ಥೈರಾಯ್ಡ್ ಎಂದರೇ ಏನು ಎಂಬುದನ್ನು ಮೊದಲು ತಿಳಿದುಕೊಳ್ಳೊಣ. ನಮ್ಮ ದೈಹಿಕ ಚಟುವಟಿಕೆಗಳಲ್ಲಿ ಥೈರಾಯ್ಡ್ನ ಪಾತ್ರವು ದೊಡ್ಡದು. ಈ ರೀತಿಯ ಥೈರಾಯ್ಡ್ ಗ್ರಂಥಿಗಳು ಬಿಡುಗಡೆ ಮಾಡುವಂತಹ ಹಾರ್ಮೋನುಗಳು ಹೆಚ್ಚಾದಾಗ ಅಥವಾ ಕಡಿಮೆಯಾದಾಗ ಥೈರಾಯ್ಡ್ ಸಮಸ್ಯೆಗಳು ಉಂಟಾಗುತ್ತದೆ. ಈ ರೀತಿಯ ಥೈರಾಯ್ಡ್ನಲ್ಲಿ ಎರಡು ವಿಧ ಒಂದು “ಥೈರಾಡಿಸಮ್” ಮತ್ತೊಂದು “ಹೈಪೊಥೈರಾಡಿಸಮ್” ಈ ತರಹದ ಥೈರಾಯ್ಡ್ಗಳು ಗಂಟಲಿನಲ್ಲಿ ಚಿಟ್ಟೆಯ ಆಕಾರದಲ್ಲಿರುತ್ತವೆ. ಆದ್ದರಿಂದ ಇದು ಪಿಟ್ಯುಟರಿ ಗ್ರಂಥಿಯ ಅಧೀನದಲ್ಲಿ ತಮ್ಮ ಕಾರ್ಯ ನಿರ್ವಹಿಸುತ್ತವೆ. ಈ ಥೈರಾಯ್ಡ್ ಸಮಸ್ಯೆಗಳು ನಮ್ಮ ಶರೀರದ ಮೇಲಷ್ಟೇ ಅಲ್ಲ ಮಾನಸಿಕವಾಗಿ ಸಹ ತೊಂದರೆ ಕೊಡುತ್ತದೆ ಹಾಗಾಗೀ ದಯವಿಟ್ಟು ಇದನ್ನು ನಿರ್ಲಕ್ಷಿಸಬೇಡಿ.
ಲಕ್ಷಣಗಳು :-
• ಥೈರಯ್ಡ್ ಹಾರ್ಮೋನುಗಳು ನಿಮ್ಮ ಜೀರ್ಣಕ್ರೀಯೆಯ ವ್ಯವಸ್ಥೆಯ ಮೇಲೆ ತನ್ನ ಪ್ರಭಾವವನ್ನು ಬೀರಿ ಮಲಬದ್ದತೆಗೆ ಎಡೆಮಾಡಿಕೊಡುತ್ತದೆ.
• ಹಗಲ್ಲಲ್ಲಿ ನಿಮಗೆ ಸುಸ್ತಾಗುವುದು ಮತ್ತು ಅತೀಯಾದ ನಿದ್ರೆಬರುವುದು ಕೂಡ ನಿಷ್ಕ್ರೀಯ ಥೈರಾಯ್ಡ್ನ ಲಕ್ಷಣವಾಗಿದೆ.
• ನಿಷ್ಕ್ರೀಯ ಥೈರಾಯ್ಡ್ನಿಂದಾಗಿ ಕೂದಲು ಉದುರುವುದು, ಕಣ್ಣಿನ ರೆಪ್ಪೆ ಸಹ ಉದುರುವುದು, ನಿಮ್ಮ ದೇಹದ ಚರ್ಮ ಒಣಗುವುದು.
• ನಿಮ್ಮಲ್ಲಿ ಬೇಸರ ಮತ್ತು ಖಿನ್ನತೆಗೂ ಸಹ ಇದು ಒಂದೂ ರೀತಿಯಲ್ಲಿ ಕಾರಣವಾಗಬಹುದು.
• ನಿಮ್ಮ ದೇಹದ ತೂಕ ಧೀಡಿರನೇ ಹೆಚ್ಚಾಗುವುದು.
• ನಿಮ್ಮಲ್ಲಿ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತದೆ.
• ಈ ಥೈರಾಯ್ಡ್ ಸಮಸ್ಯೆಯಿಂದ ಹೃದಯದ ಸಮಸ್ಯೆಗಳು ಸಹ ಬರಬಹುದು ಮತ್ತು ನಿಮ್ಮ ದೇಹದ ಸ್ನಾಯುಗಳ ಸೆಳೆತ ಹಾಗೂ ನೋವು ಕೂಡ ಹೆಚ್ಚಾಗುವುದು.
• ಅಧಿಕ ರಕ್ತದೊತ್ತಡ ಮತ್ತು ಮಂಕು ಹಿಡಿಯುವುದು.
• ಗಂಟಲಿನ ನೋವು ಹೆಚ್ಚಾಗಿ ಊತವಾಗುವುದು ಮತ್ತು ಕುತ್ತಿಗೆಯ ನೋವು ವಿಫರೀತವಾಗುವುದು.
• ಹಸಿವು ಕಡಿಮೆಯಾಗುವುದು, ರುಚಿ ಬದಲಾದಂತೆ ಅನಿಸುವುದು, ನಿಶ್ಯಕ್ತಿಯಾಗುವುದು, ಪ್ರತಿಯೊಂದು ವಿಷಯಕ್ಕು ಕಿರಿಕಿರಿ ಉಂಟಾಗುವುದು, ತುರಿಕೆ ಸಮಸ್ಯೆ ತಲೆದೂರುವುದು.
ಕಾರಣಗಳು :-
• ಅಯೋಡಿನ್ ಕೊರತೆ :- ನಿಮ್ಮಲ್ಲಿ ಅಯೋಡಿನ್ ಕೊರತೆಯಿಂದ ಥೈರಾಯ್ಡ್ ಉಂಟಾಗಬಹುದು.
• ಥೈರಾಯ್ಡಿಟಿಸ್ :- ಉರಿಯೂತದಿಂದಾಗಿ ಅಂದರೆ ಇದು ನಿಮಗೆ ನೋವನ್ನು ಕೊಡಬಹುದು ಅಥವ ಕೊಡದೇ ಇರಬಹುದು ಇದು ನಿಮ್ಮಲ್ಲಿ ಉತ್ಪತ್ತಿಯಾಗುವ ಹಾರ್ಮೋನ್ಗಳನ್ನು ಕಡಿಮೆ ಮಾಡುತ್ತದೆ.
• ಹಶಿಮೊಟೊದ ಥೈರಾಯ್ಡಿಟಿಸ್ :- ನೋವು ರಹಿತ ಕಾಯಿಲೆ, ಇದು ಸ್ವಯಂ ನಿರೋಧಕ ಸ್ಥಿತಿಯಾಗಿದ್ದು ಇದರಲ್ಲಿ ದೇಹದ ಜೀವಕೋಶಗಳು ಥೈರಾಯ್ಡ್ ಅನ್ನು ಆಕ್ರಮಿಸುತ್ತವೆ ಮತ್ತು ಹಾನಿಗೊಳಿಸುತ್ತವೆ. ಇದು ಅನುವಂಶಿಕ ಸ್ಥಿತಿ.
• ಗರ್ಭಧಾರಣೆಯ ನಂತರದ ಥೈರಾಯ್ಡ್ :- ಹೆರಿಗೆಯ ನಂತರದಲ್ಲಿ 5 ರಿಂದ 9 ಶೇಕಡ ಮಹಿಳೆಯರಲ್ಲಿ ಈ ಸ್ಥಿತಿ ಕಂಡುಬರುತ್ತದೆ.
ಪರಿಹಾರಗಳು :-
ಪ್ರಪಂಚದ ಜನಸಂಶ್ಯೆಯಲ್ಲಿ ಸು. ಶೇ7.5% ರಷ್ಟು ಸ್ತ್ರೀಯರು ಥೈರಾಯ್ಡ್ನಿಂದ ಬಳಲುತ್ತಿದ್ದಾರೆ. ಅದು ಪುರುಷರಲ್ಲಿ 1.5%ರಷ್ಟಿದೆ ಹಾಗಾಗಿ ಇದಕ್ಕೆ ಕೆಲವು ರೀತಿಯ ಪರಿಹಾರಗಳಿವೆ ಅವುಗಳೆಂದರೇ
• ನೈಸರ್ಗಿಕವಾಗಿ ಅಹಾರದಲ್ಲಿನ ಬದಲಾವಣೆ
• ಸೆಲೆನಿಯಮ್ ಸೇವನೆ :- ಸೆಲೆನಿಯಮ್ ಎಂಬುದು ಥೈರಾಯ್ಡ್ ಹಾರ್ಮೋನ್ ಚಯಾಪಚಯ ಕ್ರಿಯೆಯಲ್ಲಿ ಒಂದು ಜಾಡಿನ ಅಂಶದ ಪಾತ್ರವನ್ನು ವಹಿಸುತ್ತದೆ. ಸೆಲೆನಿಯಮ್ ಇರುವ ಪದಾರ್ಥಗಳೆಂದರೇ ಟ್ಯೂನ, ಟರ್ಕಿ, ಬ್ರೆಜಿಲ್ ಬೀಜಗಳು, ಹುಲ್ಲು ತಿಂದು ಬೆಳೆದ ಗೋಮಾಂಸ.
• ಸಕ್ಕರೆ ರಹಿತ ಆಹಾರ :- ಸಕ್ಕರೆ ರಹಿತವಾದ ಆಹಾರವನ್ನು ಅಳವಡಿಸಿಕೊಳ್ಳುವುದರಿಂದ ನಿಮ್ಮ ದೇಹದಲ್ಲಿ ಥೈರಾಯ್ಡ್ನಿಂದ ಹದಗೆಡಿಸಬಹುದಾದ ಅನೇಕ ಕಾರ್ಯಗಳನ್ನು ತಡೆಗಟ್ಟಬಹುದು.
• ವಿಟಮಿನ್ ಬಿ ಸೇವನೆ :- ವಿಟಮಿನ್ ಬಿಯು ನಿಮ್ಮ ದೇಹದಲ್ಲಿ ಹೈಪೋಥೈರಾಯ್ಡಿಸಮ್ ಅನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಹಾಗಾಗೀ ವಿಟಮಿನ್ ಬಿ ಇರುವ ಪದಾರ್ಥಗಳೆಂದರೆ ಬಟಾಣಿ, ಬೀನ್ಸ್, ಶತಾವರಿ, ಎಳ್ಳು, ಟ್ಯೂನ, ಗಿಣ್ಣು, ಹಾಲು, ಮೊಟ್ಟೆಗಳು.
• ಅಂಟು ರಹಿತ ಆಹಾರ ಸೇವನೆ :- ಈ ಅಂಟು ರಹಿತ ಆಹಾರವು ಎಲ್ಲರಿಗೂ ಒಂದೇ ರೀತಿ ಪ್ರಭಾವ ಬೀರುವುದಿಲ್ಲ ಬದಲಿಗೆ ಈ ರೀತಿಯ ಆಹಾರ ಸೇವನೆಯನ್ನು ನಿಲ್ಲಿಸಿದ ಕೆಲವರಲ್ಲಿ ಅಂದರೆ ಹೈಪೋಥೈರಾಯ್ಡಿಸಮ್ ಇದ್ದವರಲ್ಲಿ ಸ್ವಲ್ಪ ಚೇತರಿಕೆ ಕಂಡುಬಂದಿದೆ.
ಮೂಲವ್ಯಾದಿ ಲಕ್ಷಣಗಳೇನು? ಕಾರಣ ಮತ್ತು ಪರಿಹಾರಗಳೇನು?