Dengue Fever Symptoms:
ಡೆಂಗ್ಯೂ ಜ್ವರ ಉಂಟು ಮಾಡುವ ಸೊಳ್ಳೆಗಳು ಪ್ರಪಂಚದ ಉಷ್ಣವಲಯ ಮತ್ತು ಉಪ ಉಷ್ಣವಲಯ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ವಿಶ್ವದಾದ್ಯಂತ ಲಕ್ಷಾಂತರ ಮಂದಿ ಪ್ರತಿ ವರ್ಷ ಡೆಂಗ್ಯೂ ಜ್ವರದ ಸೋಂಕಿಗೆ ಗುರಿಯಾಗುತ್ತಿದ್ದಾರೆ. ವಿಶೇಷವಾಗಿ ದಕ್ಷಿಣ ಪೂರ್ವ ಏಷ್ಯಾ ಮತ್ತು ಪಾಶ್ಚಿಮಾತ್ಯ ಪೆಸಿಫಿಕ್ ಭೂ ಪ್ರದೇಶಗಳಲ್ಲಿ ಡೆಂಗ್ಯೂ ಜ್ವರ ಅಟ್ಟಹಾಸ ಮರೆಯುತ್ತಿದೆ. ಇತ್ತೀಚಿಗೆ ಲ್ಯಾಟಿನ್ ಅಮೆರಿಕ ಮತ್ತು ಕೆರೆಬಿಯನ್ ಪ್ರದೇಶಗಳಲ್ಲಿ ಡೆಂಗ್ಯೂ ಜ್ವರ ವಿಪರೀತ ಮಟ್ಟಕ್ಕೆ ಹೋಗಿ ತಲುಪಿದೆ ಎಂಬ ಮಾಹಿತಿ ಸಿಕ್ಕಿದೆ. ಸಂಶೋಧಕರು ಡೆಂಗ್ಯೂ ಜ್ವರದ ಲಸಿಕೆ ತಯಾರಿಯಲ್ಲಿ ನಿರತರಾಗಿದ್ದಾರೆ. ಈಗಿನ ಸನ್ನಿವೇಶ ನೋಡಿದರೆ ಸಾಧ್ಯವಾದಷ್ಟು ಸೊಳ್ಳೆಗಳ ಸಂತತಿಯನ್ನು ಕಡಿಮೆ ಮಾಡುವುದೊಂದೇ ಇದಕ್ಕಿರುವ ಮಾರ್ಗ ಎಂಬಂತೆ ತೋರುತ್ತಿದೆ.
ಡೆಂಗ್ಯೂ ಜ್ವರದ ಲಕ್ಷಣಗಳು :-
– ಡೆಂಗ್ಯೂ ಜ್ವರದ ಪ್ರಮುಖ ಲಕ್ಷಣ ಬಿಳಿ ರಕ್ತ ಕಣಗಳು ಕಡಿಮೆಯಾಗುವಿಕೆ.
– ವೈರಸ್ ದೇಹ ಪ್ರವೇಶಿಸುತ್ತಿದ್ದಂತೆ ಬಿಳಿರಕ್ತಕಣಗಳು ಕಡಿಮೆಯಾಗುವುದರ ಜೊತೆಗೆ ವಿಪರೀತ ತಲೆನೋವು ಶುರುವಾಗುತ್ತದೆ.
– ದೇಹದಲ್ಲಿ ವಿಪರೀತ ಭಾದೆ ಕಾಣಿಸಿಕೊಳ್ಳುತ್ತದೆ. ದೇಹದ ಎಲ್ಲಾ ಕೀಲುಗಳು ಹಾಗೂ ಸ್ನಾಯುಗಳಲ್ಲಿ ಹೆಚ್ಚಾಗಿ ನೋವು ಕಾಣಿಸಿಕೊಳ್ಳುತ್ತದೆ.
– ಡೆಂಗ್ಯೂ ಕಾಣಿಸಿಕೊಂಡರೆ ದೇಹದ ತಾಪಮಾನ ಹೆಚ್ಚಾಗುತ್ತದೆ. ಜೊತೆಗೆ ಮೈ-ಕೈ ನೋವು ಭಾದಿಸುತ್ತದೆ.
– ಸುಸ್ತು, ಊಟ ಸೇರದಿರುವುದು, ತಲೆಭಾದೆ, ನಿಶ್ಯಕ್ತಿ, ನಡೆಯಲು ಸಾಧ್ಯವಾಗದಿರುವ ಸ್ಥಿತಿ ಉಂಟಾಗುತ್ತದೆ.
– ವಾಂತಿ, ಭೇದಿ ಕೂಡ ಆಗುತ್ತದೆ. ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ.
– ಬಾಯಿ ಒಣಗುತ್ತದೆ, ಮೂಗಿನಲ್ಲಿ ರಕ್ತಸ್ರಾವವಾಗುತ್ತದೆ. ಕೂಡಲೇ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯುವುದು ಅಗತ್ಯವಾಗುತ್ತದೆ.
– ಕಣ್ಣುಗಳ ಹಿಂಭಾಗದಲ್ಲಿ ವಿಫರೀತ ನೋವು ಕಂಡುಬರುತ್ತದೆ.
– ದೇಹದ ಮೇಲೆ ಅಲ್ಲಲ್ಲಿ ಕಲೆಗಳು ಮೂಡುತ್ತವೆ.
– ಹಲ್ಲಿನ ವಸಡುಗಳು ಮತ್ತು ಮೂಗಿನಲ್ಲಿ ರಕ್ತಸ್ರಾವವಾಗುತ್ತದೆ.
– ಉಸಿರಾಟದ ತೊಂದರೆ.
ಡೆಂಗ್ಯೂ ಜ್ವರಕ್ಕೆ ಕಾರಣವಾಗುವ ಅಂಶಗಳು :-
– ವಿಜ್ಞಾನಿಗಳು ತಮ್ಮ ಸಂಶೋಧನೆಯಲ್ಲಿ ಕಂಡು ಹಿಡಿದಿರುವ ಹಾಗೆ ವಿಶ್ವದಲ್ಲಿ ನಾಲ್ಕು ಬಗೆಯ ಡೆಂಗು ವೈರಸ್ ಗಳಿವೆ ಎಂದು ತಿಳಿದುಬಂದಿದೆ. ಅವುಗಳಲ್ಲಿ ಒಂದು ವೈರಸ್ ಹೆಚ್ಚಾಗಿ ಮನುಷ್ಯರು ವಾಸಿಸುವ ಪ್ರದೇಶಗಳಲ್ಲಿ ಕಂಡು ಬಂದು ಇತರರಿಗೆ ಡೆಂಗೀ ಜ್ವರ ಹರಡುವಂತೆ ಮಾಡುತ್ತದೆ.
– ಒಬ್ಬ ಡೆಂಗ್ಯೂ ಜ್ವರ ಸೋಂಕಿತ ವ್ಯಕ್ತಿಯನ್ನು ಒಂದು ಸೊಳ್ಳೆ ಕಚ್ಚಿದಾಗ, ಆ ಮನುಷ್ಯನಲ್ಲಿರುವ ವೈರಸ್ ಸೊಳ್ಳೆಯ ದೇಹದೊಳಗೆ ಸೇರಿ ಅದೇ ಸೊಳ್ಳೆ ಇನ್ನೊಬ್ಬ ಮನುಷ್ಯನನ್ನು ಕಚ್ಚಿದಾಗ, ಆ ವ್ಯಕ್ತಿಯ ರಕ್ತದ ಹರಿವಿನಲ್ಲಿ ಡೆಂಗ್ಯೂ ವೈರಸ್ ತನ್ನ ಸಂತತಿ ಹೆಚ್ಚಿಸಿಕೊಳ್ಳುತ್ತದೆ.
– ಈ ಒಂದು ಬಗೆಯ ಡೆಂಗ್ಯೂ ಜ್ವರದಿಂದ ಗುಣ ಕಂಡ ವ್ಯಕ್ತಿಯಲ್ಲಿ ಆತನ ರೋಗ ನಿರೋಧಕ ವ್ಯವಸ್ಥೆ ಆ ಒಂದು ನಿರ್ದಿಷ್ಟ ವೈರಸ್ ವಿರುದ್ಧ ಹೋರಾಡುವ ಶಕ್ತಿ ಪಡೆದಿರುತ್ತವೆ.
– ಇನ್ನೂ ಮೂರು ಬಗೆಯ ಡೆಂಗ್ಯೂ ವೈರಸ್ ಮನುಷ್ಯನನ್ನು ರೋಗ ಪೀಡಿತನಾಗಿ ಮಾಡಬಹುದು. ಮೇಲೆ ಹೇಳಿದಂತೆ ಡೆಂಗ್ಯೂ ಜ್ವರ ವಿಪರೀತವಾದ ಸಂದರ್ಭದಲ್ಲಿ ಮತ್ತೆ ಮತ್ತೆ ಡೆಂಗ್ಯೂ ವೈರಸ್ ಹಾವಳಿ ಆಗುತ್ತಾ ಹೋದರೆ ಇದು ವ್ಯಕ್ತಿಯ ಪ್ರಾಣವನ್ನು ಬಲಿ ಪಡೆಯಬಹುದು.
ಡೆಂಗ್ಯೂ ಬಂದಾಗ ಸೇವಿಸಬೇಕಾದ ಆಹಾರ :-
– ಕಿತ್ತಳೆ ಹಣ್ಣು :- ಈ ಸಮಯದಲ್ಲಿ ಅಗತ್ಯವಾಗಿ ಬೇಕಿರುವ ಅಧಿಕ ನಾರಿನಂಶ, ವಿಟಮಿನ್ ಸಿ = ಕಿತ್ತಳೆ ಹಣ್ಣಿನಲ್ಲಿ ಹೇರಳವಾಗಿವೆ. ಹಾಗಾಗೀ ಈ ಪೌಷ್ಟಿಕ ಹಣ್ಣಿನ ಸೇವನೆಯಿಂದ ಡೆಂಗ್ಯೂ ಬೇಗನೆ ವಾಸಿಯಾಗುತ್ತದೆ.
– ಎಳನೀರು :- ಡೆಂಗ್ಯೂ ಕಾಣಿಸಿಕೊಂಡಾಗ ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ. ಇದನ್ನು ಸರಿದೂಗಿಸಲು ನೀರಿನ ಜತೆಗೆ ಎಳನೀರು ಸೇವನೆಯೂ ಅತ್ಯುತ್ತಮ.
– ದಾಳಿಂಬೆ :- ಈ ಹಣ್ಣಿನ ಬೀಜಗಳು ಕಬ್ಬಿಣದ ಪ್ರಮುಖ ಮೂಲವಾಗಿವೆ. ಇವು ರಕ್ತ ಕಣಗಳ ಸಂಖ್ಯೆಯನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿವೆ. ಡೆಂಗ್ಯೂ ಜ್ವರದಿಂದ ಕಡಿಮೆಯಾಗಿರುವ ರಕ್ತ ಕಣಗಳು ಈ ಹಣ್ಣಿನ ಸೇವನೆಯಿಂದ ಮತ್ತೆ ಹೆಚ್ಚಾಗಿ ಕಾಯಿಲೆ ಬೇಗ ನಿವಾರಣೆಯಾಗುತ್ತದೆ.
– ಪಪ್ಪಾಯ ಎಲೆ ಮತ್ತು ಬೀಜ :- ಡೆಂಗ್ಯೂದಿಂದ ಬಳಲುತ್ತಿರುವವರಿಗೆ ಪಪ್ಪಾಯ ಎಲೆ ಮತ್ತು ಬೀಜಗಳ ರಸವೂ ಬೆಸ್ಟ್.
– ಪಾಲಕ್ :- ಪಾಲಕ್ ಸೊಪ್ಪು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಡೆಂಗ್ಯೂ ಬಂದಾಗ ತಿನ್ನಬಾರದ ಆಹಾರ :-
– ಕರಿದ ತಿಂಡಿ :- ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ತಿನ್ನಬೇಡಿ. ಇಂಥ ಆಹಾರಗಳಲ್ಲಿ ಕೊಬ್ಬು ಹೆಚ್ಚಿನ ಪ್ರಮಾಣದಲ್ಲಿದ್ದು, ಇವು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ಗಳನ್ನು ಹೆಚ್ಚಿಸುತ್ತವೆ.
– ಖಾರ ಆಹಾರ :- ಇದರ ಸೇವನೆಯಿಂದ ಹೊಟ್ಟೆಯಲ್ಲಿ ಆಮ್ಲ ಸಂಗ್ರಹ ಹೆಚ್ಚಾಗಿ ಅಲ್ಸರ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇದರಿಂದ ಡೆಂಗ್ಯೂವಿನಿಂದ ಗುಣಮುಖವಾಗುವ ಪ್ರಕ್ರಿಯೆ ನಿಧಾನವಾಗುತ್ತದೆ.
– ಕೆಫೀನ್ :- ಈ ಸಮಯದಲ್ಲಿ ಕೆಫೀನ್ ಭರಿತ ಪೇಯಗಳ ಸೇವನೆಯಿಂದ ಹ್ಲದಯದ ಬಡಿತ ಹೆಚ್ಚಾಗುವುದು, ಆಯಾಸ ಮತ್ತು ಸ್ನಾಯುಗಳಲ್ಲಿ ಸೆಳೆತ ಮುಂತಾದ ಸಮಸ್ಯೆಗಳು ತಲೆದೋರಬಹುದು. ಆದ್ದರಿಂದ ಕಾಫಿ ಇತ್ಯಾದಿಗಳಿಂದ ದೂರವಿರುವುದು ಬೆಸ್ಟ್.
ಡೆಂಗೆ ತಡೆಗಟ್ಟಲು ಏನು ಮಾಡಬೇಕು?
– ಡೆಂಗೆ ತಡೆಗಟ್ಟಲು ಸೊಳ್ಳೆಗಳನ್ನು ನಿಯಂತ್ರಿಸಬೇಕು.
– ಹಗಲಿನಲ್ಲಿ ಸೊಳ್ಳೆ ಕಚ್ಚದಂತೆ ಎಚ್ಚರವಹಿಸಿ.
– ಶುದ್ಧ ಹಾಗೂ ಕುದಿಸಿ ಆರಿಸಿದ ನೀರನ್ನು ಕುಡಿಯುವುದು ಉತ್ತಮ.
– ನೀರು ಶೇಖರಣಾ ತೊಟ್ಟಿ, ಟ್ಯಾಂಕ್ಗಳ ಮುಚ್ಚಳವನ್ನು ಭದ್ರವಾಗಿ ಮುಚ್ಚಿಡಿ.
– ಪಾತ್ರೆ ಹಾಗೂ ಬಿಂದಿಗೆಗಳಲ್ಲಿ ಹೆಚ್ಚು ದಿನ ನೀರು ಸಂಗ್ರಹಿಸಿಡಬೇಡಿ.
– ಮನೆಯ ಸುತ್ತಲು ಹಾಗೂ ತಾರಸಿಯ ಮೇಲೆ ನೀರು ನಿಲ್ಲದಂತೆ ಎಚ್ಚರವಹಿಸಿ.
– ತೆಂಗಿನ ಚಿಪ್ಪು, ಟಯರ್ ನಂತಹ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಿ.
– ತೊಟ್ಟಿ, ಬಿಂದಿಗೆ, ಡ್ರಮ್ಗಳಲ್ಲಿ 2-3 ದಿನಕ್ಕೊಮ್ಮೆ ನೀರು ಬದಲಿಸಿ ಸ್ವಚ್ಛಗೊಳಿಸಿ.
– ಸೀನುವಾಗ, ಕೆಮ್ಮುವಾಗ ಕರವಸ್ತ್ರಗಳನ್ನು ಅಡ್ಡಲಾಗಿ ಇಟ್ಟುಕೊಳ್ಳಿ.
– ಸೊಳ್ಳೆಗಳನ್ನು ತಡೆಯಲು ಕಿಟಕಿ ಬಾಗಿಲುಗಳಿಗೆ ಮೆಶ್ ಹಾಕಿ ಅಥವಾ ಸೊಳ್ಳೆ ನಾಶಕ ಔಷಧಗಳನ್ನು ಬಳಸಿ.
– ಹಳ್ಳಿಗಳಲ್ಲಾದರೆ ಸೊಳ್ಳೆಗಳನ್ನು ನಿಯಂತ್ರಿಸಲು ಬೇವಿನ ಸೊಪ್ಪಿನ ಹೊಗೆ ಹಾಕುವುದು ಒಳಿತು.
ಹೃದಯಾಘಾತದ ಲಕ್ಷಣಗಳೇನು? ಪ್ರಥಮ ಚಿಕಿತ್ಸೆ ಯಾವೆಲ್ಲಾ ನೀಡಬಹುದು..