ನಿಮ್ಮ ಬಳಿ ಅಂಡ್ರಾಯ್ಡ್ ಮೊಬೈಲ್ ಫೋನ್ಗಳಿದ್ದರೆ ಈ ಲೇಖನವನ್ನು ಪೂರ್ತಿ ಓದಿ ಕಾರಣ ಇದರಲ್ಲಿ ಕೆಲವು ವಿಚಾರಗಳನ್ನು ನಿಮಗೆ ತಿಳಿಸಲಾಗಿದೆ. ಅವುಗಳನ್ನು ಎಂದಿಗೂ ನಿಮ್ಮ ಮೊಬೈಲ್ನಲ್ಲಿ ಮಾಡಲೇ ಮಾಡಿ ಕಾರಣ ಅದು ನಿಮ್ಮ ಮೊಬೈಲ್ನ ಆಯಸ್ಸನ್ನು ಕಡಿಮೆ ಮಾಡುತ್ತದೆ. ಎಚ್ಚರವಹಿಸಿ ಆ ತಪ್ಪುಗಳನ್ನು ಮಾಡದೇ ಇದ್ದರೆ ನಿಮ್ಮ ಮೊಬೈಲ್ ದೀರ್ಘ ಕಾಲ ಬರುವುದರಲ್ಲಿ ಎರಡು ಮಾತಿಲ್ಲ. ನಮ್ಮಲ್ಲಿ ಹಲವರು ಸ್ಮಾರ್ಟ್ಫೋನ್ ಅನ್ನು ಜಾಗರೂಕತೆಯಿಂದ ಕಾಪಾಡುವುದಿಲ್ಲ, ನಮ್ಮ ಸ್ಮಾರ್ಟ್ಪೋನ್ ಸುರಕ್ಷತೆ ಮತ್ತು ಮೊಬೈಲ್ನಲ್ಲಿರುವ ಅವರ ಡೇಟಾ ಬಗ್ಗೆ, ಈ ರೀತಿಯ ಎಲ್ಲಾ ತಪ್ಪುಗಳು ಒಂದು ದಿನ ಅವರಿಗೆ ಗಂಭೀರವಾದ ಹಾನಿಯನ್ನು ಉಂಟುಮಾಡುತ್ತೇವೆ. ಹಾಗಾಗೀ ನಾವು ಇಲ್ಲಿ ಹೇಳಲಾದ ಸಂಗತಿಗಳನ್ನು ದಯವಿಟ್ಟು ಗಮನಿಸಿ.
- ವಿಪರೀತ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಲೇ ಬೇಡಿ :-
ನಿಮ್ಮ ಬಳಿ ಇರುವ ಮೊಬೈಲ್ ಫೋನ್ಗೆ ಎಷ್ಟು ಬೇಕೋ ಅಷ್ಟೆ ಆ್ಯಪ್ಗಳನ್ನು ಡೌನ್ಲೋಡ್ ಮಾಡಿಕೊಳ್ಳಿ ಆಗಷ್ಟೇ ಅವು ನಿಮ್ಮ ಮಾತನ್ನು ಕೇಳುತ್ತದೆ. ಇಲ್ಲವಾದಲ್ಲಿ ಅವುಗಳ ಮಾತನ್ನು ನಾವು ಕೇಳಬೇಕಾಗುತ್ತದೆ ಎಚ್ಚರ. - ನಿಮ್ಮ ಫೋನ್ನಲ್ಲಿ ಪರವಾನಗಿ ಇಲ್ಲದ ಅಪ್ಲಿಕೇಶನ್ಗಳನ್ನು ಇನ್ಸ್ಟಾಲ್ ಮಾಡಿಕೊಳ್ಳಬೇಡಿ ಅಥವ ನನಗೆ ಬೇಕೆಬೇಕು ಎಂದದಾಲ್ಲಿನ ಅಂತಹ ಕಾರ್ಯಗಳನ್ನು ಮಾಡುವಾಗ ಆದಷ್ಟು ಜಾಗರೂಕರಾಗಿರಿ.
- ನಿಮ್ಮ ಮೊಬೈಲ್ನಲ್ಲಿ ಆಗಾಗ ಅಪ್ಡೇಟ್ ಕೇಳುತ್ತಿರುತ್ತದೆ ಅದನ್ನು ನಿರ್ಲಕ್ಷಿಸಬೇಡಿ ಕಾರಣ ಆ ಮೊಬೈಲ್ ಸಾಫ್ಟ್ವೇರ್ ಕಂಪನಿಯು ನಿಮ್ಮ ಮೊಬೈಲ್ನ ಜೀವತವಾಧಿಯನ್ನು ಸ್ವಲ್ಪ ಹೆಚ್ಚಿಸಲು ಮತ್ತು ಆಗಷ್ಟೇ ಮಾರುಕಟ್ಟೆಗೆ ಬಂದಿರುವ ಕೆಲವು ಫೀಚರ್ಸ್ಗಳನ್ನು ಒಳಗೊಂಡಂತೆ ನಿಮಗೆ ಅಪ್ಡೇಟ್ ಕೊಟ್ಟಿರುತ್ತದೆ ಅದನ್ನು ಮಾಡಿಕೊಂಡರೇ ನಿಮಗೆ ಒಳಿತು.
- ಮುಖ್ಯವಾಗಿ ನಿಮ್ಮ ಮೊಬೈಲ್ ಅನ್ನು ಇಎಮ್ಐ ಆಯ್ಕೆಯನ್ನು ಬಳಸಿ ಖರೀದಿಸುವುದನ್ನು ನಿಲ್ಲಿಸಿ. ಕಾರಣ ಇಂದು ದಿನಕ್ಕೊಂದು ಫೋನ್ಗಳು ಲಾಂಚ್ ಆಗಿ ಕೆಲವು ತಿಂಗಳುಗಳ ಅತ್ಯಂತ ಕಡಿಮೆ ಬೆಲೆಗೆ ಇಳಿಯುತ್ತವೆ. ಹಾಗಾಗೀ ನೀವು ಇಎಂಐನಲ್ಲಿ ತೆಗೆದುಕೊಂಡ ಮೊಬೈಲ್ ಫೋನ್ ಒಂದೆರಡು ತಿಂಗಳಲ್ಲಿ ಕಡಿಮೆ ಬೆಲೆಗೆ ಸಿಗುತ್ತದೆ, ಆದರೆ ನೀವು ಹಳೆಯ ಬೆಲೆಯನ್ನು ಇಎಂಐ ಮೂಲಕ ಕೊಡುತ್ತಿರುತ್ತೀರಿ.
- ನಿಮ್ಮ ಫೋನ್ ವಾಟರ್ ಫ್ರೂಫ್ ಶಕ್ತಿಯನ್ನು ಹೊಂದಿಲ್ಲ ಎಂದಾದಲ್ಲಿ ಫೋನ್ ಹಾಳಾಗುವುದ ಖಚಿತ. ಒದ್ದೆಯಾಗಿರುವ ಸ್ಥಳಗಳಲ್ಲಿಯೂ ಸಹ ನಿಮ್ಮ ಸ್ಮಾರ್ಟ್ಫೋನ್ ಅನ್ನು ಇಡಬೇಡಿ. ಇದರಿಂದ ನಿಮ್ಮ ಸ್ಮಾರ್ಟ್ಪೋನ್ ಹಾಳಾಗಬಹುದು.
- ಮೊಬೈಲ್ ಸ್ಕ್ರೀನ್ನ ಸುರಕ್ಷತೆಗಾಗಿ ಗೋರಿಲ್ಲಾ ಗ್ಲಾಸ್ ಹಾಕಿಸುವುದು ಉತ್ತಮ. ಯಾವುದೇ ಒಂದು ವಸ್ತುವಿಗೆ ಸುರಕ್ಷತೆ ಎಂಬುದು ಬಹಳ ಮುಖ್ಯ.
- ನಿಮ್ಮ ಫೋನ್ ಅನ್ನು ಹೆಚ್ಚು ಕಾಲ ಚಾರ್ಜ್ ಮಾಡುವುದು ಒಳ್ಳೆಯದಲ್ಲ, ಅದು 100% ಚಾರ್ಚ್ ಆದಮೇಲು ಅದನ್ನು ಚಾರ್ಜ್ ಮಾಡುತ್ತಿದ್ದರೆ. ಅದು ನಿಮ್ಮ ಮೊಬೈಲ್ನ ಆಯುಸ್ಸನ್ನು ಕಡಿಮೆ ಮಾಡುತ್ತದೆ.
- ಸ್ಕ್ರೀನ್ ಲಾಕ್ ಮಾಡಲು ಮರೆಯದಿರಿ. ಕಾರಣ ನಿಮ್ಮ ಮೊಬೈಲ್ ಯಾರ ಕೈಯಲ್ಲಿದ್ದರು ಅದರ ನಿಯಂತ್ರಣ ನಿಮ್ಮ ಕೈಯಲ್ಲೇ ಇರಬೇಕು ಇಲ್ಲವಾದಲ್ಲಿ ನಿಮ್ಮ ಫೋನ್ನಿಂದ ನಿಮಗೆ ತಿಳಿಯದೆ ಕೆಲಸಗಳು ನಡೆದು ಅದು ನಿಮ್ಮ ಮೊಬೈಲ್ ಮತ್ತು ನಿಮ್ಮ ಹೆಸರನ್ನು ಕೆಡಿಸಬಹುದು.
ಈ ಮೇಲಿನ ಸಂಗತಿಗಳನ್ನು ತಲೆಯಲ್ಲಿಟ್ಟುಕೊಂಡು ನಿಮ್ಮ ಮೊಬೈಲ್ಗಳನ್ನು ಬಳಸಿ ಇಲ್ಲವಾದಲ್ಲಿ ನಿಮ್ಮ ಮೊಬೈಲ್ ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ.
ನಿಮ್ಮ ಸ್ಮಾರ್ಟ್ ಫೋನ್ ಬ್ಯಾಟರಿ ಬೇಗ ಖಾಲಿಯಾಗಲು ಕಾರಣ ತಿಳಿಯಲು ಇಲ್ಲಿದೆ ಸುಲಭ ಮಾರ್ಗ..