Driving License:
ಇಂದು ನಾವು ಪ್ರತಿಯೊಂದು ವಿಷಯವನ್ನು ಆನ್ಲೈನ್ ಮೂಲಕವೇ ತಿಳಿದುಕೊಳ್ಳುತ್ತೇವೆ. ಹಾಗೇ ನಾನಾ ರೀತಿ ಕೆಲಸಗಳನ್ನು ನಾವು ಈ ಇಂಟರ್ನೆಟ್ ಸೌಲಭ್ಯದಿಂದ ಆನ್ಲೈನ್ನಲ್ಲೆ ವ್ಯವಹರಿಸುತ್ತೇವೆ. ಹೀಗಿರುವಾಗ ನಾವು ಪಡೆಯುವ ಆಧಾರ್ ಕಾರ್ಡ್, ವೋಟರ್ ಐಡಿ, ಪಾಸ್ಬುಕ್, ಪಾಸ್ಪೋರ್ಟ್ ಹೀಗೆ ಎಲ್ಲವನ್ನು ನಾವು ಆನ್ಲೈನ್ನಲ್ಲೇ ಪಡೆಯುವಾಗ ಆ ರಂಗಕ್ಕೆ ಡ್ರೈವಿಂಗ್ ಲೈಸೆನ್ಸ್ ಅನ್ನು ಏಕೆ ಸೇರಿಸಬಾರದು. ಹೌದು ಇಂದು ನಾವು ಆನ್ಲೈನ್ ಮೂಲಕವೇ ಡ್ರೈವಿಂಗ್ ಲೈಸೆನ್ಸ್ (ಡಿಎಲ್) ಪಡೆಯಲು ಅರ್ಜಿಗಳನ್ನು ಸಲ್ಲಿಸುವ ಕ್ರಮ ಇದೆ. ಆದರೇ ಅದು ಈಗ ಮತ್ತಷ್ಟು ಸರಳವಾಗಿದೆ.
ಮನೆಯಿಂದಲೇ DL ಅನ್ನು ಈಗ ಸುಲಭವಾಗಿ ಪಡೆಯಬಹುದು. ಈ ಹಿಂದೆ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಮಧ್ಯವರ್ತಿಗಳನ್ನು ಬಳಸಿಕೊಂಡು ಪಡೆಯಬೇಕಾಗಿತ್ತು ಆಗ ಅವರು ಕೇಳಿದಷ್ಟು ಹಣವನ್ನು ಕೊಟ್ಟು ನಾವು ಲೈಸೆನ್ಸ್ ಪಡೆಯುತ್ತಿದ್ದೇವು ಆದರೆ ಇಂದು ಅವರ ಹಾವಳಿ ಇಲ್ಲದೇ ನೇರವಾಗಿ ಅರ್ಜಿ ಸಲ್ಲಿಸಬಹುದಾದ ನೂತನ ಸಾರಿಗೆ ಅಪ್ಲಿಕೇಶನ್ ಅನ್ನು ಜಾರಿಗೆ ತಂದಿದೆ.
ನಾವು ಈ ಹಿಂದೆ ಆನ್ಲೈನ್ ಮೂಲಕ ಡಿಎಲ್ಗೆ ಅರ್ಜಿ ಸಲ್ಲಿಸಿದ್ದರೂ ಸಹ ದಾಖಲೆಗಳ ಪರಿಶೀಲನೆಗೆ ಕಚೇರಿಗೆ ಅಲೆಯಬೇಕಾಗಿತ್ತು. ಆದರೆ, ಈಗ ಎಲ್ಲಾ ದಾಖಲೆಗಳನ್ನು ಆನ್ಲೈನ್ ಮುಖಾಂತರವೇ ಸಲ್ಲಿಸಬಹುದಾಗಿದೆ. ಅದು ಹೇಗೆಂದರೇ ?
– ಕರ್ನಾಟಕ ಸಾರಿಗೆ ಇಲಾಖೆಯ ಅಫೀಶಿಯಲ್ ವೆಬ್ಸೈಟ್ ತೆರೆದರೆ (https://transport.karnataka.gov.in/index.php) ವೆಬ್ಸೈಟ್ ಬಲಬಾಗದಲ್ಲಿ ಲರ್ನಿಂಗ್ ಡ್ರೈವಿಂಗ್ ಸರ್ಟಿಫಿಕೇಟ್/ ಡ್ರೈವಿಂಗ್ ಆರ್ಡರ್ ಪತ್ರವನ್ನು ಪಡೆಯವ ಆಯ್ಕೆ ನಿಮಗೆ ಪ್ರದರ್ಶಿತವಾಗುತ್ತದೆ. ಅದನ್ನು ಕ್ಲಿಕ್ ಮಾಡಿದರೆ ಎರಡು ರೀತಿಯಲ್ಲಿ ಆನ್ಲೈನ್ ಮೂಲಕ ಡಿಎಲ್ ಪಡೆಯಲು ವ್ಯವಸ್ಥೆ ಮಾಡಲಾಗಿದೆ.
– ಸಾರಥಿ 3 ರಲ್ಲಿಯೂ ಅರ್ಜಿ ಸಲ್ಲಿಸುವ ವಿಧಾನವಿದೆ. ಆದರೆ ಸಾರಥಿ 4 ಈಗ ಅಪ್ಡೇಟ್ ಆಗಿರುವುದರಿಂದ ನೀವು ಸಾರಥಿ 4 ಮೂಲಕ ಲರ್ನಿಂಗ್ ಡ್ರೈವಿಂಗ್ ಸರ್ಟಿಫಿಕೇಟ್ ಹಾಗೂ ಡ್ರೈವಿಂಗ್ ಆರ್ಡರ್ ಪತ್ರಕ್ಕೆ ಅಪ್ಲಿಕೇಶನ್ ಸಲ್ಲಿಸಬಹುದು.
– ಸಾರಥಿ 4 ಮೂಲಕ ಲರ್ನಿಂಗ್ ಡ್ರೈವಿಂಗ್ ಸರ್ಟಿಫಿಕೇಟ್ ಹಾಗೂ ಡ್ರೈವಿಂಗ್ ಆರ್ಡರ್ ಪತ್ರಕ್ಕೆ ಅರ್ಜಿಸಲ್ಲಿಸಲು ನೀವು ಮುಂದಾದರೆ, ಅಲ್ಲಿ “ಹೊಸ ಲರ್ನಿಂಗ್ / ಚಾಲನಾ ಲೈಸೆನ್ಸ್ ಸಾರಥಿ – 4 ಮೂಲಕ (ಅಯ್ದ ಕಛೇರಿಗಳಲ್ಲಿ ಮಾತ್ರ)” ಎಂಬ ಆಯ್ಕೆ ಇರುತ್ತದೆ. ಅಲ್ಲಿ ನಿಮ್ಮ ಹತ್ತಿರದ ಆರ್ಟಿಒ ಕಚೇರಿಯನ್ನು ಆಯ್ದುಕೊಂಡು ನೀವು ಅರ್ಜಿ ಸಲ್ಲಿಕೆಯನ್ನು ಮುಂದುವರೆಸಬಹುದು.
– ಸಾರಥಿ 4ರಲ್ಲಿ ಲರ್ನಿಂಗ್ ಲೈಸೆನ್ಸ್ ಪಡೆಯಲು ಅರ್ಜಿ ಸಲ್ಲಿಸಿದ ನಂತರದಲ್ಲಿ ಗಣಕಯಂತ್ರದಲ್ಲಿ ಪರೀಕ್ಷೆ ತೆಗೆದುಕೊಳ್ಳುವುದು ಕಡ್ಡಾಯವಾಗಿದೆ. ಆನ್ಲೈನ್ನಲ್ಲಿಯೇ 15 ಪ್ರಶ್ನೆಗಳಿಗೆ ಉತ್ತರಿಸಬೇಕು. ಈ ಪ್ರಕ್ರಿಯೆಯಲ್ಲಿ ಕನಿಷ್ಟ 10 ಪ್ರಶ್ನೆಗಳಿಗೆ ನಿಖರವಾಗಿ ಉತ್ತರಿಸಿ ತೇರ್ಗಡೆ ಹೊಂದಿದಲ್ಲಿ ಲರ್ನಿಂಗ್ ಲೈಸೆನ್ಸ್ ನಿಮಗೆ ಲಭ್ಯವಾಗಲಿದೆ.
– ಇನ್ನೂ ಆಧಾರ್ ಜೊತೆ ಡಿಎಲ್ ಲಿಂಕ್ ಕೂಡ ಆನ್ಲೈನ್ ಮೂಲಕವೇ ಮಾಡಬಹುದು. ಮೊದಲು ಸಾರಿಗೆ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಹೋಗಿ, ರಾಜ್ಯವನ್ನು ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ಲಿಂಕ್ ಬೇಸ್ ಬಟನ್ ಕ್ಲಿಕ್ ಮಾಡಬೇಕು. ಡ್ರಾಪ್-ಡೌನ್ ಮೆನುವಿನಲ್ಲಿ ಡಿಎಲ್ ಆಯ್ಕೆ ಮಾಡಬೇಕು. ಅಲ್ಲಿ ಡಿಎಲ್ ಸಂಖ್ಯೆಯನ್ನು ನಮೂದಿಸಬೇಕು. ನಂತರ ವಿವರ ಪಡೆಯಿರಿ ಎಂಬಲ್ಲಿ ಕ್ಲಿಕ್ ಮಾಡಬೇಕು. ಅಲ್ಲಿ 12 ಅಂಕೆ ಆಧಾರ್ ಸಂಖ್ಯೆ ಮತ್ತು ಫೋನ್ ಸಂಖ್ಯೆಯನ್ನು ನಮೂದಿಸಬೇಕು.
– ನಂತರ ಸಲ್ಲಿಸು ಬಟನ್ ಕ್ಲಿಕ್ ಮಾಡಿ ಮತ್ತು ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ನೋಂದಾಯಿತ ಫೋನ್ ಸಂಖ್ಯೆ ಒನ್ ಟೈಮ್ ಪಾಸ್ವರ್ಡ್ ಬರುತ್ತದೆ. ಒಟಿಪಿ ಹಾಕಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಹೀಗೆ ಮಾಡಿದ್ರೆ ಡಿಎಲ್, ಆಧಾರ್ ಗೆ ಲಿಂಕ್ ಆಗುತ್ತದೆ.
ಪಾನ್ಕಾರ್ಡ್ನಲ್ಲಿನ ಹೆಸರು, ವಿಳಾಸ ಆನ್ಲೈನ್ನಲ್ಲೇ ತಿದ್ದುಪಡಿ ಹೇಗೆ?