Heart Attack: ಮನುಷ್ಯನ ದೇಹ ಆರೋಗ್ಯವಾಗಿರಬೇಕೆಂದರೆ ಮುಖ್ಯವಾಗಿ ನಮ್ಮ ಹೃದಯವನ್ನು ಕಾಪಾಡಿಕೊಳ್ಳಬೇಕು. ಒಂದು ಭಾರಿ ಹೃದಯವು ತನ್ನ ಕಾರ್ಯವನ್ನು ನಿಲ್ಲಿಸಿದರೆ ನಮ್ಮ ದೇಹವು ಸಹ ಎಲ್ಲಾ ಕಾರ್ಯಗಳನ್ನು ನಿಲ್ಲಿಸುತ್ತದೆ ಹಾಗಾಗೀ ನಮ್ಮ ದೇಹದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೃದಯಕ್ಕೆ ನೀಡಬೇಕು. ಹೃದಯ ಸ್ತಂಭನ ಎಂದರೆ ಇದ್ದಕ್ಕಿದ್ದಂತೆ ದೇಹಕ್ಕೆ ಹೃದಯ ರಕ್ತ ಸಂಚಲನ ಮಾಡುವುದನ್ನು ನಿಲ್ಲಿಸುತ್ತದೆ. ಹೃದಯ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸಿದ ತಕ್ಷಣ ಉಸಿರಾಟ ಕ್ರಿಯೆ ಸ್ತಬ್ಧವಾಗುವುದು. ಇದರಿಂದಾಗಿ ಸಾವು ಉಂಟಾಗುತ್ತದೆ. ಇದೆಲ್ಲ ಕ್ಷಣಾರ್ಧದಲ್ಲಿ ನಡಿಯುವ ರೀತಿ ನೀತಿಗಳು. ಭಾರತವೂ ಸೇರಿದಂತೆ ಅಭಿವೃದ್ಧಿ ದೇಶಗಳಲ್ಲಿ ಸಂಭವಿಸುವ ಸಾವಿನ ಪ್ರಮಾಣದಲ್ಲಿ ಶೇ.80ರಷ್ಟು ಮಂದಿ ಹೃದ್ರೋಗದಿಂದಲೇ ಸಾಯುತ್ತಿದ್ದಾರೆ. ಹೃದಯಾಘಾತ ಸಂಭವಿಸಿದ ಮೊದಲ ಒಂದು ತಾಸಿನಲ್ಲಿ ರೋಗಿಗೆ ತುರ್ತು ಚಿಕಿತ್ಸೆ ಸಿಗದೆ ಸಾಯುವವರ ಪ್ರಮಾಣ ಶೇ.50ರಷ್ಟಿದೆ. ಹಾಗಾಗೀ ಈ ಹೃದಯಾಘಾತಕ್ಕೆ ಸಂಬಂಧಿಸಿದಂತೆ ಅದರ ಲಕ್ಷಣಗಳು, ಮುನ್ನೆಚ್ಚರಿಕೆ, ಪ್ರಥಮ ಚಿಕಿತ್ಸೆ ಬಗ್ಗೆ ನೋಡೋಣ.
ಹೃದಯಘಾತದ ಲಕ್ಷಣಗಳು :-
– ದೇಹಕ್ಕೆ ಸುಸ್ತಾಗುವುದು ಇದು ಬೇಗ ಹೋಗುವುದಿಲ್ಲ
– ಉಸಿರಾಟದ ವೇಗ ಹೆಚ್ಚಾಗುವುದು, ಉಸಿರಾಡಲು ಕಷ್ಟವಾಗುವುದು, ವಾಕರಿಕೆ, ತಲೆ ಸುತ್ತುವುದು, ಅನಿಯಮಿತ ಎದೆ ಬಡಿತ.
– ತಲೆಸುತ್ತು ಬರುವುದು.
– ಹೃದಯ ಸ್ತಂಭನವಾಗುವುದಕ್ಕೆ ಮುಂಚಿನ ನಾಲ್ಕು ವಾರಗಳ ಹಿಂದೆ ಎದೆ ನೋವು ಬಂದಿರುತ್ತದೆ.
– ಹೃದಯಾಘಾತಕ್ಕೆ ಎಲ್ಲರಿಗೂ ಎದೆಯ ಎಡಭಾಗದಲ್ಲೇ ನೋವು ಕಾಣಿಸಿಕೊಳ್ಳಬೇಕೆಂದಿಲ್ಲ. ಕೆಲವರಿಗೆ ಕತ್ತು, ಗಂಟಲು, ಹೊಟ್ಟೆಯ ಮೇಲ್ಭಾಗ, ಬೆನ್ನು, ತೋಳು, ಸೊಂಟ, ದವಡೆ, ಭುಜಗಳಲ್ಲಿ ನೋವು ಬರಬಹುದು.
– ಎದೆ ಮತ್ತು ಹೊಟ್ಟೆಯಲ್ಲಿ ಉರಿ ಕಾಣಿಸಿಕೊಳ್ಳಬಹುದು.
– ತಂಪು ವಾತಾವರಣದಲ್ಲೂ ದೇಹ ಬೆವರಬಹುದು.
– ದೀರ್ಘಸಮಯದ ಶೀತ ದೀರ್ಘಸಮಯದಿಂದ ಶೀತದ ಸೋಂಕಿನಿಂದ ಬಳಲುತ್ತಿದ್ದರೆ ಇದು ಹೃದಯಾಘಾತದ ಎಚ್ಚರಿಕೆಯಾಗಿರಬಹುದು. ಹೃದಯಕ್ಕೆ ಸರಿಯಾಗಿ ಆಮ್ಲಜನಕ ಸಿಗದೆ ಇರುವಾಗ ಪ್ರತಿರಕ್ಷಣಾ ವ್ಯವಸ್ಥೆ ಮೇಲೆ ಪರಿಣಾಮ ಉಂಟಾಗುವುದು.
– ಊತ ದೇಹದ ಭಾಗಗಳಾದ ಪಾದ, ಹೊಟ್ಟೆ ಮತ್ತು ಕೈ ಇತ್ಯಾದಿ ಊದಿಕೊಂಡರೆ ಹೃದಯವು ಅಸಹಜ ರೀತಿಯಲ್ಲಿ ರಕ್ತವನ್ನು ಹೊರಹಾಕುತ್ತಿದೆ ಎಂದರ್ಥ. ಇದರಿಂದಾಗಿ ಅಪಧಮನಿಗಳಲ್ಲಿ ಉರಿ ಕಾಣಿಸಿಕೊಳ್ಳಬಹುದು.
– ಇತ್ತಿಚ್ಚಿನ ಸಂದರ್ಭಗಳಲ್ಲಿ, ನಿದ್ದೆ ಮಾಡುವಾಗ ಉಸಿರಾಟದ ತೊಂದರೆಯಿಂದಾಗಿ ನಿದ್ದೆಯಲ್ಲಿ ಅಡಚಣೆ ಉಂಟಾಗುತ್ತದೆ, ಇದರ ಪರಿಣಾಮವಾಗಿ ಉಂಟಾಗುವ ಉಸಿರುಗಟ್ಟಿಸುವಿಕೆಯು ಹೃದಯ ಸ್ನಾಯುಗಳ ಮೇಲೆ ಹೆಚ್ಚುವರಿ ಒತ್ತಡವನ್ನು ಬೀರುತ್ತದೆ. ಸ್ಲೀಪ್ ಆಪ್ನಿಯಾ ಅಂದರೆ ನಿದ್ದೆಯಲ್ಲಿ ಆಗುವಂತಹ ಉಸಿರಾಟದ ತೊಂದರೆ ಹೃದಯಾಘಾತ ಸಂಭವಿಸುವ ಹಲವಾರು ವಾರಗಳು ಅಥವಾ ತಿಂಗಳುಗಳ ಮೊದಲು ಸಂಭವಿಸಬಹುದು. ಇವಿಷ್ಟು ಸಾಮಾನ್ಯ ಲಕ್ಷಣಗಳಾಗಿದ್ದು ಈ ರೀತಿ ಕಂಡುಬಂದರೆ ಮೊದಲು ಪರೀಕ್ಷಿಸಿಕೊಳ್ಳಿ.
ಹೃದಯಘಾತಕ್ಕೆ ಕಾರಣಗಳು :-
– ಅಂಕೆ ತಪ್ಪಿದ ಜೀವನ ಶೈಲಿ ಹಾಗೂ ಅನಾರೋಗ್ಯಕರ ಆಹಾರ ಪದ್ಧತಿ.
– ದುಶ್ಚಟಗಳಿಂದಾಗಿ ಹೃದಯದ ಮೇಲೆ ಅಧಿಕ ಒತ್ತಡ ಉಂಟಾಗಿ ಹೃದಯಾಘಾತ ಸಂಭವಿಸುತ್ತದೆ.
– ಇದಲ್ಲದೇ ಬೊಜ್ಜು, ಅಧಿಕ ರಕ್ತದ ಒತ್ತಡ, ಆಲಸ್ಯದ ಜೀವನ ಶೈಲಿ, ಧೂಮಪಾನ ಮತ್ತು ತಂಬಾಕು ಸೇವನೆ, ಮಾನಸಿಕ ಒತ್ತಡದಿಂದಾಗಿ.
ಹೃದಯಾಘಾತ ಹೆಚ್ಚಾಗಿ ಕಾಣಿಸಿಕೊಳ್ಳುವುದು ಯಾರಲ್ಲಿ ?
– ಅತ್ಯಧಿಕ ರಕ್ತದೊತ್ತಡದ ಸಮಸ್ಯೆ ಇರುವವರಲ್ಲಿ.
– ಮಧುಮೇಹಿಗಳಲ್ಲಿ
– ಅತ್ಯಧಿಕ ಕೊಲೆಸ್ಟ್ರಾಲ್ ಇರುವವರಿಗೆ
– ಯಾವುದೇ ದೈಹಿಕ ವ್ಯಾಯಾಮ ಮಾಡದಿರುವವರಿಗೆ.
– ಒಬೆಸಿಟಿ/ ಅಧಿಕ ಮೈ ತೂಕ ಇರುವವರಿಗೆ.
ಹೃದಯಘಾತಕ್ಕೆ ಪ್ರಥಮ ಚಿಕಿತ್ಸೆ :-
– ಎದೆಯಲ್ಲಿ ನೋವು ಕಾಣಿಸಿ, ಮೈ ಬೆವರಿದರೆ ಜೋರಾಗಿ ಕೆಮ್ಮಿ.
– ಹೃದಯಾಘಾತವಾಗಿ ವ್ಯಕ್ತಿ ನೆಲಕ್ಕೆ ಕುಸಿದರೆ ಕೂಡಲೇ ಆಂಬ್ಯುಲೆನ್ಸ್ಗೆ ಕರೆ ಮಾಡಿ ವಾಹನ ಬರುವವರೆಗೆ ಸುಮ್ಮನೆ ನಿಲ್ಲದೆ ಆ ವ್ಯಕ್ತಿಯ ಎದೆಯನ್ನು ಜೋರಾಗಿ ಅದುಮಬೇಕು, ಜೋರಾಗಿ ಗುದ್ದಿದರೂ ಪರ್ವಾಗಿಲ್ಲ. ಸಾಧ್ಯವಾದರೆ ಅವರ ಬಾಯಿಗೆ ನಿಮ್ಮ ಬಾಯಿ ಇಟ್ಟು ಊದಿ.
– ಆದಷ್ಟು ಸಮೀಪದ ಆಸ್ಪತ್ರೆಗೆ ಮೊದಲು ಕೊಂಡೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಬೇಕಾದ ಆಸ್ಪತ್ರೆಗೆ ಕೊಂಡೊಯ್ಯುರಿ.
ಮುನ್ನೆಚ್ಚರಿಕೆ ಕ್ರಮಗಳು :-
– ಪೌಷ್ಟಿಕ ಆಹಾರ, ಹಣ್ಣು, ತರಕಾರಿ ಮತ್ತು ಮೀನು ಸೇವನೆ ನಿಯಮಿತವಾಗಿ ಇರಲಿ.
– ಧೂಮಪಾನದಿಂದ ದೂರ ಇರಬೇಕು.
– ನಿತ್ಯ ವ್ಯಾಯಾಮ, ವೇಗದ ನಡಿಗೆ, ಸೈಕಲ್ ಸವಾರಿ, ಈಜು ರುಡಿಸಿಕೊಳ್ಳಿ.
– ಒತ್ತಡ ಕಡಿಮೆ ಮಾಡಿಕೊಳ್ಳುವುದರಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಪಾರಾಗಬಹುದು.