Hanuman Chalisa Benefits in Kannada Hanuman Stotra in Kannada
ಪುರಾಣದಲ್ಲಿನ ಕೆಲವೊಂದು ಸತ್ಯಗಳು ಸಹ ಕೆಲವೊಮ್ಮೆ ವಿಜ್ಞಾನಕ್ಕೆ ಸವಲೆಸದು ನಿಗೂಢ ಸತ್ಯಗಳಾಗಿ ನಿಲ್ಲುತ್ತವೆ ಅಂತಹ ಸತ್ಯಗಳಲ್ಲಿ ಹನುಮನಾನ್ ಚಾಲೀಸಾವು ಕೂಡ ಒಂದು. ಹನುಮಾನ್ ಚಾಲೀಸಾದೊಂದಿಗೆ ನಿಗೂಢ ಸ್ವರೂಪದ ದೈವತ್ವವು ತಳುಕುಹಾಕಿಕೊಂಡಿದೆ ಎಂಬ ನಂಬಿಕೆಯು ವ್ಯಾಪಕವಾಗಿ ಪ್ರಚಲಿತದಲ್ಲಿದೆ. ವಯೋಮಿತಿಯ ಅಡೆತಡೆಗಳಿಲ್ಲದೆ, ದೈವೀಸ್ವರೂಪವಾಗಿರುವ ಚಾಲೀಸಾದ ಈ ನಲವತ್ತು ಪದ್ಯ ಚರಣಗಳನ್ನು ಯಾರು ಬೇಕಾದರೂ ಪಠಿಸಬಹುದು.
ದಂತಕಥೆ :-
ಒಮ್ಮೆ ತುಳಸೀದಾಸರು ಔರಂಗಜೇಬನನ್ನು ಭೇಟಿಯಾಗಲು ತೆರಳುತ್ತಾರೆ. ಮತಾಂಧ ಚಕ್ರವರ್ತಿಯಾದ ಔರಂಗಜೇಬನು ತುಳಸೀದಾಸರ ಕುರಿತು ಪರಿಹಾಸ್ಯಗೈಯ್ಯುತ್ತಾನೆ. ಹಾಗೂ ಭಗವಂತನನ್ನು ತನಗೆ ತೋರಿಸುವಂತೆ ತುಳಸೀದಾಸರಿಗೆ ಪಂಥಾಹ್ವಾನವನ್ನು ನೀಡುತ್ತಾನೆ. ಮನದಲ್ಲಿ ನೈಜ ಭಕ್ತಿಭಾವವಿಲ್ಲದೇ ರಾಮನನ್ನು ಕಾಣುವುದು ಸಾಧ್ಯವಿಲ್ಲವೆಂದು ಕವಿಯು ಮಾರ್ಮಿಕವಾಗಿ ಔರಂಗಜೇಬನಿಗೆ ಉತ್ತರಿಸುತ್ತಾರೆ. ಇದರ ಪರಿಣಾಮವಾಗಿ ತುಳಸೀದಾಸರು ಔರಂಗಜೇಬನಿಂದ ಬಂಧಿಸಲ್ಪಡುತ್ತಾರೆ. ಹನುಮಾನ್ ಚಾಲೀಸಾದ ಅತ್ಯದ್ಭುತವಾಗಿರುವ ನಲವತ್ತು ಪದ್ಯ ಚರಣಗಳನ್ನು ತುಳಸೀದಾಸರು ಸೆರೆವಾಸದಲ್ಲಿದ್ದಾಗಲೇ ರಚಿಸಿದರೆಂದು ನಂಬಲಾಗಿದೆ.
ಹನುಮಾನ್ ಚಾಲೀಸಾವನ್ನು ಪಠಿಸಲು ಸೂಕ್ತವಾದ ಕಾಲ ಯಾವುದು ?
ಹನುಮಾನ್ ಚಾಲೀಸಾವನ್ನು ಪ್ರಾತ: ಕಾಲ ಸ್ನಾನವನ್ನು ಪೂರೈಸಿದ ಬಳಿಕವೇ ಪಠಿಸಬೇಕು. ಸೂರ್ಯಾಸ್ತಮಾನದ ಬಳಿಕ ನೀವು ಹನುಮಾನ್ ಚಾಲೀಸಾವನ್ನು ಓದಲು ಬಯಸುವಿರಾದರೆ, ನೀವು ಮೊದಲು ನಿಮ್ಮ ಕೈಕಾಲುಗಳು ಹಾಗೂ ಮುಖವನ್ನು ಚೆನ್ನಾಗಿ ತೊಳೆದುಕೊಂಡಿರಬೇಕು.
ಹನುಮಾನ್ ಚಾಲೀಸಾವನ್ನು ಪಠಿಸುವುದರಿಂದ ಆಗುವ ಲಾಭಗಳು :-
• ಶನಿಯ ದುಷ್ಪರಿಣಾಮವನ್ನು ಕಡಿಮೆ ಮಾಡುತ್ತದೆ :- ಬ್ರಹ್ಮಾಂಡವೇ ಶನಿಯನ್ನು ನೋಡಿ ಹೆದರಿದರೆ ಶನಿಯು ಹನುಮಂತನನ್ನು ನೋಡಿ ಹೆದರುತ್ತಾನೆ. ಆದ್ದರಿಂದ ಶನಿ ದೋಷದಿಂದ ಮುಕ್ತರಾಗಲು ಹೆಚ್ಚಾಗಿ ಹನುಮನ ಮಂತ್ರಗಳನ್ನು ಪಠಿಸಬೇಕು. ಹನುಮಾನ್ ಚಾಲೀಸಾವನ್ನು ಪಠಿಸುವುದರಿಂದ ಸಾಡೇ ಸಾತಿ ಶನಿ ದೋಷದ ಪರಿಣಾಮವನ್ನು ಕಡಿಮೆ ಮಾಡಿಕೊಳ್ಳಬಹುದು. ಕುಂಡಲಿಯಲ್ಲಿ ಶನಿಯ ದುಷ್ಪರಿಣಾಮವನ್ನು ಎದುರಿಸುತ್ತಿರುವವರು ಶಾಂತಿ ಮತ್ತು ಸಮೃದ್ಧಿಗಾಗಿ ವಿಶೇಷವಾಗಿ ಶನಿವಾರದಂದು ಹನುಮಾನ್ ಚಾಲೀಸಾವನ್ನು ಪಠಿಸಬೇಕು.
• ನಮ್ಮೆಲ್ಲಾ ಆಸೆಗಳು ಈಡೇರುವುದು :- ಓರ್ವ ವ್ಯಕ್ತಿಯು 40 ಪದ್ಯಗಳ ಹನುಮಾನ್ ಚಾಲೀಸಾವನ್ನು ಶ್ರದ್ಧಾ – ಭಕ್ತಿಯಿಂದ ಪಠಿಸುವುದರಿಂದ ಅವನ ಅಥವಾ ಅವಳ ಮನೋಕಾಮನೆಗಳು ಈಡೇರುವುದು. ಹನುಮಾನ್ ಚಾಲೀಸಾವನ್ನು ನಿಯಮಿತವಾಗಿ ಪಠಿಸಿದರೆ ಹನುಮಂತನ ಆಶೀರ್ವಾದ ದೊರೆಯುವುದು ಮತ್ತು ಆತನ ಅದ್ಭುತ ಶಕ್ತಿ ನಿಮಗೂ ಸಿಗುವುದು.
• ದುಷ್ಟ ಶಕ್ತಿಗಳನ್ನು ನಾಶ ಮಾಡುವುದು :- ಭಗವಾನ್ ಹನುಮಂತನನ್ನು ದುಷ್ಠ ಶಕ್ತಿಗಳನ್ನು ನಾಶಮಾಡುವ ದೇವರು ಎಂದು ಪರಿಗಣಿಸಲಾಗುತ್ತದೆ. ನೀವು ದುಃಸ್ವಪ್ನಗಳಿಂದ ತೊಂದರೆಯನ್ನು ಅನುಭವಿಸುತ್ತಿದ್ದರೆ ರಾತ್ರಿ ಮಲಗುವ ಮುನ್ನ ದಿಂಬಿನ ಕೆಳಗೆ ಹನುಮಾನ್ ಚಾಲೀಸಾವನ್ನಿಟ್ಟು ಮಲಗಬೇಕು. ಇದರಿಂದ ರಾತ್ರಿ ಭಯಾನಕ ಕನಸುಗಳು ಬೀಳುವುದಿಲ್ಲ.
• ಪಾಪಗಳಿಂದ ಮುಕ್ತಿ :- ನಾವು ಮಾಡಿದಂತಹ ಪಾಪಗಳನ್ನು ಪರಿಹರಿಸಬಲ್ಲ 40 ಪದ್ಯಗಳ ಹನುಮಾನ್ ಚಾಲೀಸಾದ ಆರಂಭಿಕ ಪದ್ಯಗಳನ್ನು ಓದುವುದರಿಂದ ಹಿಂದಿನ ಜನ್ಮದಲ್ಲಿ ನಾವು ಮಾಡಿದ ಮತ್ತು ಈ ಜನ್ಮದಲ್ಲಿ ನಾವು ಮಾಡಿರುವ ಪಾಪಗಳು ಕಳೆಯುತ್ತದೆ.
• ದೈವಿಕ ಆಧ್ಯಾತ್ಮಿಕ ಜ್ಞಾನ ಪಡೆಯಲು : ಆಧ್ಯಾತ್ಮಿಕ ಮಾರ್ಗದಲ್ಲಿ ಸಾಗುವ ಪ್ರತಿಯೊಬ್ಬ ವ್ಯಕ್ತಿಗೂ ಹನುಮಾನ್ ಚಾಲೀಸಾ ಸರಿಯಾದ ಮಾರ್ಗವನ್ನು ಸೂಚಿಸುವುದು. ಆಧ್ಯಾತ್ಮಕ ಮನೋಭಾವವನ್ನು ಹೊಂದಿರುವವರಿಗೆ ತಮ್ಮ ಮನಸ್ಸಿನ ಮೇಲೆ ತಾವೇ ಹಿಡಿತ ಸಾಧಿಸಲು ಇದು ಸಹಕಾರಿ.
• ಅಡೆತಡೆಗಳು ನಾಶವಾಗುವುದು :- ಯಾವ ವ್ಯಕ್ತಿಯು ಹನುಮಾನ್ ಚಾಲೀಸಾವನ್ನು ಸಂಪೂರ್ಣ ಭಕ್ತಿಯಿಂದ ಪಠಿಸುತ್ತಾನೋ ಆ ವ್ಯಕ್ತಿಯು ತನ್ನ ಜೀವನದಲ್ಲಿ ಯಾವುದೇ ಅಡೆತಡೆಗಳನ್ನು, ತೊಂದರೆಗಳನ್ನು ಅನುಭವಿಸುವುದಿಲ್ಲ. ಹನುಮಾನ್ ಚಾಲೀಸಾವನ್ನು ಪಠಿಸುವುದರಿಂದ ಹನುಮನ ದೈವಿಕ ರಕ್ಷಣೆಯು ನಮಗೆ ದೊರೆಯುವುದು.
• ಒತ್ತಡವನ್ನು ನಿವಾರಿಸುವುದು :- ಮುಂಜಾನೆ ಎದ್ದ ತಕ್ಷಣ ಹನುಮಾನ್ ಚಾಲೀಸಾವನ್ನು ಪಠಿಸುವುದರಿಂದ ನಮ್ಮ ಸಂಪೂರ್ಣ ದಿನವು ಸಂತೋಷದಾಯಕವಾಗಿರುತ್ತದೆ. ನಿಮ್ಮ ಜೀವನದ ಮೇಲೆ ನೀವು ಸಂಪೂರ್ಣವಾಗಿ ಹಿಡಿತವನ್ನು ಸಾಧಿಸಲು ಇದು ಸಹಕರಿಸುತ್ತದೆ.
• ಬುದ್ಧಿವಂತಿಕೆ ಮತ್ತು ಶಕ್ತಿ ಪಡೆಯಲು :– ಹನುಮಾನ್ ಚಾಲೀಸಾದ ಪಠಣೆಯಿಂದ ನಮ್ಮಲ್ಲಿನ ಸೋಮಾರಿತನ ಮತ್ತು ಆಲಸ್ಯ ನಿವಾರಣೆಯಾಗುವುದು. ಹಾಗೂ ಹನುಮಾನ್ ಚಾಲೀಸಾವು ವ್ಯಕ್ತಿಯ ತಲೆನೋವು, ನಿದ್ರಾಹೀನತೆ, ಆತಂಕ, ಖಿನ್ನತೆ ಸೇರಿದಂತೆ ಇನ್ನಿತರ ಆರೋಗ್ಯದ ಸಮಸ್ಯೆಗಳನ್ನು ದೂರಾಗಿಸುತ್ತದೆ.
• ಸುರಕ್ಷಿತ ಪ್ರಯಾಣಕ್ಕೆ :– ಹೆಚ್ಚಾಗಿ ನೀವು ಕಾರುಗಳಲ್ಲಿ, ಬಸ್ಸುಗಳಲ್ಲಿ ಹಾಗೂ ಇನ್ನಿತರ ವಾಹನಗಳಲ್ಲಿ ಹನುಮನ ಚಿತ್ರವನ್ನು ಹಚ್ಚಿರುವುದನ್ನು ಅಥವಾ ಹನುಮನ ಮೂರ್ತಿಯನ್ನು ಕಾರಿನ ಡ್ಯಾಶ್ಬೋರ್ಡ್ನಲ್ಲಿ ಇಟ್ಟಿರುವುದನ್ನು ಅಥವಾ ರಿಯರ್ ವ್ಯೂ ಕನ್ನಡಿಗೆ ನೇತು ಹಾಕಿರುವುದನ್ನು ನೋಡಿರಬಹುದು. ಇದು ಕೇವಲ ಅಂದಕ್ಕಾಗಿ ಹಾಕಿರುವುದಲ್ಲ. ಇದನ್ನು ಸುರಕ್ಷುತ ಪ್ರಯಾಣಕ್ಕಾಗಿ ವಾಹನಗಳಲ್ಲಿ ಇಟ್ಟುಕೊಳ್ಳುತ್ತಾರೆ.
ನವಧಾನ್ಯದ ದಾನವೇ ಶ್ರೇಷ್ಠ, ದಾನ ಕೊಟ್ಟರೆ ನಿಮ್ಮ ಆರೋಗ್ಯ ಸುಧಾರಿಸುತ್ತದೆಯೇ?