Sandes app download whatsapp alternative messaging Application
ವಾಟ್ಸಾಫ್ಗೆ ಸರಿಸಾಟಿಯಾಗಿ ಭಾರತದಲ್ಲಿ ಬರ್ತಾ ಇದೆ ಸಂದೇಶ್ ಅಪ್ಲಿಕೇಶನ್. ಇದು ವಾಟ್ಸಾಫ್ ರೀತಿ ಕಾರ್ಯ ನಿರ್ವಹಿಸಲಿದೆ. ಭಾರತೀಯ ಸರ್ಕಾರ ಈ ನಿಲುವನ್ನು ಹೊಂದಿದ್ದು ಇನ್ನು ಸ್ವಲ್ಪ ದಿನದಲ್ಲೇ ಇದು ಎಷ್ಟರಮಟ್ಟಿಗೆ ತನ್ನ ಇರುವಿಕೆಯನ್ನು ತೋರಿಸುತ್ತದೆ ಎಂದು ಕಾದುನೋಡಬೇಕಿದೆ. ಇದು ಮೆಸೇಜಿಂಗ್ ಅಪ್ಲಿಕೇಶನ್ ಆಗಿದ್ದು “ನ್ಯಾಷನಲ್ ಇನ್ಫೋರ್ಮೆಟಿಕ್ ಸೆಂಟರ್” ಇದನ್ನು ಬಿಡುಗಡೆ ಮಾಡುತ್ತಿದೆ. ಹಾಗೂ ‘ಗೌರ್ನಮೆಂಟ್ ಇನ್ಸ್ಟಾಂಟ್ ಮೆಸೇಜಿಂಗ್ ಸಿಸ್ಟಮ್’ ನವರು ಇದನ್ನು ಅಭಿವೃದ್ಧಿಗೊಳಿಸಿದ್ದಾರೆ.
ನೀವು ವಾಟ್ಸಾಫ್ ಅನ್ನು ಬಳಸುವ ರೀತಿಯಲ್ಲೇ ಈ ಸಂದೇಶ್ ಅಪ್ಲಿಕೇಶನ್ನಲ್ಲಿ ನಂಬರ್ ಮತ್ತು ಇ-ಮೇಲ್ನಿಂದ ಲಾಗಿನ್ ಆಗಿ ಇದರಲ್ಲೂ ಸಹ ಮೆಸ್ಸೆಜಿಂಗ್, ಮಲ್ಟಿಮಿಡಿಯಾ ಶೇರಿಂಗ್, ಗ್ರೂಪ್ ಮಾಡುವುದು ಹೀಗೆ ಎಲ್ಲಾ ವಿಷಯವನ್ನು ಅಭಿವೃದ್ಧಿ ಪಡಿಸಿದ್ದಾರೆ. ಈ ರೀತಿಯ ಸ್ವದೇಶಿ ಅಪ್ಲಿಕೇಶನ್ಗಳನ್ನು ನಾವು ಸ್ವಾಗತಿಸಿ ನಮ್ಮ ದೇಶವು ಸ್ವದೇಶಿ ಮಂತ್ರವನ್ನು ಮೈಗೂಡಿಸಿಕೊಳ್ಳಲಿದೆ. ನಾವು ಕೂಡ ಬೇರೆ ದೇಶದವರಿಗೆ ಹೋಲಿಸಿದರೆ ಯಾವುದರಲ್ಲೂ ಕಮ್ಮಿ ಇಲ್ಲವೆಂಬಂತೆ ಈ ರೀತಿ ಸಾವಿರಾರು ಅಪ್ಲಿಕೇಶನ್ಗಳು ಇನ್ನು ಮುಂದೆ ಬರಲಿವೆ. ಹಾಗಾಗೀ ಈಗ ಮಾರುಕಟ್ಟೆಗೆ ಬಂದಿರುವ ಈ ಸ್ವದೇಶಿ ಅಪ್ಲಿಕೇಶನ್ ಅನ್ನು ಬಳಸಿ. ಸಂದೇಶ್ ಅಪ್ಲಿಕೇಶನ್ ಅನ್ನು ಬಳಸುವುದು ಹೇಗೆ, ಅದು ನಮಗೆ ಎಲ್ಲಿ ಲಭ್ಯವಿದೆ ಎಂಬ ಪ್ರಶ್ನೆಗೆ ಉತ್ತರವಾಗಿ ಈ ಕೆಳಗಿನಂತೆ ವಿವರಿಸಲಾಗಿದೆ.
ಸಂದೇಶ್ ಡೌನ್ಲೋಡ್ ಮಾಡುವುದು ಹೇಗೆ?
ನೀವು ಐಒಎಸ್ ವೆಬ್ಸೈಟ್ನಲ್ಲಿ ಹೋಗಿ ಏಪಿಕೆ ಫೈಲ್ ಅನ್ನು ಡೌನ್ಲೋಡ್ ಮಾಡಿಕೊಂಡು ಅದರಿಂದ ನಿಮ್ಮ ಮೊಬೈಲ್ಗೆ ಇನ್ಸ್ಟಾಲ್ ಮಾಡಿಕೊಳ್ಳಬಹುದು. ಇದು ಆಡ್ರಾಯ್ಡ್ ವರ್ಷನ್ 5.0 ಕ್ಕೆ ಹೊಂದಿಕೊಳ್ಳುತ್ತೆ. ಹಾಗೂ ಅಪ್ಲಿಕೇಶನ್ ಸ್ಟೋರ್ನಲ್ಲಿ ಐಫೋನಿನ ಐಓಎಸ್ 12.0 ರಲ್ಲಿ ಕಾರ್ಯನಿರ್ವಹಿಸುತ್ತದೆ.
ಸೈನ್ ಅಪ್ ಆಗುವುದು ಹೇಗೆ?
ನೀವು ಏಪಿಕೆ ಫೈಲ್ ಅನ್ನು ಡೌನ್ಲೋಡ್ ಮಾಡಿಕೊಂಡ ನಂತರ ಅದನ್ನು ಇನ್ಸ್ಟಾಲ್ ಮಾಡಿಕೊಳ್ಳಿ, ಮುಂದೆ ಬರುವ ನಂಬರ್ ವೆರಿಫಿಕೇಷನ್ ಮಾಡಿ ನಿಮ್ಮ ಮೊಬೈಲ್ ನಂಬರ್ ಕೊಡುವುದರ ಜೊತೆಗೆ ಲಾಗಿನ್ ಆಗಿ ಅಥವಾ ನಿಮ್ಮ ಇ-ಮೇಲ್ನಿಂದ ಲಾಗಿನ್ ಆಗಿ. ಆಗ ನಿಮಗೆ ಓಟಿಪಿ ಬರುತ್ತದೆ. ಅದನ್ನು ನಮೂದಿಸಿ ಬಳಿಕ ನಿಮ್ಮ ಮೊಬೈಲ್ನಲ್ಲಿ ಸಂದೇಶ್ ಅಪ್ಲಿಕೇಶನ್ ಕೆಲಸ ಮಾಡಲು ಶುರು ಮಾಡುತ್ತದೆ. ನಂತರ ನೀವು ವಾಟ್ಸಾಫ್ನ ಬಳಕೆಯ ರೀತಿಯಲ್ಲಿ ಮುಂದುವರೆಸಬಹುದು.
ಸಂದೇಶ್ V/S ವಾಟ್ಸಾಫ್ ಯಾವುದು ಬೆಸ್ಟ್ ?
ವಾಟ್ಸಾಫ್ನಲ್ಲಿರುವ ಪ್ರತಿಯೊಂದು ಚಟುವಟಿಕೆಗಳನ್ನು ಸಂದೇಶ್ನಲ್ಲು ಮಾಡಬಹುದು. ಫೋಟೋಸ್, ಮೆಸೇಜಸ್, ವಿಡಿಯೋಸ್ ಎಲ್ಲವನ್ನು ಕಳುಹಿಸಬಹುದು, ಹಾಗೇ ಸಂದೇಶವನ್ನು ಕಳುಹಿಸುವುದು, ಬ್ರಾಡ್ಕ್ಯಾಸ್ಟ್ ಮೆಸೇಜ್ ಮಾಡುವುದು, ಆರಂಭದಿಂದ ಕೊನೆಯವರೆಗೆ ಎಲ್ಲ ರೀತಿಯ ಮಾಹಿತಿಯ ಶೇಖರಣೆ ಹೀಗೆ ಬೇಸಿಕ್ ಮೆಸ್ಸೆಜಿಂಗ್ ಅಪ್ಲಿಕೇಶನ್ ಮಾಡುವ ಎಲ್ಲ ರೀತಿ ಕಾರ್ಯವನ್ನು ಇದು ನಿರ್ವಹಿಸುತ್ತದೆ. ಆದರೇ ಸಂದೇಶ್ನಲ್ಲಿರುವ ವಿಶೇಷವೆಂದರೇ ಅದು ವಾಟ್ಸಾಫ್ನಲ್ಲಿ ನಂಬರ್ನಿಂದ ಲಾಗಿನ್ ಆಗುತ್ತೇವೆ ಅದಕ್ಕೆ ಮೊಬೈಲ್ ನಂಬರ್ ಬೇಕೆಬೇಕು ಆದರೆ ಸಂದೇಶ್ಗೆ ಆ ರೀತಿ ಇಲ್ಲ. ಇದು ಇ-ಮೇಲ್ ಐಡಿಯಿಂದಲೂ ಕಾರ್ಯ ನಿರ್ವಹಿಸುತ್ತದೆ.
ಸಂದೇಶ್ ಅನ್ನು ಸಹ ಎಲ್ಲಾ ರೀತಿಯ ಪರೀಕ್ಷೆಗೆ ಒಳಪಡಿಸಿದ್ದು. ಯಾವುದೇ ರೀತಿಯಲ್ಲಿ ಸಂದೇಶಗಳ ಸೋರಿಕೆ ಆಗುವುದಿಲ್ಲ. ಸಂದೇಶ್ನಲ್ಲಿ ನಿಮ್ಮ ಸಂದೇಶವನ್ನು ಉಳಿಸಲು ಹೊರಾಂಗಣ ಚಿಪ್ಗೂ ಕೂಡ ಕಳುಹಿಸಬಹುದು ಆದರೇ ವಾಟ್ಸಾಫ್ನಲ್ಲಿ ಅದು ಗೂಗಲ್ ಡ್ರೈವ್ನಲ್ಲಿ ಮಾತ್ರ ಉಳಿಸಲಾಗುತ್ತದೆ. ಸಂದೇಶ್ನಲ್ಲಿ ನಿಮ್ಮ ಖಾತೆಯನ್ನು ಉಳಿಸಕೊಂಡು ನಂಬರ್ ಆಗಲೀ ಅಥವಾ ಇ-ಮೇಲ್ ಐಡಿಯಾಗಲೀ ಬದಲಾವಣೆ ಮಾಡಿಕೊಳ್ಳಬಹುದು. ಇದು ಸರ್ಕಾರದಿಂದ ಹೊರತಂದಿರುವ ಅಪ್ಲಿಕೇಶನ್ ಆಗಿರುವುದರಿಂದ ಇದರಲ್ಲಿ ಮುಂಬರುವ ದಿನಗಳಲ್ಲಿ ನಾನಾ ರೀತಿ ಒಳ್ಳೆಯ ವಿಷಯವನ್ನು ಸೇರಿಸಲು ಯೋಚನೆ ನಡೆಸಲಾಗುತ್ತಿದೆ.
Sandes App for Android Phones – Click Here
Sandes App for iPhones – Click Here