ಈಗ ಒಂದು 5 ವರ್ಷದ ಹಿಂದೆ ಒಂದು ಪಾಸ್ಪೋರ್ಟ್ ಮಾಡಿಸಲು ತುಂಬ ದಿನ ಬೇಕಾಗುತ್ತಿತ್ತು, ಕೇವಲ ಒಂದು ಅರ್ಜಿಯನ್ನು ಸಲ್ಲಿಸುವುದಕ್ಕೆ ಕ್ಯೂ ನಿಲ್ಲಬೇಕಿತ್ತು, ಅದು ತುಂಬ ದಿನಗಳೇ ಹಿಡಿಯುವುದು, ಹಾಗೂ ಅಷ್ಟು ದಿನಗಳಾದ ಮೇಲೆ ಪೊಲೀಸ್ ವೆರಿಫೀಕೇಷನ್ ಮಾಡಿ ಅಲ್ಲಿ ನಿಮ್ಮ ಪಾಸ್ಪೋರ್ಟ್ ಕ್ಯಾನ್ಸಲ್ ಆಗಿದ್ದರೆ. ಈ ರೀತಿ ನೀವು ಅರ್ಜಿ ಸಲ್ಲಿಸುವುದಕ್ಕೆ ನೀವು ವಹಿಸಿದ ಶ್ರಮ ಮತ್ತು ಸಮಯ ಎರಡು ವ್ಯರ್ಥವಾಗುತ್ತಿತ್ತು ಆದರೆ ಈಗ ಹಾಗಿಲ್ಲ ಇಂದಿನ ನವಭಾರತದಲ್ಲಿ ನಾವು ಕೂತಲ್ಲೇ ಎಲ್ಲಾ ಕೆಲಸಗಳನ್ನು ಮಾಡಬಹುದು ಅದು ನಮ್ಮ ಮೊಬೈಲ್ ಫೋನಿಂದ. ಹೌದು ಇಂದು ಪಾಸ್ಪೋರ್ಟ್ ಅರ್ಜಿಯನ್ನು ಮೊಬೈಲ್ನಲ್ಲೇ ಸಲ್ಲಿಸಬಹುದು. ನೀವು ದೇಶದಲ್ಲಿ ಎಲ್ಲೇ ಇದ್ದರೂ ಸಹ ಮೊಬೈಲ್ ಆ್ಯಪ್ ಮೂಲಕವೇ ತಮ್ಮ ಮೂಲ ನಿವಾಸದ ಪಾಸ್ಪೋರ್ಟ್ ಕಚೇರಿಯಲ್ಲಿ ಪಾಸ್ಪೋರ್ಟ್ಗಾಗಿ ಅರ್ಜಿ ಸಲ್ಲಿಸಬಹುದು. ಅದಕ್ಕೆ ನೀವು ಮಾಡಬೇಕಾದ ನಿಯಮಗಳು ಇಷ್ಟೇ.
- ಮೊದಲಿಗೆ ನೀವು ‘ಎಂಪಾಸ್ಪೋರ್ಟ್ ಸೇವಾ’ (mPassport Seva) ಆ್ಯಪ್ ಅನ್ನು ಇನ್ಸ್ಟಾಲ್ ಮಾಡಬೇಕು. ಇದು ಕೇಂದ್ರ ಸರ್ಕಾರದ ಅಧಿಕೃತ ಆ್ಯಪ್ ಆಗಿದ್ದು, ಇದು ಪಾಸ್ಪೋರ್ಟ್ ಅರ್ಜಿ ಸಲ್ಲಿಸುವುದಕ್ಕೆ ತುಂಬ ನೆರವಾಗುತ್ತದೆ.
- ‘ಎಂಪಾಸ್ಪೋರ್ಟ್ ಸೇವಾ’ (mPassport Seva) ಆ್ಯಪ್ ಅನ್ನು ಮೊಬೈಲ್ಗೆ ಡೌನ್ಲೋಡ್ ಮಾಡಿಕೊಳ್ಳಿ, ಈ ಆ್ಯಪ್ಗೆ ನೀವು ರಿಜಿಸ್ಟರ್ ಆಗಿ, ಒಮ್ಮೆ ನೀವು ಪಾಸ್ಪೋರ್ಟ್ ಕಚೇರಿ, ಹೆಸರು, ಹುಟ್ಟಿದ ದಿನ, ಇಮೇಲ್ ವಿಳಾಸಗಳನ್ನು ನೀಡಿ ನಿಮ್ಮ ಗುರುತನ್ನು ದಾಖಲಿಸಿ ಯುಸರ್ನೇಮ್ ಮತ್ತು ಪಾಸ್ವರ್ಡ್ ಅನ್ನು ಪಡೆದುಕೊಳ್ಳಬಹುದು.
- ಈ ಆ್ಯಪ್ನಲ್ಲಿ ನೀವು ಲಾಗಿನ್ ಆದ ನಂತರ ನೇರವಾಗಿ ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸಬಹುದಾಗಿದೆ. ಯೂಸರ್ ಅಪ್ಲಿಕೇಷನ್ ಆಯ್ಕೆಯನ್ನು ತೆರೆದು, ಹೊಸದಾಗಿ ಪಾರ್ಸ್ಪೋರ್ಟ್ ಅರ್ಜಿದಾರನೇ ಅಥವಾ ಮತ್ತೊಮ್ಮೆ ಪಾಸ್ಪೋರ್ಟ್ಗೆ ಅರ್ಜಿಯನ್ನು ಸಲ್ಲಿಸುತ್ತಿದ್ದೀರಾ ಎಂಬ ಮಾಹಿತಿಯನ್ನು ತುಂಬಿ ಮುಂದುವರೆಯಿರಿ. ಸಾಮಾನ್ಯ ಅಥವಾ ತತ್ಕಾಲ್ ಪಾಸ್ಪೋರ್ಟ್ ಬೇಕೆ ಮತ್ತು ಎಷ್ಟು ಪೇಜ್ ಹೊಂದಿರುವ ಪಾರ್ಸ್ಪೋರ್ಟ್ಗಾಗಿ ಅರ್ಜಿ ಸಲ್ಲಿಸುತ್ತಿದ್ದೀರಾ ಎಂಬ ಮಾಹಿತಿಯನ್ನು ಕೇಳುತ್ತದೆ.
- ಸೂಕ್ತ ಮಾಹಿತಿಗಳನ್ನು ಅರ್ಜಿಯಲ್ಲಿ ತುಂಬಿದ ನಂತರ ಅರ್ಜಿದಾರರು ತಮ್ಮ ವೈಯಕ್ತಿಕ ಮಾಹಿತಿಯನ್ನು ತುಂಬಲು ಅನುಮತಿ ನೀಡಲಾಗುತ್ತದೆ. ನಿಮ್ಮ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ ಹಾಗೂ ಮೊಬೈಲ್ ಆ್ಯಪ್ನಲ್ಲಿ ಕೇಳಿರುವ ನಿಮ್ಮ ಎಲ್ಲಾ ಗುರುತು ವಿಳಾಸಗಳನ್ನು ತುಂಬಿ ಪಾರ್ಸ್ಪೋರ್ಟ್ಗಾಗಿ ಅರ್ಜಿಯನ್ನು ಪೂರ್ಣಗೊಳಿಸಬಹುದು.
- ‘ಎಂಪಾಸ್ಪೋರ್ಟ್ ಸೇವಾ’ ಮೊಬೈಲ್ ಆ್ಯಪ್ ಮೂಲಕ ಪಾರ್ಸ್ಪೋರ್ಟ್ಗಾಗಿ ಅರ್ಜಿಯನ್ನು ಪೂರ್ಣಗೊಳಿಸಿದ ನಂತರ, ಪಾಸ್ಪೋರ್ಟ್ ಕಚೇರಿಯಿಂದ ನಿಮ್ಮ ಅರ್ಜಿ ವಿಲೇವಾರಿ ಬಗ್ಗೆ ನೀವು ಟ್ರ್ಯಾಕ್ ಮಾಡಬಹುದು, ನಿಮ್ಮ ಅರ್ಜಿ ಯಾವ ಹಂತದಲ್ಲಿದೆ? ಯಶಸ್ವಿ ವೆರಿಫಿಕೇಷನ್ ಆಗಿದೆಯಾ? ಡೆಲಿವರಿ ಯಾವಾಗ ಎಂಬ ಮಾಹಿತಿಗಳನ್ನು ನೀವು ಪಡೆಯಬಹುದು.
ಅಕ್ರಮಸಕ್ರಮ ಅರ್ಜಿ ಬಗ್ಗೆ ನಿಮಗೆಷ್ಟುಗೊತ್ತು? ಫಾರಂ ನಂ.57ರಲ್ಲಿ ಏನೇನಿದೆ?