Ashwagandha Powder Benefits: ಅಶ್ವಗಂಧ ಒಂದು ಅದ್ಭುತ ಮೂಲಿಕೆಯಾಗಿದ್ದು ಭಾರತದ ಜಿನ್ಸೆಂಗ್(ಜೆಂನ್ಸೆಂಗ್ ಎಂಬುವುದು ಚೀನಾದ ಒಂದು ಶುಂಠಿಯಾಕಾರದ ಗಡ್ಡೆಯಾಗಿದ್ದು ಅಪ್ರತಿಮ ಕಾಮೋತ್ತೇಜಕವಾಗಿದೆ). ಎಂಬ ಅನ್ವರ್ಥನಾಮ ಮತ್ತು ಕಿರೇಮಲ್ಲಿನಗಿಡ ಎಂದು ಕನ್ನಡದಲ್ಲಿಯು ಕರೆಯಲ್ಪಡಲಾಗುತ್ತದೆ. ಇದು ನಮ್ಮ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಉಪಯುಕ್ತವಾಗಿದ್ದು. ಇದರ ವಾಸನೆ ಕುದುರೆಯ ಮೂತ್ರದ ವಾಸನೆಯನ್ನೇ ಹೋಲುವ ಕಾರಣ ಆಯುರ್ವೇದ ಇದಕ್ಕೆ ಅಶ್ವದ ಗಂಧ ಎಂಬ ಹೆಸರನ್ನು ನೀಡಿದೆ. ಅಲ್ಪ ಪ್ರಮಾಣದಲ್ಲಿ ನಿತ್ಯ ಸೇವಿಸುವುದರಿಂದ ದೇಹದ ವಿವಿಧ ಕ್ರಿಯೆಗಳು ಯಾವುದೇ ತೊಂದರೆಯಿಲ್ಲದಂತೇ ನಡೆದು ಆರೋಗ್ಯ ವೃದ್ಧಿಯಾಗುತ್ತದೆ.
ಅಶ್ವಗಂಧದ ಪ್ರಯೋಜನಗಳು :-
– ವೀರ್ಯದ ಫಲವತ್ತತೆಯನ್ನು ದ್ವಿಗುಣಗೊಳಿಸುತ್ತದೆ :- ಇತ್ತೀಚಿನ ದಿನಗಳಲ್ಲಿ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ವಿಪರೀತವಾಗಿ ಕಡಿಮೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಸಫಲ ಗರ್ಭಧಾರಣೆಗೆ ಕೇವಲ ಒಂದೇ ಒಂದು ವೀರ್ಯಾಣು ಸಾಕಾದರೂ ಒಂದು ಸಿಸಿ ಯಲ್ಲಿ ಕನಿಷ್ಟ ಇಪ್ಪತ್ತು ಮಿಲಿಯನ್ ವೀರ್ಯಾಣುಗಳಿದ್ದರೇ ಸಫಲವಾದ ಗರ್ಭಧಾರಣೆಯಾಗುವುದು ಸೃಷ್ಟಿಯ ಒಂದು ವಿಚಿತ್ರವಾಗಿದೆ. ಅಶ್ವಗಂಧ ಈ ಕೊರತೆಯನ್ನು ಯಶಸ್ವಿಯಾಗಿ ನಿವಾರಿಸುತ್ತದೆ. ಆಯುರ್ವೇದ ವೈದ್ಯರು ಸೂಚಿಸಿದ ಪ್ರಮಾಣದಲ್ಲಿ ನಿತ್ಯ ಸೇವನೆಯಿಂದ ಈ ಸಂಖ್ಯೆ ಹೆಚ್ಚುತ್ತದೆ.
– ಪುರುಷರಲ್ಲಿ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ :- ಅಶ್ವಗಂಧದ ಸೇವನೆಯಿಂದ ಪುರುಷರಲ್ಲಿ ಚೈತನ್ಯ, ಪೌರುಷ ಮತ್ತು ಹುರುಪು ಹೆಚ್ಚುತ್ತದೆ. ಅಲ್ಲದೇ ಲೈಂಗಿಕ ಸಾಮಥ್ರ್ಯವೂ ಹೆಚ್ಚುವುದನ್ನು ಗಮನಿಸಲಾಗಿದ್ದು ಈ ಗುಣದಿಂದಾಗಿ ಅಶ್ವಗಂಧವನ್ನು ಕಾಮೋತ್ತೇಜಕವಾಗಿಯೂ ಬಳಸಲಾಗುತ್ತಿದೆ.
– ತ್ವಚೆಯ ಆರೋಗ್ಯ ಹಿಮ್ಮಡಿಗೊಳಿಸುತ್ತದೆ :- ಚರ್ಮದ ಒಳಪದರದಲ್ಲಿ ನೈಸರ್ಗಿಕ ತೈಲಗಳು, ಕೊಲ್ಯಾಜೆನ್ ಮತ್ತು ಎಲಾಸ್ಟಿನ್ ಗಳ ಉತ್ಪತ್ತಿ ಹೆಚ್ಚುತ್ತದೆ. ಇವೆಲ್ಲವೂ ಮೃದು, ಕಾಂತಿಯುಕ್ತ ಹಾಗೂ ಆರೋಗ್ಯಕರ ತ್ವಚೆಗೆ ಅಗತ್ಯವಾಗಿವೆ.
– ಕೂದಲ ಆರೋಗ್ಯವನ್ನೂ ಉತ್ತಮಗೊಳಿಸುತ್ತದೆ :- ಇದರಿಂದ ಕೂದಲ ಬುಡಗಳಿಗೆ ಉತ್ತಮ ಪ್ರಮಾಣದ ಪೋಷಕಾಂಶಗಳೂ ದೊರಕುತ್ತವೆ. ರಕ್ತಪರಿಚಲನೆ ಕೂದಲನ್ನು ಬೆಳೆಸಲು ಪ್ರಚೋದಿಸುತ್ತದೆ. ಅಲ್ಲದೇ ಚರ್ಮದಲ್ಲಿ ಮೆಲನಿನ್ ಅಂಶವನ್ನು ಹೆಚ್ಚಿಸಲೂ ಪ್ರಚೋದಿಸುತ್ತದೆ. ಕೂದಲ ಆರೊಗ್ಯಕ್ಕೆ ಈ ಮೆಲನಿನ್ ಅಗತ್ಯವಾದ ಪ್ರೋಟೀನ್ ಅನ್ನು ಒದಗಿಸುತ್ತದೆ. ತನ್ಮೂಲಕ ಕೂದಲ ಆರೋಗ್ಯವೂ ಉತ್ತಮಗೊಳ್ಳುತ್ತದೆ.
– ವೃದ್ಧಾಪ್ಯ ತಡವಾಗಿಸಿ ಯವ್ವನವನ್ನು ವೃದ್ದಿಸುತ್ತದೆ :- ಅಶ್ವಗಂಧದ ನಿಯಮಿತ ಸೇವನೆಯಿಂದ ಚರ್ಮದಲ್ಲಿ ಸುಕ್ಕುಗಳು, ನೆರಿಗೆಗಳು, ಸಡಿಲವಾಗುವುದು ಮೊದಲಾದ ಚಿಹ್ನೆಗಳು ಎದುರಾಗುವುದನ್ನು ಆದಷ್ಟೂ ತಡವಾಗಿಸಬಹುದು.
– ಕೊಲೆಸ್ಟ್ರಾಲ್ ಕಡಿಮೆಗೊಳಿಸಿ ಮಧುಮೇಹವನ್ನು ನಿಯಂತ್ರಿಸುತ್ತದೆ :- ಅಶ್ವಗಂಧದ ನಿಯಮಿತ ಸೇವನೆಯಿಂದ ರಕ್ತದಲ್ಲಿರುವ ಕೆಟ್ಟ್ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಅಲ್ಲದೇ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನೂ ನಿಯಂತ್ರಿತಗೊಳಿಸುವುದರಿಂದ ಮಧುಮೇಹವೂ ನಿಯಂತ್ರಣಕ್ಕೆ ಬರುತ್ತದೆ.
– ಮಾನಸಿಕ ಒತ್ತಡ, ಖಿನ್ನತೆಯನ್ನು ಹೋಗಲಾಡಿಸುತ್ತದೆ :- ಅಶ್ವಗಂಧ ಮಾನಸಿಕ ಒತ್ತಡವನ್ನು ನಿವಾರಿಸುವ ಅದ್ಭುತ ಮೂಲಿಕೆಯಾಗಿದೆ ಹಾಗೂ ಖಿನ್ನತೆಯನ್ನು ಇಲ್ಲವಾಗಿಸಿ ಮನಸ್ಸನ್ನು ನಿರಾಳಗೊಳಿಸುವ ಗುಣ ಹೊಂದಿದೆ.
– ರೋಗ ನಿರೋಧಕ ಶಕ್ತಿಯನ್ನು ಹಿಮ್ಮಡಿಗೊಳಿಸುತ್ತದೆ :- ರೋಗ ನಿರೋಧಕ ಶಕ್ತಿ ಬಲಿಷ್ಟವಾದಷ್ಟೂ ಹಲವಾರು ರೋಗಗಳಿಂದ ರಕ್ಷಣೆ ಪಡೆಯುವುದು ಸಾಧ್ಯವಾಗುತ್ತದೆ. ಈ ಗುಣದಿಂದಾಗಿಯೇ ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವ ರೋಗ ನಿರೋಧಕ ಶಕ್ತಿ ವೃದ್ದಿಸುವ ಔಷಧಿಗಳಲ್ಲಿ ಅಶ್ವಗಂಧವನ್ನು ಪ್ರಮುಖವಾಗಿ ಬಳಸಕಾಗುತ್ತದೆ.
– ಗಾಯಗಳನ್ನು ಶೀಘ್ರವೇ ಗುಣಪಡಿಸುತ್ತದೆ :- ಇದರಲ್ಲಿ ಬ್ಯಾಕ್ಟೀರಿಯಾ ನಿರೋಧಕ ಮತ್ತು ಅತಿಸೂಕ್ಷ್ಮಜೀವಿ ನಿರೋಧಕ ಗುಣಗಳಿವೆ ಹಾಗೂ ಇವು ಗಾಯಗಳಾದರೆ ಶೀಘ್ರವೇ ಮಾಗಿಸಲು ಮತ್ತು ಸೋಂಕು ಉಂಟಾಗದಂತೆ ನೋಡಿಕೊಳ್ಳಲು ನೆರವಾಗುತ್ತವೆ.
– ಮೆದುಳಿನ ಸವೆಯುವುದನ್ನು ತಡೆಯುತ್ತದೆ :- ವಯಸ್ಸಾದಂತೆ ಮರೆಗುಳಿತನ ಹಾಗೂ ಇತರ ತೊಂದರೆಗಳು ಎದುರಾಗಲು ಪ್ರಮುಖ ಕಾರಣವೆಂದರೆ ಮೆದುಳಿನ ಜೀವಕೋಶಗಳು ಶಾಶ್ವತವಾಗಿ ನಷ್ಟವಾಗುವುದನ್ನು ತಡೆಯುತ್ತದೆ.
– ಸುಖಕರ ನಿದ್ರೆಗೆ ಸಹಕಾರಿಗಿದೆ :- ಸುಖಕರ ನಿದ್ದೆ ಎದುರಾಗಲು ಮಾನಸಿಕ ನಿರಾಳತೆ ಅಗತ್ಯವಾಗಿದೆ. ಅಶ್ವಗಂಧ ನರಗಳನ್ನು ಸಡಿಲಿಸಿರುವ ಮೂಲಕ ರಕ್ತಪರಿಚಲನೆಯನ್ನು ಉತ್ತಮಗೊಳಿಸಿ ಸರಾಗವಾಗಿ ಪ್ರವಹಿಸುವಂತೆ ಮಾಡುವ ಮೂಲಕ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಮೆದುಳು ನಿರಾಳತೆಯನ್ನು ಪಡೆಯುತ್ತದೆ. ತನ್ಮೂಲಕ ಸುಖಕರ ನಿದ್ದೆಯನ್ನು ಪಡೆದು ನಿದ್ರಾರಾಹಿತ್ಯದ ತೊಂದರೆಯನ್ನು ಗುಣಪಡಿಸಬಹುದು.
21 ದಿನದ ಗಣೇಶ ಚತುರ್ಥಿಯು ಹೇಗಿರುತ್ತೆ? ಬೇಕಾಗುವ ಪೂಜಾ ಸಾಮಾಗ್ರಿಗಳೇನು?