ನ್ಯುಮೋನಿಯ ಎಂಬುದೊಂದು ಮಿನಿ ಕರೋನಾ ಇದ್ದಂತೆ ಅದರ ಲಕ್ಷಣಗಳು ಕಂಡುಬಂದರೆ ಕೂಡಲೇ ವೈದ್ಯರನ್ನು ಬೇಟಿಯಾಗಲೇ ಬೇಕು. ಏಕೆಂದರೆ ನಮಗೆ ಕೇವಲ ಶೀತವಾದರೆ ಅಥವಾ ಕಫ ಇದ್ದರೆ
ಮನೆಯಲ್ಲೇ ಔಷಧಿ ಮಾಡಿಕೊಳ್ಳಬಹುದು. ಆದರೆ ನ್ಯುಮೋನಿಯದ ವಿಷಯದಲ್ಲಿ ಆ ರೀತಿ ಮಾಡಲೇಬೇಡಿ. ಒಬ್ಬ ವ್ಯಕ್ತಿಗೆ ನ್ಯುಮೋನಿಯ ಇದೆ ಎಂದು ಗೊತ್ತಾದರೆ ಅದರಿಂದ ಅವರು ಕೂಡಲೇ
ಹೊರಬರಲು ಆಗುವುದಿರಲಿ, ಅದಕ್ಕೆ ತಿಂಗಳು ಅಥವಾ ವರ್ಷಗಳೇ ಬೇಕು. ಪ್ರಮುಖವಾಗಿ ಈ ಕೆಳಗಿನಂತೆ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರನ್ನು ಬೇಟಿಯಾಗಲೇ ಬೇಕು.
ಲಕ್ಷಣಗಳು :-
ಬ್ಯಾಕ್ಟಿರೀಯಾ, ವೈರಸ್, ಫಂಗಸ್ಗಳಿಂದ ಉಂಟಾಗುವ ಲಕ್ಷಣಗಳು
– ಚಳಿ ಇಲ್ಲದಿದ್ದರೂ ಮೈ ನಡುಗುತ್ತದೆ
– ವಿಪರೀತ ಮಾನಸಿಕ ಗೊಂದಲವಿರುತ್ತದೆ
– ಕಫ ಹೆಚ್ಚಾಗಿ ಕೆಮ್ಮು ಹೆಚ್ಚಾಗುತ್ತದೆ, ಕೆಮ್ಮಿದಾಗ ಎದೆನೋವು
– ಹೃದಯದ ಬಡಿತ ತುಂಬ ವೇಗಗೊಳ್ಳುತ್ತದೆ
– ಕಡಿಮೆ ರಕ್ತದೊತ್ತಡ ಮತ್ತು ಲೋ ಬಿಪಿ
– ಜ್ವರ, ಹೊಟ್ಟೆ ಹಸಿವು ಇಲ್ಲದೆ ದೇಹಕ್ಕೆ ಆಯಾಸ
– ಉಸಿರಾಟದಲ್ಲಿ ವೇಗಗೊಳ್ಳುವುದು
– ವಾಂತಿ, ವಾಕರಿಕೆ, ಭೇದಿ, ಹೊಟ್ಟೆ ಕೆಡುವುದು
ಶ್ವಾಸಕೋಶದಲ್ಲಿ ತೊಂದರೆ ಇದ್ದರೆ, ಪ್ಲೂರಲ್ ಎಫ್ಫ್ಯೋಶನ್, ಪ್ಲ್ಯೂರಿಸಿ ಮತ್ತು ಎಂಪಿಯೇಮ ಇದ್ದರೆ..
– ವಿಪರೀತ ಜ್ವರ, ದೇಹದ ತೂಕ ಹೆಚ್ಚಳ
– ಕೆಮ್ಮಿದಾಗ ಬಾಯಿಯಲ್ಲಿ ಕೀವು ಬರುವುದು
– ವಾತಾವರಣ ತಂಪಾಗಿದ್ದರು ಹೆಚ್ಚು ಬೆವರುವುದು
– ಉಸಿರಾಡಲು ತುಂಬ ಕಷ್ಟವಾಗುವುದು
– ಭುಜ ಮತ್ತು ಬೆನ್ನಿನ ನೋವು
– ಉಸಿರಾಟದ ವೈಫಲ್ಯದಿಂದಾಗಿ ಪ್ರಜ್ಞೆ ತಪ್ಪುತ್ತಾ ಇರುವುದು
– ಯಾವಾಗಲು ಸುಸ್ತಾದವರಂತೆ ಇರುವುದು
– ಉಸಿರಾಡಲು ತುಂಬ ತೊಂದರೆಯಾಗುವುದು
– ಸಂಪೂರ್ಣ ಹೃದಯ ವೈಫಲ್ಯ
ನ್ಯುಮೋನಿಯಾಗೆ ಕಾರಣಗಳು :-
ಮನುಷ್ಯನಿಗೆ ನ್ಯುಮೋನಿಯ ಹೇಗೆ ಬರುತ್ತದೆ ಎಂಬ ಪ್ರಶ್ನೆಗೆ ಉತ್ತರವಾಗಿ ನೀವು ಸೇವಿಸುವ ಗಾಳಿಯಲ್ಲಿ, ಆಹಾರದಲ್ಲಿ ಯಾವುದರಲ್ಲದರೂ ಸರಿಯೇ. ನಿಮ್ಮ ಎಚ್ಚರಿಕೆಯಲ್ಲಿ ನೀವು
ಇಲ್ಲದಿದ್ದರೆ ಇವುಗಳಿಂದಲೇ ಬರಬಹುದು ಹಾಗಾಗೀ ಇದಕ್ಕೆ ಮುಖ್ಯ ಕಾರಣಗಳೆಂದರೆ
ಬ್ಯಾಕ್ಟಿರೀಯಾಲ್ ನ್ಯುಮೋನಿಯಾ : ತುಂಬ ಪ್ರಮುಖವಾದ ಹಾಗೂ ಹೆಚ್ಚು ಜನರು ನ್ಯುಮೋನಿಯಾಕ್ಕೆ ಒಳಗಾಗುವುದು ಈ ಬ್ಯಾಕ್ಟಿರೀಯಾದಿಂದಾಗಿ ಹಾಗಾಗೀ ನಮ್ಮ ದೇಹದ ಒಳಗೆ
ಸೇರುವ ಪ್ರತಿಯೊಂದರ ಮೇಲು ನಮ್ಮ ಗಮನವಿರಲೇ ಬೇಕು.
ವೈರಲ್ ನ್ಯುಮೋನಿಯಾ : ವೈರಸ್ನಿಂದ ಬರುವ ನ್ಯುಮೋನಿಯಾವಾಗಿದ್ದು ಇದು ಗಾಳಿಯಲ್ಲಿ
ಹರಡುವುದರಿಂದ ಇದರಿಂದ ಬಹಳ ಹುಷಾರಾಗಿರಬೇಕು.
ಫಂಗಸ್ ನ್ಯುಮೋನಿಯಾ : ಫಂಗಸ್ ಇರುವ ಯಾವುದೇ ಅಹಾರವನ್ನು ಸೇವಿಸಿದಾಗ ಅಥವಾ ಯಾವುದೇ
ರೂಪದಲ್ಲಿ ಅದು ನಿಮ್ಮ ದೇಹವನ್ನು ಹೊಕ್ಕಾಗ ನೀವು ಸಹ ನ್ಯುಮೋನಿಯಾಕ್ಕೆ ಒಳಗಾಗುತ್ತೀರಾ.
ನ್ಯುಮೋನಿಯಾ ಪರಿಹಾರಗಳು :-
ನ್ಯುಮೋನಿಯಾ ಲಕ್ಷಣಗಳು ಕಂಡುಬಂದರೆ ಮೊದಲಿಗೆ ವೈದ್ಯರನ್ನು ಬೇಟಿಯಾಗಲೇ ಬೇಕು ಕಾರಣ ಈ ನ್ಯುಮೋನಿಯಾಗೆ ಮನೆಯಲ್ಲಿ ಔಷಧಿಗಳು ಸಿಗುವುದಿಲ್ಲವಾದರೂ ಮನೆಯಲ್ಲೇ ಸಿಗುವ ಕೆಲವು
ರೀತಿಯ ತರಕಾರಿ, ಹಣ್ಣುಗಳ ಸೇವನೆಯಿಂದ ನ್ಯುಮೋನಿಯಾವನ್ನು ಸ್ವಲ್ಪ ಕಾಲದವರೆಗೆ ನಿಯಂತ್ರಿಸಬಹುದು. ಆ ರೀತಿಯ ಮನೆಯ ಪದಾರ್ಥಗಳೆಂದರೆ.
ಪ್ರೋಟೀನ್ ಆಹಾರಗಳು :- ಕಾಳುಗಳು, ಬೀನ್ಸ್, ಮಾಂಸಾಹಾರ, ಮೀನುಗಳ ಸೇವನೆ ಈ ರೀತಿಯ ಆಹಾರದಲ್ಲಿ ಆಂಟಿ-ಇಂಪ್ಲಾಮೇಟರಿ ಗುಣ ಲಕ್ಷಣಗಳಿದ್ದು ಇದು ನಮ್ಮ ದೇಹದಲ್ಲಿ ಹಾನಿಗೊಳಗಾದ ಮಾಂಸಖಂಡಗಳನ್ನು ರಿಪೇರಿ ಮಾಡಲು ಸಹಕಾರಿಯಾಗುತ್ತದೆ.
ಮೊಸರು :- ಮೊಸರು ಸೇವನೆಯು ನ್ಯುಮೋನಿಯಾ ರೋಗಿಗಳಲ್ಲಿ ಚೈತನ್ಯವನ್ನು ತುಂಬಲು ಸಹಕಾರಿಯಾಗಿದ್ದು ನ್ಯುಮೋನಿಯಾ ರೋಗಕ್ಕೆ ರಾಮಬಾಣವಾಗಿ ಕೆಲಸ ಮಾಡುತ್ತದೆ.
ಹಸಿರು ತರಕಾರಿಗಳು :- ಪ್ರಮುಖವಾಗಿ ಕೇಲ್, ಪಾಲಕ್ ಸೊಪ್ಪು, ಲೆಟ್ಟೊಸ್, ಹಸಿರು ಎಲೆ ಇರುವ ಪದಾರ್ಥಗಳು ಮತ್ತು ತರಕಾರಿಗಳು ನಮಗೆ ಆಂಟಿ-ಆಕ್ಸಿಡೆಂಟ್ ಅಂಶಗಳಾಗಿದ್ದು ನ್ಯುಮೋನಿಯಾ ರೋಗಿಗಳಿಗೆ ರಕ್ಷಣೆ ಮಾಡುತ್ತದೆ.
ಸಿಟ್ರಸ್ ಅಂಶವಿರುವ ಹಣ್ಣುಗಳು :- ಕಿತ್ತಳೆ ಹಣ್ಣು, ನಿಂಬೆಹಣ್ಣು, ಮೊಸಂಬಿ ಹಣ್ಣು, ಬೆರ್ರಿ ಹಣ್ಣು, ಕಿವಿ ಹಣ್ಣು, ಈ ರೀತಿಯ ಹಣ್ಣುಗಳಲ್ಲಿ ವಿಟಮಿನ್ ಸಿ ಅಂಶವಿದ್ದು ಇದು ದೇಹವನ್ನುಸೋಂಕುಕಾರಕ ಅಂಶಗಳಿಂದ ಕಾಪಾಡುತ್ತದೆ.
Pneumonia in Kannada Translation – ಶ್ವಾಸಕೋಶದ ಉರಿಯೂತ, ಪುಪ್ಪಸ ಜ್ವರ.
Influenza and pneumonia meaning in Kannada – ಶ್ವಾಸಕೋಶದ ಉರಿಯೂತ, ಪುಪ್ಪಸ ಜ್ವರ.
ಒಂದೇ ದಿನದಲ್ಲಿ ಮಧುಮೇಹ ಕಂಟ್ರೋಲ್ ಮಾಡಲು ಈ ಟಿಪ್ಸ್