ರಾಧಾಕೃಷ್ಣರ ಕತೆಯನ್ನ ಎಲ್ಲಾ ಕೇಳೆ ಇರ್ತೀರಾ, ಆದ್ರೆ ಅವರ ಕೊನೆಗಾಲದವರೆಗೆ ಇದ್ದ ಪವಿತ್ರ
ಪ್ರೀತಿ, ತ್ಯಾಗದ ಕತೆ ಗೊತ್ತಾ..?, ಅದೇ ಪ್ರೀತಿ, ಪ್ರೇಮ, ಪ್ರಣಯಕ್ಕೆ ಸಾಕ್ಷಿಯಾಗಿರುವ ರಾಧಾ ಕೃಷ್ಣರ ತ್ಯಾಗದ
ಕತೆಯನ್ನು ಈ ಕೆಳಗೆ ನೀಡಿದ್ದೇವೆ.
ರಾಧೆ ಕೃಷ್ಣನಿಗಿಂತ ಮುಂಚೆ ಹುಟ್ಟಿದ್ರು ಕಣ್ಣು ಬಿಡದೆ ಕೃಷ್ಣನ ಬರುವಿಕೆಯನ್ನು ಕಾದು ಅವನನ್ನೇ ಮೊದಲಿಗೆ ತನ್ನ ಕಣ್ಣುಗಳಲ್ಲಿ ತುಂಬಿಕೊಳ್ಳುವಾಕೆ. ಅಂದು ಪ್ರೀತಿ ಮಾಡಲು ಪ್ರಾರಂಭಿಸಿದ ರಾಧಾ
ಗೊತ್ತಿದ್ದೋ ಗೊತ್ತಿಲದೇಯೋ ಕೃಷ್ಣನಲ್ಲಿ ಬೆರೆಯುತ್ತಾಳೆ.
ರಾಧೆಗೆ ಜೀವನ ಅಂದ್ರೆ ಏನು ಅನ್ನೋದನ್ನ ಪರಿಚಯ ಮಾಡ್ಸೋಕೆ ಕೃಷ್ಣ ಜೀವನವನ್ನೆ ಮುಡಿಪಾಗಿಡುತ್ತಾನೆ. 16 ಸಾವಿರ ಹೆಂಡತಿಯರಿದ್ದರು ಕೃಷ್ಣನಿಗೆ ತನ್ನ ಮೊದಲ ಪ್ರೀತಿಯನ್ನು
ಮರೆಯೋಕೆ ಆಗೋದಿಲ್ಲ. ಅದಕ್ಕೆ ಆ ದಿನ ರಾಧೆಯ ಮದುವೆ ಅಯ್ಯನ್ ಜೊತೆಗೆ ಮುಗಿದಮೇಲೆ ಅವಳಿಗೆ ನಿಜವಾದ ಪ್ರೀತಿ ಅಂದ್ರೆ ಏನು ಅನ್ನೋದನ್ನ ತಿಳಿಸಿಕೊಟ್ಟು ಒಂದು ವರವನ್ನು ಕೊಟ್ಟು
ಹೊರಡುತ್ತಾನೆ. ಅದೇನೆಂದರೆ ಅವರಿಬ್ಬರು ಎಷ್ಟೆ ದೂರವಿದ್ದರು ಅವನ ಮಾತು ಇವಳಿಗೆ ಇವಳ ಮಾತು ಅವನಿಗೆ ಕೇಳುವಂತ ವಿಶೇಷ ಶಕ್ತಿಯನ್ನು ಕೊಡುತ್ತಾನೆ. ಹಾಗಾಗೀ ಕೃಷ್ಣ ರಾಧೆಯನ್ನು ಬಿಟ್ಟು ಹೋದ ಮೇಲೂ ಅವಳಿಗೆ ಒಂಟಿತನ ಕಾಡುವುದಿಲ್ಲ.
ಹೀಗೆ ಕಾಲ ಕಳೆದಂತೆ ರಾಧೆಯ ಪತಿಯು ಸಾವನಪ್ಪುತ್ತಾನೆ. ಮಕ್ಕಳೆಲ್ಲ ದೊಡ್ಡವರಾಗಿದ್ದಾರೆ. ಕೃಷ್ಣನ ಜಪದಲ್ಲಿದ್ದ ರಾಧೆಗೆ ಕೃಷ್ಣನ್ನನ್ನು ನೋಡಬೇಕು ಎಂದೆನಿಸಿ ಅವನನ್ನು ಕೇಳಿಕೊಳ್ಳುತ್ತಾಳೆ. ಅದೇ ಕ್ಷಣ ಅವಳಿಗೆ ದರ್ಶನ ನೀಡುವ ಕೃಷ್ಣ ಅವಳನ್ನು ತನ್ನ ಅರಮನೆಗೆ ಕರೆಕೊಂಡು ಹೋಗುತ್ತಾನೆ. ಅಲ್ಲಿ ಕೃಷ್ಣನನ್ನು ಒಪ್ಪಿಸಿ ಅರಮನೆಯ ಭೋಜನಾಲಯದಲ್ಲಿ ಕೆಲಸ ಮಾಡುತ್ತಿರುತ್ತಾಳೆ, ಆಗ ಅವಳಿಗೆ ಹೊಸದೊಂದು ಸಮಸ್ಯೆ ತಲೆದೂರುತ್ತೆ ಒಂಟಿತನ ಕಾಡಲು ಶುರುವಾಗುತ್ತೆ ಅದಕ್ಕೆ ಕಾರಣ ತಿಳಿಯಲು ಪರದಾಡುತ್ತಾಳೆ. “ಅಷ್ಟು ದೂರವಿದ್ದಾಗಲೇ ನನಗೆ ಕೃಷ್ಣನಿಂದ ದೂರವಾಗಿದ್ದೀನಿ ಅಂತ ಅನ್ನಿಸಲೇ ಇಲ್ಲ ಆದ್ರೆ ಈಗ ಕೃಷ್ಣನ ಅರಮನೆಯಲ್ಲೆ ಇದ್ದೀನಿ ನನಗೆ ಒಂಟಿತನ ಕಾಡ್ತಾ ಇದ್ದೀಯಾಲ್ಲ” ಎಂದು ಕೃಷ್ಣನಿಗೂ ಹೇಳದೆ ಅಲ್ಲಿಂದ ಹೊರಟು ತನ್ನ ಊರಿಗೆ ಬರುವ ರಾಧೆಯು ಕೃಷ್ಣನನ್ನು ನೆನಯುತ್ತ ಜೀವನವನ್ನು ಸಾಗಿಸುತ್ತಾಳೆ.
ರಾಧೆ ಹೋಗಿರುವ ವಿಷಯವು ಕೃಷ್ಣನಿಗೆ ಗೊತ್ತಿದ್ದರೂ ಸಹ ಮತ್ತೆ ರಾಧೆ ಕರೆಯುವ ತನಕ ಅವಳ ಬಳಿ ಹೋಗುವುದಿಲ್ಲ. ಕಾರಣ ಅವನಿಗೆ ಗೊತ್ತು ದೂರವಿದ್ದರು ನಮ್ಮ ಪ್ರೀತಿ ಸಾಯಲ್ಲ ಎಂದು. ಮೊದಲೇ ಕೃಷ್ಣನಿಂದ ನಾನು ಕರೆದಾಗ ನೀನು ಬರಬೇಕು ಎಂದು ಮಾತು ಪಡೆದಿರುವರಾಧೆಯು ಒಂದು ದಿನ ತನ್ನ ಸಾವು ಸಮೀಪಿಸುತ್ತಿರುವುದು ಗೊತ್ತಾಗಿ ಕೃಷ್ಣನನ್ನು ಕರೆಯುತ್ತಾಳೆ. ಆ ಕೂಗಿಗೆ ತಕ್ಷಣ ಪ್ರತ್ಯಕ್ಷವಾಗುವ ಕೃಷ್ಣನಿಗೆ ರಾಧೆಯು ಈ ಭೂಮಿಯನ್ನು ತೊರೆಯುವ ವಿಷಯ ತಿಳಿದಿದ್ದು ಅವಳನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಳ್ಳುತ್ತಾನೆ. ಆಗ ರಾಧೆ ಕೃಷ್ಣನಿಗೆ ತನಗೆ ಇಷ್ಟವಾದ ರಾಗವನ್ನು ನುಡಿಸಲು ಕೇಳುತ್ತಾಳೆ. ನಸುನಕ್ಕ ಕೃಷ್ಣ ಅವಳಿಗೆ ಇಷ್ಟವಾದ ರಾಗವನ್ನು ಕೊಳಲಿನಲ್ಲಿ ನುಡಿಸುತ್ತ ಅವಳಿಗೆ ಆನಂದವನ್ನು ಕೊಡುತ್ತಾನೆ. ರಾಧೆಯು ಕೃಷ್ಣನ ಹೃದಯದಲ್ಲಿ
ಶಾಶ್ವತವಾಗಿ ನೆಲಸಬೇಕೆಂದು ಕೇಳುತ್ತಾ ರಾಧೆಯ ಪ್ರಾಣಪಕ್ಷಿಯು ಕೃಷ್ಣನ ತೊಡೆಯ ಮೇಲೆ ಅವನ ಕೊಳಲ ನಾದದ ಮಧ್ಯೆದಲ್ಲಿ ಹಾರುತ್ತೆ.
ರಾಧೆ ಅಗಲಿದನ್ನು ತಡೆಯಲಾರದ ಕೃಷ್ಣ ಆ ದಿನವೇ ತನ್ನ ಕೊಳಲನ್ನು ತ್ಯಜಿಸುತ್ತಾನೆ, ಮತ್ತೆಲ್ಲು ಕೊಳಲನ್ನು ಬಳಸುವುದಿಲ್ಲ. ಹೀಗೆ ರಾಧೆಯಲ್ಲಿ ಕೃಷ್ಣ, ಕೃಷ್ಣನಲ್ಲಿ ರಾಧೆ ಬೆರೆತಿದ್ದು ಅವರನ್ನು ಯಾರೂ ಎಂದಿಗೂ ಬೇರೆ ಮಾಡಲು ಸಾಧ್ಯವಿಲ್ಲ.
ಮಕ್ಕಳಿಗಾಗಿ ಈ ಕತೆ : ಸೌಲಭ್ಯಕ್ಕಿಂತ ಸ್ವತಂತ್ರವೇ ಸುಖ