಯ ಪರಿಣಾಮವಾಗಿರುತ್ತದೆ. ಗರ್ಭಾವಸ್ಥೆಯಲ್ಲಿ ಇರುವಾಗ ತೀವ್ರವಾದ ಸೆಳೆತ ಹಾಗು ಯೋನಿಯಲ್ಲಿ ರಕ್ತ ಸ್ರಾವ ಉಂಟಾದರೆ ವೈದ್ಯರಲ್ಲಿ ಚಿಕಿತ್ಸೆಯನ್ನು ಪಡೆಯಬೇಕು. ಅಲ್ಲದೆ ಕಿಬ್ಬೊಟ್ಟೆ ಉಬ್ಬುವುದು, ಮಲಬದ್ಧತೆ ಮತ್ತು ಎದೆಯುರಿ ಗರ್ಭಾವಸ್ಥೆಯ ಪೂರ್ವದಲ್ಲಿ ಗೋಚರಿಸುವ ಚಿಹ್ನೆಯಾಗಿರುತ್ತವೆ. ಮೂಗು ಕಟ್ಟುವುದು, ಮೂಗಿನ ದಟ್ಟಣೆ ಗರ್ಭಾವಸ್ಥೆಯ ಆರಂಭಿಕ ರೋಗ ಲಕ್ಷಣ ಎನ್ನಲಾಗುತ್ತದೆ. ರಕ್ತ ಪೂರೈಕೆ ಹೆಚ್ಚಾದಂತೆ ಮೂಗಿನ ಹಾದಿ ಸ್ವಲ್ಪ ಸೆಳೆತ ಅಥವಾ ದಟ್ಟಣೆಗೆ ಕಾರಣವಾಗುವುದು. ಆಹಾರದ ಹಲವು ಬಯಕೆಗಳು ಗರ್ಭಾವಸ್ಥೆಯ ಆರಂಭಿಕ ಮತ್ತು ಆನಂತರದಲ್ಲಿ ಸಾಮಾನ್ಯವು ಸಹ. ವಿಶಿಷ್ಟ ಎಂದರೆ ಕೆಲವು ಬಯಕೆಗಳು ನಿರ್ಧಿಷ್ಟ ಪೋಷಕಾಂಶದ ಕೊರತೆಯನ್ನು ಸೂಚಿಸುತ್ತವೆ. ಆದ್ದರಿಂದ ಸಾಕಷ್ಟು ಪೋಷಕಾಂಶಯುಕ್ತ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಪ್ರೋಟೀನ್, ವಿಟಮಿನ್‌ಗಳು, ಫೋಲಿಕ್ ಆಮ್ಲ ಭರಿತವಾದ ಆಹಾರಗಳನ್ನು ಸೇವಿಸಬೇಕು.

ಮಾನಸಿಕ ಸ್ಥಿತಿಯಲ್ಲಿ ಬದಲಾವಣೆಗಳು

ಮನಃಸ್ಥಿತಿಯಲ್ಲಿ ಹಠಾತ್ ಹಾರ್ಮೋನ್ ಬದಲಾವಣೆಗಳು ಉಂಟಾಗುತ್ತವೆ. ಆಯಾಸ, ಒತ್ತಡದ ಭಾವನೆ, ಮನಸ್ಸಿನಲ್ಲಿ ಹೆಚ್ಚಿನ ಭಾವನಾತ್ಮಕ ಸಂವೇದನೆಗಳು ಉಂಟಾಗುತ್ತವೆ. ಗರ್ಭಿಣಿಯ ಮನಃಸ್ಥಿತಿಯಲ್ಲಿ ಹಠಾತ್ ಏರಿಳಿತವನ್ನು ಅನುಭವಿಸುವುದು, ಗರ್ಭಾವಸ್ಥೆಯು ಕೆಲವರಿಗೆ ಖಿನ್ನತೆ, ಅತಂಕ ಮತ್ತು ರೋಗವನ್ನು ಉಂಟುಮಾಡುತ್ತದೆ. ಆದ್ದರಿಂದ ಆತಿಯಾದ ಭಾವನಾತ್ಮಕ ಏರಿಳಿತ ಉಂಟಾದರೆ ವೈದ್ಯರಲ್ಲಿ ಸಲಹೆ ಪಡೆಯಬೇಕು.

ತಲೆನೋವು

ಗರ್ಭಿಣಿ ಆರಂಭದ ಸಮಯದಲ್ಲಿ ಸಣ್ಣ ಪ್ರಮಾಣದ ತಲೆನೋವು ಉಂಟಾಗುತ್ತದೆ. ಅದು ಲಘುವಾದ ರಕ್ತದ ಒತ್ತಡ ಮತ್ತು ಬದಲಾವಣೆಯಿಂದಾಗಿ ಉಂಟಾಗುವುದು. ತೂಕದಲ್ಲಿ ಅಸಮತೋಲನ, ಕಬ್ಬಿಣಾಂಶದ ಕೊರತೆ ಮತ್ತು ರಕ್ತಹೀನತೆಯಿಂದ ಉಂಟಾಗುತ್ತದೆ. ಗರ್ಭಾವಸ್ಥೆಯಲ್ಲಿ ತಲೆನೋವು ಕಾಡುವವರು ತಾವು ಮಲಗುವ ಭಂಗಿಯನ್ನು ಬದಲಾವಣೆ ಮಾಡಿಕೊಳ್ಳಬೇಕು. ತಲೆನೋವು ಬಂದಾಗ ಸ್ವಲ್ಪ ತಾಸು ನಿದ್ರೆ ಮಾಡಿ.

ಇನ್ನೂ ಕೆಲವರಿಗೆ ಅತಿಯಾದ ತಲೆನೋವು ಸಹ ಗರ್ಭಾವಸ್ಥೆಯ ಅಂತ್ಯದವರೆಗೂ ಆಗಾಗ ಬರುತ್ತದೆ. ಇದಕ್ಕೆ ಕಾರಣ ಹಾರ್ಮೋನ್ ವ್ಯತ್ಯಾಸ ಮತ್ತು ರಕ್ತದ ಒತ್ತಡ ಎನ್ನಲಾಗುತ್ತದೆ.

ತಲೆನೋವಿಗೆ ಪರಿಹಾರ ಎಂದರೆ ಹೆಚ್ಚು ಹೆಚ್ಚು ದ್ರವ ಆಹಾರ ಸೇವಿಸುವುದು. ಪೋಷಕಾಂಶ ಭರಿತವಾದ ಆಹಾರವನ್ನು ಸಮಯಕ್ಕೆ ಸರಿಯಾಗಿ ಸೇವಿಸಿ. ಆಗ ಸಮಸ್ಯೆಯು ಕಡಿಮೆ ಆಗುತ್ತದೆ.

ಗರ್ಭಾವಸ್ಥೆಯ ನಿರ್ಧಾರ

ಗರ್ಭಾವಸ್ಥೆ ಧೃಡತೆಯನ್ನು ಮನೆಯಲ್ಲಿ ಅಥವಾ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಬಹುದು. ಹೆಚ್‌ಸಿಜಿ ಎಂಬ ಹಾರ್ಮೋನ್ ಪರೀಕ್ಷಾ ಪಟ್ಟಿಯಿಂದ ಅಳೆಯಬಹುದು. ಗರ್ಭಾವಸ್ಥೆಯನ್ನು ಧೃಡವಾಗಿ ನಿರ್ಧರಿಸುವ ಈ ಪರೀಕ್ಷೆಯನ್ನು ಮೊದಲು ಮಾಡಬೇಕು. ಇದರ ಆಧಾರದ ಮೇಲೆ ವೈದ್ಯರಲ್ಲಿ ಪರಿಶೀಲಿಸಿಕೊಳ್ಳಬಹುದು. ಈ ಪರೀಕ್ಷೆಯಲ್ಲಿ ಉತ್ತರವು ನೆಗೆಟಿವ್ ಬಂದರೆ ನೀವು ಗರ್ಭಾವಸ್ಥೆ ಹೊಂದಿಲ್ಲ ಎಂದರ್ಥ. ಅಧೇ ಫಲಿತಾಂಶ ಪಾಸಿಟಿವ್ ಬಂದರೆ ನೀವು ಗರ್ಭಧರಿಸಿದ್ಧೀರಿ ಎಂದರ್ಥ.

You may also like