ವಿಶ್ವ ಆರೋಗ್ಯ ಸಂಸ್ಥೆಯ(WHO) ಪ್ರಕಾರ ಭಾರತದಲ್ಲಿ ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆ 3 ಕೋಟಿ ಇದೆ. ಇದು 2030ರ ವೇಳೆಗೆ 8 ಕೋಟಿಯನ್ನ ಮುಟ್ಟುತ್ತೆ ಎಂದು ಎಚ್ಚರಿಸಿದ್ದಾರೆ. ಆ ಎಚ್ಚರಿಕೆನಾ ನಾವು ಗಮನದಲ್ಲಿಟ್ಟುಕೊಂಡು ಸರಿಯಾದ ಡಯಾಟ್ ಫಾಲೋ ಮಾಡಿದ್ರೆ ಯಶಸ್ಸನ್ನ ಸಾಧಿಸಬಹುದು.
ಡಯಾಬಿಟೀಸ್ ದೇಹದಲ್ಲಿ ಇನ್ಸುಲಿನ್ನನ್ನು ಹೆಚ್ಚಾಗಿ ಉತ್ಪತ್ತಿ ಮಾಡುತ್ತೆ ಹಾಗಾಗಿ ನಾವು ಹೆಚ್ಚಿನ ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ. ಪ್ರತಿ ದಿನ ನಾವು ವ್ಯಾಯಾಮ ಮಾಡೋದರ ಜೊತೆಗೆ ಕೆಲವು ಡಯಟ್ ಪ್ಲಾನ್ ಕೂಡ ಮಾಡ್ಬೇಕು, ಆ ಡಯಟ್ ಪ್ಲಾನ್ ಯಾವ್ ರೀತಿ ಇರ್ಬೇಕು ಅಂದ್ರೆ ನಮ್ಮಲ್ಲಿರೋ ಕೆಟ್ಟ ಕೊಬ್ಬನ್ನ ಒಳ್ಳೆ ರೀತಿಯ ಕೊಬ್ಬಿನಿಂದ
ಹೊಡೆದೊಡಿಸಬೇಕು. ಅಂದ್ರೆ ಮುಳ್ಳನ್ನ ಮುಳ್ಳಿಂದಾನೆ ತೆಗೆಯೋ ರೀತಿ. ಒಂದೇ ದಿನದಲ್ಲಿ ನಿಮ್ಮ ಡಯಾಬಿಟೀಸ್ನ ನಿಮ್ ಕಂಟ್ರೋಲ್ಗೆ ತಗೋ ಬಹುದು ಅದು ಹೇಗೆ ಎಂದು ಈ ಕೆಳಗಿನಂತೆ ತಿಳಿಸಲಾಗಿದೆ.
ಮೊದಲಿಗೆ ನೀವು ದಿನ ಒಂದಕ್ಕೆ ಸಿರಿಧಾನ್ಯಗಳು, ಅಕ್ಕಿ, ಚಪಾತಿ, ಜೋಳ ಹೀಗೆ ಈ ರೀತಿಯ ಆಹಾರದಲ್ಲಿನ ಒಟ್ಟು 400 ಗ್ರಾಂನಷ್ಟು ಕ್ಯಾಲೋರಿಯನ್ನ ತಿಂತೀರ ಇದನ್ನ ನಾವು 150 ಗ್ರಾಂಗೆ ಇಳಿಸಬೇಕು ಅದು ಹೇಗೆ ಅಂದ್ರೆ ನೀವು ತಿನ್ನೋ 4 ಚಪಾತಿನ 1 ಚಪಾತಿಗೆ ಇಳಿಸಬೇಕು ಈ ರೀತಿ ನೀವು ಸೇವಿಸೋ ಆಹಾರದ ಪ್ರಮಾಣವನ್ನ ಕಡಿಮೆ ಮಾಡಿ. ಏನಪ್ಪ ಇವ್ರು ಎಲ್ಲಾ ಕಮ್ಮಿ ಮಾಡಿ ಅಂತ
ಹೇಳ್ತಾ ಇದ್ದಾರೆ ನಮ್ ಆರೋಗ್ಯಕ್ಕೆ ತೊಂದ್ರೆ ಆಗಲ್ವಾ ಅಂತ ಯೋಚ್ನೆ ಮಾಡ್ಬೇಡಿ. ಕಾರಣ ಇದನ್ನ ಕಂಟ್ರೋಲ್ ಮಾಡಿ 150 ಗ್ರಾಂಗೆ ಇಳಿಸಿ ಉಳಿದ ಕ್ಯಾಲೋರಿಯನ್ನ ಬೇರೆ ರೀತಿಯ ಆಹಾರದ
ರೂಪದಲ್ಲಿ ಸೇವಿಸಿ. ಅಂದ್ರೆ ಅರ್ದ ಭಾಗ ಕೊಕನಟ್ ತುರಿ (ಕಾಯಿಯ ತುರಿ)ಯನ್ನು ಹಾಗೇ ಸೇವಿಸಿ ಅಥವಾ ಅದರ ಹಾಲನ್ನು ಸೇವಿಸಿ.
ಇದರಿಂದ ನಿಮಗೆ 350 ಗ್ರಾಂ ಕ್ಯಾಲೋರಿ ಸಿಗುತ್ತೆ. 50 ಗ್ರಾಂ ಬಾದಾಮಿಯನ್ನ ಸೇವಿಸಿ ಇದು ನಿಮಗೆ 300 ಗ್ರಾಂ ಕ್ಯಾಲೋರಿ ಕೊಡುತ್ತೆ. 2 ಫುಲ್ ಮೊಟ್ಟೆಯನ್ನ ತಿನ್ನಿ 100 ಗ್ರಾಂ ಕ್ಯಾಲೋರಿ ಸಿಗುತ್ತೆ. ನೀವು ವೆಜ್ ಆಗಿದ್ರೆ 2 ಸ್ಪೂನ್ ತುಪ್ಪ ತಿನ್ನಿ ಇದು ನಿಮಗೆ 250 ಕ್ಯಾಲೋರಿ ಕೊಡುತ್ತೆ ಈ ರೀತಿಯ ಬದಲಾವಣೆಗಳನ್ನ ಮಾಡಿ ಮರು ದಿನ ನಿಮ್ಮ ಶುಗರ್ ಅನ್ನು ಚೆಕ್
ಮಾಡಿ ನಿಮಗೆ ಆಶ್ಚರ್ಯಕರವಾದ ಸಂಗತಿ ಕಾದಿರುತ್ತೆ, ಅದು ನಿಮ್ಮ ಶುಗರ್ ಕಂಟ್ರೋಲ್ಗೆ ಬಂದಿರುತ್ತೆ.
ಅಮೇಲೆ ಇದೆಲ್ಲ ತಿಂಡಿ ಆದ್ಮೇಲೋ ಅಥವ ಅದಕ್ಕು ಮುಂಚೇನಾ ಅಂತ ಕೇಳ್ಬೇಡಿ ಇದೆಲ್ಲ ಹೇಳಿದ್ದು ಊಟದ ಬದಲಿಗೆ ಎನ್ನೋದನ್ನ ಮರಿಬೇಡಿ. ಇದಿಷ್ಟನ್ನ ಚಾಚೂ ತಪ್ಪದೇ ಮಾಡಿದ್ರೆ ನೀವು ನಿಮ್ಮ ಮಧುಮೇಹವನ್ನು ಒಂದೇ ದಿನದಲ್ಲಿ ಕಂಟ್ರೋಲ್ ಮಾಡಬಹುದು ಇದನ್ನ ವಾರ ಪೂರ್ತಿ ಅನುಸರಿಸಿದ್ರೆ ನಿಮಗೆ ಸಂದೇಹ ಬರುತ್ತೆ. ನನ್ಗೆ ಮಧುಮೇಹ ಇತ್ತ ಅಂತ.
ಅಮೇಲೆ ನೈಸರ್ಗಿಕವಾಗಿ ಹೇಗ್ ಕಂಟ್ರೋಲ್ ಮಾಡೋದು ನಿಮ್ಗೆ ಗೊತ್ತ ಅದನ್ನು ಹೇಳ್ತೀವಿ ಕೇಳಿ.
ಬೆಳಿಗ್ಗೆ ಎದ್ದ ಕೂಡಲೇ ಉತ್ತಮವಾದ ವ್ಯಾಯಾಮ,, ಜೊತೆಗೆ ಹಾಗಲಕಾಯಿ ಜ್ಯೂಸ್ ಕುಡಿಬೇಕು ಈ ಜ್ಯೂಸ್ ಆರೋಗ್ಯಕ್ಕೆ ಉತ್ತಮ ಪ್ರಯೋಜನಕಾರಿ ಇದನ್ನ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಿಕೊಳ್ಳಬಹುದು. ಅಲ್ಲದೆ ಇದು ದೇಹದಲ್ಲಿನ ಇನ್ಸುಲಿನ್ನನ್ನು ಸಕ್ರೀಯಗೊಳಿಸುತ್ತೆ. ಜೊತೆಗೆ ರಾತ್ರಿ ಮಲಗುವ ಮುನ್ನ ನೀರಿನಲ್ಲಿ ಮೆಂತ್ಯೆಯನ್ನು ನೆನೆಸಿಡಿ ಮರುದಿನ ಬೆಳಿಗ್ಗೆ ಈ ಮೆಂತ್ಯೆಯ ನೀರನ್ನ ಕುಡಿಯಿರಿ ಇದು ಕೂಡ ಅತ್ಯುತ್ತಮ ಮನೆ ಮದ್ದು. ಆಮೇಲೆ ಹೆಚ್ಚಾಗಿ ನೀವು ಬಾರ್ಲಿಯನ್ನು ಬಳಸಿ ಯಾಕೆ ಅಂದ್ರೆ ಇದರಲ್ಲಿ ಆಂಟಿ ಆಕ್ಸಿಡೆಂಟ್ ಅಂಶ ಅಧಿಕವಿದ್ದು ರಕ್ತದ ಗ್ಲೂಕೋಸನ್ನು ನಿಯಂತ್ರಣದಲ್ಲಿಡುತ್ತೆ. ಈ ರೀತಿ ಮಾರ್ಗ ಸೂಚಿಗಳನ್ನ ಅನುಸರಿಸುವುದರಿಂದ ಮಧುಮೇಹವನ್ನು ನಿಮ್ಮ ಹಿಡಿತದಲ್ಲಿಟ್ಟುಕೊಳ್ಳಬಹುದು.
ಗರ್ಭಾವಸ್ಥೆಯ ಲಕ್ಷಣಗಳೇನು? ಆರಂಭದಲ್ಲಿ ಯಾವೆಲ್ಲಾ ಸಮಸ್ಯೆ, ಬದಲಾವಣೆಗಳು ಕಂಡುಬರುತ್ತವೆ?